ಕೆಂಪಿರುವೆ ಚಟ್ನಿ ಕೊರೋನಾ ಕ್ಯೂರ್ ಮಾಡುತ್ತಾ?
ಉತ್ತರ ಕನ್ನಡದ ಸಿದ್ದಿ ಜನಾಂಗದವರು ಹೆಚ್ಚಾಗಿ ಮಾಡುವ ಕೆಂಪಿರುವೆ ಚಟ್ನಿಯಲ್ಲಿ ಕೊರೊನಾ ಓಡಿಸುವ ಗುಣವಿದೆ ಎಂದು ಕೆಲವು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.
ನಮ್ಮ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೆಲವು ಸಮುದಾಯದವರು ರೆಡಿ ಮಾಡುವ ಚಿಗಳಿ ಚಟ್ನಿ ಅರ್ಥಾತ್ ಕೆಂಪಿರುವೆ ಚಟ್ನಿಗೆ ಕೊರೊನಾ ತಡೆಯುವ ಗುಣ ಇದೆಯಂತೆ! ಹಾಗೆ ಸಂಶೋಧಕರೊಬ್ಬರು ಹೇಳಿದ್ದಾರೆ. ಅವರ ಸಂಶೋಧನೆಯ ವಿವರಗಳನ್ನು ಕೇಂದ್ರದ ಅಯುಷ್ ಇಲಾಖೆಗೆ ಸಲ್ಲಿಸಲಾಗಿದೆ. ಇದರ ಬಗ್ಗೆ ಅಖೈರು ನಿರ್ಣಯವನ್ನು ಆಯುಷ್ ಇಲಾಖೆ ಸದ್ಯದಲ್ಲಿಯೇ ತೆಗೆದುಕೊಳ್ಳಲಿದೆ.
ಉತ್ತರ ಕನ್ನಡದ ಸಿದ್ದಿ ಜನಾಂಗದವರು ಹೆಚ್ಚಾಗಿ ಈ ಚಿಗಳಿ ಅಥವಾ ಕೆಂಪಿರುವೆಯ ಚಟ್ನಿಯನ್ನು ಮಾಡುತ್ತಾರೆ. ಅವರಿಗೆ ಕೆಂಪಿರುವೆ ಕಂಡರೆ ಸಂತೋಷವೋ ಸಂತೋಷ. ಅವರು ಚಟ್ನಿ ಮಾಡುವ ವಿಧಾನವೂ ಸರಳ. ಕೆಂಪಿರುವೆ ಗೂಡನ್ನು ಹಾಗೇ ಗಿಡದಿಂದ ಕಿತ್ತು ತಂದು ಗೂಡಿನಿಂದ ಮೊರಕ್ಕೆ ಉದುರಸಿಕೊಳ್ಳುತ್ತಾರೆ. ನಂತರ ಅದನ್ನು ಹಾಗೇ ಹುರಿಯುತ್ತಾರೆ. ಇದನ್ನು ತೆಂಗಿನಕಾಯಿ ಸೇರಿಸಿ ಅಥವಾ ಸೇಸದೆಯೂ ಚಟ್ನಿ ಮಾಡಿಕೊಳ್ಳಬಹುದು. ಸಿದ್ದಿಗಳಿಗೆ ಇದು ಅತ್ಯಂತ ರುಚಿಕರವಂತೆ. ಈ ಜನಾಂಗದಲ್ಲಿ ಬಾಣಂತಿಯರಿಗೆ ಆರೋಗ್ಯಕ್ಕೆ, ಪೌಷ್ಟಿಕತೆಗಾಗಿ ಇದನ್ನು ಕಡ್ಡಾಯವಾಗಿ ಮಾಡಿ ತಿನ್ನಿಸಲಾಗುತ್ತದೆ.
ಡಯಟ್‌ನಲ್ಲಿರೋವಾಗ ಅಪ್ಪಿತಪ್ಪಿಯೂ ಈ ಹಣ್ಣು ತಿನ್ನಬೇಡಿ! ...
ಈ ಕೆಂಪಿರುವೆ ಚಟ್ನಿ ಸೇವನೆ ಇರೋದು ಕರ್ನಾಟಕದಲ್ಲಿ ಮಾತ್ರವಲ್ಲ. ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ಆಂಧ್ರಪ್ರದೇಶ, ಅಸ್ಸಾಂ, ಹಿಮಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ತ್ರಿಪುರ, ಮೇಘಾಳಯಗಳ ಪರ್ವತ, ಗುಡ್ಡಗಾಡು ಪ್ರದೇಶಗಳಲ್ಲಿ ರೂಡಿಯಲ್ಲಿದೆ. ಇಲ್ಲೆಲ್ಲ ಇರುವ ಹೆಚ್ಚಿನ ಬುಡಕಟ್ಟು ಜನಾಂಗಗಳು ಈ ಖಾದ್ಯವನ್ನು ಮಾಡಿಕೊಂಡು ಸೇವಿಸುತ್ತಾರೆ. ಇದು ಔಷಧವೂ ಹೌದು. ಸಾಮಾನ್ಯ ಶೀತ, ಜ್ವರ, ಕಫ, ಕೆಮ್ಮು, ಉಸಿರಾಟ ಸಮಸ್ಯೆ, ಬೊಜ್ಜು ಮುಂತಾದವುಗಳಿಗೆ ಮದ್ದಾಗಿ ಇವನ್ನು ಈ ಜನಾಂಗಗಳಲ್ಲಿ ಬಳಸುತ್ತಾರೆ. ಕೆಂಪಿರುವೆಯಲ್ಲಿ ಫಾರ್ಮಿಕ್ ಆಸಿಡ್, ಪ್ರೊಟೀನ್, ಕ್ಯಾಲ್ಷಿಯಂ, ವಿಟಮಿನ್ ಬಿ೧೨, ಕಬ್ಬಿಣದ ಅಂಶಗಳು ಸಾಕಷ್ಟು ಇರುತ್ತವೆ. ಇದು ಖಾರವೂ ಹೌದು. ಹೀಗಾಗಿ ಗಂಜಿಗೆ ನೆಂಚಿಕೊಳ್ಳಲು ಬಹಳ ಅನುಕೂಲ. ಇದನ್ನು ಸೇವಿಸಿದರೆ ಕಣ್ಣಿನ ದೃಷ್ಟಿದೋಷ, ಕಿವಿಯ ಶ್ರವಣದೋಷ ಕೂಡ ಕಡಿಮೆಯಾಗುತ್ತದಂತೆ. ಕಫವನ್ನು ನೀರಾಗಿಸುತ್ತದೆ. ಹೀಗಾಗಿ ಈ ಬುಡಕಟ್ಟು ಜನಾಂಗದವರೆಲ್ಲ ಸಾಮಾನ್ಯ ಶೀತ ಜ್ವರಕ್ಕೆಲ್ಲ ಡಾಕ್ಟರ್ ಬಳಿ ಹೋಗುವುದೇ ಇಲ್ಲ. ಇದು ಶತಮಾನಗಳ ಬಳಕೆಯ ಮೂಲಕ ಬಂದ ಮನೆವೈದ್ಯ.
ಹೊಸ ವರ್ಷಕ್ಕೆ ಈ 10 ವಿಷಯಗಳನ್ನು ಮಿಸ್ ಮಾಡದೆ ಪಾಲಿಸಿ, ಆರೋಗ್ಯದಿಂದಿರಿ... ...
ಒಡಿಶಾದ ನಯಾಧರ ಪಡಿಯಾಲ್ ಎಂಬ ಒಬ್ಬ ಇಂಜಿನಿಯರ್, ಈ ಕೆಂಪಿರುವೆ ಚಟ್ನಿಯಲ್ಲಿ ಕೊರೊನಾ ದೂರ ಓಡಿಸುವ ಅಂಶಗಳು ಇವೆಯೇ ಎಂದು ಸ್ಪಷ್ಟಪಡಿಸುವಂತೆ ಆಯುಷ್ ಇಲಾಖೆಗೆ ಬೆನ್ನು ಬಿದ್ದಿದ್ದಾರೆ. ಒಡಿಶಾ ಹೈಕೋರ್ಟ್ ಕೂಡ, ಈ ಕುರಿತು ಪರಿಣತ ಅಭಿಪ್ರಾಯ ನೀಡುವಂತೆ ಆಯುಷ್ ಇಲಾಖೆಗೆ ಮತ್ತು ಕೌನ್ಸಿಲ್ ಆಪ್ ಮೆಡಿಕಲ್ ಆಮಡ್ ರಿಸರ್ಚ್ ಸಂಸ್ಥೆಗೆ ಸೂಚನೆ ನೀಡಿದೆ. ಸದ್ಯದಲ್ಲೇ ಆಯುಷ್ ಈ ಬಗ್ಗೆ ಪ್ರಕಟಣೆ ನೀಡಬಹುದು.
ಕೊರೊನಾ ಇಡೀ ಭಾರತವನ್ನೇ ವ್ಯಾಪಿಸಿದ್ದರೂ ಬುಡಕಟ್ಟು ಜನಾಂಗದವರನ್ನು ಜಾಸ್ತಿ ಬಾಧಿಸಿಲ್ಲ. ಇಲ್ಲಿಯವರು ಫಿಟ್ ಆಗಿ ಇರುವುದೂ ಕಾರಣವಿರಬಹುದು. ಅಥವಾ ಕೆಂಪಿರುವೆ ಚಟ್ನಿಯನ್ನು ಬಳಸಿ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿಕೊಂಡಿರುವುದೂ ಕಾರಣವಿರಬಹುದು. ಕೆಂಪಿರುವೆ ಚಟ್ನಿಯ ಪಾರಂಪರಿಕ ಬಳಕೆಯಿಂದ ಈ ಜನಾಂಗಗಳಲ್ಲಿ ಕೊರೊನಾ ವೈರಸ್‌ಗೆ ಒಂದು ಸಹಜ ಪ್ರತಿರೋಧ ಉಂಟಾಗಿರಬಹುದು. ಇದು ಯಾವುದೂ ವಿವರವಾದ ಸಂಶೋಧನೆಯಿಂದ ಖಚಿತಗೊಳ್ಳಬೇಕಿದೆ. ಕೆಲವೊಮ್ಮೆ ಅಪರಿಚಿತ ವೈರಾಣುಗಳು ಬುಡಕಟ್ಟು ಜನಾಂಗದವರನ್ನು ಸೋಕಿದಾಗ, ಇಡೀ ಜನಾಂಗಗಳೇ ಸೋಂಕಿಗೆ ತುತ್ತಾಗಿ ಅಳಿದುಹೋದ ನಿದರ್ಶನಗಳಿವೆ. ಯಾಕೆಂದರೆ ಆ ವೈರಾಣುವಿಗೆ ಪ್ರತಿರೋಧ ಶಕ್ತಿ ಅವರಲ್ಲಿ ಇರುವುದಿಲ್ಲ. ಅವರು ಬೇರ್ಯಾವ ಲಸಿಕೆಗಳನ್ನೂ ಹಾಕಿಸಿಕೊಂಡಿರುವುದಿಲ್ಲ. ಆದರೂ ಕೊರೊನಾ ಈ ಸಮುದಾಯಗಳನ್ನು ಅಷ್ಟೊಂದು ಬಾಧಿಸಿಲ್ಲ. ಇದೊಂದು ಸೋಜಿಗವೇ ಸರಿ.
ಏನು ಮಾಡಿದಕೂ ತೂಕ ಕಡಿಮೆ ಆಗ್ತಿಲ್ವಾ? ಅಜ್ಜಿ ಮದ್ದು ಹೇಳ್ತಾರೆ ಇಲ್ ಕೇಳಿ.. ...