Asianet Suvarna News Asianet Suvarna News

ದೀಪಾವಳಿ ಹಬ್ಬದ ವೇಳೆ ಅಸ್ತಮಾ ಇರುವವರು ಏನು ಮಾಡಬೇಕು?

ಅಸ್ತಮಾ, ಉಸಿರಾಟದ ಸಮಸ್ಯೆ ಹೊಂದಿರುವವರಿಗೆ ದೀಪಾವಳಿ ಹಬ್ಬದ ಸಮಯ ಎಂದರೆ ಕಷ್ಟ. ಪಟಾಕಿಗಳ ಹೊಗೆಯಿಂದ ನಿಮ್ಮ ಆರೋಗ್ಯ ಏರುಪೇರು ಆಗದಂತಿರಲು ಈ ಮುನ್ಸೂಚನೆಗಳನ್ನು ಪಾಲಿಸಿ.

Precautions in Diwali time should be taken by people with breathing problems
Author
Bengaluru, First Published Nov 2, 2021, 3:47 PM IST
  • Facebook
  • Twitter
  • Whatsapp

ದೀಪಾವಳಿ (Diwali) ಹಬ್ಬದ ಸಮಯದಲ್ಲಿ ಬೇಡಬೇಡವೆಂದರೂ ಗಾಳಿಯಲ್ಲಿ ಮಾಲಿನ್ಯಕಾರಕಗಳು ತುಂಬಿಕೊಳ್ಳುತ್ತವೆ. ನೀವು ಪಟಾಕಿ ಸಿಡಿಸದಿದ್ದರೂ ಅಕ್ಕಪಕ್ಕದವರು ಬಿಡುವುದಿಲ್ಲ. ದೀರ್ಘಕಾಲದವರೆಗೆ ಗಂಧಕ- ರಂಜಕದ ಹೊಗೆಗೆ ಒಡ್ಡಿಕೊಳ್ಳುವುದು ಅಸ್ತಮಾ (Asthma) ರೋಗಿಗಳಿಗೆ ಅಪಾಯಕಾರಿ. ಅವರು ಕೆಮ್ಮುವಿಕೆ, ಉಸಿರಾಟದ ತೊಂದರೆ, ಉಬ್ಬಸ ಮತ್ತು ಆಸ್ತಮಾ ದಾಳಿಗೆ ಗುರಿಯಾಗಬಹುದು. ಈ ಅಸ್ವಸ್ಥತೆಗಳ ಉಲ್ಬಣಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ಮುನ್ನೆಚ್ಚರಿಕೆ ಯಾವಾಗಲೂ ಉತ್ತಮವಾಗಿರುತ್ತದೆ. ಇದಕ್ಕಾಗಿ ತಜ್ಞರ ಸಲಹೆಗಳು ಇಲ್ಲಿವೆ.

ಮನೆಯೊಳಗೆ ಇರಿ

ಮನೆಯೊಳಗಿನ ಮತ್ತು ಮನೆಯ ಹೊರಗಿನ ಸುತ್ತುವರಿದ ಗಾಳಿಯಲ್ಲಿನ ವಾಯು ಮಾಲಿನ್ಯವು (polution) ಅಸ್ತಮಾ, ಶ್ವಾಸಕೋಶದ ಕಾಯಿಲೆ, ಹೃದಯ ರಕ್ತನಾಳದ ಕಾಯಿಲೆಗಳು ಇತ್ಯಾದಿ ಸೇರಿದಂತೆ ವ್ಯಾಪಕವಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ವಾಯು ಮಾಲಿನ್ಯದ ಮಟ್ಟಗಳ ಹೆಚ್ಚಳವು ನಿರಂತರ ಕೆಮ್ಮಿನಂತಹ ಹಲವಾರು ರೋಗಲಕ್ಷಣಗಳಿಗೆ ಕಾರಣವಾಗಬಹುದು. ಉಸಿರಾಟದ ತೊಂದರೆ, ಕಣ್ಣಿನ ಉರಿ, ಮೂಗು ಉರಿ, ಚರ್ಮದ ಅಲರ್ಜಿ ಮತ್ತು ದದ್ದುಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಆಸ್ತಮಾ ಮತ್ತು ಉಸಿರಾಟದ ಸಮಸ್ಯೆಗಳಂತಹ ಪೂರ್ವ ಅಸ್ತಿತ್ವದಲ್ಲಿರುವ ಉಸಿರಾಟದ ಸಮಸ್ಯೆಗಳನ್ನು ಹೊಂದಿರುವವರು ಸಾಧ್ಯವಾದಷ್ಟೂ ಮನೆಯೊಳಗೇ ಇರಬೇಕು.

ಚಾಕಲೇಟ್, ಅಡುಗೆ, ಕಿಸ್ ಒತ್ತಡ ನಿವಾರಣೆ ಮಾಡಲು ಸಾಕಲ್ವಾ ಇವಿಷ್ಟು?

ಸಾಧ್ಯವಾದಷ್ಟು ಹೊಗೆಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸಬೇಕು. ಹೊಗೆಯಲ್ಲಿ ಹೊರಗೆ ಹೋಗಬೇಕಾದರೆ ಮೊದಲು ಅವರು ತಮ್ಮ ಉಸಿರಾಟದ ವೈದ್ಯರು ನಿರ್ದೇಶಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳಬೇಕು. ಉಸಿರಾಟವು ನಿಯಂತ್ರಣಕ್ಕೆ ಬಾರದೆ ಇರುವ ಸಂದರ್ಭದಲ್ಲಿ ತಕ್ಷಣದ ವೈದ್ಯಕೀಯ ಸಹಾಯವನ್ನು ಪಡೆಯುವುದು ಸೂಕ್ತ. ವೈದ್ಯಕೀಯ ಸಹಾಯವನ್ನು ಪಡೆಯುವ ಮೊದಲು ರೋಗಲಕ್ಷಣಗಳು ಗಂಭೀರ ಸ್ವರೂಪಕ್ಕೆ ಬರುವವರೆಗೆ ಕಾಯಬಾರದು.

ಎನ್‌95 ಮಾಸ್ಕ್ ಧರಿಸಿ (N95 mask)

ನೀವು ಪಟಾಕಿಗಳನ್ನು ಸಿಡಿಸಲು ಯೋಚಿಸುತ್ತಿದ್ದರೆ, ಕಣ್ಣಿನೊಳಗೆ ಗಂಧಕದ ಕಣಗಳು ಪ್ರವೇಶಿಸುವುದನ್ನು ತಡೆಯಲು ಮತ್ತು ಹೊಗೆಯಿಂದ ಕಿರಿಕಿರಿಯನ್ನು ತಡೆಯಲು ಯಾವಾಗಲೂ ರಕ್ಷಣಾತ್ಮಕ ಕನ್ನಡಕ ಅನ್ನು ಧರಿಸಿ. ಎನ್‌95 ಮುಖವಾಡವನ್ನು ಧರಿಸಿ. ಇದರಿಂದ ಹೊಗೆಯು ಮೂಗಿನೊಳಗೆ ಪ್ರವೇಶಿಸುವುದಿಲ್ಲ. ಹೊರಗೆ ಹೋಗುವಾಗಲೂ ಎನ್‌95 ಮಾಸ್ಕ್‌ಗಳನ್ನೇ ಧರಿಸಿ.

ಔಷಧ ಮತ್ತು ನೆಬ್ಯುಲೈಸೇಶನ್ (Nebulisation)

ನಿಮ್ಮ ಮಗುವು ಆಸ್ತಮಾದಂತಹ ಯಾವುದೇ ಉಸಿರಾಟದ ಕಾಯಿಲೆಗಳಿಗೆ ಗುರಿಯಾಗಿದ್ದರೆ ಮುಂಚಿತವಾಗಿ ಎಚ್ಚರಿಕೆ ವಹಿಸಿ. ಅದು ಈ ಸಮಯದಲ್ಲಿ ಉಲ್ಬಣಗೊಳ್ಳಬಹುದು, ಅಗತ್ಯವಿದ್ದರೆ ನಿಮ್ಮ ಶಿಶುವೈದ್ಯರನ್ನು ಸಂಪರ್ಕಿಸಿದ ನಂತರ ನೆಬ್ಯುಲೈಸೇಶನ್ ಅನ್ನು ಪರಿಗಣಿಸಿ.

ಆಗಾಗ ಕಣ್ಣು ಮತ್ತು ಕೈಗಳನ್ನು ತೊಳೆಯಿರಿ

ನಿಮ್ಮ ಮಗುವಿಗೆ ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳಲು ಮತ್ತು ಕಣ್ಣುಗಳನ್ನು ನಿಧಾನವಾಗಿ ತೊಳೆದುಕೊಳ್ಳಲು ಹೇಳುವ ಮೂಲಕ ನೈರ್ಮಲ್ಯಕ್ಕೆ ಗಮನ ಕೊಡಿ. ಮಗು ಮೂಗಿನಲ್ಲಿ ಯಾವುದೇ ರೀತಿಯ ಕಿರಿಕಿರಿಯನ್ನು ಅನುಭವಿಸಿದರೆ ಜೋರಾಗಿ ನಿಶ್ವಾಸ ಬಿಡಲು ಹೇಳಿ.

ದೀಪಾವಳಿ ಪೂಜೆಗೆ ಏನು ಮಾಡಬೇಕು? ಏನು ಮಾಡಬಾರದು ಇಲ್ಲಿದೆ ನೋಡಿ...

ಸಂಜೆ ಹೊರಹೋಗುವುದನ್ನು ತಪ್ಪಿಸಿ

ಸಂಜೆ ಹೊತ್ತಿಗೆ ಜನರು ಸಾಮಾನ್ಯವಾಗಿ ಪಟಾಕಿ (crackers) ಸಿಡಿಸುತ್ತಾರೆ. ಈ ಸಮಯದಲ್ಲಿ ವಾತಾವರಣದಲ್ಲಿ ಹೆಚ್ಚಿನ ಮಾಲಿನ್ಯದ ಅಂಶವಿರುತ್ತದೆ. ಈ ಸಮಯದಲ್ಲಿ ಹೊರಾಂಗಣಕ್ಕೆ ಹೋಗುವುದನ್ನು ತಪ್ಪಿಸಿ. ನಿಮ್ಮ ಮಗುವನ್ನು ಹೊರಗೆ ಕರೆದೊಯ್ಯುವುದನ್ನು ತಪ್ಪಿಸಿ. ಬದಲಿಗೆ, ಸುರಕ್ಷಿತ ವಾತಾವರಣದಲ್ಲಿ ಅವರಿಗೆ ಒಳಾಂಗಣದ ಚಟುವಟಿಕೆಗಳನ್ನು ಯೋಜಿಸಿ.

ದೀಪಾವಳಿ ಶುಚಿಗೊಳಿಸುವಿಕೆಯನ್ನು ತಪ್ಪಿಸಿ

ಬಹುತೇಕ ಎಲ್ಲರೂ ದೀಪಾವಳಿಯ ಮೊದಲು ತಮ್ಮ ಮನೆಯನ್ನು ಸ್ವಚ್ಛಗೊಳಿಸುತ್ತಾರೆ. ಆದಾಗ್ಯೂ, ಉಸಿರಾಟದ ಕಾಯಿಲೆ ಅಥವಾ ಅಲರ್ಜಿಯನ್ನು ಹೊಂದಿರುವ ಎಲ್ಲರೂ ಮನೆ-ಶುಚಿಗೊಳಿಸುವ ಪ್ರಕ್ರಿಯೆಯಿಂದ ದೂರವಿರಬೇಕು, ಏಕೆಂದರೆ ಧೂಳು ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು ಮತ್ತು ಆಸ್ತಮಾ ದಾಳಿಯನ್ನು ಸುಲಭವಾಗಿ ಪ್ರಚೋದಿಸಬಹುದು. ತಾಜಾ ಪೇಂಟಿಂಗ್ ವಾಸನೆಯಿಂದ ದೂರವಿರಿ, ಇದು ಅಸ್ತಮಾ ರೋಗಿಗಳಿಗೆ ಅಪಾಯಕಾರಿ.

ಯುವಜನತೆ ಕಾಡುತ್ತಿರುವ ಹೃದಯಾಘಾತಕ್ಕೆ 13 ಕಾರಣ.. ಇದರಿಂದ ದೂರ ಇರಿ

ಸಮತೋಲಿತ ಆಹಾರವನ್ನು ಸೇವಿಸಿ (Healthy Diet)

ದೀಪಾವಳಿಯ ಸಮಯದಲ್ಲಿ ಅತಿಯಾಗಿ ತಿನ್ನುವುದು ತುಂಬಾ ಸಾಮಾನ್ಯ, ಇದು ಹಾನಿಕಾರಕ ಅಭ್ಯಾಸ. ಅತಿಯಾಗಿ ತಿನ್ನುವುದು ಮತ್ತು ಎಣ್ಣೆಯುಕ್ತ ಆಹಾರವನ್ನು ತಿನ್ನುವುದು ಆಸ್ತಮಾ ರೋಗಿಗಳಿಗೆ ಹೆಚ್ಚಿನ ಅಪಾಯವನ್ನುಂಟುಮಾಡುತ್ತದೆ. ಹಠಾತ್ ಆಸ್ತಮಾ ದಾಳಿಯ ಸಾಧ್ಯತೆಯನ್ನು ಕಡಿಮೆ ಮಾಡಲು ಹಣ್ಣುಗಳು ಮತ್ತು ತರಕಾರಿಗಳ ಸಮತೋಲನವನ್ನು ಸೇರಿಸಿ.

ಇನ್ಹೇಲರ್ ಜೊತೆಯಲ್ಲಿ ಇರಲಿ (Inhaler)

ಆಸ್ತಮಾ ಔಷಧಿಗಳ ನಿಯಮಿತ ಡೋಸೇಜ್ ಅನ್ನು ನಿರ್ವಹಿಸುವುದರ ಹೊರತಾಗಿ ಇನ್ಹೇಲರ್ ಅನ್ನು ಯಾವಾಗಲೂ ನಿಮ್ಮ ಬಳಿ ಇರಿಸಿಕೊಳ್ಳಿ, ಇದು ಆಸ್ತಮಾ ಅಟ್ಯಾಕ್ ತಡೆಯುವ ಸಾಧ್ಯತೆಗಳನ್ನು ಕಡಿಮೆ ಮಾಡಲು ಉಪಯುಕ್ತವಾಗಿದೆ.

Follow Us:
Download App:
  • android
  • ios