ಸದ್ದಿಲ್ಲದೆ ಮಾನವನ ಮಿದುಳನ್ನೇ ತಿಂದು ಸಾಯಿಸುತ್ತೆ ಈ ಅಮೀಬಾ!

ಸದ್ದಿಲ್ಲದಂತೆ ಮಿದುಳನ್ನು ಕಬಳಿಸಿ, ವ್ಯಕ್ತಿಯ ಸಾವಿಗೆ ಕಾರಣವಾಗುವಂತೆ ಮಾಡುವ ಏಕಕೋಶಾಣು ಜೀವಿ ನೆಗ್ಲೇರಿಯಾ ಫೌಲೆರಿ. ಮೂಗಿನ ಮೂಲಕ ಮಿದುಳು ಪ್ರವೇಶಿಸಿ ಕೋಶಗಳನ್ನು ಹಾನಿಗೊಳಪಡಿಸುತ್ತದೆ. ಇತ್ತೀಚೆಗೆ ಅಮೆರಿಕದಲ್ಲಿ ಈ ಘಟನೆಗೆ ವ್ಯಕ್ತಿಯೊಬ್ಬರು ಸಾವಿಗೀಡಾಗಿದ್ದಾರೆ. 
 

One type of amoeba eats human brain

ಅಮೆರಿಕದ ಫ್ಲೋರಿಡಾದ ಚಾರ್ಲಟ್ ಎಂಬ ಕೌಂಟಿಯಲ್ಲಿ ಇತ್ತೀಚೆಗೆ ಒಬ್ಬರ ನಿಧನವಾಗಿದೆ. ಅಷ್ಟು ದೊಡ್ಡ ಅಮೆರಿಕದ ಸಾವಿರಾರು ಕೌಂಟಿಗಳಿರುವ ದೇಶದಲ್ಲಿ ಯಾರೋ ಒಬ್ಬಾತ ತೀರಿ ಹೋದರೆ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾಗುತ್ತದೆ ಎಂದರೆ ಅದರಲ್ಲೇನೋ ವಿಶೇಷವಿರಬೇಕು. ಹೌದು, ಈತ ತೀರಿಕೊಂಡಿದ್ದು ಮಿದುಳನ್ನೇ ಕಬಳಿಸುವ ವಿಚಿತ್ರ ಜಾತಿ ಅಮೀಬಾ ಸೋಂಕಿನಿಂದ ಎನ್ನುವುದು ಗಮನಾರ್ಹ. ಇದು ಅತಿ ಎಂದರೆ ಅತಿ ವಿರಳ ಸೋಂಕು. ಏಕೆಂದರೆ, ಸಾಮಾನ್ಯ ಅಮೀಬಾದಿಂದ ಮನುಷ್ಯನಿಗೆ ಏನೆಂದರೆ ಏನೂ ತೊಂದರೆಯಿಲ್ಲ. ಆದರೆ, ಇದು ಹಾಗಲ್ಲ. ಮಿದುಳನ್ನೇ ತಿಂದು ಹಾಕುತ್ತದೆ. ದುರಂತವೆಂದರೆ, ಇದು ದೇಹವನ್ನು ಪ್ರವೇಶಿಸುವ ಬಗ್ಗೆ ಅರಿವೂ ಆಗುವುದಿಲ್ಲ. ಮಿದುಳಿಗೆ ಆಗುವ ಹಾನಿಯ ಕುರಿತೂ ಅಂದಾಜಾಗುವುದಿಲ್ಲ. ವಿಶ್ವದ ಅಲ್ಲಲ್ಲಿ ಕೆಲವೊಮ್ಮೆ ಇಂತಹ ಪ್ರಕರಣಗಳು ವರದಿಯಾಗುತ್ತವೆ. ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ಇಂತಹ ಘಟನೆ ಜರುಗಿತ್ತು. ಇದೀಗ ಅಮೆರಿಕದಲ್ಲಿ ಈ ಡೆಡ್ಲಿ ಅಮೀಬಾ ಪತ್ತೆಯಾಗಿದ್ದು, ಆರೋಗ್ಯ ಮುನ್ನೆಚ್ಚರಿಕೆ ನೀಡಲಾಗಿದೆ. ಅಮೀಬಾ ಏಕಕೋಶೀಯ ಜೀವಿ. ಇದೂ ಸಹ ಏಕಕೋಶೀಯ ಜೀವಿಯಾಗಿದ್ದು, ನೀರಿನ ಮೂಲಕ ಸುಲಭವಾಗಿ ಮಾನವನ ದೇಹ ಪ್ರವೇಶಿಸುತ್ತದೆ. ಅಮೆರಿಕದ ಘಟನೆಯಲ್ಲೂ  ಟ್ಯಾಪ್ ವಾಟರ್ ನಿಂದಾಗಿ ಅಮೀಬಾ ಸೋಂಕು ಉಂಟಾಗಿದೆ ಎಂದು ಹೇಳಲಾಗಿದೆ.
ಈ ಅಮೀಬಾದ (Amoeba) ಹೆಸರು ನೆಗ್ಲೇರಿಯಾ ಫೌಲೆರಿ (Naegleria Fowleri). ಸ್ನಾನ (Bathing) ಮಾಡುವ ನೀರಿನ ಮೂಲಕ ಮೂಗಿಗೆ (Nose) ಪ್ರವೇಶಿಸುತ್ತದೆ. ನಂತರ ಮಿದುಳನ್ನು (Brain) ಸೇರಿಕೊಳ್ಳುತ್ತದೆ. ಅತ್ಯಂತ ಭಯಾನಕವೆಂದರೆ, ಇದು ಮಿದುಳಿನ ಜೀವಕೋಶಗಳಿಗೆ (Cells) ನಿಧಾನವಾಗಿ ಹಾನಿ ಮಾಡುತ್ತ ಬಂದು, ಕೊನೆಗೆ ವ್ಯಕ್ತಿಯ ಸಾವಿಗೆ (Death) ಕಾರಣವಾಗುತ್ತದೆ. ಈ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ, ಔಷಧ (Medicine) ಇಲ್ಲ. ಈ ಸೋಂಕು ಉಂಟಾದರೆ, ಸೋಂಕಿತರು ಉಳಿಯುವುದು ಅತಿ ಕಡಿಮೆ. ಇದುವರೆಗಿನ ದಾಖಲೆಗಳ ಪ್ರಕಾರ, ಶೇ.97ರಷ್ಟು ಸೋಂಕಿತರು ಸಾವಿಗೀಡಾಗುತ್ತಾರೆ. ಅಪರೂಪದ ಪ್ರಕರಣಗಳಲ್ಲಿ ಜೀವ ಉಳಿದರೂ ಅವರನ್ನು ತೀವ್ರ ವ್ಯವಸ್ಥೆಯಲ್ಲಿಟ್ಟು ಚಿಕಿತ್ಸೆ ನೀಡಬೇಕಾಗುತ್ತದೆ. 

Heart Attack : ಕೊರೊನಾ ನಂತ್ರ ಹೆಚ್ಚಾಯ್ತಾ ಹೃದಯಾಘಾತ?

ಎಲ್ಲಿ, ಹೇಗಿರುತ್ತೆ?
ನೆಗ್ಲೇರಿಯಾ ಫೌಲೆರಿ ಅಮೀಬಾ ಶುದ್ಧ ನೀರಿನ (Water) ಮೂಲಗಳಲ್ಲಿ ಕಂಡುಬರುತ್ತವೆ. ನದಿ, ಕೆರೆಗಳಲ್ಲಿ ಸಾಮಾನ್ಯವಾಗಿರುತ್ತವೆ. ನೀರಿನ ಮೂಲಕ ಮಾನವನಲ್ಲಿ ಸೇರಿಕೊಳ್ಳುತ್ತದೆ. ಅಮೆರಿಕದ ಫ್ಲೋರಿಡಾದಲ್ಲಿ ಮಿದುಳು ತಿನ್ನುವ ಅಮೀಬಾ ಸೋಂಕಿಗೆ ತುತ್ತಾಗಿ ಸಾವಿಗೀಡಾದ ಘಟನೆ ಇದೇ ಮೊದಲು ಎಂದು ಸಿಡಿಸಿ -ಅಮೆರಿಕದ (America) ಆರೋಗ್ಯ ಸಂಸ್ಥೆ ತಿಳಿಸಿದೆ. ಇದು ಎಷ್ಟು ಅಪರೂಪದ ಸೋಂಕು ಎಂದರೆ, 1962ರಿಂದ 2021ರ ಅವಧಿಯಲ್ಲಿ ಅಮೆರಿಕದಲ್ಲಿ 154 ಸೋಂಕಿತರು ಕಂಡುಬಂದಿದ್ದಾರೆ. ಇವರ ಪೈಕಿ ಶೇ.97ರಷ್ಟು ಜನ ಸಾವಿಗೀಡಾಗಿದ್ದಾರೆ. 

ಲಕ್ಷಣವೇನು?
ಮಿದುಳು ತಿನ್ನುವ ಅಮೀಬಾ ಸೋಂಕಿನ ಮೊದಲ ಲಕ್ಷಣವೆಂದರೆ, ತಲೆನೋವು (Headache). ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ಸೋಂಕಿತ ವ್ಯಕ್ತಿಗೆ ಮೊದಲು ತಲೆನೊವು ಕಾಣಿಸಿಕೊಂಡಿತ್ತು ಎನ್ನುವುದು ದಾಖಲಾಗಿದೆ. ನಂತರ ವಾಂತಿ ಆರಂಭವಾಗಿ, ಮಾತುಗಳು ಸ್ಪಷ್ಟತೆ ಕಳೆದುಕೊಂಡಿದ್ದವು. ಆಡುವ ಮಾತುಗಳು ತೊದಲು ತೊದಲಾಗಿ ಇರುತ್ತಿದ್ದವು. ಸೋಂಕು (Infection) ಆರಂಭವಾದ 1-12 ದಿನಗಳ ಒಳಗಾಗಿ ಪರಿಣಾಮಗಳು ಗೋಚರಿಸಲು ಶುರುವಾಗಿತ್ತು. 

ಪದೇ ಪದೇ ಬಿಕ್ಕಳಿಕೆ, ಕಣ್ಣು ಮಿಟುಕಿಸೋದು ಭಯಾನಕ ರೋಗದ ಲಕ್ಷಣವಂತೆ !

ಹೀಗೊಂದು ಅನುಭವ
ಕೆಲವು ವರ್ಷಗಳ ಹಿಂದೆ ಅಮೆರಿಕದ ಯುವಕ ಸೆಬಾಸ್ಟಿಯನ್ ಎಂಬಾತನಿಗೆ ಈ ಸೋಂಕು ತಗುಲಿತ್ತು. ಆಗ ಈತನಿಗೆ ಕೇವಲ 16 ವರ್ಷ. ಚೇತರಿಸಿಕೊಳ್ಳಲು ಹಲವಾರು ತಿಂಗಳುಗಳೇ ಬೇಕಾಗಿದ್ದವು. ಈಜುಪಟುವಾಗಿದ್ದ ಈತ ಸ್ವಿಮ್ಮಿಂಗ್ ಫೂಲ್ ನಲ್ಲಿರುವಾಗಲೇ ಕುಸಿದುಬಿದ್ದಿದ್ದ. ಆದರೆ, ಬೇಗ ಸೂಕ್ತ ಚಿಕಿತ್ಸೆ (Treatment) ದೊರೆತ ಪರಿಣಾಮ ಗುಣಮುಖವಾಗಿದ್ದ. ಅತಿಯಾದ ತಲೆನೋವಿನ ಜತೆಗೆ ಯಾರಾದರೂ ಮುಟ್ಟಲು ಬಂದರೆ ದೂರ ಓಡಿ ಹೋಗಬೇಕು ಎಂದು ಈತನಿಗೆ ಅನಿಸುತ್ತಿತ್ತಂತೆ. ಅಷ್ಟೇ ಅಲ್ಲ, ತಲೆಯ ಮೇಲೆ ಕಲ್ಲನ್ನಿಟ್ಟಂತೆ (Heavy Weight) ಭಾಸವಾಗುತ್ತಿತ್ತಂತೆ. 

Latest Videos
Follow Us:
Download App:
  • android
  • ios