Parenting Tips : ಮಣ್ಣು ತಿನ್ನುವ ಮಕ್ಕಳಿಗೆ ಇದನ್ನು ಕೊಟ್ಟು ನೋಡಿ
ಮಕ್ಕಳಿಗೆ ಒಂದೊಂದು ಚಟ ಅಂಟಿಕೊಂಡ್ರೆ ಅದನ್ನು ಬಿಡಿಸೋದು ಕಷ್ಟ. ಅದ್ರಲ್ಲಿ ಮಣ್ಣು ತಿನ್ನುವುದೂ ಸೇರಿದೆ. ಮಕ್ಕಳು ಮಣ್ಣು ತಿನ್ನಲು ಅನೇಕ ಕಾರಣವಿದೆ. ಹಾಗೆ ಅದ್ರಿಂದ ಅನೇಕ ಅಡ್ಡಪರಿಣಾಮವಾಗುತ್ತದೆ. ಹಾಗಾಗಿ ಕೆಲ ಉಪಾಯದಿಂದ ಮಕ್ಕಳ ಈ ಚಟಕ್ಕೆ ಗುಡ್ ಬೈ ಹೇಳ್ಬಹುದು.
ನೆಲದ ಮೇಲೆ ಬಿದ್ದ ವಸ್ತುವನ್ನೆಲ್ಲ ಬಾಯಿಗೆ ಹಾಕುವ ಅಭ್ಯಾಸ ಕೆಲ ಮಕ್ಕಳಿಗಿರುತ್ತದೆ. ಮತ್ತೆ ಕೆಲ ಮಕ್ಕಳು ಮಣ್ಣನ್ನು ತಿನ್ನುತ್ತಾರೆ. ಮಣ್ಣು ತಿನ್ನೋದನ್ನು ನೋಡಿಯೂ ಕೆಲ ಪಾಲಕರು ಸುಮ್ಮನಿರ್ತಾರೆ. ದೊಡ್ಡವರಾಗ್ತಿದ್ದಂತೆ ಸರಿ ಹೋಗ್ತಾರೆ ಬಿಡು ಎನ್ನುವ ಅಭಿಪ್ರಾಯಕ್ಕೆ ಬರ್ತಾರೆ. ಮತ್ತೆ ಕೆಲ ಪಾಲಕರು, ಮಕ್ಕಳಿಗೆ ಬೈದು, ಹೊಡೆದು ಮಾಡ್ತಾರೆ. ಮಕ್ಕಳು ಮಣ್ಣು ತಿನ್ನೋದು ಸಾಮಾನ್ಯ ಸಂಗತಿಯಲ್ಲ. ಮಣ್ಣು ಸೇವನೆ ಮಾಡೋದ್ರಿಂದ ಮಕ್ಕಳ ಆರೋಗ್ಯ ಹಾಳಾಗುತ್ತದೆ. ಹಾಗೆಯೇ ಮಕ್ಕಳು ಭವಿಷ್ಯದಲ್ಲಿ ಕೆಲ ಗಂಭೀರ ಕಾಯಿಲೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಆರಂಭದಲ್ಲಿಯೇ ಮಕ್ಕಳಿಗೆ ಮಣ್ಣು ತಿನ್ನಿಸುವ ಚಟ ಬಿಡಿಸಬೇಕು. ಗದರಿದ್ರೆ, ಬೈದ್ರೆ ಮಕ್ಕಳು ಮಣ್ಣು ತಿನ್ನೋದನ್ನು ಬಿಡೋದಿಲ್ಲ. ಅವರು ಪಾಲಕರ ಕಣ್ಣು ತಪ್ಪಿಸಿ ಮಣ್ಣಿನ ಸೇವನೆ ಮಾಡ್ತಾರೆ. ಹಾಗಾಗಿ ಕೆಲ ಮನೆ ಮದ್ದಿನ ಮೂಲಕ ಮಕ್ಕಳ ಈ ಮಣ್ಣು ತಿನ್ನುವ ಚಟವನ್ನು ನೀವು ಬಿಡಿಸಬಹುದು. ಇಂದು ಮಣ್ಣು ತಿನ್ನುವ ಮಕ್ಕಳಿಗಾಗಿ ಒಂದಿಷ್ಟು ಟಿಪ್ಸ್ ಇಲ್ಲಿದೆ.
ಮಣ್ಣು ತಿನ್ನುವ ಚಟ ಬಿಡಿಸಲು ಮನೆ ಮದ್ದು:
ಕ್ಯಾಲ್ಸಿಯಂ ಸಮೃದ್ಧ ಆಹಾರ ನೀಡಿ: ವೈದ್ಯರ ಪ್ರಕಾರ, ಕ್ಯಾಲ್ಸಿಯಂ ಕೊರತೆಯಿಂದಾಗಿ ಮಕ್ಕಳು ಮಣ್ಣು ತಿನ್ನಲು ಶುರು ಮಾಡ್ತಾರೆ. ನಿಮ್ಮ ಮಕ್ಕಳು ಮಣ್ಣು ತಿನ್ನುತ್ತಿದ್ದಾರೆ ಎಂದಾದ್ರೆ ಅವರಿಗೆ ಕ್ಯಾಲ್ಸಿಯಂ ಕೊರತೆಯಾಗಿದೆ ಎಂದರ್ಥೈಸಿಕೊಳ್ಳಬಹುದು. ನೀವು ಮಕ್ಕಳ ದೇಹಕ್ಕೆ ಈ ಸಮಯದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ಪೂರೈಸುವುದು ಅವಶ್ಯಕ. ಇದಕ್ಕಾಗಿ, ಮಕ್ಕಳ ಆಹಾರದಲ್ಲಿ ಹಾಲು, ಮೊಸರು ಮತ್ತು ಚೀಸ್ ನಂತಹ ಕ್ಯಾಲ್ಸಿಯಂ ಭರಿತ ಆಹಾರವನ್ನು ಸೇರಿಸಿ. ಆಹಾರದ ಮೂಲಕ ಕ್ಯಾಲ್ಸಿಯಂ ದೇಹ ಸೇರುತ್ತಿದ್ದಂತೆ ಮಕ್ಕಳು ಮಣ್ಣು ತಿನ್ನುವುದನ್ನು ಬಿಡ್ತಾರೆ.
ಲವಂಗ ನೀರು ಕುಡಿಸಿ ನೋಡಿ : ಮಕ್ಕಳು ಮಣ್ಣು ತಿನ್ನುತ್ತಿದ್ದಾರೆಂದ್ರೆ ಅದನ್ನು ತಪ್ಪಿಸಲು ನೀವು ಲವಂಗದ ನೀರನ್ನು ನೀಡಬಹುದು. ಇದಕ್ಕಾಗಿ 4-6 ಲವಂಗವನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ. ನಂತರ ನೀರನ್ನು ತಣ್ಣಗಾಗಿಸಿ ಮಕ್ಕಳಿಗೆ ನಿಯಮಿತವಾಗಿ ನೀಡಿ. ಕ್ರಮೇಣ ಮಕ್ಕಳು ಮಣ್ಣಿನ ಸೇವನೆ ಬಿಡ್ತಾರೆ. ಆದ್ರೆ ಲವಂಗದ ನೀರು ನೀಡುವ ಮೊದಲು ವೈದ್ಯರನ್ನು ಭೇಟಿಯಾಗಿ, ಸಲಹೆ ಪಡೆಯುವುದು ಒಳ್ಳೆಯದು.
ಇದನ್ನೂ ಓದಿ: ವಾಕಿಂಗ್ ಅಭ್ಯಾಸದಿಂದ ರಕ್ತದೊತ್ತಡ ನಿಯಂತ್ರಿಸಬಹುದಾ ?
ಮಕ್ಕಳಿಗೆ ಬಾಳೆಹಣ್ಣು ಒಳ್ಳೆಯ ಮದ್ದು : ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬಾಳೆ ಹಣ್ಣುಗಳು ಕಬ್ಬಿಣ, ಕ್ಯಾಲ್ಸಿಯಂ, ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಬಾಳೆಹಣ್ಣು ಮಕ್ಕಳ ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುವ ಜೊತೆಗೆ ಮಕ್ಕಳ ಮಣ್ಣು ತಿನ್ನುವ ಅಭ್ಯಾಸವನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಹಾಗಾಗಿ ಮಕ್ಕಳಿಗೆ ನಿಯಮಿತವಾಗಿ ಬಾಳೆ ಹಣ್ಣನ್ನು ನೀಡಿ.
ವೈದ್ಯರ ಸಲಹೆ ಅಗತ್ಯ : ದೇಹದಲ್ಲಿ ಪೋಷಕಾಂಶಗಳ ಕೊರತೆಯಾದ್ರೆ ಮಕ್ಕಳು ಮಣ್ಣು ತಿನ್ನಲು ಶುರು ಮಾಡ್ತಾರೆ. ಮಕ್ಕಳ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಪೂರೈಸುವುದು ನಮ್ಮ ಜವಾಬ್ದಾರಿ. ಇದಕ್ಕೆ ಪಾಲಕರು, ಆಹಾರ ತಜ್ಞರ ಸಲಹೆ ಪಡೆಯಬಹುದು. ಆಹಾರ ತಜ್ಞರ ಸಹಾಯದಿಂದ ಮಕ್ಕಳಿಗೆ ಸರಿಯಾದ ಡಯಟ್ ಚಾರ್ಟ್ ಅನ್ನು ಸಹ ತಯಾರಿಸಬಹುದು. ಇದನ್ನು ಅನುಸರಿಸುವುದರಿಂದ ಮಕ್ಕಳು ಸ್ವಲ್ಪ ಸಮಯದಲ್ಲೇ ಮಣ್ಣು ತಿನ್ನುವುದನ್ನು ನಿಲ್ಲಿಸುತ್ತಾರೆ.
ಇದನ್ನೂ ಓದಿ: 33ರ ಪುರುಷನಿಗೆ ಮುಟ್ಟಿನ ಸಮಸ್ಯೆ, ಟೆಸ್ಟ್ ಮಾಡಿಸಿದಾಗ ಗೊತ್ತಾಯ್ತು'ಅವನಲ್ಲ ಅವಳು' !
ಮಕ್ಕಳ ಆಹಾರ : ಮಕ್ಕಳ ಮೂಳೆಯನ್ನು ಬಲಪಡಿಸುವ ಅವಶ್ಯಕತೆ ಇದೆ. ಹಾಗಾಗಿ ಮಕ್ಕಳಿಗೆ ನೀಡುವ ಆಹಾರದ ಬಗ್ಗೆ ಗಮನ ನೀಡಬೇಕು. ಮಕ್ಕಳಿಗೆ ವಂಶಲೋಚನ (VANSHLOCHAN) ನೀಡಬಹುದು. ಇದು ಮಕ್ಕಳ ದೇಹಕ್ಕೆ ಕ್ಯಾಲ್ಸಿಯಂ ಸೇರುವಂತೆ ಮಾಡುತ್ತದೆ. ಇದ್ರಿಂದ ಮಕ್ಕಳು ಮಣ್ಣು ತಿನ್ನುವ ಚಟದಿಂದ ದೂರ ಉಳಿಯುತ್ತಾರೆ. ಇದನ್ನು ನೀಡುವ ಮೊದಲು ವೈದ್ಯರ ಸಲಹೆ ಪಡೆಯಿರಿ.