ಮೂಲವ್ಯಾಧಿ. ಹೆಸರು ಕೇಳಿದ್ರೆ ಕೆಲವರು ನಗ್ತಾರೆ. ಅನುಭವಕ್ಕೆ ಬಂದವರು ಅಳ್ತಾರೆ. ಅದ್ರ ಸಹವಾಸವೇ ಬೇಡ ಎನ್ನುವವರು ಸರಿಯಾದ ಆಹಾರ ಸೇವನೆ ಮಾಡಿ ಆರೋಗ್ಯ ಕಾಪಾಡಿಕೊಳ್ತಾರೆ. ನೀವು ಇವರಲ್ಲಿ ಯಾರಾಗ್ತೀರಿ?
ಹೇಳಿಕೊಳ್ಳಲಾಗದ, ಅನುಭವಿಸಲೂ ಆಗದ ರೋಗ (Disease) ಗಳಲ್ಲಿ ಮೂಲವ್ಯಾಧಿ (Piles) ಕೂಡ ಒಂದು. ಮೂಲವ್ಯಾಧಿ ಅಂದ್ರೆ ಜನರು (People) ನಗ್ತಾರೆ. ಈ ರೋಗವನ್ನು ತಮಾಷೆ (Funny) ಗೆ ಬಳಸ್ತೇವೆ. ಆದ್ರೆ ಮೂಲವ್ಯಾಧಿ ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು. ಮೂಲವ್ಯಾಧಿ ಇತ್ತೀಚಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಇದು ಮಲಬದ್ಧತೆಯೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದೆ. ಆಂಗ್ಲ ಭಾಷೆಯಲ್ಲಿ ಈ ರೋಗವನ್ನು ಪೈಲ್ಸ್ ಮತ್ತು ಹೆಮೊರೊಯಿಡ್ಸ್ ಎಂದು ಕರೆಯುತ್ತಾರೆ. ಮೂಲವ್ಯಾಧಿಯಲ್ಲಿ ಗುದದ್ವಾರ ಮತ್ತು ಗುದನಾಳದಲ್ಲಿ ಇರುವ ರಕ್ತನಾಳಗಳು ಊದಿಕೊಳ್ಳಲು ಪ್ರಾರಂಭಿಸುತ್ತವೆ. ಇದರೊಂದಿಗೆ ಈ ಸ್ಥಳಗಳಲ್ಲಿ ರಕ್ತ ಬರಲಾರಂಭಿಸುತ್ತದೆ. ಕೆಲವರಿಗೆ ಗುದದ್ವಾರದಲ್ಲಿ ರಕ್ತ ಬರದೆ ಹೋದ್ರೂ ವಿಪರೀತ ನೋವಿರುತ್ತದೆ. ಅದ್ರಲ್ಲಿ ಅನೇಕ ವಿಧಗಳಿದೆ. ಪೈಲ್ಸ್ ಗೆ ಮುಖ್ಯ ಕಾರಣ ಮಲಬದ್ಧತೆ ಸಮಸ್ಯೆ. ನೀವು ಮಲಬದ್ಧತೆಯನ್ನು ತಡೆಗಟ್ಟಿದರೆ ಪೈಲ್ಸ್ ನಂತಹ ಅಪಾಯಕಾರಿ ಕಾಯಿಲೆಯಿಂದ ಸಹ ತಪ್ಪಿಸಿಕೊಳ್ಳಬಹುದು. ಇಂದು ಮಲಬದ್ಧತೆಯನ್ನುಂಟು ಮಾಡುವ ಆಹಾರ ಯಾವುದು ಹಾಗೂ ಮೂಲವ್ಯಾಧಿ ಪೀಡಿತರು ಯಾವ ಆಹಾರದಿಂದ ದೂರವಿರಬೇಕು ಎಂಬುದನ್ನು ಹೇಳ್ತೇವೆ.
ಮಲಬದ್ಧತೆಯಂಟು ಮಾಡುತ್ತೆ ಈ ಆಹಾರ :
ಗ್ಲುಟನ್ ಹೊಂದಿರುವ ಆಹಾರಗಳು : ಗ್ಲುಟನ್ ಕಂಡುಬರುವ ಆಹಾರವು ನಿಮ್ಮ ದೇಹದಲ್ಲಿ ಪೈಲ್ಸ್ ರೋಗವನ್ನು ಉಂಟುಮಾಡಬಹುದು. ಗ್ಲುಟನ್ ಎಂಬ ಪ್ರೋಟೀನ್ ಗೋಧಿ, ಬಾರ್ಲಿ ಮತ್ತು ಇತರ ರೀತಿಯ ಧಾನ್ಯಗಳಲ್ಲಿ ಕಂಡುಬರುತ್ತದೆ. ಗ್ಲುಟನ್ ಕೆಲವು ಜನರಲ್ಲಿ ಸ್ವಯಂ ನಿರೋಧಕ ಕಾಯಿಲೆಯನ್ನು ಪ್ರಚೋದಿಸುತ್ತದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಜೀರ್ಣಾಂಗ ವ್ಯವಸ್ಥೆ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದಾಗಿ ನೀವು ಮೊದಲು ಮಲಬದ್ಧತೆ ಮತ್ತು ನಂತರ ಪೈಲ್ಸ್ ಸಮಸ್ಯೆ ಎದುರಿಸಬೇಕಾಗಬಹುದು. ಆರೋಗ್ಯ ಸರಿಯಾಗಿರಬೇಕೆನ್ನುವವರು ಗ್ಲುಟನ್ ಆಹಾರದಿಂದ ದೂರವಿರಿ.
ಹೆರಿಗೆಯ ಬಳಿಕ ದೇಹದ ತೂಕ ಸುಲಭವಾಗಿ ಇಳಿಸಿಕೊಳ್ಳುವುದು ಹೇಗೆ ?
ಹಸುವಿನ ಹಾಲು ಮತ್ತು ಡೈರಿ ಉತ್ಪನ್ನಗಳಿಂದ ದೂರವಿರಿ : ಅನೇಕ ಜನರು ಹಸುವಿನ ಹಾಲು ಅಥವಾ ಅದರಿಂದ ತಯಾರಿಸಿದ ಯಾವುದೇ ರೀತಿಯ ಡೈರಿ ಉತ್ಪನ್ನಗಳನ್ನು ಅತಿಯಾಗಿ ಸೇವನೆ ಮಾಡ್ತಾರೆ. ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸುವುದರಿಂದ ಮಲಬದ್ಧತೆ ಅಥವಾ ಪೈಲ್ಸ್ ಸಮಸ್ಯೆ ಎದುರಿಸಬೇಕಾಗುತ್ತದೆ. ಹಸುವಿನ ಹಾಲಿನಲ್ಲಿ ಪ್ರೊಟೀನ್ ಹೇರಳವಾಗಿದ್ದು, ಮಲಬದ್ಧತೆಯನ್ನುಂಟು ಮಾಡುತ್ತದೆ. ಸಂಶೋಧನೆಯ ಪ್ರಕಾರ, ಹಸುವಿನ ಹಾಲನ್ನು ಸೇವಿಸುವ ಬದಲು ಸೋಯಾ ಹಾಲನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
ರೆಡ್ ಮೀಟ್ (Red Meat): ರೆಡ್ ಮೀಟ್ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಪೈಲ್ಸ್ ಮತ್ತು ಮಲಬದ್ಧತೆ ಉಂಟಾಗಬಹುದು. ರೆಡ್ ಮೀಟ್ ನಲ್ಲಿ ಫೈಬರ್ ಹೇರಳವಾಗಿ ಕಂಡುಬರುತ್ತದೆ. ಇದರಲ್ಲಿ ಕೊಬ್ಬಿನ ಅಂಶವೂ ಕಂಡುಬರುತ್ತದೆ. ಇದರಿಂದಾಗಿ ನಿಮ್ಮ ದೇಹವು ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಜೀರ್ಣವಾಗದ ನೀರಿನಿಂದ, ದೇಹದಲ್ಲಿ ನೀರು ಸಂಗ್ರಹವಾಗುತ್ತದೆ. ಅದನ್ನು ಹೊರ ಹಾಕಲು ಕಷ್ಟವಾಗುತ್ತದೆ. ನೀವು ಪೈಲ್ಸ್ ನಿಂದ ಬಳಲುತ್ತಿದ್ದರೆ ರೆಡ್ ಮೀಟ್ ನಿಂದ ದೂರವಿರಿ. ಇದು ನಿಮ್ಮ ಆರೋಗ್ಯವನ್ನು (Health) ಇನ್ನಷ್ಟು ಹಾಳು ಮಾಡ್ಬಹುದು.
ಮೆಂತೆ, ಅರಿಶಿನ, ವಿಟಮಿನ್ ಡಿ ಅತೀಯಾದರೆ ಆರೋಗ್ಯಕ್ಕೆ ಕುತ್ತು
ಆಲ್ಕೋಹಾಲ್ (Alchohol) : ಆಲ್ಕೋಹಾಲ್ ಸೇವನೆಯು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ನಿರ್ಜಲೀಕರಣವು ನಿಮ್ಮ ದೇಹದಲ್ಲಿ ಮಲಬದ್ಧತೆಯಂತಹ ಅಪಾಯಕಾರಿ ರೋಗವನ್ನು ಉತ್ತೇಜಿಸುತ್ತದೆ. ಮಲಬದ್ಧತೆಯ ಸಮಸ್ಯೆಯ ನಂತರ ಮಲವನ್ನು ಹೊರಹಾಕಲು ಕಷ್ಟವಾಗಬಹುದು. ಇದರಿಂದ ನೀವು ಪೈಲ್ಸ್ ನಂತಹ ಅಪಾಯಕಾರಿ ರೋಗವನ್ನು ಎದುರಿಸಬೇಕಾಗಬಹುದು.
ಕರಿದ ಆಹಾರ ಮತ್ತು ಜಂಕ್ ಫುಡ್ (Junk Food): ಅತಿಯಾಗಿ ಕರಿದ ಆಹಾರವನ್ನು ಸೇವಿಸುವ ಮೂಲಕ ನೀವು ಪೈಲ್ಸ್ ರೋಗವನ್ನು ಎದುರಿಸಬೇಕಾಗಬಹುದು. ರೆಡ್ ಮೀಟ್ ನಂತೆ ಈ ಆಹಾರವು ಕಡಿಮೆ ಫೈಬರ್ ಮತ್ತು ಹೆಚ್ಚು ಕೊಬ್ಬಿನಿಂದ ಕೂಡಿರುತ್ತದೆ. ಇದು ನಿಮ್ಮ ದೇಹದಲ್ಲಿ ಮಲಬದ್ಧತೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಈ ಆಹಾರದಿಂದ ದೂರವಿದ್ದು ಹಸಿರು ತರಕಾರಿಗಳು, ಹಣ್ಣುಗಳು ಇತ್ಯಾದಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
