ಕಲಿಯುಗದಲ್ಲಿ ಏನೆಲ್ಲಾ ಆಗುತ್ತಪ್ಪಾ..ಹುಟ್ಟಿದ ಮೂರೇ ದಿನಕ್ಕೆ ಮಾತನಾಡಿದ ಮಗು!
ಮೆಡಿಕಲ್ ಮಿರಾಕಲ್‌ಗಳು ಅಂತಾರಲ್ಲ. ಅದು ಊಹೆಗೂ ನಿಲುಕದ್ದು. ವೈದ್ಯಕೀಯ ಲೋಕದಲ್ಲಿ ಹಲವು ಚಿತ್ರ-ವಿಚಿತ್ರ ಘಟನೆಗಳು ನಡೀತಾನೆ ಇರ್ತವೆ. ಹಾಗೆಯೇ ಇಲ್ಲೊಂದೆಡೆ ಮಗುವೊಂದು ಹುಟ್ಟಿದ ಮೂರೇ ದಿನಕ್ಕೆ ಕವುಚಿ ಬಿದ್ದು ತೆವಳಲು ಶುರು ಮಾಡಿದೆ. ಸದ್ಯ ಈ ವಿಚಾರ ಎಲ್ಲೆಡೆ ಅಚ್ಚರಿ ಮೂಡಿಸುತ್ತಿದೆ.
ಗರ್ಭದಲ್ಲಿರುವ ಭ್ರೂಣ ಹಂತ ಹಂತವಾಗಿ ಬೆಳೆಯುವ ಪರಿಯೇ ಅದ್ಭುತ. ಮಗು ಕಣ್ಣು ತೆರೆದು ಹೊಸ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೆಯೇ ಹಂತ ಹಂತವಾಗಿ ಬೆಳೆಯುತ್ತಾ ಹೋಗುತ್ತದೆ. ಮಗುವಿನ ಬೆಳವಣಿಗೆ ಸಂಕೀರ್ಣವಾದ ಹಾಗೂ ಸತತವಾದ ಪ್ರಕ್ರಿಯೆ. ಅವರು ಕೆಲ ನಿರ್ದಿಷ್ಟ ತಿಂಗಳಲ್ಲಿ, ವರ್ಷಗಳಲ್ಲಿ ಮಾಡುತ್ತಾ ಹೋಗುತ್ತಾರೆ. ಕವುಚಿ ಬೀಳುವುದು, ಅಂಬೆಗಾಲಿಡುವುದು, ಎಡವುತ್ತಾ ನಡೆಯುವುದು ಮಾಡುತ್ತಾರೆ. ವಯಸ್ಸಿಗನುಗುಣವಾಗಿ ಮಕ್ಕಳು ಈ ಚಟುವಟಿಕೆಯನ್ನು ಮಾಡುತ್ತಾರೆ. 2 ತಿಂಗಳಲ್ಲಿ ನಗುವುದು, 4 ತಿಂಗಳಲ್ಲಿ ಕತ್ತು ಸ್ಥಿರವಾಗುವುದು, 8 ತಿಂಗಳಲ್ಲಿ ಯಾವುದೇ ಆಧಾರವಿಲ್ಲದೇ ಕುಳಿತುಕೊಳ್ಳುವುದು, 12 ತಿಂಗಳಲ್ಲಿ ನಿಂತುಕೊಳ್ಳುವುದು ಮಾಡುತ್ತಾರೆ. ಆದರೆ ಇದೆಲ್ಲಕ್ಕಿಂತ ವಿಭಿನ್ನವಾಗಿ ಕೆಲ ಮಕ್ಕಳು ತಿಂಗಳು, ವರ್ಷವಾಗುವ ಮೊದಲೇ ವಯಸ್ಸಿಗೆ ಅನುಗುಣವಲ್ಲದ ಚಟುವಟಿಕೆಯನ್ನು ಮಾಡುತ್ತಾರೆ.
ಹಾಗೆಯೇ ಅಮೇರಿಕಾದ್ಲೊಂದು ಮಗು (Baby) ಎಲ್ಲರೂ ಅಚ್ಚರಿಗೊಳ್ಳುವಂತೆ ಹುಟ್ಟಿದ ಮೂರೇ ದಿನಕ್ಕೆ ತೆವಳಲು (Crawl) ಶುರು ಮಾಡಿದೆ. ಪೆನ್ಸಿಲ್ವೇನಿಯಾದ ನಿವಾಸಿ, ಸಮಂತಾ ಮಿಚೆಲ್, ತಮ್ಮ ನವಜಾತ ಶಿಶು (Infant) ಜನನದ ಮೂರು ದಿನಗಳ ನಂತರ ಆಸ್ಪತ್ರೆಯ ಹಾಸಿಗೆಯಲ್ಲಿ ತೆವಳುವುದನ್ನು ನೋಡಿದರು. ಮಾತ್ರವಲ್ಲ ಮಗು ತಲೆ ಎತ್ತಿ ಎಲ್ಲರನ್ನೂ ನೋಡಲು ಪ್ರಯತ್ನಿಸುವುದನ್ನು ಕಂಡು ಆಶ್ಚರ್ಯಚಕಿತರಾದರು. ಹಿಂದೆಂದೂ ಕಂಡಿರದ ಅನುಭವವನ್ನು ಮಿಚೆಲ್ ವಿವರಿಸಿದ್ದಾರೆ.
ನವಜಾತ ಶಿಶುಗಳ ಬಗ್ಗೆ ನೀವು ತಿಳಿಯದೆ ಇರೋ ಕ್ರೇಜಿ ಫ್ಯಾಕ್ಟ್ಸ್!
ಹುಟ್ಟಿದ ಮೂರೇ ದಿನದಲ್ಲಿ ಹಾಸಿಗೆಯಲ್ಲಿ ತೆವಳಿದ ಮಗು
ತನ್ನ ಜೀವನದ ಬಹುಪಾಲು ದಿನಗಳನ್ನು ಶಿಶುಪಾಲನೆ ಮತ್ತು ಮಕ್ಕಳೊಂದಿಗೆ ಎರಡು ದಶಕ ಕಳೆದಿದ್ದೇನೆ. ಆದರೆ ನವಜಾತ ಶಿಶುವಿನಲ್ಲಿ ಇಂಥಾ ಶೀಘ್ರ ಚಟುವಟಿಕೆಯನ್ನು ಎಂದೂ ನೋಡಿರಲ್ಲಿಲ್ಲ ಎಂದು ಸಮಂತಾ ಮಿಚೆಲ್ ಹೇಳಿದ್ದಾನೆ. 34 ವರ್ಷ ವಯಸ್ಸಿನ ಸಮಂತಾ ಮಿಚೆಲ್, ತಾನು ಕಂಡ ಅಸಾಧಾರಣ ದೃಶ್ಯದಿಂದ ಆಶ್ಚರ್ಯಚಕಿತನಾಗಿದ್ದೇನೆ ಎಂದು ಒಪ್ಪಿಕೊಂಡಿದ್ದಾರೆ. 'ನಾನು ಹಿಂದೆಂದೂ ಈ ರೀತಿಯದ್ದನ್ನು ನೋಡಿಲ್ಲ. ಕೇವಲ ಮೂರು ದಿನಗಳ ವಯಸ್ಸಿನಲ್ಲಿ ಶಿಶು ಯಾವುದೇ ಚಟುವಟಿಕೆಯನ್ನು ಮಾಡುವುದಿಲ್ಲ. ಆದರೆ ಈ ಮಗು ಅಸಾಧಾರಣವಾಗಿರುತ್ತದೆ ಎಂದು ತೋರುತ್ತದೆ' ಎಂದು ಮಿಚೆಲ್ ವಿವರಿಸಿದರು. 'ನಾನು ಈ ರೀತಿಯ ಮಗುವನ್ನು ಇದುವರೆಗೆ ನೋಡಿಲ್ಲ' ಎಂದು ಹೇಳಿದರು.
ನೈಲಾ ಸಂಪೂರ್ಣ ಮೂರು ದಿನಗಳ ಮಗುವಾದ್ದಾಗ ಹೀಗೆ ಮಾಡಿದ್ದು, ತನ್ನ ಸ್ನೇಹಿತರು ಮತ್ತು ಕುಟುಂಬದಿಂದ ಅಪನಂಬಿಕೆಗೆ ಹೆದರಿ, ಮಿಚೆಲ್ ನಂಬಲಾಗದ ಕ್ಷಣವನ್ನು ಅವಸರದಿಂದ ಚಿತ್ರೀಕರಿಸಿದರು. ಫೆಬ್ರವರಿ 27, 2023 ರಂದು ಜನಿಸಿದ ನೈಲಾ, 7 ಪೌಂಡ್ 6 ಔನ್ಸ್ ತೂಕವಿತ್ತು.
Winter: ನವಜಾತ ಶಿಶುವಿಗೆ ಸೂರ್ಯನ ಬೆಳಕು ಎಷ್ಟು ಅಗತ್ಯ?
ಸಂತೋಷದಾಯಕ ಘಟನೆಯಲ್ಲಿ, ಸಮಂತಾ ಮಿಚೆಲ್ ಅವರ ತಾಯಿ ಏಕೈಕ ಸಾಕ್ಷಿಯಾಗಿದ್ದು, ಕ್ಯಾಮರಾದಲ್ಲಿ ಅಸಾಮಾನ್ಯ ಘಟನೆಯನ್ನು ಸೆರೆಹಿಡಿಯಲು ಒತ್ತಾಯಿಸಿದರು. 'ಇಲ್ಲದಿದ್ದರೆ ಯಾರೂ ನನ್ನನ್ನು ನಂಬುತ್ತಿರಲಿಲ್ಲ' ಎಂದು ಮಿಚೆಲ್ ಹೇಳುತ್ತಾರೆ.
ಮಗಳು, ನೈಲಾ ಡೈಸ್ ತೆವಳುತ್ತಿರುವುದು ಮತ್ತು ತಲೆ ಎತ್ತಲು ಪ್ರಯತ್ನಿಸುವುದನ್ನು ವೀಡಿಯೊ ತೋರಿಸುತ್ತದೆ. ಪೆನ್ಸಿಲ್ವೇನಿಯಾದ ವೈಟ್ ಓಕ್‌ನಲ್ಲಿ ನೆಲೆಸಿರುವ ಮಿಚೆಲ್ ಗಂಡ, ಮಗುವನ್ನು ನೋಡಿ ಸಂಪೂರ್ಣವಾಗಿ ಆಶ್ಚರ್ಯಚಕಿತರಾದರು. 'ನಾನು ಮೊದಲ ಬಾರಿಗೆ ಅವಳ ತೆವಳುವಿಕೆಯನ್ನು ನೋಡಿದಾಗ ಸಂಪೂರ್ಣ ಆಘಾತಕ್ಕೆ ಒಳಗಾಗಿದ್ದೆ. ಆಕೆ ತಲೆಯೆತ್ತಲು ಯತ್ನಿಸಿ ಮಾತನಾಡಲು ಆರಂಭಿಸುತ್ತಿದ್ದಳು' ಎಂದರು.
ಸದ್ಯ ಮೂರು ತಿಂಗಳ ವಯಸ್ಸಿನಲ್ಲಿ, ನೈಲಾ ಡೈಸ್ ನಿಲ್ಲಲು ಪ್ರಯತ್ನಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ನಿಸ್ಸಂದೇಹವಾಗಿ, ಅವಳು ಶೀಘ್ರದಲ್ಲೇ ನಡೆಯಲು ಪ್ರಾರಂಭಿಸುತ್ತಾಳೆ ಎಂದು ಸಮಂತಾ ಮಿಚೆಲ್ ವಿಶ್ವಾಸದಿಂದ ಹೇಳುತ್ತಾರೆ. ಅದೇನೆ ಇರ್ಲಿ, ಹುಟ್ಟಿದ ಮೂರೇ ದಿನದಲ್ಲಿ ಮಗು ಕವುಚಿ ಬೀಳುತ್ತೆ, ತಲೆಯೆತ್ತಿ ನೋಡುತ್ತೆ, ಮಾತನಾಡುತ್ತೆ ಅಂದ್ರೆ ಆಶ್ಚರ್ಯವೇ ಸರಿ.