ಬೆತ್ತಲೆಯಾದರೆ ಇಮ್ಯೂನಿಟಿ ಪವರ್ ಹೆಚ್ಚುತ್ತಾ ?
ಒಂದು ದಿನವಿಡೀ ನೀವು ಮನೆಯೊಳಗೆ ನಗ್ನವಾಗಿ ಇದ್ದರೆ, ನೀವು ಊಹಿಸಲೇ ಸಾಧ್ಯವಿಲ್ಲದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಲಾಭಗಳು ನಿಮ್ಮದಾಗುತ್ತವೆ.
ದಿನವಿಡೀ ಬೇಕೋ ಬೇಡವೋ ಬಟ್ಟೆ ಧರಿಸಿಕೊಂಡು ತಿರುಗಾಡಲೇಬೇಕು, ಅದು ಸಭ್ಯ ಸಮಾಜದ ರೂಢಿ. ತೀರಾ ಸೆಖೆ ಹೆಚ್ಚು ಇರುವ ಪ್ರದೇಶಗಳಲ್ಲಿನ ಜನ ಕೆಳಗೊಂದು ಚಡ್ಡಿ ಹೊರತುಪಡಿಸಿ ಉಳಿದಂತೆ ಮೇಲುಮೈ ಬಟ್ಟೆ ಧರಿಸದೆ ಇರುವುದನ್ನು ಕಾಣಬಹುದು. ಹೆಚ್ಚು ಸಮಯ ಮನೆಯೊಳಗೇ ಇರುವವರು, ಹೊರಗಿನವರ ದೃಷ್ಟಿಗೆ ಬೀಳದಂತೆ ಇರುವವರು, ಈ ಕ್ವಾರಂಟೈನ್ ಸಮಯದಲ್ಲಿ ಮನೆಯೊಳಗೆ ಬೆತ್ತಲಾಗಿ ಇರೋಕೆ ಏನು ಅಡ್ಡಿ? ಬೆತ್ತಲಾಗಿ ಇದ್ದರೆ ಏನು ಲಾಭ ಅಂತೀರಾ? ಆರೋಗ್ಯ ಹಾಗೂ ಮಾನಸಿಕ ಪ್ರಯೋಜನಗಳು ಇಲ್ಲಿವೆ...
- ದೇಹದ ಬಗ್ಗೆ ಅಭಿಮಾನ
ನಮ್ಮ ದೇಹದ ಬಗ್ಗೆ ನಮಗೆ ಕೀಳರಿಮೆ ಇರಬಹುದು; ಮೇಲರಿಮೆಯೂ ಇರಬಹುದು. ಇವೆರಡನ್ನೂ ಮೀರಿದ ಒಂದು ಅಭಿಮಾನ, ನಿಜವಾದ ಅರಿವನ್ನು ನಮ್ಮ ದೇಹದ ಬಗ್ಗೆ ನಾವು ಬೆಳೆಸಿಕೊಳ್ಳಬಹುದು. ಬಟ್ಟೆ ಧರಿಸಿದ್ದಾಗ ಗೊತ್ತಾದಾಗ ನಮ್ಮ ದೇಹದ ಸೌಂದರ್ಯ ನಮಗೆ ಬೆತ್ತಲಾದಾಗ ಕಾಣಿಸುತ್ತದೆ. ಹಾಗೇ ನಮ್ಮ ದೇಹದ ಅರೆ- ಕೊರೆಗಳೂ ಗೊತ್ತಾಗಬಹುದು.
ಸಂಭೋಗ ಸುಖ ಪುರುಷನಿಗಿಂತೂ ಮಹಿಳೆಗೇ ಹೆಚ್ಚಂತೆ! ಈ ಕತೆ ಕೇಳಿ. ...
- ಆತ್ಮೀಯತೆಯ ಹೆಚ್ಚಳ
ಮನೆಯಲ್ಲಿರುವ ದಂಪತಿಗಳು, ಮನೆಯಲ್ಲಿ ಬೇರೆ ಯಾರೂ ನಿಮ್ಮ ಜೊತೆಗೆ ಇಲ್ಲದಿದ್ದರೆ ಇಡೀ ದಿನ ನಗ್ನವಾಗಿ ಕಳೆಯುವ ಪ್ರಯೋಗ ಮಾಡಿ ನೋಡಬಹುದು. ಆರಂಭದಲ್ಲಿ ಇದು ತುಸು ಕಿರಿಕಿರಿಯಂತೆ ಕಾಣಿಸಬಹುದಾದರೂ, ಒಂದೆರಡು ತಾಸು ಕಳೆದಂತೆ ಅದು ಅಭ್ಯಾಸವಾಗುತ್ತದೆ. ಹಾಗೂ ನಿಮ್ಮ ದೇಹಗಳು ನಿಮಗೆ ಇನ್ನಷ್ಟು ಆಪ್ತ ಎನಿಸುತ್ತವೆ. ನಿಮ್ಮ ದೇಹದಂತೆಯೇ ಇನ್ನೊಬ್ಬರ ದೇಹವನ್ನೂ ಪ್ರೀತಿಸುವ ಅಭ್ಯಾಸ ಬೆಳೆಯುತ್ತದೆ.
- ಸೆಕ್ಸ್‌ನಲ್ಲಿ ಆಸಕ್ತಿ ಹೆಚ್ಚಳ
ನಿಮ್ಮ ದೇಹಗಳು ಮುಕ್ತವಾಗಿ ಇರುವಂತೆಯೇ ಈ ದೇಹಗಳ ಪರಸ್ಪರ ದರ್ಶನದಿಂದ ಉದ್ರೇಕ, ಸೆಕ್ಸ್‌ನಲ್ಲಿ ಆಸಕ್ತಿ ಕೂಡ ಹೆಚ್ಚುತ್ತದೆ. ಇದು ನಿಮ್ಮಬ್ಬಿರ ನಡುವಿನ ಇಂಟಿಮಸಿಯನ್ನು ಜಾಸ್ತಿ ಮಾಡುತ್ತದೆ. ನಿಮ್ಮಿಬ್ಬರ ಒಡನಾಟದಿಂದ ಹುಟ್ಟುವ ಆಸಕ್ಸಿಟೋಸಿನ್ ಹಾರ್ಮೋನ್ ನಿಮ್ಮ ಬಾಂಡಿಂಗ್ ಅನ್ನು ಅಧಿಕ ಮಾಡುತ್ತದೆ.
- ಸ್ತನ್ಯಪಾನ ಸುಲಭ
ನೀವು ಎಳೆಯ ಮಗುವಿಗೆ ಹಾಲು ಊಡಿಸುವ ತಾಯಿ ಆಗಿದ್ದರೆ, ನಗ್ನವಾಗಿ ಇರುವಿಕೆ ನಿಮ್ಮ ಸ್ತನಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ಸ್ತನ್ಯದಿಂದ ಒದ್ದೆಯಾಗುವ ಬ್ಲೌಸ್ ಧರಿಸುವುದರಿಂದ ಉಂಟಾಗುವ ಒಂದು ಬಗೆಯ ಸೋಂಕನ್ನು ಇದು ದೂರ ಇಡುತ್ತದೆ. ಮೊಲೆತೊಟ್ಟುಗಳು ಬೇಗನೆ ಆರಿ ಆರೋಗ್ಯಕರವಾಗಿರುತ್ತವೆ.
ಅಪರಿಚಿತರ ಜೊತೆ ಸೆಕ್ಸ್ ತೀರ್ಥಯಾತ್ರೆ! ಇದು ಇಂಡೋನೇಷ್ಯಾ ಸ್ಪೆಶಲ್! ...
- ಯೋನಿ- ಶಿಶ್ನದ ಆರೋಗ್ಯ
ನಿಮ್ಮ ಲೈಂಗಿಕ ಅಂಗಗಳ ಆರೋಗ್ಯವನ್ನು ಚೆನ್ನಾಗಿ ಇಡುವಂತೆ ನಿಮ್ಮ ನಗ್ನತೆ ಮಾಡುತ್ತದೆ. ಇದಕ್ಕೆ ಕಾರಣ, ಕೆಲವು ಬಗೆಯ ಫ್ಯಾಬ್ರಿಕ್‌ಗಳಿಂದ ಮಾಡಿದ ಒಳಬಟ್ಟೆಯ ಧಾರಣೆಯಿಂದ ನಿಮ್ಮ ತೊಡೆಸಂದಿಯಲ್ಲಿ ಆಗಾಗ ಅನಾರೋಗ್ಯ, ತುರಿಕೆ, ಫಂಗಸ್ ಉಂಟಾಗಬಹುದು. ಆಗಾಗ ಗಾಳಿಯಾಡಲು ಬಿಡುವುದರಿಂದ ಈ ಪ್ರದೇಶ ಒಳ್ಳೆಯ ಉಸಿರಾಟವನ್ನು ಪಡೆಯುತ್ತದೆ.
- ಉತ್ತಮ ನಿದ್ರೆಗಾಗಿ
ನಗ್ನವಾಗಿ ಇರುವುದರಿಂದ ನಿಮ್ಮ ದೇಹದ ಉಷ್ಣತೆ ತಗ್ಗುತ್ತದೆ. ಬಟ್ಟೆಗಳ ಒಳಗೆ ಬಿಸಿಯಾಗಿರುವ ದೇಹಕ್ಕೆ ಸಾಕಷ್ಟು ಗಾಳಿ ಸೋಕಿ, ಚರ್ಮದ ಪದರಗಳಲ್ಲಿ ಗಾಳಿ ಆಡುವುದರಿಂದ ದೇಹ ತಂಪಾಗಿ, ಒಳ್ಳೆಯ ರಾತ್ರಿಯ ನಿದ್ರೆ ನಿಮಗೆ ಲಭ್ಯವಾಗುತ್ತದೆ. ನಿಮ್ಮ ದೇಹದಲ್ಲಿ ಹೆಚ್ಚಾಗಿ ಇರುವ ಕೊಬ್ಬನ್ನೂ ಈ ಅಭ್ಯಾಸ ಕರಗಿಸುತ್ತದೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿದೆ.
- ವಿಟಮಿನ್ ಸಿಗಾಗಿ
ನೀವು ದಿನವಿಡೀ ನಗ್ನವಾಗಿದ್ದರೆ, ದಿನವಿಡೀ ಬಟ್ಟೆ ಧರಿಸಿಕೊಂಡು ಇರುವಾಗ ಪಡೆಯುವುದಕ್ಕಿಂತಲೂ ಮೂರು ಪಟ್ಟು ಹೆಚ್ಚಿನ ವಿಟಮಿನ್ ಸಿಯನ್ನು ಪಡೆಯುತ್ತೀರಿ ಎಂಬುದು ಗೊತ್ತಾಗಿದೆ. ಕೊರೊನಾದ ಈ ದಿನಗಳಲ್ಲಂತೂ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು ವಿಟಮಿನ್ ಸಿ ತುಂಬಾ ಅಗತ್ಯ ಅಲ್ವೇ. ಸಾಧ್ಯವಿದ್ದರೆ ನೇರ ಬಿಸಿಲು ಕೂಡ ಬೀಳುವಲ್ಲ ನಗ್ನವಾಗಿ ಒಂದಿಷ್ಟು ಸಮಯ ಕಳೆಯೋದು ಒಳ್ಳೆಯದು.
ಈ ಗುಣ ತಮ್ಮ ಭಾವಿ ಪತ್ನಿಯಲ್ಲಿರಬೇಕೆಂಬುದು ಪುರುಷರ ಬಯಕೆ! ...
- ಸಂತೋಷವಾಗಿರೋಕೆ
ನೀವು ನಿಮ್ಮ ಬಟ್ಟೆಯ ಆವರಣಗಳನ್ನೆಲ್ಲ ಅತ್ತ ಬಿಸಾಕಿ ಬರ್ತ್‌ಡೇ ಸೂಟ್‌ನಲ್ಲಿದ್ದಾಗ ಹೆಚ್ಚು ಸಂತೋಷವಾಗಿರುತ್ತೀರಿ. ನಿಮ್ಮ ದೇಹಕ್ಕೆ ಅಗತ್ಯವಾದ ಉಷ್ಣಾಂಶದ ಜೊತೆಗೆ ಇತರ ಪೋಷಕಾಂಶಗಳೂ ಸಿಕ್ಕಿ, ದೇಹ ಹೆಚ್ಚು ಸಂತೋಷದ ಹಾರ್ಮೋನ್‌ಗಳನ್ನು ಸ್ರವಿಸುತ್ತದೆ.. ಇದರಿಂದ ನೀವು ಸಂತೋಷವಾಗಿರೋಕೆ ಸಾಧ್ಯ.