Asianet Suvarna News Asianet Suvarna News

ಮುಖದ ಮೇಲೆ ಕಾಣಿಸುತ್ತೆ ಕೊರೋನಾ ಹೊಸ ರೂಪಾಂತರದ ಲಕ್ಷಣ!

ಕೊರೊನಾ ಇನ್ನೂ ನಮ್ಮಿಂದ ದೂರವಾಗಿಲ್ಲ. ಆಗಾಗ ಹೊಸ ರೂಪಾಂತರದಲ್ಲಿ ಲಗ್ಗೆಯಿಟ್ಟು ಆಘಾತವುಂಟು ಮಾಡ್ತಿದೆ. ಕೆಲ ತಿಂಗಳ ಹಿಂದೆ ಕಾಣಿಸಿಕೊಂಡ ಪಿರೋಲಾ ರೂಪಾಂತರ ಹೆಚ್ಚು ಅಪಾಯಕಾರಿಯಾಗಿದ್ದು, ಅದ್ರ ಲಕ್ಷಣ ಇಲ್ಲಿದೆ.
 

New Covid Strain Affected Faces As Symptoms Begin To Change roo
Author
First Published Nov 17, 2023, 3:32 PM IST

ಕರೋನಾದ ಹೊಸ ರೂಪಾಂತರಗಳು ಜನರನ್ನು ಚಿಂತೆಗೀಡು ಮಾಡಿದೆ. ಕೋವಿಡ್‌ನ ಐರಿಸ್ ರೂಪಾಂತರದ ನಂತರ, ಈಗ ಪಿರೋಲಾ ಅಥವಾ ಬಿಎ.2.86 ರೂಪಾಂತರದ ಪ್ರಕರಣ ಹೊರ ಬರ್ತಿದೆ. ಈಗಾಗಲೇ ಐವತೈದು ದೇಶಗಳಲ್ಲಿ ಇದು ಕಾಣಿಸಿಕೊಂಡಿದ್ದು, ಜನರು ಆತಂಕದಲ್ಲಿದ್ದಾರೆ. 

ತಜ್ಞರ ಪ್ರಕಾರ, ಈ ರೂಪಾಂತರದಲ್ಲಿ ಹೆಚ್ಚಿನ ರೂಪಾಂತರಗಳು ಪತ್ತೆಯಾಗಿವೆ. ಇದಕ್ಕೆ ಹಿಂದೆ ತೆಗೆದುಕೊಂಡ ಲಸಿಕೆ (vaccine) ಪರಿಣಾಮಕಾರಿಯಲ್ಲ ಎನ್ನಲಾಗ್ತಿದೆ. ಲಸಿಕೆ ಹಾಗೂ ಈಗಾಗಲೇ ನಿಮ್ಮ ಬಳಿ ಇರುವ ರೋಗನಿರೋಧಕ ಶಕ್ತಿಯನ್ನು ಬೇಧಿಸಿ ಇದು ಜನರಿಗೆ ಸುಲಭವಾಗಿ ಸೋಂಕು ಹರಡುತ್ತಿದೆ. ಈ ರೂಪಾಂತರವು ಕರೋನಾ (Corona) ದ ಇತರ ರೂಪಾಂತರಗಳಿಗಿಂತ ವೇಗವಾಗಿ ಹರಡುತ್ತದೆ ಮತ್ತು ಹೆಚ್ಚು ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ. ಇದರ ರೋಗ ಲಕ್ಷಣದಲ್ಲೂ ಕೆಲ ಬದಲಾವಣೆಗಳಿವೆ. ಮುಖದ ಮೇಲೆ ಇದ್ರ ಲಕ್ಷಣವನ್ನು ಕಾಣಬಹುದಾಗಿದೆ. 

Health Tips: ಕಿಡ್ನಿ ಸಮಸ್ಯೆ ಬಾರದಿರಲು… ಆಯುರ್ವೇದದ ಈ ಸಲಹೆ ಪಾಲಿಸಲೇಬೇಕು…

ಪಿರೋಲಾ (Pirola) ರೋಗ ಲಕ್ಷಣ : 

ಮುಖದಲ್ಲಿ ಬದಲಾವಣೆ : ಮುಖದಲ್ಲಿಯೇ ಪಿರೋಲಾ ರೋಗ ಲಕ್ಷಣವನ್ನು ಪತ್ತೆ ಮಾಡಬಹುದಾಗಿದೆ. ಈ ಸೋಂಕು ಕಾಣಿಸಿಕೊಂಡವರು ಕಣ್ಣಿನ ಕಿರಿಕಿರಿ ಅನುಭವಿಸುತ್ತಾರೆ. ಕಣ್ಣು  ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಚರ್ಮದ ಮೇಲೆ ದದ್ದುಗಳು ಕಾಣಿಸಿಕೊಳ್ಳುತ್ತವೆ. ಈ ದುದ್ದುಗಳು ಮುಖದ ಮೇಲೆ ಗೋಚರಿಸುತ್ತವೆ. ಪಿರೋಲ್ ಹೊಸ ಸೋಂಕು, ಮೂಗು ಮತ್ತು ಧ್ವನಿ ಪೆಟ್ಟಿಗೆ ಸೇರಿದಂತೆ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಪತ್ತೆ ಮಾಡಿದ್ದಾರೆ. 

ಪಿರೋಲಾ ಇತರ ಲಕ್ಷಣ : ಪಿರೋಲಾ ಸೋಂಕಿಗೆ ಒಳಗಾದ ರೋಗಿಗಳಲ್ಲಿ ಅತಿಸಾರ, ಜ್ವರ, ಕಾಂಜಂಕ್ಟಿವಿಟಿಸ್,   ಕಫ ರಚನೆ, ಉಸಿರಾಟದ ತೊಂದರೆ,  ಆಯಾಸ, ಸ್ನಾಯು ನೋವು, ತಲೆನೋವು, ವಾಸನೆಯ ನಷ್ಟ ಮತ್ತು ಬಾಯಿ ಹುಣ್ಣುಗಳಂತಹ ಅನೇಕ ರೋಗಲಕ್ಷಣ ಕಾಣಿಸುತ್ತದೆ.  ರುಚಿ ಅಥವಾ ಒಣ ಗಂಟಲಿನಲ್ಲಿ ಬದಲಾವಣೆ ಕೂಡ ಸಂಭವಿಸುತ್ತದೆ. 

ಅದೇ ಹೆಲ್ದಿ ತರಕಾರಿ, ಚೀಸ್‌ ಇದ್ರೂ ಬರ್ಗರ್‌ ಅನ್‌ ಹೆಲ್ದಿ ಹೇಗಾಗುತ್ತೆ?

ಜೀರ್ಣಕಾರಿ ಸಮಸ್ಯೆ : ಸಾಂಕ್ರಾಮಿಕ ರೋಗದ ಆರಂಭದಲ್ಲಿ ಜೀರ್ಣಕಾರಿ ಸಮಸ್ಯೆಗಳು ಸಾಮಾನ್ಯವಾಗಿದೆ ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ.

ನೋವು :  ಕೆಲ ಜನರು ತಮ್ಮ ಬೆರಳುಗಳು ಮತ್ತು ಕಾಲ್ಬೆರಳುಗಳಲ್ಲಿ ವಿಪರೀತ ನೋವು ಅನುಭವಿಸುತ್ತಾರೆ.

ಗೊಂದಲ : ಇದು ಮೆದುಳಿನ ಮೇಲೂ ಪರಿಣಾಮ ಬೀರುತ್ತಿದೆ. ಈ ಸೋಂಕಿಗೆ ಒಳಗಾದ ಜನರಿಗೆ  ವಿಶೇಷವಾಗಿ ವಯಸ್ಸಾದ ಜನರಿಗೆ ಗೊಂದಲದ ಸಮಸ್ಯೆ ಕಾಣಿಸುತ್ತಿದೆ. ಈ ಮೇಲಿನ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಡಮಾಡದೆ ತಕ್ಷಣ ವೈದ್ಯರನ್ನು ಭೇಟಿಯಾಗುವುದು ಸೂಕ್ತ.

ಯಾರಿಗೆ ಹೆಚ್ಚು ಅಪಾಯಕಾರಿ : ಪಿರೋಲಾ ರೂಪಾಂತರದ ದೊಡ್ಡ ಅಪಾಯ ಮೊದಲು ಕರೋನವೈರಸ್ ಸೋಂಕಿಗೆ ಒಳಗಾದ ಜನರಿಗೆ ಎಂದು ತಜ್ಞರು ಹೇಳಿದ್ದಾರೆ. ಅಲ್ಲದೆ ಚಿಕ್ಕ ಮಕ್ಕಳು ಮತ್ತು ವಯಸ್ಸಾದವರು ಹಾಗೆ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಿಗೆ ಇದು ಬೇಗ ಕಾಡುತ್ತದೆ. ಹಾಗಾಗಿ ಅವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು ಎನ್ನುತ್ತಾರೆ ತಜ್ಞರು.  

ಲಸಿಕೆ ನವೀಕರಣ : ಪಿರೋಲಾ ಬಗ್ಗೆ ಸಾಕಷ್ಟು ಅಧ್ಯಯನ ನಡೆಯುತ್ತಿದೆ. ಅನೇಕ ಕಂಪನಿಗಳು ತಮ್ಮ ಲಸಿಕೆಗಳನ್ನು ನವೀಕರಿಸುತ್ತಿವೆ. ಈಗಾಗಲೇ ಹಾಕಿರುವ ಲಸಿಕೆ ಪರಿಣಾಮಕಾರಿಯೇ ಎಂಬ ಬಗ್ಗೆ ಪರೀಕ್ಷೆ ನಡೆಯುತ್ತಿದೆ. ಈಗಾಗಲೇ ನೀವು ಲಸಿಕೆ ಹಾಕಿಸಿಕೊಂಡಿದ್ದು, ನಿಮಗೆ ಸೋಂಕು ತಗಲಿದ್ರೆ ಅದ್ರ ಪರಿಣಾಮ ಕಡಿಮೆ ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ. 

ಎಷ್ಟು ದಿನ ಕಾಡಲಿದೆ ಈ ಕೊರೊನಾ? : ತಜ್ಞರ ಪ್ರಕಾರ ಕೊರೊನಾ ವೈರಸ್ ಇತರ ವೈರಸ್ ನಂತೆ ನಮ್ಮ ಜೊತೆಗಿರಲಿದೆ. ಅದು ಕಾಲ ಕಾಲಕ್ಕೆ ರೂಪಾಂತರಗೊಳ್ಳಲಿದೆ. ಅದ್ರ ಬಗ್ಗೆ ಹೆದರುವ ಬದಲು ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. 
 

Follow Us:
Download App:
  • android
  • ios