ಋತು ಬದಲಾದಂತೆ ಆರೋಗ್ಯ ಸಮಸ್ಯೆಯಲ್ಲೂ ಬದಲಾವಣೆ ನೋಡ್ಬಹುದು. ಮಳೆಗಾಲದಲ್ಲಿ ಸೋಂಕಿನ ಸಮಸ್ಯೆ ಹೆಚ್ಚು. ಜ್ವರ, ನೆಗಡಿ,ಗಂಟಲು ನೋವು ಹೀಗೆ ಬೇರೆ ಬೇರೆ ಸಮಸ್ಯೆಗಳಿಂದ ಜನರು ಬಳಲ್ತಾರೆ. ಅದ್ರಲ್ಲಿ ಕಿವಿ ಸೋಂಕು ಕೂಡ ಸೇರಿದೆ.
ಮಳೆಗಾಲ (Rainy Season) ಶುರುವಾಗಿದೆ. ಮಳೆಗಾಲದಲ್ಲಿ ಹಲವು ರೀತಿಯ ಸೋಂಕು (Infection) ಗಳು ಹರಡುವ ಅಪಾಯವಿದೆ. ದುರ್ಬಲ ರೋಗನಿರೋಧಕ ಶಕ್ತಿಯಿಂದಾಗಿ ಜನರಿಗೆ ಕೆಮ್ಮು, ಶೀತ, ಜ್ವರ, ಗಂಟಲು ನೋವು ಸೇರಿದಂತೆ ಅನೇಕ ರೀತಿಯ ವೈರಲ್ ಸೋಂಕುಗಳು ಕಾಣಿಸಿಕೊಳ್ಳುತ್ತದೆ. ತಜ್ಞರ ಪ್ರಕಾರ,ಮಳೆಗಾಲದಲ್ಲಿ ಚರ್ಮ, ಕಣ್ಣು ಮತ್ತು ಕಿವಿಗೆ ಸಂಬಂಧಿಸಿದ ಸಮಸ್ಯೆಗಳೂ ಕಾಡುವುದಿದೆ. ಈ ಸಮಸ್ಯೆಗಳನ್ನು ತಪ್ಪಿಸಲು ಈ ಋತುವಿನಲ್ಲಿ ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಹಾಗೆಯೇ ಆರೋಗ್ಯ (Health) ದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಹಾಗಾದರೆ ಮಳೆಗಾಲದಲ್ಲಿ ನಿಮ್ಮ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ನಾವು ಹೇಳ್ತೇವೆ. ಅದ್ರಲ್ಲೂ ವಿಶೇಷವಾಗಿ ಕಿವಿ ಸಮಸ್ಯೆ ಬರದಂತೆ ಏನು ಮಾಡ್ಬೇಕು ಎಂಬುದನ್ನು ಹೇಳ್ತೇವೆ.
ಮಳೆಗಾಲದಲ್ಲಿ ಕಿವಿ ರಕ್ಷಣೆ ಹೀಗಿರಲಿ :
ಮೊದಲೇ ಹೇಳಿದಂತೆ ಮಳೆಗಾಲದಲ್ಲಿ ಕಿವಿ ಸೋಂಕು ಕಾಣಿಸಿಕೊಳ್ಳುತ್ತದೆ. ಕಿವಿಯಲ್ಲಿ ಕಾಣಿಸಿಕೊಳ್ಳುವ ಸೋಂಕಿನ ಲಕ್ಷಣವೇನು ಗೊತ್ತಾ ? :
1. ಕಿವಿಯಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.
2. ಕಿವಿಯ ಹೊರ ಭಾಗ ಕೆಂಪಾಗುತ್ತದೆ.
3. ಕಿವಿಯೊಳಗೆ ವಿಪರೀತ ತುರಿಕೆ ಕಾಣಿಸಿಕೊಳ್ಳುತ್ತದೆ.
4. ಹಾಗೆಯೇ ಕಿವಿ ಕಟ್ಟಿದ ಅನುಭವವಾಗುತ್ತದೆ. ಹೊರಗಿನ ಶಬ್ಧಗಳು ಸರಿಯಾಗಿ ಕೇಳಿಸುವುದಿಲ್ಲ.
5. ಸದಾ ಕಿವಿ ಭಾರವಾದಂತ ಅನುಭವವಾಗುತ್ತದೆ.
6. ಕಿವಿಯಿಂದ ಬಿಳಿ, ಹಳದಿ ಅಥವಾ ಯಾವುದೇ ಇತರ ಬಣ್ಣದ ಕೀವು ಹೊರಗೆ ಬರುತ್ತದೆ.
ಗ್ಯಾಸ್ ಗೀಸರ್ ಬಳಸೋ ಮುನ್ನ ಎಚ್ಚರ, ಮಾರಣಾಂತಿಕ ಕಾಯಿಲೆನೂ ಬರುತ್ತೆ !
ಕಿವಿಯ ಆರೈಕೆ ಹೀಗಿರಲಿ :
ಕಿವಿಯಲ್ಲಿ ಕಾಣಿಸಿಕೊಳ್ಳುವ ನೋವು ಅನೇಕರಿಗೆ ಜ್ವರ ತರಿಸುತ್ತದೆ. ಹಾಗಾಗಿ ಮಳೆಗಾಲದಲ್ಲಿ ಕಿವಿಯ ಬಗ್ಗೆ ವಿಶೇಷ ಆರೈಕೆ ಅಗತ್ಯ.
1. ಸ್ನಾನ ಮಾಡುವಾಗ ಕಿವಿಗೆ ಹತ್ತಿ ಹಾಕಿಕೊಳ್ಳಿ. ಇದು ಕಿವಿಯೊಳಗೆ ನೀರು ಹೋಗದಂತೆ ತಡೆಯುತ್ತದೆ.
2. ಕಿವಿ ಸ್ವಚ್ಛತೆ ಹೆಸರಿನಲ್ಲಿ ಯಾವುದೇ ಕಡ್ಡಿ ಅಥವಾ ವಸ್ತುವನ್ನು ಹಾಕ್ಬೇಡಿ. ಇದು ಕಿವಿಯ ಚರ್ಮಕ್ಕೆ ಗಾಯ ಮಾಡುತ್ತದೆ. ಇದ್ರಿಂದ ಸೋಂಕು ಹರಡುತ್ತದೆ.
3. ಇದಲ್ಲದೆ ಏರ್ ಫೋನ್ ಬಳಕೆಯನ್ನು ಕಡಿಮೆ ಮಾಡಿ. ಇತ್ತೀಚಿನ ದಿನಗಳಲ್ಲಿ ಏರ್ ಫೋನ್ ಬಳಕೆ ಹೆಚ್ಚಾಗಿದೆ. ಹಾಡು ಕೇಳಲು ಹಾಗೂ ಮಾತನಾಡಲು ಅದನ್ನು ಬಳಸುತ್ತಾರೆ. ದಿನದ 10 ಗಂಟೆ ಏರ್ ಫೋನ್ ಕಿವಿಯಲ್ಲಿರುತ್ತದೆ. ಕಿವಿಯೊಳಗೆ ಸರಿಯಾಗಿ ಗಾಳಿಯಾಡದೆ ಸಮಸ್ಯೆ ಕಾಡುತ್ತದೆ.
4. ಯಾವುದೇ ಕಾರಣಕ್ಕೂ ನಿಮ್ಮ ಇಯರ್ ಫೋನ್ ಅನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡಿ ಅಥವಾ ಬೇರೆಯವರ ಇಯರ್ ಫೋನ್ ಬಳಸಬೇಡಿ.
5. ಮಳೆಗಾಲದಲ್ಲಿ ಕಿವಿ ತೇವದಿಂದ ಕೂಡಿರಬಾರದು. ಕಿವಿ ಒಣಗಿರಬೇಕು. ಹಾಗಾಗಿ ಕಿವಿಗಳನ್ನು ಸ್ವಚ್ಛಗೊಳಿಸಲು ಹತ್ತಿ ಬಟ್ಟೆಯನ್ನು ಬಳಸಿ.
6. ಯಾವುದೇ ರೀತಿಯ ಸೋಂಕನ್ನು ತಪ್ಪಿಸಲು ಕಾಲಕಾಲಕ್ಕೆ ಇಯರ್ ಫೋನ್‌ಗಳನ್ನು ಸೋಂಕು ರಹಿತಗೊಳಿಸುತ್ತಿರಿ.
7. ಕುತ್ತಿಗೆಯ ಬಗ್ಗೆಯೂ ಕಾಳಜಿ ವಹಿಸಿ. ಕೆಲವೊಮ್ಮೆ ಗಂಟಲು ನೋವು ಅಥವಾ ಕತ್ತು ನೋವು ಕಾಣಿಸಿಕೊಳ್ಳುತ್ತದೆ. ವಾಸ್ತವದಲ್ಲಿ ಇದು ಗಂಟಲು ಅಥವಾ ಕುತ್ತಿಗೆ ಸಮಸ್ಯೆಯಿಂದ ಕಾಣಿಸಿಕೊಂಡಿರುವುದಿಲ್ಲ. ಇದಕ್ಕೆ ಕಿವಿ ಕಾರಣವಾಗಿರುತ್ತದೆ. ಅನೇಕರಿಗೆ ಕಿವಿಯಲ್ಲಿ ಸೋಂಕಾದಾಗ ಗಂಟಲು ನೋವು ಕಾಣಿಸಿಕೊಳ್ಳುತ್ತದೆ.
ಮಳೆಗಾಲದಲ್ಲಿ ಅಪ್ಪಿತಪ್ಪಿಯೂ ಈ ತರಕಾರಿ ತಿನ್ಬೇಡಿ
ಮಳೆಗಾಲದಲ್ಲಿ ಆಹಾರ ಹೀಗಿರಲಿ :
ಮಳೆಗಾಲದಲ್ಲಿ ಮಳೆಯಲ್ಲಿ ಒದ್ದೆಯಾಗುವುದರಿಂದ ನೆಗಡಿ ಮತ್ತು ಗಂಟಲು ನೋವು ಕೂಡ ಉಂಟಾಗುತ್ತದೆ. ವೈರಲ್ ಸೋಂಕು ಕಿವಿಗಳ ಮೇಲೂ ಪರಿಣಾಮ ಬೀರಬಹುದು. ಕಿವಿ ನೋವು ಮತ್ತು ಸೋಂಕು ಸಂಭವಿಸಬಹುದು. ಹಾಗಾಗಿ ಮಳೆಗಾಲದಲ್ಲಿ ತಣ್ಣನೆಯ ಆಹಾರವನ್ನು ಸೇವಿಸಬೇಡಿ. ಬೆಚ್ಚಗಿ ಆಹಾರವನ್ನು ತೆಗೆದುಕೊಳ್ಳಿ. ನೀರನ್ನು ಕಾಯಿಸಿ ಆರಿಸಿ ಕುಡಿಯುವುದು ಒಳ್ಳೆಯದು. ಶೀತ ಕಾಣಿಸಿಕೊಂಡರೆ ಅಥವಾ ಗಂಟಲು ನೋಯುತ್ತಿದ್ದರೆ ಶೀಘ್ರದಲ್ಲೇ ರೋಗಕ್ಕೆ ಚಿಕಿತ್ಸೆ ಪಡೆಯಿರಿ.
