ಈ ಹೇರ್ ಸ್ಟೈಲ್ ಕೂದಲು ಉದುರೋಕೆ ಮುಖ್ಯ ಕಾರಣ, ನೀತಾ ಅಂಬಾನಿ ಹೇರ್ ಸ್ಟೈಲಿಸ್ಟ್ ನೀಡಿದ್ದಾರೆ ಸಲಹೆ
ದಪ್ಪ ಹಾಗೂ ದಟ್ಟವಾದ ಕಪ್ಪು ಕೂದಲನ್ನು ಪ್ರತಿಯೊಬ್ಬರು ಬಯಸ್ತಾರೆ. ಆದ್ರೆ ಈಗಿನ ದಿನಗಳಲ್ಲಿ ಇದು ಕೇವಲ ಕನಸಾಗಿದೆ. ಏನೇ ಮಾಡಿದ್ರೂ ಕೂದಲು ಉದುರೋದು ನಿಲ್ಲೋದಿಲ್ಲ ಎನ್ನುವವರು ಹೇರ್ ಸ್ಟೈಲ್ ಬಗ್ಗೆ ಗಮನ ಹರಿಸಿ.
ಕೂದಲು ಉದುರು (Hair loss)ವ ಬಗ್ಗೆ ಮಹಿಳೆಯರು ದೂರೋದು ಹೆಚ್ಚು. ಕೂದಲಿಗೆ ಎಣ್ಣೆ ಹಚ್ಚಿ, ಮಾರ್ಕೆಟ್ ನಲ್ಲಿ ಸಿಗುವ ಎಲ್ಲ ಶಾಂಪೂ (shampoo) ಪ್ರಯೋಗ ಮಾಡಿದ್ರೂ ಕೂದಲು ಉದುರೋದು ಮಾತ್ರ ನಿಲ್ಲೋದಿಲ್ಲ. ಕೆಲವೊಮ್ಮೆ ನಾವು ಮಾಡುವ ಹೇರ್ ಸ್ಟೈಲ್ (hairstyle) ನಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ನಾವು ಮಾಡುವ ಯಾವ ತಪ್ಪಿನಿಂದ ತಲೆ ಕೂದಲು ಹೆಚ್ಚಾಗಿ ಉದುರುತ್ತೆ ಎನ್ನುವ ಪ್ರಶ್ನೆಗೆ ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ಹಾಗೂ ಫ್ಯಾಷನ್ ಐಕಾನ್ ನೀತಾ ಅಂಬಾನಿ (fashion icon Nita Ambani) ಹೇರ್ ಸ್ಟೈಲಿಸ್ಟ್ ಉತ್ತರ ನೀಡಿದ್ದಾರೆ.
ನೀತಾ ಅಂಬಾನಿ, ನಟಿ ಕತ್ರಿನಾ ಕೈಫ್ (Katrina Kaif) ಮತ್ತು ಆಲಿಯಾ ಭಟ್ (Alia Bhatt) ರಂತಹ ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ಹೇರ್ ಸ್ಟೈಲಿಸ್ಟ್ ಆಗಿರುವ ಅಮಿತ್ ಠಾಕೂರ್ (Amit Thakur) ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಕೂದಲಿಗೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ತಿರುತ್ತಾರೆ. ಶಾಂಪೂದಿಂದ ಹಿಡಿದು ಹೇರ್‌ಕಟ್ ಕೂದಲಿಗೆ ಹೇಗೆ ಹಾನಿ ಆಗುತ್ತವೆ ಎನ್ನುವ ಬಗ್ಗೆ ಅಮಿತ್ ಠಾಕೂರ್ ಈಗಾಗಲೇ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇನ್ಸ್ಟಾ ಖಾತೆಯಲ್ಲಿ ಈಗ ಮತ್ತೊಂದು ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಮಹಿಳೆಯರು ಮಾಡುವ ಒಂದೇ ಒಂದು ತಪ್ಪು ಅವರ ಕೂದಲು ಹೆಚ್ಚು ಉದುರಲು ಕಾರಣವಾಗುತ್ತದೆ. ಮಹಿಳೆಯರ ಟೈಟ್ ಪೋನಿಟೇಲ್ ಇದಕ್ಕೆ ಕಾರಣ ಎಂಬುದು ಅಮಿತ್ ಠಾಕೂರ್ ವಾದ. ಮಹಿಳೆಯರು ತಮ್ಮ ಕೂದಲನ್ನು ಜುಟ್ಟ ಕಟ್ಟಿಕೊಳ್ತಾರೆ. ರಬ್ಬರ್ ಬ್ಯಾಂಡ್ ಬಳಸಿ ಕೂದಲನ್ನು ಬಿಗಿಯಾಗಿ ಕಟ್ಟುತ್ತಾರೆ. ಪ್ರತಿ ದಿನ ನೀವು ಟೈಟ್ ಆಗಿ ಜುಟ್ಟ ಕಟ್ಟಿಕೊಳ್ತಿದ್ದರೆ, ಬೇರೆಯವರಿಗೆ ಹೋಲಿಕೆ ಮಾಡಿದ್ರೆ ನಿಮ್ಮ ಕೂದಲು ಹೆಚ್ಚಿನ ಪ್ರಮಾಣದಲ್ಲಿ ಉದುರುವ ಸಾಧ್ಯತೆ ಇದೆ ಎಂದು ಠಾಕೂರ್ ಹೇಳಿದ್ದಾರೆ. ಇದಲ್ಲದೆ ಕೂದಲು ಒಡೆಯುವ ಸಾಧ್ಯತೆ ಹೆಚ್ಚು ಎಂಬುದು ಠಾಕೂರ್ ವಾದ. ನೀವು ಪೋನಿಟೇಲ್ ಕಟ್ಟುವಾಗ ಕೂದಲನ್ನು ಎಳೆಯುತ್ತೀರಿ. ಬಿಗಿಯಾಗಿ ಅದನ್ನು ಕಟ್ಟುತ್ತೀರಿ. ಈ ಸಮಯದಲ್ಲಿ ಕೂದಲಿನ ಬೇರುಗಳಿಗೆ ಬೀಳುವ ಒತ್ತಡ ಕೂದಲಿನ ಕಿರು ಚೀಲಕ್ಕೆ ಹಾನಿ ಮಾಡುತ್ತದೆ. ಇದೇ ನಿಮ್ಮ ಕೂದಲು ಉದುರಲು ಕಾರಣವಾಗುತ್ತದೆ.
ಮೆಹಂದಿ, ಹೇರ್ ಡೈ ಬಿಟ್ಟಾಕಿ, ಈ ಎಲೆ ಬಳಸಿ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ!
ಬಿಗಿಯಾದ ಜುಟ್ಟದಿಂದ ಮತ್ತೇನೇನು ಸಮಸ್ಯೆ ಕಾಡುತ್ತದೆ? : ನೀವು ಬಿಗಿಯಾಗಿ ಪೋನಿಟೇಲ್ ಹಾಕಿಕೊಳ್ತಿದ್ದರೆ ಅದು ನಿಮ್ಮ ಕೂದಲು ಉದುರುವ ಸಮಸ್ಯೆ ಮಾತ್ರ ಹೆಚ್ಚಿಸೋದಿಲ್ಲ. ಟ್ರಾಕ್ಷನ್ ಅಲೋಪೆಸಿಯಾ ಎಂಬ ಗಂಭೀರ ಸ್ಥಿತಿಗೆ ಕಾರಣವಾಗಬಹುದು. ಪ್ರತಿ ಬಾರಿ ಕೂದಲನ್ನು ಹಿಂದಕ್ಕೆ ಎಳೆದು, ಬಿಗಿಯಾಗಿ ಕಟ್ಟಿದಾಗ ಟ್ರಾಕ್ಷನ್ ಅಲೋಪೆಸಿಯಾ ಕಾಡುತ್ತದೆ. ಹಣೆ, ಕತ್ತಿನ ಬಳಿ ಇರುವ ಕೂದಲು ಉದುರಲು ಶುರುವಾಗುವುದು ಟ್ರಾಕ್ಷನ್ ಅಲೋಪೆಸಿಯಾದ ಮೊದಲ ಲಕ್ಷಣವಾಗಿದೆ. ಇದು ಗಂಭೀರ ಸ್ಥಿತಿಗೆ ತಲುಪುತ್ತಿದ್ದಂತೆ ತಲೆ ಮೇಲೆ ಹುಣ್ಣು ಹಾಗೂ ಚರ್ಮದ ಮೇಲೆ ತೇಪಗಳು ಕಾಣಿಸಿಕೊಳ್ಳುತ್ತವೆ.
Laptop ನಲ್ಲಿ ಹೆಚ್ಚು ಕೆಲಸ ಮಾಡ್ತೀರಾ? ಕಣ್ಣಿನ ಆರೋಗ್ಯದ ಈ 5 ವಿಚಾರ ತಿಳಿದಿರಲಿ!
ಕೂದಲು ಉದುರುತ್ತೆ ಎನ್ನುವ ಕಾರಣಕ್ಕೆ ಪೋನಿಟೇಲ್ ಕಟ್ಟಲೇ ಬಾರದು ಎಂದರ್ಥವಲ್ಲ. ಪೋನಿಟೇಲ್ ಮಾಡುವ ವೇಳೆ ಕೂದಲನ್ನು ಬಿಗಿಯಾಗಿ ಕಟ್ಟಬೇಡಿ. ಕೂದಲು ಬಿಗಿಯಾದಂತೆ ಕಾಣಲು ನೀವು ಹೇರ್ ಸ್ಪ್ರೇ ಅಥವಾ ಕ್ರೀಂ ಬಳಸಿ ಎಂದು ಅಮಿತ್ ಠಾಕೂರ್ ಹೇಳಿದ್ದಾರೆ. ಅಮಿತ್ ಠಾಕೂರ್ ಪ್ರಕಾರ, ನಿಮ್ಮ ಕೂದಲನ್ನು ಕಟ್ಟುವುದಕ್ಕಿಂತ ಬಿಟ್ಟುಕೊಳ್ಳುವುದು ಉತ್ತಮ. ಚರ್ಮದಂತೆ ಕೂದಲಿಗೆ ಉಸಿರಾಡಲು ಅವಕಾಶ ನೀಡ್ಬೇಕು. ಇನ್ಸ್ಟಾಗ್ರಾಮ್ ನಲ್ಲಿ 522 ಕೆ ಫಾಲೋವರ್ಸ್ ಹೊಂದಿರುವ ಠಾಕೂರ್ ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್. ಮಹಿಳೆಯರ ಕೂದಲು ಆರೋಗ್ಯದ ಬಗ್ಗೆ ಆಗಾಗ ಸಲಹೆ ನೀಡ್ತಿರುತ್ತಾರೆ.