Asianet Suvarna News Asianet Suvarna News

ಹೇಗೇಗೋ ಸರ್ಜರಿ ಮಾಡಿದ ವೈದ್ಯ, ಹೂಸು ಬಿಡಲಾಗದೇ ಒದ್ದಾಡಿದ ವ್ಯಕ್ತಿ

ಹೂಸು ಎಂಬುದು ನೈಸರ್ಗಿಕ ಪ್ರಕ್ರಿಯೆ. ತಪ್ಪಾದ ಆಹಾರಗಳನ್ನು ತಿನ್ನೋದ್ರಿಂದ ಕೆಲವೊಮ್ಮೆ ಇದು ಅಧಿಕವಾಗಿ ಸಮಸ್ಯೆಯಾಗಿ ಪರಿಣಮಿಸಬಹುದು. ಅದಲ್ಲದೆ ಹೂಸು ಬಿಡುವುದು ಸಾಮಾನ್ಯ ಚಟುವಟಿಕೆ. ಆದ್ರೆ ಒಬ್ಬ ವ್ಯಕ್ತಿಗೆ ಹೂಸು ಬಿಡಲು ಸಾಧ್ಯಾನೇ ಆಗಲ್ಲಾಂದ್ರೆ ಅದೆಷ್ಟು ವಿಚಿತ್ರ ಅಲ್ವಾ ? ವೈದ್ಯರ ಯಡವಟ್ಟಿನಿಂದ ವ್ಯಕ್ತಿಯೊಬ್ಬ ಇಂಥಾ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾನೆ. 

Patient Unable To Pass Gas After Doctor Operates On Wrong Intestine Vin
Author
First Published Sep 20, 2022, 2:59 PM IST

ಆಹಾರವು ದೇಹದಲ್ಲಿ ಸರಿಯಾಗಿ ಪಚನವಾಗದೆ ಕೆಲವೊಮ್ಮೆ ಗಾಳಿ ತುಂಬುತ್ತದೆ. ಇದಕ್ಕೆ ವಾಯು ಎನ್ನುತ್ತಾರೆ. ಇದನ್ನು ನಾವು ತೇಗಿನ ಮೂಲಕ ಅಥವಾ ಗ್ಯಾಸ್ ಪಾಸ್ (ಹೂಸು ಬಿಡುವ) ಮಾಡುವ ಮೂಲಕ ಹೊರಹಾಕುತ್ತೇವೆ. ಇದು ಸಾಮಾನ್ಯವಾಗಿ ದೇಹದಲ್ಲಾಗುವ ಪ್ರಕ್ರಿಯೆ. ಎಲ್ಲರಿಗೂ ಇದರ ಅನುಭವ ಸಾಮಾನ್ಯ. ಇದು ನೈಸರ್ಗಿಕ ಪ್ರಕ್ರಿಯೆ ಎನ್ನಬಹುದು. ಕೆಲವರಿಗೆ ಗ್ಯಾಸ್ ಪಾಸ್ ಮಾಡುವುದು ಹೇಸಿಗೆ ಅನಿಸುತ್ತದೆ. ಇದರಲ್ಲಿ ಕೆಲವರು ಬಿಡುವಾಗ ಶಬ್ಧ ಬರುತ್ತದೆ. ಇನ್ನು ಕೆಲವರು ಬಿಡುವಾಗ ವಾಸನೆ ಬರುತ್ತದೆ. ಆದರೆ ಹೂಸು ಬಿಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಕರುಳಿನ ತಪ್ಪಾದ ತುದಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು
ಆತುರದಲ್ಲಿ ತಿನ್ನುವಾಗ ಗಾಳಿ ಬಾಯಿ ಮೂಲಕ ಹೊಟ್ಟೆಗೆ (Stomach) ಸೇರುತ್ತದೆ. ಹಾಗಾಗಿ ಹೊಟ್ಟೆಯಲ್ಲಿ ವಾಯು ತುಂಬಿ ಗುದದ್ವಾರದ ಮೂಲಕ ಹೊರಬರುತ್ತದೆ. ಕೆಲವರು ಹೆಚ್ಚಾಗಿ ಗ್ಯಾಸ್ ಪಾಸ್ ಮಾಡುತ್ತಾರೆ. ಕೆಲವು ಆಹಾರ (Food) ಪದ್ಧತಿಗಳನ್ನು ಮತ್ತು ನಮ್ಮ ಜೀವನ ಶೈಲಿಯನ್ನು  ಬದಲಾಯಿಸಿ ಕೊಂಡರೆ ಗ್ಯಾಸ್ ಪಾಸ್ ಮಾಡುವುದು ಕಡಿಮೆಯಾಗುತ್ತದೆ. ಕೆಲವರಿಗೆ ಕೆಲವು ಆಹಾರಗಳು ದೇಹಕ್ಕೆ (Body) ಅಲರ್ಜಿ ಉಂಟು ಮಾಡುತ್ತದೆ. ಅಂತಹ ಆಹಾರ ತಿನ್ನುವುದರಿಂದ ದೇಹದಲ್ಲಿ ಹೆಚ್ಚು ವಾಯು ಉತ್ಪತ್ತಿ ಆಗುತ್ತದೆ. ಅಂತಹ ಆಹಾರಗಳು ಕಡಲೆ ಬೀಜ, ದೀಹಲಸು, ಆಲೂಗಡ್ಡೆ, ಕರಿದ ಆಹಾರ, ಧಾನ್ಯ. ಆದಷ್ಟು ಮಟ್ಟಿಗೆ ಯಾವ ಆಹಾರ ತಿಂದರೆ ನಮ್ಮ ದೇಹಕ್ಕೆ ಆಗುವುದಿಲ್ಲ. ಇದರಿಂದ ಹೂಸು (Farting) ಬಿಡುವ ಸಮಸ್ಯೆ ಹೆಚ್ಚಾಗುತ್ತದೆ. ಆದ್ರೆ ಹೀಗೆ ಮಾಡುವುದರಿಂದ ಆರೋಗ್ಯ ಸುಸ್ಥಿರವಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿಗೆ ಮಾತ್ರ ವೈದ್ಯರು ಕರುಳಿನ ತಪ್ಪಾದ ತುದಿಯಲ್ಲಿ ಶಸ್ತ್ರಚಿಕಿತ್ಸೆ (operation) ಮಾಡಿದ ಕಾರಣ ಹೂಸು ಬಿಡೋಕೆ ಸಹ ಆಗುತ್ತಿಲ್ಲ. 

Farting : ಅತಿಯಾಗಿ ಹೂಸು ಬಿಡುವುದು ಯಾಕೆ ಗೊತ್ತಾ? ಇದರಿಂದ ಹೊರಬರುವ ಉಪಾಯಗಳೇನು?

ಗುದದ್ವಾರದಿಂದ ಅನಿಲವನ್ನು ರವಾನಿಸಲಾಗದೆ ವ್ಯಕ್ತಿಯ ಒದ್ದಾಟ
ಫ್ಲೋರಿಡಾದ ಆರೋಗ್ಯ ಇಲಾಖೆಯಲ್ಲಿ ದಾಖಲಾದ ದೂರಿನ ಪ್ರಕಾರ, ಫ್ಲೋರಿಡಾದ ವೈದ್ಯರು (Doctors) ರೋಗಿಯ ಕರುಳಿನ ತಪ್ಪಾದ ತುದಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಹೀಗಾಗಿ ವ್ಯಕ್ತಿ ಗುದದ್ವಾರದಿಂದ ಅನಿಲವನ್ನು ರವಾನಿಸಲು ಅಥವಾ ತ್ಯಾಜ್ಯವನ್ನು ಹೊರಹಾಕಲು ಸಾಧ್ಯವಾಗಲಿಲ್ಲ. ದೀರ್ಘ ಕರುಳಿನ ದೊಡ್ಡ ಭಾಗ, ಕೊಲೊನ್ ಒಂದು ಕೊಳವೆಯ ಆಕಾರದ ಅಂಗವಾಗಿದ್ದು, ಜೀರ್ಣವಾಗದ ಆಹಾರವು ಸಣ್ಣ ಕರುಳಿನಿಂದ ಗುದನಾಳಕ್ಕೆ ಹಾದುಹೋಗುವುದರಿಂದ ನೀರನ್ನು ಹೀರಿಕೊಳ್ಳಲು ಕಾರಣವಾಗಿದೆ. ಈ ಕಾರಣಕ್ಕಾಗಿಯೇ ಫ್ಲೋರಿಡಾದಲ್ಲಿ ಪರವಾನಗಿ ಪಡೆದಿರುವ ಶಸ್ತ್ರಚಿಕಿತ್ಸಕ ಡಾ.ಸ್ಕಾಟ್ ಝೆನೋನಿ ಶಿಸ್ತಿನ ಕ್ರಮವನ್ನು ಎದುರಿಸುವಂತಾಗಿದೆ.

ಇದು ಕೊಲೊಸ್ಟೊಮಿ ಕಾರ್ಯವಿಧಾನದ ನಂತರ ದಂಡದಿಂದ ಹಿಡಿದು ಪರವಾನಗಿ ಹಿಂತೆಗೆದುಕೊಳ್ಳುವವರೆಗೆ ಯಾವುದನ್ನಾದರೂ ಅರ್ಥೈಸಬಲ್ಲದು ಎಂದು ಮಿಯಾಮಿ ಹೆರಾಲ್ಡ್ ವರದಿ ಮಾಡಿದೆ. ರೋಗಿಯನ್ನು ಸೆಪ್ಟೆಂಬರ್ 30, 2020 ರಂದು ಕೆಳ ಬೆನ್ನಿನ ಬಳಿ ಚರ್ಮದ ಗಾಯಕ್ಕೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಪಡೆದು ಬಂದ ನಂತರ ವ್ಯಕ್ತಿಗೆ ಅನಿಲ ಹೊರ ಬಿಡಲು ಸಾಧ್ಯವಾಗುತ್ತಿಲ್ಲ. ಆಪರೇಷನ್‌ ನಡೆದ 12 ದಿನಗಳ ನಂತರ CT ಸ್ಕ್ಯಾನ್ ಸಮಸ್ಯೆಯನ್ನು ಬಹಿರಂಗಪಡಿಸಿತು. ವೈದ್ಯರು ಕರುಳಿನ (Gut) ತಪ್ಪಾದ ತುದಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿರುವುದು ತಿಳಿದುಬಂತು. ಅಕ್ಟೋಬರ್ 21ರಂದು ತಪ್ಪನ್ನು ಸರಿಪಡಿಸಲು ಜೆನೊನಿ ಮತ್ತೊಂದು ಶಸ್ತ್ರಚಿಕಿತ್ಸಾ ವಿಧಾನವನ್ನು ನಡೆಸಿದರು.

ಎಲ್ಲರ ಜೊತೆ ಇದ್ದಾಗ್ಲೂ ಹೂಸು ತಡೆಯೋಕಾಗ್ತಿಲ್ವಾ ? ನಿವಾರಣೆಗೆ ಸಿಂಪಲ್ ಟಿಪ್ಸ್‌

ಸಾಮಾನ್ಯವಾಗಿ, ಆಡಳಿತಾತ್ಮಕ ದೂರು ಗಂಭೀರ ಪರಿಣಾಮಗಳನ್ನು ಸೂಚಿಸುತ್ತದೆ. ಆದರೆ ಈ ಪ್ರಕರಣವು ವೈದ್ಯರ ಒಂಬತ್ತು ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಮೊದಲ ನಿದರ್ಶನವಾಗಿರುವುದರಿಂದ, ಅವನ ವಿರುದ್ಧದ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದರೆ ವೈದ್ಯರ ಯಡವಟ್ಟಿನಿಂದ ವ್ಯಕ್ತಿಯೊಬ್ಬ ಸಂಪೂರ್ಣ ಹೈರಾಣಾಗಿದ್ದಂತೂ ನಿಜ.

Follow Us:
Download App:
  • android
  • ios