National Cookies Day: ಮನೆಯಲ್ಲೇ ತಯಾರಿಸಿ ಶುಗರ್ ಫ್ರೀ ಕುಕಿಸ್

ಕುಕಿಸ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಕಾಫಿ ಟೀ ಜೊತೆಗೆ ಒಂದೆರಡು ಬೈಟ್ ಬಿಸ್ಕೆಟ್ಸ್ ತಿನ್ನುವ ಅಭ್ಯಾಸ ಇಂದಿಗೂ ಇದೆ. ಹಾಗದರೆ ಅಂತರಾಷ್ಟ್ರೀಯ ಕುಕ್ಕೀಸ್ ದಿನದಂದು ಮನೆಯಲ್ಲೇ ಮಾಡಬಹುದಾದ ಸರಳ ಹಾಗೂ ಶುಗರ್ ಫ್ರೀ ಕುಕಿಸ್ ರೆಸಿಪಿ ಇಲ್ಲಿದೆ.

National Cookies Day: Try these Sugar Free Cookies at Home

ಇಂದು ಮಕ್ಕಳಿಂದ ಹಿಡಿದು ವಯಸ್ಸಾದವರೂ ಸಂಭ್ರಮಿಸಬೇಕಾದ ದಿನ. ಅದೇನೆಂದರೆ ಅಂತರಾಷ್ಟ್ರೀಯ ಕುಕಿಸ್ ದಿನ ಇವತ್ತು. ಹೌದು ಪ್ರತೀ ವರ್ಷ ಡಿಸೆಂಬರ್ 4ರಂದು ಅಂತರಾಷ್ಟ್ರೀಯ ಕುಕಿಸ್ ದಿನವನ್ನಾಗಿ (National Cookies Day) ಆಚರಿಸಲಾಗುತ್ತದೆ. ನಮ್ಮ ಬಾಲ್ಯದಲ್ಲಿ ಅದೆಷ್ಟೋ ಸಮಯ ಈ ಬಿಸ್ಕೆಟ್ ತಿನ್ನುತ್ತಾ ಕಳೆದ ದಿನಗಳಿವೆ. ಅಲ್ಲದೆ ಬಿಸ್ಕೆಟ್‌ಗಾಗಿ (Cookies) ಸಹೋದರರೊಂದಿಗೆ (Siblings) ಕಿತ್ತಾಡಿದ್ದಿದೆ. ಒಂದು ಸಿಹಿ ನೆನಪುಗಳ (Memories) ಬುತ್ತಿಯನ್ನೇ ಕಟ್ಟಿಕೊಟ್ಟಿದೆ ಈ ಕುಕಿಸ್. 

ನಮ್ಮ ನೆಚ್ಚಿನ ತಿಂಡಿಗಳಲ್ಲಿ ಒಂದಾದ ಈ ಕುಕಿಸ್ ಉಪ್ಪು (Salted) ಮತ್ತು ಸಿಹಿ (Sweeten) ಎರಡೂ ರೀತಿಯ ಬಿಸ್ಕೆಟ್‌ಗಳೂ ಒಳಗೊಂಡಿದೆ. ಪ್ರತೀ ಮನಸ್ಥಿತಿ, ಸಂದರ್ಭ, ಮತ್ತು ಭಾವನೆಗಳಿಗೆ ಕುಕಿಸ್‌ಗಳಿವೆ. ದುಃಖ ಸಂತೋಷ ಮತ್ತು ಒಗ್ಗಟ್ಟಿನ ಮೂಲಕ ಅಥವಾ ಮಧ್ಯರಾತ್ರಿಯ ಅಧ್ಯಯನಗಳು, ಕೆಲಸದ ಗಡುವಿನ ಮೇಲೆ ತಡವಾಗಿ ಓಡುವುದರಿಂದ ಕುಕಿಸ್‌ಗಳು ನಮ್ಮ ಬ್ಯಾಗ್‌ನಲ್ಲಿರುವ (Bag) ಸಾರ್ವಕಾಲಿಕ ತಿಂಡಿಗಳಾಗಿವೆ. ಈ ಸಂದರ್ಭದಲ್ಲಿ ಕುಕಿಸ್ ದಿನದಂದು ಮನೆಯಲ್ಲಿ ಮಾಡಬಹುದಾದ ಶುಗರ್ ಫ್ರೀ ಹಾಗೂ ಮಕ್ಕಳಿಗೂ ಇಷ್ಟವಾಗುವ ಸರಳ ಕುಕಿಸ್‌ಗಳ ರೆಸಿಪಿ ಇಲ್ಲಿದೆ.

ಅಂತರಾಷ್ಟಿçÃಯ ಕುಕಿಸ್ ದಿನ ಹುಟ್ಟಿದ್ದು ಹೀಗೆ
ಸ್ಯಾನ್ ಫ್ರಾನ್ಸಿಸ್ಕೋ(San Francisco) ಮೂಲದ ಬ್ಲೂ ಚಿಪ್ ಕುಕಿ(Blue Chip Cookies) ಕಂಪನಿಯ ಮ್ಯಾಟ್ ನಾಡರ್(Matt Nader) 1987 ಡಿಸೆಂಬರ್ 4ರಂದು ಅಂತರಾಷ್ಟ್ರೀಯ ಕುಕಿಸ್ ದಿನವೆಂದು ಘೋಷಿಸಿದರು. ಈ ದಿನದಂದು ಮೋಜಿನ ಮಾರ್ಗವಾಗಿ ಆಚರಣೆಗಳನ್ನು ಪ್ರಾರಂಭಿಸಿದರು. ಅಂದಿನಿಂದ ಪ್ರತೀ ಡಿಸೆಂಬರ್ 4ರಂದು ಕುಕಿಸ್ ದಿನವನ್ನಾಗಿ ಆಚರಿಸಲಾಗುತ್ತದೆ.

Health Tips : ಚಹಾದೊಂದಿಗೆ ಬಿಸ್ಕೆಟ್ ತಿನ್ನೋಂದ್ರಿಂದ ಏನೇನ್ ಸಮಸ್ಯೆಗಳಾಗುತ್ತೆ ?

ಶುಗರ್ ಫ್ರೀ ಕುಕಿಸ್ ರೆಸಿಪಿಗಳು

1. ಚಾಕೋಲೇಟ್ ಚಿಪ್ ಕುಕಿಸ್
ಬೇಕಾಗುವ ಸಾಮಗ್ರಿಗಳು:
ಬೆಣ್ಣೆ, ಸಕ್ಕರೆ ಪುಡಿ(Sugar Powder), ವೆನಿಲ್ಲಾ ಎಕ್ಸಟ್ರಾಕ್ಟ್(Venilla Extract), ಮೈದಾಹಿಟ್ಟು(Maida), ಬೇಕಿಂಗ್ ಸೋಡಾ, ಉಪ್ಪು, ಶುಗರ್ ಫ್ರೀ ಮಿಲ್ಕ ಚಾಕೋಲೇಟ್ ಬೇಕಿಂಗ್ ಚಿಪ್ಸ್(Sugar Free Milk Chocolate Baking Chips).

ಮಾಡುವ ವಿಧಾನ: ಒಂದು ಬೌಲ್‌ನಲ್ಲಿ ಬೆಣ್ಣೆ ಹಾಕಿ ಚೆನ್ನಾಗಿ ಬೈಟ್ ಮಾಡಿಕೊಳ್ಳಿ. ಅದು ಕ್ರೀಮ್ ರೀತಿ ಆದ ನಂತರ ಅದಕ್ಕೆ ಸಕ್ಕರೆ ಪುಡಿ ಹಾಕಿ ಮತ್ತೆ ಬೈಟ್ ಮಾಡಿಕೊಳ್ಳಿ. ಸ್ವಲ್ಪ ನೀರಾದ ನಂತರ ಅದಕ್ಕೆ ಮೈದಾ ಹಿಟ್ಟು, ಚಿಟಿಕೆ ಉಪ್ಪು, ಬೇಕಿಂಗ್ ಸೋಡಾ, ವೆನಿಲ್ಲಾ ಎಕ್ಸಟ್ರಾಕ್ಟ್, ಶುಗರ್ ಫ್ರೀ ಮಿಲ್ಕ ಚಾಕೋಲೇಟ್ ಬೇಕಿಂಗ್ ಚಿಪ್ಸ್ ಹಾಕಿ ಕಲಸಿಕೊಳ್ಳಿ. ಕಲಸಿದ ಮಿಶ್ರಣವನ್ನು ಸಣ್ಣ ಉಂಡೆ ಮಾಡಿ ಸಣ್ಣದಾಗಿ ಪ್ರೆಸ್ ಮಾಡಿ. ನಂತರ 25 ನಿಮಿಷ ಓವನ್(Oven) ಅಲ್ಲಿ 180 ಡಿಗ್ರಿಯಲ್ಲಿ ಬೇಯಿಸಿ. 


2. ಕ್ಯಾಶಿವ್ ಬಟರ್ ಕುಕಿಸ್(Cashew Butter Cookies)
ಬೇಕಾಗುವ ಸಾಮಗ್ರಿಗಳು:
ಒಂದು ಕಪ್ ಕ್ಯಾಶಿವ್ ಬಟರ್ ಕ್ರೀಮ್(Cashew Butter Cream), ಮೇಪಲ್ ಸಿರಪ್(Maple Syrup), ಗ್ರೌಂಡ್ ಫ್ಲೆಕ್ಸ್ಸೀಡ್, ಉಪ್ಪು.
 ಮಾಡುವ ವಿಧಾನ: ಒಂದು ಬೌಲ್‌ನಲ್ಲಿ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲಸಿಕೊಂದು ಉಂಡೆ ಮಾಡಿ ಟ್ರೇನಲ್ಲಿ ಇಡಿ. ನಂತರ ಅದನ್ನು 20 ನಿಮಿಷಗಳ ಕಾಲ 320 ಡಿಗ್ರಿಯಲ್ಲಿ ಬೇಯಿಸಿದರೆ ಕ್ಯಾಶಿವ್ ಬಟರ್ ಕುಕಿಸ್ ರೆಡಿ. 

ಮಧುಮೇಹಿಗಳು ಈ ಕೆಲವು ಸಿಹಿತಿಂಡಿಗಳನ್ನು ಭಯಪಡದೆ ತಿನ್ಬೋದು

3. ಕುಂಬಳಕಾಯಿ ಕುಕಿಸ್(Pumpkin Cookies)
ಬೇಕಾಗುವ ಸಾಮಗ್ರಿಗಳು:
ಓಟ್ಸ್, ಗೋಧಿ ಹಿಟ್ಟು (Wheat Flore), ಸೋಯಾ ಹಿಟ್ಟು (Soya Flore), ಬೇಕಿಂಗ್ ಸೋಡ, ತುರಿದ ಕುಂಬಳಕಾಯಿ, ಬೇಕಿಂಗ್ ಪೌಡರ್, ಉಪ್ಪು, ದಾಲ್ಚಿನ್ನಿ ಪುಡಿ(Cinnamon), ಲವಂಗ ಪುಡಿ(Cloves), ಎಣ್ಣೆ, ನೀರು.

ಮಾಡುವ ವಿಧಾನ: ಒಂದು ಬೌಲ್‌ಗೆ ಓಟ್ಸ್, ಗೋಧಿ ಹಿಟ್ಟು, ಸೋಯಾ ಹಿಟ್ಟು, ಬೇಕಿಂಗ್ ಸೋಡಾ, ಕುಂಬಳಕಾಯಿ, ಲವಂಗ ಪುಡಿ, ಉಪ್ಪು, ಬೇಕಿಂಗ್ ಪೌಡರ್, ದಾಲ್ಚಿನ್ನಿ ಪುಡಿ, ಎಣ್ಣೆ, ನೀರು ಎಲ್ಲವನ್ನೂ ಹಾಕಿ ಚೆನ್ನಾಗಿ ಕಲಸಿಕೊಳ್ಳಿ, ನಂತರ ಉಂಡೆಗಳನ್ನು ಕಟ್ಟಿಕೊಳ್ಳಿ. ಒಂದು ಟ್ರೇಗೆ ಗ್ರೀಸ್ ಮಾಡಿ ಅಥವಾ ಬೆಣ್ಣೆ ಸವರಿ ಉಂಡೆಯನ್ನು ಇರಿಸಿ. ನಂತರ 175 ಡಿಗ್ರಿಯಲ್ಲಿ ಟ್ರೇ ಇಟ್ಟು 15 ನಿಮಿಷಗಳ ಕಾಲ ಕುಕಿಸ್ ಅನ್ನು ಬೇಯಿಸಿ. ಬೆಂದ ನಂತರ ತಣ್ಣಗಾದ ಮೇಲೆ ಅದನ್ನು ಹೊರತೆಗೆಯಿರಿ.

Latest Videos
Follow Us:
Download App:
  • android
  • ios