ವಾಷಿಂಗ್ಟನ್(ಜು.20): ಸೊಳ್ಳೆಗಳಿಂದಲೂ ಕೊರೋನಾ ಹರಡುತ್ತದೆ ಎಂಬುದು ಬರೀ ಊಹಾಪೋಹ ಎಂದು ಅಧ್ಯಯನವೊಂದರಿಂದ ದೃಢಪಟ್ಟಿದೆ. ‘ಈ ಮುನ್ನ ವಿಶ್ವಸಂಸ್ಥೆಯು ಸೊಳ್ಳೆಯಿಂದ ಕೊರೋನಾ ಹರಡಲ್ಲ ಎಂದು ಸ್ಪಷ್ಟನೆ ನೀಡಿತ್ತು. ನಮ್ಮ ಅಧ್ಯಯನ ಅದನ್ನು ದೃಢಪಡಿಸಿದೆ.

ಸೊಳ್ಳೆಯ ಮೂಲಕ ಸೋಂಕು ತಗುಲಿಸುವ ಸಾಮರ್ಥ್ಯ ‘ಸಾರ್ಸ್‌-ಕೊರೋನಾ ವೈರಸ್‌’ಗೆ ಇದೆಯೇ ಎಂಬುದನ್ನು ಪರೀಕ್ಷಿಸಲಾಯಿತು. ಆದರೆ ಹರಡುವುದಿಲ್ಲ ಎಂದು ದೃಢಪಟ್ಟಿದೆ’ ಎಂದು ‘ಸೈಂಟಿಫಿಕ್‌ ರಿಪೋಟ್ಸ್‌ರ್‍’ ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಬಯೋಸೆಕ್ಯುರಿಟಿ ರೀಸರ್ಚ್ ಸಂಸ್ಥೆ ನಡೆಸಿದ ಸಂಶೋಧನಾ ವರದಿ ಪ್ರಕಟವಾಗಿದೆ.

ಭ್ರಷ್ಟಾಚಾರ ಆರೋಪ: ಲೆಕ್ಕ ಕೊಟ್ಟ ಶ್ರೀರಾಮುಲು, ಅವ್ಯವಹಾರ ಸಾಬೀತಾದ್ರೆ ರಾಜೀನಾಮೆ ಸವಾಲ್

ಏಡಿಸ್‌ ಇಜಿಪ್ತಿ, ಏಡಿಸ್‌ ಅಲ್ಬೊಪಿಕ್ಟಸ್‌ ಹಾಗೂ ಕ್ಯುಲೆಕ್ಸ್‌ ಕ್ವಿಂಕೆಫೆಸಿಟಸ್‌ ಎಂಬ 3 ತಳಿಯ ಸೊಳ್ಳೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಸೋಂಕಿತನಿಗೆ ಇವು ಕಚ್ಚಿದ ಬಳಿಕ ಸೋಂಕಿತನಲ್ಲದ ವ್ಯಕ್ತಿಗೆ ಕಚ್ಚಿದರೂ ಇವುಗಳ ಮೂಲಕ ವೈರಸ್‌ ಹರಡುವುದಿಲ್ಲ ಎಂದು ಎಂದು ಆಗ ತಿಳಿದುಬಂತು’ ಎಂದು ತಿಳಿಸಲಾಗಿದೆ.