Asianet Suvarna News Asianet Suvarna News

Morning Habits: ಬೆಳಗ್ಗೆ ಹೀಗೆ ಮಾಡೋದ್ರಿಂದಲೇ ನೀವು ದಪ್ಪ ಆಗ್ತಿರೋದು

ಬೆಳಗ್ಗೆ (Morning) ಲೇಟಾಗಿ ಏಳ್ತೀರಾ, ತಡವಾಗಿ ಬ್ರೇಕ್ ಫಾಸ್ಟ್ (Breakfast) ಮಾಡ್ತೀರಾ, ಹಾಸಿಗೆಯಲ್ಲೇ ಮಲಗಿಕೊಂಡು ಮೊಬೈಲ್ (Mobile) ಯೂಸ್ ಮಾಡ್ತೀರಾ. ನಿಮಗೆ ಗೊತ್ತಾ ನೀವು ಬೆಳಗ್ಗೆ ಮಾಡುವ ಈ ಕೆಲ ತಪ್ಪುಗಳು ನಿಮ್ಮ ತೂಕ ಹೆಚ್ಚಳಕ್ಕೂ ಕಾರಣವಾಗ್ತಿರ್ಬೋದು.
 

Morning Habits That Can Make You Gain Weight
Author
Bengaluru, First Published Jan 21, 2022, 4:35 PM IST

ಅಧಿಕ ತೂಕ, ಬೊಜ್ಜು ಆಧುನಿಕ ಜೀವನಶೈಲಿಯ ದೊಡ್ಡ ಕೊಡುಗೆಗಳು. ಇದರಿಂದಲೇ ಆರೋಗ್ಯ (Health) ಸಮಸ್ಯೆಗಳು ಸಹ ಹೆಚ್ಚಾಗುತ್ತಾ ಹೋಗುತ್ತವೆ. ತೂಕವನ್ನು ಕಳೆದುಕೊಳ್ಳಲೆಂದೇ ಜಿಮ್, ಯೋಗ ಸೆಂಟರ್, ಡಯೆಟ್ ಸೆಂಟರ್ ಸೇರಿದಂತೆ ಹಲವು ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ. ಇವಿಷ್ಟೇ ಅಲ್ದೆ ಜನರು ನ್ಯೂಟಿಷಿಯನ್ಸ್ ಸಲಹೆ ಪಡೆದುಕೊಂಡು ಡಯೆಟ್ ಸಹ ಮಾಡುತ್ತಾರೆ. ಇನ್ನು ಕೆಲವರು ಮಿತಿಯಾದ ಆಹಾರ ಸೇವಿಸಿ, ಯೋಗ- ವ್ಯಾಯಾಮ (Exercise)ಗಳನ್ನು ಮಾಡಿ ತೂಕ ಕಳೆದುಕೊಳ್ಳಲು ಯತ್ನಿಸುತ್ತಾರೆ. ಆದರೆ ಪ್ರತಿದಿನ ಜಿಮ್‌ಗೆ ಹೋದ್ರೂ, ವ್ಯಾಯಾಮ ಮಾಡಿದ್ರೂ, ನಿಯಮಿತ ಆಹಾರ ಸೇವಿಸಿದ್ರೂ ತೂಕ ಹೆಚ್ಚಾಗ್ತಾ ಹೋಗ್ತಿದ್ಯಾ.  ಹಾಗಿದ್ರೆ ಇದಕ್ಕೆ ನೀವು ಬೆಳಗ್ಗೆ ಮಾಡುವ ಈ ತಪ್ಪುಗಳೂ ಕಾರಣವಾಗಿರಬಹುದು.

ಬೆಳಗ್ಗಿನ ಅಭ್ಯಾಸದ ವಿಷಯಕ್ಕೆ ಬಂದಾಗ ನೀವು ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು ಇಲ್ಲಿವೆ:

ಸಾಕಷ್ಟು ನಿದ್ದೆ ಮಾಡುಬೇಕು 
ಆರೋಗ್ಯಕರ ಜೀವನಶೈಲಿಗಾಗಿ ಸಾಕಷ್ಟು ನಿದ್ದೆ (Sleep) ಮಾಡುವುದು ಮುಖ್ಯ. ವ್ಯಕ್ತಿಯೊಬ್ಬ ದಿನವೊಂದಕ್ಕೆ 8ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡಬೇಕು ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಹಾಗಂತ, ಅತಿಯಾಗಿ ನಿದ್ದೆ ಮಾಡುವುದು ಸಹ ಒಳ್ಳೆಯದಲ್ಲ. ಕೆಲವೊಬ್ಬರು ರಾತ್ರಿ ತಡವಾಗಿ ಮಲಗುವುದು, ಬೆಳಗ್ಗೆ ಲೇಟಾಗಿ ಏಳುವ ಅಭ್ಯಾಸವನ್ನು ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರು ರಜಾ ದಿನಗಳಲ್ಲಿ ಮಧ್ಯಾಹ್ನ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಆದ್ರೆ ಈ ರೀತಿ ನಿದ್ದೆ ಮಾಡುವುದು ಮಧುಮೇಹ ಮತ್ತು ಹೃದಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಜತೆಗೆ ಇದು ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ.

Bed Exercises : ವ್ಯಾಯಾಮಕ್ಕಾಗಿ ಏಳಲು ಸೋಮಾರಿತನವೇ? ಹಾಸಿಗೆಯಲ್ಲೇ ಮಾಡಿ ವರ್ಕೌಟ್!

ಬೆಳಗ್ಗೆ ತಡವಾಗಿ ಬ್ರೇಕ್‌ಫಾಸ್ಟ್ ಮಾಡಬಾರದು
ದಿನದ ಆರಂಭಕ್ಕೆ ಉಪಹಾರವು ತುಂಬಾ ಮುಖ್ಯವಾಗಿದ. ಆದರೆ ತೂಕ ಕಳೆದುಕೊಳ್ಳಲೆಂದು ಕೆಲವೊಬ್ಬರು ಬೆಳಗ್ಗಿನ ಬ್ರೇಕ್‌ಫಾಸ್ಟ್‌ (Breakfast)ನ್ನೇ  ಬಿಟ್ಟು ಬಿಡುತ್ತಾರೆ. ಅಥವಾ ಬೆಳಗ್ಗೆ ತಡವಾಗಿ ಎದ್ದು ಬೆಳಗ್ಗಿನ ಉಪಾಹಾರ ಮತ್ತು ಮಧ್ಯಾಹ್ನದ ಊಟವನ್ನು ಒಟ್ಟಿಗೆ ಮಾಡುತ್ತಾರೆ. ಆದರೆ ಈ ರೀತಿ ಬೆಳಗ್ಗೆ ತಡವಾಗಿ ಬ್ರೇಕ್ ಫಾಸ್ಟ್ ಮಾಡುವ ಅಭ್ಯಾಸ ಒಳ್ಳೆಯದಲ್ಲ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಬೆಳಗ್ಗಿನ ಉಪಾಹಾರ ಸರಿಯಾದ ಸಮಯಕ್ಕೆ ಮಾಡುವುದರಿಂದ ಚಯಾಪಚಯ ಕ್ರಿಯೆ ಸರಿಯಾಗಿ ಆಗುತ್ತದೆ. ಬೆಳಗ್ಗಿನ ಉಪಹಾರವು ದೇಹದಲ್ಲಿನ ಒತ್ತಡದ ಹಾರ್ಮೋನುಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ದಿನವಿಡೀ ಎನರ್ಜೆಟಿಕ್ ಆಗಿರಲು ಸಹಾಯ ಮಾಡುತ್ತದೆ.

ಎದ್ದ ಕೂಡಲೇ ಮೊಬೈಲ್ ಬಳಸಬಾರದು
ಇವತ್ತಿನ ದಿನಗಳಲ್ಲಿ ಹೆಚ್ಚಿನವರ ಅಭ್ಯಾಸ ಬೆಳಗ್ಗೆದ್ದು ಹಾಸಿಗೆಯಲ್ಲೇ ಮಲಗಿ ಗಂಟೆಗಟ್ಟಲೆ ಹೊತ್ತು ಮೊಬೈಲ್ (Mobile) ಬಳಸುವುದು. ಇದು ದಿನವನ್ನು ಆರಂಭಿಸುವ ತಪ್ಪಾದ ಅಭ್ಯಾಸ. ಯಾಕೆಂದರೆ ಮೊಬೈಲ್‌ನಲ್ಲಿ ನೋಡುವ ವಿಷಯಗಳಿಂದ ನೀವು ಹೆಚ್ಚು ಒತ್ತಡಕ್ಕೊಳಗಾಗುತ್ತೀರಿ. ಬ್ರೇಕ್‌ಫಾಸ್ಟ್ ಮಾಡುವಾಗಲೂ ಮೊಬೈಲ್ ಬಳಸುವ ಅಭ್ಯಾಸ ಒಳ್ಳೆಯದಲ್ಲ.

Morning Routine: ಬೆಳಗ್ಗೆದ್ದ ಕೂಡ್ಲೇ ಇದ್ಯಾವ್ದನ್ನೂ ನೋಡ್ಬೇಡಿ, ದುರದೃಷ್ಟ ಬೆನ್ನು ಹತ್ತಬಹುದು

ಬೆಳಗ್ಗೆದ್ದು ಬ್ರೆಡ್ ತಿನ್ನುವುದು ಸರಿಯಲ್ಲ
ಬೆಳಗ್ಗೆ ಒಂದು ಸ್ಲೈಸ್ ಬ್ರೆಡ್ (Bread) ಅಥವಾ ಸ್ವಲ್ಪ ಟೋಸ್ಟ್ ಅನ್ನು ತಿನ್ನುವುದು ತುಂಬಾ ಸುಲಭ. ಕಾಲೇಜ್, ಆಫೀಸ್ ಗೆ ಲೇಟಾಯ್ತು ಎಂದು ಹೆಚ್ಚಿನವರು ಇದನ್ನೇ ಬ್ರೇಕ್ ಫಾಸ್ಟ್ ಆಗಿ ತಿಂದು ಹೋಗುತ್ತಾರೆ. ಆದರೆ ಇವುಗಳು ಸರಿಯಾದ ಕಾರ್ಬೋಹೈಡ್ರೇಟ್‌ಗಳಲ್ಲ ಮತ್ತು ಅವು ನಿಮ್ಮ ತೂಕವನ್ನು ಹೆಚ್ಚಿಸುತ್ತವೆ. ಇದರ ಬದಲಿಗೆ ಓಟ್ ಮೀಲ್ ಅಥವಾ ಹಣ್ಣುಗಳನ್ನು ತಿನ್ನುವುದು ಹೆಚ್ಚು ಪೌಷ್ಢಿಕಾಂಶವನ್ನು ನೀಡುತ್ತದೆ.

ಬೆಳಗ್ಗೆದ್ದು ಧ್ಯಾನ ಮಾಡಿ/ ಹೆಚ್ಚು ನೀರು ಕುಡಿಯಿರಿ
ಬೆಳಗ್ಗೆದ್ದು ಧ್ಯಾನ ಮಾಡಲು ಪ್ರಯತ್ನಿಸಿ. ಇದು ನಿಮ್ಮ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಹೆಚ್ಚಳದಂತಹಾ ಸಮಸ್ಯೆಯನ್ನು ಸಹ ಇಲ್ಲವಾಗಿಸುತ್ತದೆ. ಬೆಳಗ್ಗೆದ್ದು ಮೊದಲಿಗೆ ಕಾಫಿ, ಟೀ ಸೇವಿಸುವ ಬದಲು ಬಿಸಿ ನೀರು ಕುಡಿಯಿರಿ. ಇದು ನಿಮ್ಮ ದೇಹದ ಆರೋಗ್ಯವನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ.

Follow Us:
Download App:
  • android
  • ios