ಕೊರೋನಾ ವೈರಸ್ ವೇಗವಾಗಿ ಹರಡುತ್ತಿದ್ದು, ಈ ಸಂದರ್ಭ ಎಲ್ಲ ವಯಸ್ಸಿನ ಜನರೂ ಫ್ಲೂ ಶಾಟ್ ತೆಗೆದುಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ವೈರಲ್ ಫಿವರ್, ಎಚ್‌1ಎನ್‌1ನಂತರ ರೋಗಗಳಿಂದ ದೂರವಿರಲು ಫ್ಲೂ ಶಾಟ್ ತೆಗೆದುಕೊಳ್ಳುವಂತೆ ವೈದ್ಯರು ಹೇಳುತ್ತಿದ್ದಾರೆ.

ಸಾಮಾನ್ಯ ಜ್ವರದಿಂದಲೂ ನಮಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ಕೆಮ್ಮು, ಶೀತ, ಜ್ವರ, ಗಂಟಲು ನೋವು, ಸುಸ್ತು, ಮೈಕೈ ನೋವು ಎಲ್ಲವೂ ಕಾಣಿಸಿಕೊಳ್ಳುತ್ತದೆ. ಕೊರೋನಾಗೆ ಔಷಧ ಇಲ್ಲದಿದ್ದರೂ ಈ ಮೇಲಿನ ತೊಂದರೆಗಳನ್ನು ಗುಣಪಡಿಸಬಹುದು ಎನ್ನುತ್ತಾರೆ ವೈದ್ಯರು.

ಕೊರೋನಾ ಲಕ್ಷಣಗಳಿಗೆ ಹೊಸ ಸೇರ್ಪಡೆ, ವಿಪರೀತ ಸೀನು..!

ಕೊರೋನಾದಿಂದಾಗಿ ಇತರ ಉಸಿರಾಟದ ತೊಂದರೆ ಉಂಟು ಮಾಡುವ ರೋಗಗಳ ಬಗ್ಗೆ ಜನ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಆದರೆ ಫ್ಲೂ ಎದುರಾಗಿ ಔಷಧ ತೆಗೆದುಕೊಳ್ಳುವುದು ಭಾರತದಲ್ಲಿ ಅಷ್ಟಾಗಿ ಪ್ರಚಲಿತವಲ್ಲ.

ಇದೀಗ ಫ್ಲೂ ವಿರುದ್ಧ ಔಷಧ ಉಪಯೋಗಿಸಿಕೊಳ್ಳಬೇಕು. ಈ ಮೂಲಕ ಸಮಾನ್ಯ ರೋಗಗಳನ್ನು ಈ ಸಂದರ್ಭದಲ್ಲಿ ತಡೆಯಬೇಕು ಎಂದು ಮಣಿಪಾಲ ಆಸ್ಪತ್ರೆ ಮುಖ್ಯಸ್ಥ ಡಾ. ಸುದರ್ಶನ ಬಲ್ಲಾಳ್ ತಿಳಿಸಿದ್ದಾರೆ.