ನವದೆಹಲಿ(ಸೆ.11): ಡೆಂಘೀ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೊಳ್ಳೆ ನಿಯಂತ್ರಣಕ್ಕಾಗಿ ವಿಶೇಷ ರೈಲನ್ನು ದೆಹಲಿಯಲ್ಲಿ ಆರಂಭಿಸಲಾಗಿದೆ. ರೈಲ್ವೇ ಪಟ್ಟಿಯ ಎರಡೂ ಭಾಗದಲ್ಲಿ ನೀರು ತುಂಬಿ ನಿಂತು ಸೊಳ್ಳೆ ಹೆಚ್ಚಾಗಿ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದೆ. 

ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಉತ್ತರ ರೈಲ್ವೇ ಜಂಟಿಯಾಗಿ ಈ ರೈಲಿಗೆ ಹಸಿರು ನಿಶಾನೆ ತೋರಿಸಿದೆ. ಫ್ಲಾಟ್‌ ಫಾರ್ಮ್ 1ರಿಂದ ರೈಲು ಚಾಲನೆಯಾಗಿದೆ.

ವೈರಸ್‌ ಸೊಳ್ಳೆ ನಿಗ್ರಹಕ್ಕೆ ಹೈಬ್ರಿಡ್‌ ಸೊಳ್ಳೆ!

ರೈಲಿನ ಮೇಲೆ ಟ್ರಕ್‌ನಂತಹ ರಚನೆ ಇಡಲಾಗಿದ್ದು, ಅದರಲ್ಲಿ ರಾಸಾಯನಿಕ ತುಂಬಲಾಗಿದೆ. ರೈಲ್ವೇ ಹಳಿಯ ಎರಡೂ ಭಾಗದಲ್ಲಿ ತುಂಬಿ ನಿಂತ ನೀರಿನಲ್ಲಿಯೂ ರಾಸಾಯನಿಕ ಸಿಂಪಡಣೆಯಾಗಿ ಸೊಳ್ಳೆ ನಾಶವಾಗುತ್ತಿದೆ. ರೈಲಿನಿಂದ ಸುತ್ತಲ್ಲಿನ 50-60 ಮೀಟರ್ ವ್ಯಾಪ್ತಿಗೆ ರಾಸಾಯನಿಕ ಸಿಂಪಡಣೆಯಾಗುತ್ತದೆ.

ಚಿಕೂನ್‌ಗುನ್ಯಾ ಮತ್ತು ಡೆಂಘೀ ಸೇರಿದಂತೆ ವೆಕ್ಟರ್‌ನಿಂದ ಹರಡುವ ರೋಗಗಳನ್ನು ನಿಯಂತ್ರಿಸಲು ಸೊಳ್ಳೆ ಲಾರ್ವಾಗಳನ್ನು ನಾಶ ಮಾಡಲು ಇದು ಪರಿಣಾಮಕಾರಿ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸೊಳ್ಳೆಯಿಂದ ಹರಡುತ್ತಾ ಕೊರೋನಾ? ಕೊನೆಗೂ ಸಿಕ್ತು ಉತ್ತರ

ಎಸ್‌ಡಿಎಂಸಿ ದೊಡ್ಡ ಪ್ರಮಾಣದಲ್ಲಿ ರಾಸಾಯನಿಕ ಸಿಂಪಡಿಸುವ ಯಂತ್ರ ಮತ್ತು ಕೀಟನಾಶಕವನ್ನೂ ಒದಗಿಸಿದೆ. ಈ ವಿಧಾನದ ಮೂಲಕ ಸಾವಿರಾರು ಜನರು ಡೆಂಘೀ, ಚಿಕೂನ್‌ಗುನ್ಯಾಗೆ ತುತ್ತಾಗುವುದನ್ನು ತಡೆಯಬಹುದಾಗಿದೆ. ಇದರಿಂದ ಲಾರ್ವ ನಾಶವಾಗುವುದು ಮಾತ್ರವಲ್ಲದೆ, ಸೊಳ್ಳೆಯನ್ನೂ ನಾಶಪಡಿಸಬಹುದಾಗಿದೆ.

ಮುಖ್ಯವಾಗಿ ರೈಲು ಹಳಿಯ ಆಸುಪಾಸಿನಲ್ಲಿ ವಾಸಿಸುವ ಜನರಿಗೆ ಹೆಚ್ಚಿನ ಉಪಯೋಗವಾಗಲಿದೆ. ಆಗಸ್ಟ್ 30ರಿಂದ ಅಕಟ್ಓಬರ್ 20ರ ತನಕ 20 ದಿನಗಳ ಕಾಲ  ರಾಸಾಯನಿಕ ಸಿಂಪಡಿಸಲಾಗುತ್ತದೆ. ಇದು NDMC, EMDC, SDMC ಮೂಲಕ ಹಾದು ಹೋಗಲಿದೆ.

ಮಳೆಯಿಂದ ಶೀತಗಾಳಿ ಹೆಚ್ಚಳ: ಕೊರೋನಾ, ಇತರ ವೈರಸ್‌ ಹೆಚ್ಚಳ!

ನವದೆಹಲಿ ರೂಲ್ವೇ ಸ್ಟೇಷನ್‌ನ ರೈಲ್ವೇ ಟ್ರ್ಯಾಕ್ ನಲ್ಲಿ ರಾಸಾಯನಿಕ ಸಿಂಪಡಿಸಲಾಗುತ್ತದೆ. ಇದರಲ್ಲಿ ಹಝ್ರತ್ ನಿಜಾಮುದ್ದೀನ್, ಲಜ್‌ಪತ್ ನಗರ್, ಸೇವಾ ನಗರ್, ಲೋಡಿ ಕಾಲೊನಿ, ದೆಹಲಿ ಸರ್ಫದರ್ಜಂಗ್, ಪಟೇಲ್ ನಗರ್, ದೆಹಲಿ ಕಿಶನ್‌ಗಂಜ್, ಸದರ್ ಬಝಾರ್, ಸರೈ ರೋಹಿಲಾ, ಬರಾರ್ ಸ್ಕ್ವೇರ್, ಇಂದೇರ್‌ಪುರಿ, ಮಾಯಾಪುರಿ, ದಯಾಬಸ್ತಿ, ಪಾಲಂ, ಬೆಹ್ತಾ ಹಸೀಪುರ್ ಹಾಲ್ಟ್, ನೋಲಿ, ದೆಹಲಿ, ಶಹದಾರಾ ಮೂಲಕ ಹಾದು ಹೋಗಲಿದೆ. ರೈಲು ಗಂಟೆಗೆ 20 ಕಿ.ಮೀ ವೇಗದಲ್ಲಿ ಸಂಚರಿಸಲಿದೆ. ಇದರಲ್ಲಿ ಪ್ರತಿಬಾರಿ 150 ಕಿಮೀ ಕ್ರಮಿಸಲಿದೆ.