Asianet Suvarna News Asianet Suvarna News

ಮನುಷ್ಯರ ಆಯಸ್ಸು ತಿನ್ನುತ್ತಿದೆ ಒಂಟಿತನ!

ಒಂಟಿಯಾಗಿದ್ರೆ ಗಲಾಟೆ ಇರೋದಿಲ್ಲ, ಯಾವುದೇ ಕಿರಿಕಿರಿ ಇರೋದಿಲ್ಲ, ಆರಾಮವಾಗಿ ಇರಬಹುದು ಎಂದು ಅನೇಕರು ಭಾವಿಸ್ತಾರೆ. ಆದ್ರೆ ಈ ಒಂಟಿತನ ಸದ್ದಿಲ್ಲದೆ ನಮ್ಮನ್ನು ಕೊರೆಯುತ್ತದೆ. ಇದ್ರಿಂದ ಮಾನಸಿಕ ಹಾಗೂ ದೈಹಿಕ ಎರಡೂ ಆರೋಗ್ಯ ಹದಗೆಡುತ್ತದೆ.
 

People Who Are Alone Are Getting Depressed And Old
Author
First Published Dec 27, 2022, 2:36 PM IST

ತಂತ್ರಜ್ಞಾನ ಸಾಕಷ್ಟು ವಿಕಸಿತಗೊಂಡಿದೆ. ಅದೆಷ್ಟೋ ದೂರದಲ್ಲಿ ಕುಳಿತವರನ್ನು ನೋಡ್ತಾ ಮಾತನಾಡುವ ಅವಕಾಶ ನಮಗೆ ಸಿಕ್ಕಿದೆ. ಹಿಂದೆ ಅಮೆರಿಕಾದಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸೋದೇ ಕಷ್ಟವಾಗಿತ್ತು. ಈಗ ದಿನಕ್ಕೆ ನಾಲ್ಕು ಬಾರಿ ಅವರನ್ನು ನೋಡ್ತಾ ವಿಡಿಯೋ ಕಾಲ್ ಮೂಲಕ ಮಾತನಾಡಬಹುದು. ಈ ತಂತ್ರಜ್ಞಾನದ ಸಹಾಯದಿಂದ ನಾವೆಲ್ಲ ನಮ್ಮ ಕುಟುಂಬಸ್ಥರು, ಸಂಬಂಧಿಕರು ಮತ್ತು ಸ್ನೇಹಿತರನ್ನು ಸುಲಭವಾಗಿ ಸಂಪರ್ಕಿಸಬಹುದು. ಎಲ್ಲ ಅನುಕೂಲವಿದೆ, ಕೈತುಂಬ ಕೆಲಸವಿದೆ ಎನ್ನುವವರು ಕೂಡ ಒಂಟಿತನಕ್ಕೆ ಬಲಿಯಾಗುತ್ತಿದ್ದಾರೆ. ಕೆಲವರು ಅನಿವಾರ್ಯ ಕಾರಣಕ್ಕೆ ಜನರಿಂದ ದೂರವಾಗುತ್ತಾರೆ. ಮತ್ತೆ ಕೆಲವರು ತಮ್ಮ ಸ್ವಂತ ನಿರ್ಧಾರದಿಂದ  ಜನರಿಂದ ದೂರವಾಗುತ್ತಾರೆ. ಒಂಟಿಯಾಗಿ ವಾಸಿಸುವುದು ಸ್ವಲ್ಪ ದಿನ ನೆಮ್ಮದಿ ನೀಡಬಹುದು. ಆದ್ರೆ ಈ ಒಂಟಿತನ ಮಾನವ ಸ್ವಭಾವಕ್ಕೆ ವಿರುದ್ಧವಾಗಿದೆ. ಯಾವಾಗ್ಲೂ ಮಾನವ ಜನರ ಜೊತೆ ಬೆರೆತು ಜೀವನ ನಡೆಸಬೇಕು. 

ಏಕಾಂಗಿ (Alone) ಯಾಗಿ ವಾಸಿಸುವ ಜನರು ಬರಿ ಬೇಸರ ಮಾತ್ರವಲ್ಲ ಕೆಲ ಸಮಸ್ಯೆಗಳನ್ನು ಎದುರಿಸುತ್ತಾರೆ. ಒಂಟಿಯಾಗಿರುವ ಜನರಲ್ಲಿ ಖಿನ್ನತೆ (Depression), ಒತ್ತಡ, ಹೃದ್ರೋಗ, ಬುದ್ಧಿಮಾಂದ್ಯತೆಯಂತಹ ಅನೇಕ ದೈಹಿಕ ಮತ್ತು ಮಾನಸಿಕ ಕಾಯಿಲೆ ಕಾಡುತ್ತದೆ. ಅಷ್ಟೇ ಅಲ್ಲ, ಒಂಟಿತನವು ವ್ಯಕ್ತಿಯನ್ನು ಸಮಯಕ್ಕಿಂತ ಮುಂಚೆಯೇ ಮುದುಕನನ್ನಾಗಿ ಮಾಡುತ್ತದೆ.  ಒಂಟಿಯಾಗಿರುವುದು ಧೂಮಪಾನ (Smoking) ಕ್ಕಿಂತ ಹೆಚ್ಚು ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ಹೊಸ ಸಂಶೋಧನೆ (Research) ಯೊಂದು ಬಹಿರಂಗಪಡಿಸಿದೆ.

ಸಂಶೋಧನೆಯಲ್ಲಿ ಹೊರ ಬಿದ್ದ ವಿಷ್ಯವೇನು? : ಒಂಟಿತಯಾಗಿರುವ ವ್ಯಕ್ತಿ ಒಂದು ವರ್ಷ ಎಂಟು ತಿಂಗಳು ಅಂದರೆ ಸುಮಾರು ಎರಡು ವರ್ಷ ಮುಂದಿರುತ್ತಾನೆ. ಇದರಿಂದಾಗಿ ಅವನ ವಯಸ್ಸು ಹೆಚ್ಚಾದಂತೆ ಕಾಣುತ್ತದೆ. ಧೂಮಪಾನ ಮಾಡುವವರು ವಯಸ್ಸಿಗಿಂತ ಹೆಚ್ಚು ದೊಡ್ಡವರಂತೆ ಕಾಣ್ತಾರೆ. ಆದ್ರೆ ಒಂಟಿತನ ಧೂಮಪಾನಕ್ಕಿಂತ ವೇಗವಾಗಿ ವಯಸ್ಸನ್ನು ಹೆಚ್ಚಿಸುತ್ತದೆ. ವಯಸ್ಸನ್ನು ಹೆಚ್ಚು ಮಾಡುವುದು ಮಾತ್ರವಲ್ಲ ಒಂಟಿತನ ಅನೇಕ ಇತರ ಕಾಯಿಲೆಗಳ ಜೊತೆಗೆ ದೇಹದಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಇದು ಆಲ್ಝೈಮರ್ ಸೇರಿದಂತೆ ಅನೇಕ ರೋಗಗಳ ಅಪಾಯದ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. 

ಅಬ್ಬಬ್ಬಾ, ನೆಲದ ಮೇಲೆ ಕುಳಿತುಕೊಂಡ್ರೆ ಇಷ್ಟೆಲ್ಲಾ ಲಾಭವಿದ್ಯಾ?

ಭಾರತದಲ್ಲಿ ಒಂಟಿತನದಿಂದ ಬಳಲ್ತಿದ್ದಾರೆ ಇಷ್ಟೊಂದು ಜನ : ಭಾರತದಲ್ಲಿ ಸುಮಾರು 5 ಮಿಲಿಯನ್ ಜನರು ಒಂಟಿತನದಿಂದ ಬಳಲುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವವರು ಎಂಬುದು ವಿಶೇಷ. ವಿಶ್ವದ ಜನಸಂಖ್ಯೆಯ ಶೇಕಡಾ 33 ರಷ್ಟು ಜನರು ಒಂಟಿತನದಿಂದ ಬಳಲುತ್ತಿದ್ದಾರೆ ಎಂದು ಜಾಗತಿಕ ಸಮೀಕ್ಷೆಯೊಂದು ಹೇಳಿದೆ. ಅಮೆರಿಕದ ಹೊವಾರ್ಡ್ ವಿಶ್ವವಿದ್ಯಾನಿಲಯದ ಅಧ್ಯಯನದ ಪ್ರಕಾರ, ಅಮೆರಿಕದಲ್ಲಿ ಮೂರನೇ ಒಂದು ಭಾಗದಷ್ಟು ಜನರು ತೀವ್ರ ಒಂಟಿತನದಿಂದ ಬಳಲುತ್ತಿದ್ದಾರೆ. ಎಂಟು ಪ್ರತಿಶತದಷ್ಟು ಜನರು ಪ್ರತಿ ವರ್ಷ ಗಂಭೀರ ಮಟ್ಟದ ಖಿನ್ನತೆಗೆ ಬಲಿಯಾಗ್ತಿದ್ದಾರೆ. ಇದು ಅವರ ಆರೋಗ್ಯವನ್ನು ಹಾಳು ಮಾಡುತ್ತದೆ. ಇದರಿಂದ ಅವರ ಬೆಳವಣಿಗೆ ವೇಗ ತ್ವರಿತಗೊಳ್ಳುತ್ತಿದೆ. 

ಒಂಟಿತನದಿಂದ ಆಗುತ್ತೆ ಈ ಎಲ್ಲ ಸಮಸ್ಯೆ  : ಒಂಟಿಯಾಗಿರುವ ವ್ಯಕ್ತಿಗೆ ಮಾತನಾಡಲು, ಪರಸ್ಪರ ಭಾವನೆಗಳನ್ನು ಹಂಚಿಕೊಳ್ಳಲು, ಖುಷಿಯನ್ನು ಸಂಭ್ರಮಿಸಲು ಜನರಿರುವುದಿಲ್ಲ. ಜನರ ಮಧ್ಯೆ ಇರುವ ವ್ಯಕ್ತಿ, ಒಂಟಿಯಾಗಿರುವ ವ್ಯಕ್ತಿಗಿಂತ ಯಾವಾಗ್ಲೂ ನೆಮ್ಮದಿಯಿಂದ ಇರುತ್ತಾನೆ. ಆದ್ರೆ ಈ ಒಂಟಿತನ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೋಂಕು ಅಥವಾ ಗಾಯದ ವಿರುದ್ಧ ಹೋರಾಡಲು ರಾಸಾಯನಿಕಗಳನ್ನು ಉತ್ಪಾದಿಸಲು ದೇಹವು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸೂಚಿಸಿದಾಗ ಉರಿಯೂತವುಂಟಾಗುತ್ತದೆ. ಈ ಉರಿಯೂತ ಒಂಟಿಯಾಗಿದ್ದಾಗ ಒತ್ತಡ ಮತ್ತು ಖಿನ್ನತೆಯಿಂದಲೂ ಉತ್ಪತ್ತಿಯಾಗುತ್ತದೆ.  

ಮಗುವೂ ತಿನ್ನಬಲ್ಲದು ಪಪ್ಪಾಯಿ, ಕೊಟ್ಟರೆ ಅನಾರೋಗ್ಯ ದೂರ

ಒಂಟಿತನಕ್ಕೆ ಮದ್ದು : ಅನಿವಾರ್ಯ ಪರಿಸ್ಥಿತಿಯಲ್ಲಿ ನೀವು ಒಂಟಿಯಾಗಿ ವಾಸಿಸಬೇಕಾಗುತ್ತದೆ. ಆದ್ರೆ ಅವಕಾಶ ಸಿಕ್ಕಾಗೆಲ್ಲ ನೀವು ಜನರ ಜೊತೆ ಬೆರೆಯಲು ಪ್ರಯತ್ನಿಸಿ. ಸ್ನೇಹಿತರನ್ನು ಮಾಡ್ಕೊಳ್ಳಿ. ವೀಕೆಂಡ್ ನಲ್ಲಿ ಸ್ನೇಹಿತರು, ಕುಟುಂಬಸ್ಥರನ್ನು ಭೇಟಿಯಾಗಿ. ಇದು ನಿಮ್ಮ ಒಂಟಿತನವನ್ನು ದೂರ ಮಾಡುತ್ತದೆ. ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ. 
 

Follow Us:
Download App:
  • android
  • ios