Ballari ಉಚಿತ ಆರೋಗ್ಯ ಮೇಳಕ್ಕೆ ಶ್ರೀ ರಾಮುಲು ಚಾಲನೆ
- 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ
- ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ ಉಚಿತ ಆರೋಗ್ಯ ಮೇಳ
- ಆರೋಗ್ಯಕರ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರು ಶ್ರಮಿಸೋಣ
ವರದಿ : ನರಸಿಂಹ ಮೂರ್ತಿ ಕುಲಕರ್ಣಿ,
ಬಳ್ಳಾರಿ (ಏ.23): ಕೆಲಸದ ಒತ್ತಡದಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುತ್ತಿಲ್ಲ. ಕೊರೊನಾ ಬಂದ ಮೇಲೆ ಯಾವಾಗ ಯಾರ ಅರೋಗ್ಯ ಕೈಕೊಡ್ತದೆಯೋ ಗೊತ್ತಿಲ್ಲ ಹೀಗಾಗಿ ಪ್ರತಿಯೊಬ್ಬರೂ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕಿದೆ. ಆರೋಗ್ಯಕರ ಭಾರತ ಹಾಗೂ ಕರ್ನಾಟಕ ನಿರ್ಮಾಣವೇ ಪ್ರತಿಯೊಬ್ಬರ ಗುರಿಯಾಗಬೇಕಿದೆ ಎನ್ನುವ ಧ್ಯೇಯವಾಕ್ಯವನ್ನು ಇಟ್ಟುಕೊಂಡು ಬಳ್ಳಾರಿಯಲ್ಲಿಂದು ಆರೋಗ್ಯ ಮೇಳವನ್ನು ಆಯೋಜನೆ ಮಾಡಲಾಗಿತ್ತು..
ಆರೋಗ್ಯದ ಕಡೆ ಹೆಚ್ಚು ಗಮನಹರಿಸಿ : ಶ್ರೀರಾಮುಲು
ಸದ್ಯ ದಿನಮಾನಗಳ ಆರೋಗ್ಯ ಮೇಳಗಳು ಪ್ರಮುಖವಾಗಿದ್ದು ಜನರು ಇಂತಹ ಮೇಳಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವುದರ ಮೂಲಕ ತಮ್ಮ ಉತ್ತಮ ಆರೋಗ್ಯ ರೂಪಿಸಿಕೊಳ್ಳಲು ಇದೊಂದು ಉತ್ತಮ ಹೆಜ್ಜೆ ಎಂದು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ಶ್ರೀ ರಾಮುಲು ಅವರು ಹೇಳಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ 75ನೇ ವರ್ಷದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನಡೆದ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ತಾಲೂಕು ಮಟ್ಟದ ಉಚಿತ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
CBSE SYLLABUS 2022-23 ಪಠ್ಯಕ್ರಮದಲ್ಲಿ ಸಿಬಿಎಸ್‌ಸಿಯಿಂದ ಭಾರೀ ಬದಲಾವಣೆ
ನವಭಾರತ ನಿರ್ಮಾಣ ನಮ್ಮ ಕನಸಾಗಿದ್ದು, ಅದು ನಿಜ ಅಗಬೇಕೆಂದರೆ ಮೊದಲು ಸದೃಢ ಭಾರತದ ನಿರ್ಮಾಣ ಅಗಬೇಕು. ಸದೃಢ ಭಾರತ ನಿರ್ಮಾಣವಾಗಲು ಮೊದಲು ಆಯುಷ್ಮಾನ್ ಭಾರತ, ಆರೋಗ್ಯಕರ ಕರ್ನಾಟಕ ನಿರ್ಮಾಣ ಬಹುಮುಖ್ಯವಾಗಿದೆ. ಇದು ಪ್ರಧಾನಿಯವರ ನಂಬಿಕೆ ಯಾದ್ದರಿಂದ ಆರೋಗ್ಯ ವಲಯಕ್ಕೆ ಹಿಂದೆಂದೂ ನೀಡದ ಮಹತ್ವ ಬಿಜೆಪಿ ಸರ್ಕಾರ ನೀಡುತ್ತಲಿದೆ ಎಂದು ಹೇಳಿದರು.
ಕೈಗೆಟುಕುವ ದರದಲ್ಲಿ ಚಿಕಿತ್ಸೆ: ಇನ್ನೂ ಸದ್ಯ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಕೈಗೆಟಕುವ ದರದಲ್ಲಿ ಗುಣಮಟ್ಟ ಆರೋಗ್ಯ ಸೇವೆ ಒದಗಿಸುತ್ತಿವೆ. ಮನುಷ್ಯನಿಗೆ ಜೀವನದಲ್ಲಿ ಎರಡು ಅಂಶಗಳು ಅತಿ ಅವಶ್ಯಕ ಒಂದು ಆಹಾರ ಮತ್ತೊಂದು ಆರೋಗ್ಯ.. ಆಹಾರದಲ್ಲಿ ಏನೇ ವ್ಯತ್ಯಾಸ ಆದರೂ ಆರೋಗ್ಯ ಕುಂಠಿತಗೊಳ್ಳುತ್ತದೆ ಅದ್ದರಿಂದ ಆಹಾರ ಭದ್ರತೆ ಮೂಲಕ ದುಡಿಯುವ ಕೈಗಳಿಗೆ ಶಕ್ತಿ ತುಂಬಿಸೋ ಕೆಲಸ ಸರ್ಕಾರ ಮಾಡುತ್ತಿದೆ. ವಾಸ್ತವದಲ್ಲಿ ದೊಡ್ಡ ಸವಾಲು ಎಂದರೆ ಶ್ರೀಮಂತರು ಆರೋಗ್ಯ ಸರಿ ಇಲ್ಲದಿದ್ದಲ್ಲಿ ದೊಡ್ಡ ದೊಡ್ಡ ಆಸ್ಪತ್ರೆಗೆ ಹೋಗಿ ಉತ್ತಮ ಚಿಕಿತ್ಸೆಯನ್ನು ಪಡೆಯುತ್ತಾರೆ, ಆದರೆ ಬಡವರು ದೊಡ್ಡ ಆಸ್ಪತ್ರೆಗೆ ಹೋಗಿ ಬರುವುದೇ ಒಂದು ದೊಡ್ಡ ಸವಾಲಾಗಿತ್ತು. ಆದ್ರೇ ಇವತ್ತಿನ ಪರಿಸ್ಥಿತಿ ಬದಲಾಗಿದೆ. ಕೈಗೆಟಕುವ ದರದಲ್ಲಿ ಗುಣಮಟ್ಟ ಆರೋಗ್ಯ ಸೇವೆಗಳನ್ನ ಒದಗಿಸುವ ಕೆಲಸ ಬಿಜೆಪಿ ಸರ್ಕಾರ ವಿವಿಧ ಯೋಜನೆಗಳ ಮಾಡುತ್ತಿದೆ ಇದರ ಸದ್ಭಳಕೆಯಾಗಬೇಕಿದೆ.
DAVANAGERE JOB FAIR ಧರ್ಮ ಮನುಷ್ಯನಿಗೆ ಇರಬೇಕು ಧರ್ಮಕ್ಕಾಗಿ ಮನುಷ್ಯ ಅಲ್ಲ SIDDARAMAIAH
ಸರ್ಕಾರದ ಯೋಜನೆ ಸದ್ಭಳಕೆ ಮಾಡಿಕೊಳ್ಳಿ: ಆಯುಷ್ಮಾನ್ ಭಾರತ್, ಜನೌಷಧಿ ಮಳಿಗೆಗಳು, ಇವೆಲ್ಲದರ ಗುರಿ ಉತ್ತಮ ಆರೋಗ್ಯ ಸೇವೆಯಾಗಿದೆ. ಕೈಗೆಟುಕುವ ದರಗಳಲ್ಲಿ ಲಭ್ಯವಿರೋ ಯೋಜನೆ ಬಳಸೋ ಮೂಲಕ ಪ್ರತಿಯೊಬ್ಬರೂ ಆರೋಗ್ಯವಂತರಾಗಬೇಕಿದೆ. ಉತ್ತಮ ವೈದ್ಯಕೀಯ ಸೌಲಭ್ಯಗಳನ್ನ ಸಿಟಿಗಳಿಂದ ಹಳ್ಳಿಯ ಮಟ್ಟಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳನ್ನ ರೂಪಿಸಲಾಗುತ್ತಿದೆ.ಈ ವ್ಯವಸ್ಥೆಗಳ ಸಂಪೂರ್ಣ ಬಳಕೆ ಮಾಡಿಕೊಂಡು ಆರೋಗ್ಯಕರ ಭಾರತ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸೋಣ ಎನ್ನುವ ಘೋಷ ವಾಕ್ಯದೊಂದಿ ಅರೋಗ್ಯ ಮೇಳವನ್ನು ಮಾಡಲಾಯಿತು. ಮೇಳದಲ್ಲಿ ಮೂವತ್ತಕ್ಕೂ ಹೆಚ್ಚು ಮಳಿಗೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಲಾಯಿತು.