ದೇಶಾದ್ಯಂತ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಹೆಚ್ಚುತ್ತಿರುವ ತಾಪಮಾನದಿಂದ ಆರೋಗ್ಯ (Health)ವನ್ನು ಕಾಪಾಡಿಕೊಳ್ಳುವುದು ಅತೀ ಮುಖ್ಯ. ಹೀಗಾಗಿ ಹೆಚ್ಚಿನವರು ಎಳನೀರು, ಜ್ಯೂಸ್ (Juice) ಮೊದಲಾದ ಪಾನೀಯಗಳನ್ನು ದಿನಪೂರ್ತಿ ಕುಡಿಯುತ್ತಿರುತ್ತಾರೆ. ಅದರಲ್ಲೂ ಬೇಸಿಗೆ (Summer)ಯಲ್ಲಿ ಓಆರ್‌ಎಸ್ (ORS) ಕುಡಿಯೋದು ತುಂಬಾ ಒಳ್ಳೇದು. ಯಾಕೆಂದು ನಿಮಗೆ ಗೊತ್ತಾ ?
ಬೇಸಿಗೆ (Summer)ಯಲ್ಲಿ ತಾಪಮಾನ ಹೆಚ್ಚಾಗಿರುವ ಕಾರಣ ನಿರ್ಜಲೀಕರಣ (Dehydration), ಸುಸ್ತು, ರಕ್ತದೊತ್ತಡ ಕಡಿಮೆಯಾಗುವುದು ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು (Health Problem) ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ಸಮ್ಮರ್‌ನಲ್ಲಿ ಓಆರ್‌ಎಸ್ (ORS) ಕುಡಿಯುವುದು ಹಲವು ಪ್ರಯೋಜನಗಳನ್ನು ಹೊಂದಿದೆ. ಕಡಿಮೆ ಬಿಪಿ, ಅತಿಸಾರ ಮತ್ತು ನಿರ್ಜಲೀಕರಣದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಜೀವಕ್ಕೆ ಅಪಾಯ (Danger)ವಾಗುತ್ತದೆ. ಈ ರೋಗಗಳಲ್ಲಿ ಸಮಯಕ್ಕೆ ಸರಿಯಾಗಿ ಓಆರ್‌ಎಸ್ ದ್ರಾವಣವನ್ನು ರೋಗಿಗೆ ನೀಡಿದರೆ ಆತನ ಜೀವ ಉಳಿಸಬಹುದು.
ಅತಿಸಾರವು ಇನ್ನೂ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿದೆ. ಅತಿಸಾರದಲ್ಲಿ ಸಾವಿಗೆ ನೀರಿನ ಕೊರತೆಯೂ ದೊಡ್ಡ ಕಾರಣವಾಗಿದೆ. ಇಷ್ಟು ಮಾತ್ರವಲ್ಲದೆ, ಇತರ ಅನೇಕ ಕಾಯಿಲೆಗಳಲ್ಲಿ, ನೀರಿನ ಕೊರತೆ ಅಥವಾ ಉಪ್ಪು-ಸಕ್ಕರೆ ಮತ್ತು ಎಲೆಕ್ಟ್ರೋಲೈಟ್‌ಗಳ ಕೊರತೆಯು ಮಾರಕ ಮತ್ತು ನೋವಿನಿಂದ ಕೂಡಿದೆ. ಒಆರ್‌ಎಸ್ ಸೇವನೆಯಿಂದ ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು.
Heat Wave: ಹೆಚ್ಚುತ್ತಿರುವ ತಾಪಮಾನದ ಮಧ್ಯೆ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?
ORS ಎಂದರೇನು ?
ಓಆರ್‌ಎಸ್ ಉಪ್ಪು (ಎಲೆಕ್ಟ್ರೋಲೈಟ್) ಮತ್ತು ಸಕ್ಕರೆಯ ದ್ರಾವಣವಾಗಿದೆ. ಇದನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಬೇಕು. ಈ ಎರಡೂ ಮಿಶ್ರಣಗಳು ದೇಹದಲ್ಲಿನ ಕರುಳಿನ (ಹೊಟ್ಟೆ) ಯಿಂದ ವಿದ್ಯುದ್ವಿಚ್ಛೇದ್ಯಗಳು ಮತ್ತು ನೀರಿನ ಹೀರಿಕೊಳ್ಳುವಿಕೆಯನ್ನು ವೇಗಗೊಳಿಸುತ್ತವೆ. ಒಆರ್‌ಎಸ್ ಜೊತೆಗೆ ಸತುವಿನ ಸಂಯೋಜನೆಯು ತೀವ್ರವಾದ ಅತಿಸಾರ ಮತ್ತು ನಿರ್ಜಲೀಕರಣಕ್ಕೆ ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ.
ORS ಕುಡಿಯುವುದರಿಂದಾಗುವ ಪ್ರಯೋಜನಗಳು
1. ಅತಿಸಾರದ ಸಂದರ್ಭದಲ್ಲಿ ತಕ್ಷಣವೇ ಓಆರ್‌ಎಸ್ ದ್ರಾವಣವನ್ನು ಕುಡಿಯಬೇಕು.
2. ಹೀಟ್ ಸ್ಟ್ರೋಕ್ ಸಂದರ್ಭದಲ್ಲಿಯೂ ಓಆರ್‌ಎಸ್ ದ್ರಾವಣ ಕುಡಿಯವುದು ಉತ್ತಮ.
3. ನಿರ್ಜಲೀಕರಣದಿಂದ ಹೊರಬರಲು ORS ಕುಡಿಯಿರಿ.
4. ನಿಮಗೆ ಆಯಾಸ ಮತ್ತು ದೌರ್ಬಲ್ಯ ಮತ್ತು ದೇಹದಲ್ಲಿ ಬಿಗಿತ ಕಂಡುಬಂದರೆ, ತಕ್ಷಣವೇ ORS ದ್ರಾವಣವನ್ನು ಕುಡಿಯಿರಿ.
5. ತಲೆನೋವಿನ ಸಂದರ್ಭದಲ್ಲಿಯೂ ಒಆರ್ ಎಸ್ ದ್ರಾವಣ ಪರಿಹಾರ ನೀಡುತ್ತದೆ.
6. ವ್ಯಾಯಾಮದ ನಂತರ ದೇಹವು ಜಡವಾಗಿದ್ದರೆ ಅಥವಾ ತಲೆತಿರುಗುವಿಕೆಯನ್ನು ಅನುಭವಿಸಿದರೆ, ತಕ್ಷಣವೇ ಈ ದ್ರಾವಣ ಸೇವಿಸಬಹುದು.
7. ಕಡಿಮೆ ಬಿಪಿ ಮತ್ತು ಕಡಿಮೆ ಶುಗರ್ ಉಂಟಾಗುವ ಸಂದರ್ಭದಲ್ಲಿಯೂ ಒಆರ್‌ಎಸ್ ತಕ್ಷಣದ ಪ್ರಯೋಜನವನ್ನು ನೀಡುತ್ತದೆ.
8. ಬೇಸಿಗೆಯಲ್ಲಿ ಯಾವಾಗಲೂ ನಿಮ್ಮೊಂದಿಗೆ ORS ಪ್ಯಾಕೆಟ್ ಇಟ್ಟುಕೊಳ್ಳಿ. ಅಗತ್ಯವಿದ್ದರೆ, ತಕ್ಷಣ ಅದನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಮತ್ತು ಸ್ವಲ್ಪ ಸ್ವಲ್ಪ ಕುಡಿಯಿರಿ. ಇದು ದೇಹಕ್ಕೆ ಹೆಚ್ಚುವರಿ ಚೈತನ್ಯವನ್ನು ನೀಡುತ್ತದೆ.
Summer Tips: ಎಸಿ, ಕೂಲರ್ ಇಲ್ಲದೆ ಮನೆ ಥಂಡಾ ಥಂಡಾ ಕೂಲ್ ಆಗೋದು ಹೇಗೆ?
ಯಾವ ವಯಸ್ಸಿನಲ್ಲಿ ORS ತೆಗೆದುಕೊಳ್ಳಬೇಕು?
- 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಪ್ರತಿ ಬಾರಿ ಅತಿಸಾರ ಸಂಭವಿಸಿದಾಗ ಕನಿಷ್ಠ 1/4 ಅಥವಾ 1/2 ದೊಡ್ಡ ಕಪ್ (ಕಪ್ ಗಾತ್ರ - 250 ಮಿಲಿ) ORS ದ್ರಾವಣವನ್ನು ನೀಡಬೇಕು. ಪ್ರತಿ 2 ರಿಂದ 3 ನಿಮಿಷಗಳ ನಂತರ, 1-2 ಚಮಚ ORS ದ್ರಾವಣವನ್ನು ನೀಡಬೇಕು.
- 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ ಅತಿಸಾರದ ನಂತರ ಪ್ರತಿ ಬಾರಿ 1/2 ರಿಂದ 1 ಕಪ್ ORS ದ್ರಾವಣವನ್ನು ನೀಡಬೇಕು.
-12 ವರ್ಷ ಮೇಲ್ಪಟ್ಟ ಮಕ್ಕಳು, ವಯಸ್ಕರು ಮತ್ತು ವೃದ್ಧರು ಪ್ರತಿ ಅತಿಸಾರದ ನಂತರ 1 ರಿಂದ 2 ಕಪ್‌ಗಳನ್ನು ಅಂದರೆ 250 ರಿಂದ 400 ಮಿಲಿ ORS ದ್ರಾವಣವನ್ನು ತೆಗೆದುಕೊಳ್ಳಬೇಕು.
ORS ಸೇವನೆಯ ಸಂದರ್ಭ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು
ಒಆರ್‌ಎಸ್ ದ್ರಾವಣವನ್ನು 24 ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು. ಏಕೆಂದರೆ ಅದರಲ್ಲಿ ಬ್ಯಾಕ್ಟೀರಿಯಾ ಬೆಳೆಯಲು ಪ್ರಾರಂಭಿಸಬಹುದು. ಒಆರ್‌ಎಸ್ ಪೌಡರ್‌ಗೆ ಯಾವಾಗಲೂ ಫಿಲ್ಟರ್ ಮಾಡಿದ ಅಥವಾ ಕುದಿಸಿದ ತಂಪಾಗಿಸಿದ ನೀರನ್ನು ಸೇರಿಸಿ. ಒಆರ್‌ಎಸ್‌ಅನ್ನು ನೀರಿನಲ್ಲಿ ಮಾತ್ರ ಮಿಶ್ರಣ ಮಾಡಿ. ಇದಕ್ಕಾಗಿ ಹಾಲು, ಸೂಪ್, ಜ್ಯೂಸ್, ಸಾಫ್ಟ್ ಡ್ರಿಂಕ್ಸ್ ಬಳಸಬೇಡಿ. ಒಆರ್‌ಎಸ್‌ಗೆ ಎಂದಿಗೂ ಸಕ್ಕರೆ ಅಥವಾ ಉಪ್ಪನ್ನು ಪ್ರತ್ಯೇಕವಾಗಿ ಸೇರಿಸಬೇಡಿ.
