Asianet Suvarna News Asianet Suvarna News

ವಯಸ್ಕರು 'Dreams come true ಆಗೋದು ಬೇಡಪ್ಪ' ಅನ್ನೋದು ಇದೊಂದಕ್ಕೆ ಮಾತ್ರ!

ಮಲಗಿದ ವೇಳೆ ಮೂತ್ರದ ಕನಸು ಬಿಳುತ್ತದೆ ಮತ್ತು ಅದೇ ವೇಳೆ ಹಾಸಿಗೆಯಲ್ಲೂ ಒದ್ದೆ ಮಾಡುವುದು. ಈ ಎರಡು ಘಟನೆಗಳು ಹೆಚ್ಚಾಗಿ ಒಟ್ಟಿಗೆ ಸಂಭವಿಸುತ್ತವೆ. ನೈಟ್ ಎನ್ಯೂರೆಸಿಸ್ ಎನ್ನಲಾಗುತ್ತೆ ಯಾಕೆ ಹೀಗೆ? ಕಾರಣಗಳೇನು?
 

nocturnal enuresis Adult Bed Wetting Causes and How to Treat It rav
Author
First Published Oct 12, 2024, 11:21 PM IST | Last Updated Oct 12, 2024, 11:41 PM IST

Adult Bed Wetting: ರಾತ್ರಿ ನಿದ್ರೆಯ ಸಮಯದಲ್ಲಿ ಅನೇಕ ರೀತಿಯ ಕನಸುಗಳು ಬರುತ್ತವೆ. ರೊಮ್ಯಾಂಟಿಕ್, ಹಾರರ್, ಯಾವುದೋ ಊರು, ಪರಿಚಯವಿಲ್ಲದ ಜಗತ್ತು ಹೀಗೆ ಅನೇಕ ರೀತಿಯ ಕನಸುಗಳು ಬೀಳುವುದು ಸಾಮಾನ್ಯ. ಆದರೆ ನಮಗೆ ಕಿರಿಕಿರಿ, ಮುಜುಗರವನ್ನುಂಟುಮಾಡುವ ಒಂದು ಅಂಶವೆಂದರೆ ಮೂತ್ರದ ಕನಸು. ರಾತ್ರಿಯಲ್ಲಿ ಮೂತ್ರ ವಿಸರ್ಜನೆ ಮಾಡುವ ಕನಸು ಅನೇಕರಿಗೆ ಇರುತ್ತದೆ.  ಈ ವಿಚಾರ ಹೇಳಿಕೊಳ್ಳುವುದು ಕೆಲವರಿಗೆ ಮುಜುಗರ, ಅವಮಾನಕರ ಎನಿಸಿದರೂ ಅದು ನಿಜವಾಗಿದೆ. ಆದರೆ ವಾಸ್ತವವಾಗಿ ಅದು ದೈಹಿಕ ಸಮಸ್ಯೆಗೆ ಸಂಬಂಧಿಸಿದೆ. ಮತ್ತು ಅದು ರಾತ್ರಿಯ ಎನ್ಯೂರೆಸಿಸ್ ಆಗಿದೆ. ಅಂದರೆ ರಾತ್ರಿ ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡುವುದು. ಇದು ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಆದರೆ ಕೆಲವು ಸಂದರ್ಭಗಳಲ್ಲಿ ವಯಸ್ಕರು ಸಹ ಈ ಕಾಯಿಲೆ ಪರಿಣಾಮ ಅನುಭವಿಸುತ್ತಾರೆ ವಿಶೇಷವಾಗಿ ವೃದ್ಧಾಪ್ಯದಲ್ಲಿ ಹೆಚ್ಚು.

ಏನಿದು ಎನ್ಯೂರೆಸಿಸ್

ಮಲಗಿದ ವೇಳೆ ಮೂತ್ರದ ಕನಸು ಬಿಳುತ್ತದೆ ಮತ್ತು ಅದೇ ವೇಳೆ ಹಾಸಿಗೆಯಲ್ಲೂ ಒದ್ದೆ ಮಾಡುವುದು. ಈ ಎರಡು ಘಟನೆಗಳು ಹೆಚ್ಚಾಗಿ ಒಟ್ಟಿಗೆ ಸಂಭವಿಸುತ್ತವೆ. ನೈಟ್ ಎನ್ಯೂರೆಸಿಸ್ ಲಕ್ಷಣವೆಂದರೆ ಹಾಸಿಗೆ ಒದ್ದೆ ಮಾಡುವುದು ಬೆಡ್ ವೆಟ್ಟಿಂಗ್ ಎನ್ನಲಾಗುತ್ತೆ.

Childrens Health: ಮಕ್ಕಳು ಹಾಸಿಗೆ ಒದ್ದೆ ಮಾಡೋ ಅಭ್ಯಾಸ ಬಿಡಿಸೋದು ಹೇಗೆ?

ಈ ಕಾಯಿಲೆ ಪುರುಷರಿಗೆ ಮಾತ್ರವಾ?

ಈ ರೋಗವನ್ನು ಪುರುಷರು ಮತ್ತು ಮಹಿಳೆಯರು ಇಬ್ಬರಲ್ಲೂ ಕಾಣಬಹುದು. ಆದಾಗ್ಯೂ, ನೈಟ್ ಎನ್ಯುರೆಸಿಸ್ ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ವೈದ್ಯರ ಪ್ರಕಾರ, ಈ ಸಮಸ್ಯೆಯು ಪುರುಷರಲ್ಲಿ ಹೆಚ್ಚು ಸಾಮಾನ್ಯವಾಗಿದೆ.

ಮಕ್ಕಳಲ್ಲಿ ಹಾಸಿಗೆ ಒದ್ದೆ ಮಾಡುವುದು ಹೆಚ್ಚು ಸಾಮಾನ್ಯವಾಗಿದೆ. ವೈದ್ಯರ ಪ್ರಕಾರ, ಅವರು ತಮ್ಮ ಮೂತ್ರಕೋಶವನ್ನು ನಿಯಂತ್ರಿಸಲು ಇನ್ನೂ ಕಲಿಯದಿರುವುದು ಇದಕ್ಕೆ ಕಾರಣ. ಹೆಚ್ಚಿನವರು ಹುಟ್ಟಿದಾಗಿನಿಂದ ಐದು ವರ್ಷದವರೆಗೆ ಈ ಸಮಸ್ಯೆಯನ್ನು ಎದುರಿಸುತ್ತಾರೆ. ಮತ್ತು ಕೆಲವು ಸಂದರ್ಭಗಳಲ್ಲಿ ಇದು ಐದು ವರ್ಷಗಳ ನಂತರವೂ ಮುಂದುವರಿಯಬಹುದು. ಇದಕ್ಕೆ ಕಾರಣ ಆಘಾತ ಅಥವಾ ಅತಿಯಾದ ಒತ್ತಡ. ವಯಸ್ಕರಲ್ಲಿ ನೈಟ್ ಎನ್ಯುರೆಸಿಸ್ನಗೆ ಒತ್ತಡವು ಕಾರಣಗಳಲ್ಲಿ ಒಂದಾಗಿದೆ.

ಒತ್ತಡ ಮತ್ತು ಆಘಾತದ ಪರಿಣಾಮ:

ಅನೇಕ ಜನರು ಜನರು ಒತ್ತಡದಲ್ಲಿ ಬದುಕುತ್ತಿದ್ದಾರೆ. ಆಘಾತ, ಭಯ ಮನಸ್ಸಿನ ಮೇಲೆ ಶಾಶ್ವತವಾದ ಪ್ರಭಾವ ಬೀರುವ ಕೆಟ್ಟ ಅನುಭವವಾಗಿದೆ. ಉದಾಹರಣೆಗೆ, ರೈಲು ಅಪಘಾತಕ್ಕೆ ಸಾಕ್ಷಿಯಾಗುವುದು ಅಥವಾ ಕೆಟ್ಟ ಅನುಭವವನ್ನು ಹೊಂದುವುದು. ಈ ಎಲ್ಲಾ ಸಂದರ್ಭಗಳಲ್ಲಿ ನೈಟ್ ಎನ್ಯುರೆಸಿಸ್ ಆಘಾತದ ಪರಿಣಾಮವೇ ಹೆಚ್ಚು. ಆದ್ಯಾಗೂ ಕೆಲವು ಸಂದರ್ಭಗಳಲ್ಲಿ, ಕಾಯಿಲೆಗೆ ದೈಹಿಕ ಸಮಸ್ಯೆಯ ಲಕ್ಷಣವಾಗಿರಬಹುದು. ಉದಾಹರಣೆಗೆ ಗಾಳಿಗುಳ್ಳೆಯ ಸ್ನಾಯುಗಳು ವಿಶ್ರಾಂತಿ ಪಡೆದಾಗ, ಮೂತ್ರ ವಿಸರ್ಜನೆಯ ಮೇಲೆ ಯಾವುದೇ ನಿಯಂತ್ರಣವಿಲ್ಲದಿರುವುದು, ರಾತ್ರಿ ಮಲಗುವ ಮುನ್ನ ಹೆಚ್ಚು ನೀರು ಕುಡಿಯುವುದು ಅಥವಾ ಸರಿಯಾಗಿ ಮೂತ್ರ ವಿಸರ್ಜನೆ ಮಾಡದೆ ಮಲಗುವುದು,  ನೀವು ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಹೊಂದಿದ್ದರೆ.  ನೀವು ಮೂತ್ರಪಿಂಡದ ಸಮಸ್ಯೆಗಳನ್ನು ಹೊಂದಿದ್ದರೆ, ತೀವ್ರವಾದ ಹೊಟ್ಟೆ ಸಮಸ್ಯೆಗಳನ್ನು ಹೊಂದಿದ್ದರೆ ಅಥವಾ ನೀವು ಕೆಟ್ಟ ಪರಿಸ್ಥಿತಿಯಲ್ಲಿದ್ದರೆ ಅಂದರೆ ಖಿನ್ನತೆ, ತೀವ್ರ ಆತಂಕ ಅಸ್ವಸ್ಥತೆಯಿಂದ ಬಳಲುತ್ತಿದ್ದರೆ ನೈಟ್ ಬೆಡ್‌ವೆಟ್ಟಿಂಗ್ ಕಾರಣವಾಗಬಹುದು.

Latest Videos
Follow Us:
Download App:
  • android
  • ios