ಮಾನ್ಯ ಶ್ರೀ ಶ್ರೀ ಶ್ರೀ ನಿತ್ಯಾನಂದ ಗುರೂಜಿಗಳು ತಮ್ಮ ತ್ರಿಶೂಲ ಹಾಗೂ ಶಿರೋಭೂಷಣ ಸಮೇತ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಅವರು ಕಾಣಿಸಿಕೊಂಡಿರೋದು, ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈ ಮನುಕುಲವನ್ನು ಅದರ ಕರಾಳ ನಾಲಿಗೆಯಿಂದ ಕಾಪಾಡೋದಕ್ಕೆ. ಜಗತ್ತನ್ನು ಕಾಪಾಡೋದಕ್ಕೆ. ನಮ್ಮ ಪುಣ್ಯ, ಶ್ರೀ ನಿತ್ಯಾನಂದ ಗುರೂಜಿಗಳು ಈಗ ತಮ್ಮ ಕರುಣೆಯ ಕಟಾಕ್ಷವನ್ನು ನಮ್ಮ ಮೇಲೆ ಬೀರಿರುವುದರಿಂದ, ಇನ್ನು ಹೆದರಬೇಕಿಲ್ಲ. ನಾವೆಲ್ಲ ಸೇಫು. ಅವರು ಹೇಳಿದ ವ್ರತ ಮಾಡಿದರಾಯ್ತು.

ಮಾನ್ಯ ಶ್ರೀ ಶ್ರೀ ಶ್ರೀ ನಿತ್ಯಾನಂದ ಗುರೂಜಿಗಳು ತಮ್ಮ ತ್ರಿಶೂಲ ಹಾಗೂ ಶಿರೋಭೂಷಣ ಸಮೇತ ಮತ್ತೆ ಪ್ರತ್ಯಕ್ಷರಾಗಿದ್ದಾರೆ. ಈ ಬಾರಿ ಅವರು ಕಾಣಿಸಿಕೊಂಡಿರೋದು, ಕೊರೊನಾ ವೈರಸ್‌ ಎಂಬ ಮಹಾಮಾರಿಯಿಂದ ತತ್ತರಿಸಿ ಹೋಗಿರುವ ಈ ಮನುಕುಲವನ್ನು ಅದರ ಕರಾಳ ನಾಲಿಗೆಯಿಂದ ಕಾಪಾಡೋದಕ್ಕೆ. ಜಗತ್ತನ್ನು ಕಾಪಾಡೋದಕ್ಕೆ. ನಮ್ಮ ಪುಣ್ಯ, ಶ್ರೀ ನಿತ್ಯಾನಂದ ಗುರೂಜಿಗಳು ಈಗ ತಮ್ಮ ಕರುಣೆಯ ಕಟಾಕ್ಷವನ್ನು ನಮ್ಮ ಮೇಲೆ ಬೀರಿರುವುದರಿಂದ, ಇನ್ನು ಹೆದರಬೇಕಿಲ್ಲ. ನಾವೆಲ್ಲ ಸೇಫು. ಅವರು ಹೇಳಿದ ವ್ರತ ಮಾಡಿದರಾಯ್ತು.

ಅವರು ಹೇಳಿರೋ ವ್ರತದ ಹೆಸರು ಪಚ್ಚೈಪತ್ತಿನಿ ವ್ರತಂ ಅಂತ. ಇದು ನಿತ್ಯಾನಂದರೇ ಸ್ವತಃ ಸಿದ್ಧಪಡಿಸಿದ ಇಪ್ಪತ್ತೆಂಟು ದಿನಗಳ ಅದ್ಭುತವಾದ ವ್ರತ. ಈ ವ್ರತದಲ್ಲಿ ಕೊರೊನಾ ಬಾರದಂತೆ ತಡೆಯುವ ಸಾಂಪ್ರದಾಯಿಕ ಲಸಿಕೆಯೂ ಇದೆ. ಅದೇನು ಅಂದರೆ ಬೆಂಕಿ ಮೇಲೆ ನಡೆಯೋದು! ಬೆಚ್ಚಿ ಬೀಳಬೇಡಿ. ಕೆಂಡದ ಮೇಲೆ ನಡೆಯುವುದನ್ನು ರೂಢಿಸಿಕೊಂಡರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದಂತೆ. ದೇಹ ಫಳಫಳಾ ಅಂತ ತೊಳೆದ ಕೆಂಡದ ಹಾಗೆ ಹೊಳೀತ ಇರುತ್ತದಂತೆ.

ಸ್ಪೇನ್‌ನ 21ರ ಫುಟ್ಬಾಲ್‌ ಕೋಚ್‌ ಬಲಿ ಪಡೆದ ಕೊರೋನಾ ವೈರಸ್..!

ಕೆಂಡದ ಕೊಂಡದ ಅಳತೆಯ ಬಗ್ಗೆಯೂ ನಿತ್ಯಾನಂದ ಹೇಳಿದ್ದಾನೆ. ಈ ಕೊಂಡ ಕನಿಷ್ಠ ಹನ್ನೊಂಧು ಅಡಿ ಉದ್ದ ಇರಬೇಕು. ಎರಡಡಿ ಅಗಲ ಇರಬೇಕು. ಅದರಲ್ಲಿ ಕಲ್ಲಿದ್ದಲು ಅಥವಾ ಸೌದೆಯ ಕೆಂಡಗಳು ಇರಬೇಕು. ಸುಮ್ನೇ ನಡೆಯುವುದಲ್ಲ. ಬ್ಯಾಕ್‌ಗ್ರೌಂಡ್‌ನಲ್ಲಿ ಸಾಂಪ್ರದಾಯಿಕ ಸಂಸ್ಕೃತ ಶ್ಲೋಕಗಳು ಅಥವಾ ಭಜನೆಗಳು ಪ್ಲೇ ಆಗ್ತಾ ಇರಬೇಕು. ಅದನ್ನು ಕೇಳ್ತಾ ಕೇಳ್ತಾ ನಿಮ್ಮ ಒಳಗೆ ಒಂದು ದಿವ್ಯ ಪವರ್‌ ಉತ್ಪನ್ನ ಆಯಿತು ಅಂತ ನಿಮಗೆ ಗೊತ್ತಾದರೆ ಸಾಕು, ಆಮೇಲೆ ನೀವು ಯಾವುದೇ ಅಪಾಯ ಇಲ್ಲದೆ ಕೆಂಡದ ಮೇಲೆ ನಡೀಬಹುದು.


ನಿತ್ಯಾನಂದ ಹೇಳಿರೋ ಇನ್ನೊಂದು ಆಚರಣೆ ಮೈಗೆ ನಿಂಬೆಹಣ್ಣು ಚುಚ್ಚಿಕೊಳ್ಳೋದರ ಬಗ್ಗೆ. ನಿಂಬೆಹಣ್ಣಿನಲ್ಲಿ ಶರಬತ್‌ ಮಾಡಿಕೊಂಡು ಕುಡಿದರೆ ನಮ್ಮ ದೇಹದ ದಾಹ ನಿವಾರಣೆಯಾಗುತ್ತೆ ಅಂತ ನಮ್ಮ ಪೆದ್ದು ತಲೆಗಳಿಗೆ ಗೊತ್ತಿದೆ. ಆದರೆ ನಿತ್ಯಾನಂದರಂತಹ ದಿವ್ಯಾತ್ಮರಿಗೆ ಮಾತ್ರ ಗೊತ್ತಿರೋ ಸಂಗತಿ ಅಂದ್ರೆ- ಅದನ್ನು ಮೈಗೆ ಚುಚ್ಚಿಕೊಂಡರೆ ಕೊರೊನಾ ವೈರಸ್‌ ಬರೋಲ್ವಂತೆ. ಹಾಗಿದ್ದರೆ ಸರಿ ಅಂತ ಒಂದು ನಿಂಬೆಹಣ್ಣು ಕಚ್ಚಿಕೊಂಡು ಓಡಾಡಬೇಡಿ. ಕನಿಷ್ಠ ಹನ್ನೊಂದು ನಿಂಬೆಹಣ್ಣುಗಳನ್ನು ಮೈಗೆ ಚುಚ್ಚಿಕೊಳ್ಳಬೇಕಂತೆ! ಇದನ್ನು ನೋಡಿದ್ದೇ ತಡ ಕೊರೊನಾ ವೈರಸ್‌ ಹುಲಿ ಕಂಡಂತೆ ಬೆಚ್ಚಿಬಿದ್ದು ಪರಾರಿಯಾಗುತ್ತದಂತೆ. ಅದೆಲ್ಲ ಸರಿ, ಅಷ್ಟೊಂದು ನಿಂಬೆ ಎಲ್ಲೆಲ್ಲಿ ಚುಚ್ಚಿಕೊಳ್ಳಬೇಕು ಅಂತ ಸ್ವಾಮ್ಗೊಳು ಹೇಳಿಲ್ಲ.

ನಿತ್ಯಾನಂದ ಹೇಳಿರೋ ಈ ವ್ರತದ ಇನ್ನೊಂದು ಮುಖ್ಯವಾದ ಆಚರಣೆ ಬ್ರಹ್ಮಚರ್ಯ. ಗಂಡಸರಾಗಲಿ, ಹೆಂಗಸರಾಗಲಿ ಈ ಇಪ್ಪತ್ತೆಂಟು ದಿನಗಳ ಕಾಲ ಬ್ರಹ್ಮಚರ್ಯ ಆಚರಿಸಬೇಕು, ಯಾರೊಂದಿಗೂ ಸೆಕ್ಸ್‌ ಮಾಡಬಾರದು. ಇದು ಮುಖ್ಯ. ನಿತ್ಯಾನಂದರ ಮಹಿಳಾ ಭಕ್ತೆಯರು ಈಗ ಬೇರೆ ಕೋಣೆಗಳಲ್ಲಿ ಮಲಗುತ್ತಾರೆ ಅಂತ ನಿತ್ಯಾನಂದರ ಆಶ್ರಮದ ಅನಧಿಕೃತ ಮೂಲಗಳು ತಿಳಿಸಿವೆ. ಬಹುಶಃ ಇದಕ್ಕೇ ಇರಬಹುದು.

ತೀವ್ರ ಸ್ವರೂಪದ ಲಾಕ್‌ಡೌನ್‌ಗೆ ಸರ್ಕಾರ ಚಿಂತನೆ..!

ಇನ್ನು ಈ ಕೊರೊನಾ ಮಾರಿ- ಮಾರಿಯಮ್ಮನಿಗೆ ಸಂಬಂಧಿಸಿದ್ದು. ಮಾರಿಯಮ್ಮನನ್ನು ಆರಾಧಿಸಿದರೆ ಅದು ಹತ್ತಿರ ಸುಳಿಯುವುದಿಲ್ಲ. ಹೀಗಾಗಿ ನಿತ್ಯಾನಂದರು ಒಂದು ಮಂತ್ರವನ್ನು ನಮಗೆ ನೀಡಿದ್ದಾರೆ. ಅದು ಹೀಗಿದೆ- ಓಂ ಹ್ರೀಂ ಶ್ರೀಂ ಇಂದ್ರಕ್ಷೀಂ ಶ್ರೀಂ ಪೇಂ ಸ್ವಾಹಾ. ಇದನ್ನು ಜಪಿಸುತ್ತಾ ಇರಬೇಕಂತೆ. ಈ ನಾಮಜಪ ನಿಮ್ಮ ಸುತ್ತಲೂ ಪಾಸಿಟಿವ್‌ ಎನರ್ಜಿಯನ್ನು ತುಂಬುತ್ತದಂತೆ. ಮಾರಿಯಮ್ಮನಿಗೆ ನೈವೇದ್ಯವಾಗಿ ಈ ಕೆಳಗಿನ ಹಸಿ ವಸ್ತುಗಳನ್ನು ಯಾವುದಾದರೂ ಒಂದನ್ನು ಅರ್ಪಿಸಬೇಕು. ನಂತರ ಅದನ್ನು ಪ್ರಸಾದವಾಗಿ ಸ್ವೀಕರಿಸಬೇಕು. ಆ ಪದಾರ್ಥಗಳು- ಮೊಳಕೆ ಬರಿಸಿದ ಹೆಸರುಕಾಳು, ಕಬ್ಬಿನ ಹಾಲು, ಬೆಲ್ಲದ ನೀರಿನ ಪಾನಕ, ಹೆಚ್ಚಿದ ಸೌತೆಕಾಯಿ ಹೋಳು, ತೆಂಗಿನ ನೀರು, ಎಳನೀರು, ಮಜ್ಜಿಗೆ.

ಇದಕ್ಕಿಂತಲೂ ಪವರ್‌ಫುಲ್‌ ಆದ ಮಂತ್ರವೊಂದಿದೆ. ಇದನ್ನು ನಿತ್ಯಾನಂದರು ಮಹಾವಾಕ್ಯ ಎಂದು ಕರೆದಿದ್ದಾರೆ. ಅದು ಹೀಗೆ- ಓಂ ನಿತ್ಯಾನಂದಂ ಪರಮಶಿವಂ. ಅಂದರೆ ನಿತ್ಯಾನಂದನೇ ಪರಮಶಿವ ಅಂತ. ಪ್ರತಿದಿನ ಕನಿಷ್ಠ ಸಾವಿರ ಬಾರಿ, ಅಥವಾ ಎಷ್ಟು ಸಾಧ್ಯವೋ ಅಷ್ಟು,,ನೆನಪಿಗೆ ಬಂದಾಗಲೆಲ್ಲಾ ಇದನ್ನು ಪಠಿಸುತ್ತಾ ಇರಬೇಕಂತೆ. ಇದನ್ನು ಜಪಿಸುತ್ತಾ ಇದ್ದರೆ ಉಂಟಾಗುವ ಪಾಸಿಟಿವ್‌ ಎನರ್ಜಿಯಿಂದಾಗಿ ಕೊರೊನಾ ವೈರಸ್‌ ಭೂಮಿಯಿಂದಲೇ ಗಾಯಬ್‌ ಆಗುತ್ತದಂತೆ.

ಕೊರೋನಾ ಗೆದ್ದ ಬೆಂಗ್ಳೂರು ಟೆಕ್ಕಿ ಫ್ಯಾಮಿಲಿ, ವೈದ್ಯರೇ ಶಹಬ್ಬಾಸ್

ದಿನಕ್ಕೆರಡು ಬಾರಿ ಸ್ನಾನ ಮಾಡಬೇಕು. ನೆಲದ ಮೇಲೆ ಮಲಗಬೇಕು. ಹತ್ತಿಯ ಬೆಡ್‌ಶೀಟ್‌ ಬಳಸಬೇಕು. ಉಣ್ಣೆಯದ್ದು ಬಳಸಬಹುದು. ಹಾಸಿಗೆಯಲ್ಲಿ ಮಲಗಲೇಬಾರದು. ಇದೆಲ್ಲ ಮಹಾವ್ರತದ ರೂಲುಗಳು. ಎಲ್ಲ ಮಾಡಬಹುದು. ಆದರೆ ಕೆಂಡದ ಮೇಲೆ ನಡೆಯೋದೇ ಸ್ವಲ್ಪ ರಿಸ್ಕಿ. ನಿತ್ಯಾನಂದ ಸ್ವಾಮ್ಗೊಳು ಕೆಂಡದ ಮೇಲೆ ಒಂದರ್ಧ ಗಂಟೆ ನಿಂತು ತೋರಿಸಿದರೆ ನಮಗೆ ಮಾರ್ಗದರ್ಶನ ಆಗುತ್ತಿತ್ತು!