ನಾಲ್ಕೈದು ಜನರ ಮಧ್ಯೆ ಸುಂದರವಾಗಿ ಕಾಣ್ಬೇಕೆಂಬ ಕನಸನ್ನು ಹುಡುಗ್ರೂ ಕಾಣ್ತಾರೆ. ಆದ್ರೆ ಕೆಲವೊಂದು ಸಮಸ್ಯೆ ಅವರ ಕನಸಿಗೆ ಅಡ್ಡಿಯಾಗುತ್ತೆ. ಅದ್ರಲ್ಲಿ ಹಣೆ ಸುಕ್ಕು ಕೂಡ ಒಂದು. ವಯಸ್ಸಾದಂತೆ ಕಾಣುವು ಈ ನೆರಿಗೆ ಸಮಸ್ಯೆಗೆ ಸುಲಭ ಮದ್ದು ಇಲ್ಲಿದೆ.
Men Skin Care Tips: ಹುಡುಗಿ (Girl) ಯರ ಜೊತೆ ಹುಡುಗ್ರೂ ಸೌಂದರ್ಯ (Beauty) ಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಸದಾ ಫಿಟ್ (Fit) ಆಗಿ ಕಾಣ್ಬೇಕೆನ್ನುವ ಕಾರಣಕ್ಕೆ ಜಿಮ್ (Gym ) ನಲ್ಲಿ ಬೆವರಿಳಿಸ್ತಾರೆ. ಚೆಂದದ ಬಟ್ಟೆ ಖರೀದಿಸ್ತಾರೆ. ಹಾಗೆ ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ಮೆನ್ಸ್ ಕ್ರೀಂ ಪ್ರಯೋಗ ಮಾಡ್ತಾರೆ. ನೋಡಿದ ತಕ್ಷಣ ಸೆಳೆಯೋದು ಮುಖ. ಹಾಗಾಗಿಯೇ ಮುಖ ಚೆನ್ನಾಗಿರಬೇಕು ಎನ್ನುವವರಿದ್ದಾರೆ. ಅನೇಕ ಬಾರಿ ನಾವು ಬಯಸದೆ ಮುಖದ ಮೇಲೆ ಕಲೆ, ಸುಕ್ಕು ಕಾಣಿಸಿಕೊಳ್ಳುತ್ತದೆ. ಹಾಗೆಯೇ ಹಣೆ ಮೇಲೆ ನೆರಿಗೆ ಬೀಳುತ್ತದೆ. ಈ ನೆರಿಗೆ ಅವರ ಸೌಂದರ್ಯ ಹಾಳು ಮಾಡುವುದಲ್ಲದೆ ವಯಸ್ಸು ಹೆಚ್ಚಾದಂತೆ ಕಾಣುತ್ತದೆ. ಇದಕ್ಕೆ ನೀವು ಮಾರುಕಟ್ಟೆಯಲ್ಲಿ ಸಿಗುವ ಸೌಂದರ್ಯ ವರ್ದಕ ಬಳಸಿದ್ರೆ ಪ್ರಯೋಜನವಿಲ್ಲ. ಹಣೆಯ ಸುಕ್ಕುಗಳನ್ನು ಹೋಗಲಾಡಿಸಲು ಪುರುಷರು ಮನೆಯಲ್ಲೇ ಕೆಲ ಟ್ರಿಕ್ಸ್ ಬಳಸಬೇಕು. ಇದ್ರಿಂದ ಸುಲಭವಾಗಿ ಸುಕ್ಕನ್ನು ತೆಗೆದುಹಾಕ್ಬಹುದು.
ಸೂರ್ಯನ ಬೆಳಕಿನಿಂದ ದೂರವಿರಿ : ಸಾಮಾನ್ಯವಾಗಿ ಮಹಿಳೆಯರಿಗೆ ಹೋಲಿಸಿದ್ರೆ ಪುರುಷರು ಹೆಚ್ಚು ಬಿಸಿಲಿನಲ್ಲಿರ್ತಾರೆ. ಕೆಲಸದ ಕಾರಣದಿಂದಾಗಿ ಅವರು ತಮ್ಮ ಸೌಂದರ್ಯವನ್ನು ಮರೆಯುತ್ತಾರೆ. ಇದರಿಂದ ಅವರ ತ್ವಚೆ ತುಂಬಾ ನಿರ್ಜೀವವಾಗಿ ಕಾಣುತ್ತದೆ. ಹಣೆ ಮೇಲೆ ಸುಕ್ಕು ಕಾಣಿಸಿಬಾರದೆಂದ್ರೆ ಸೂರ್ಯನ ಕಿರಣಗಳಿಂದ ದೂರವಿರಬೇಕು. ಪುರುಷರು ಸೂರ್ಯನ ನೇರಳಾತೀತ ಕಿರಣ ಬೀಳದಂತೆ ನೋಡಿಕೊಳ್ಳಬೇಕು. ಬಿಸಿಲಿನಲ್ಲಿ ಕೆಲಸ ಮಾಡ್ಬೇಕು ಎನ್ನುವವರು ಉತ್ತಮ ಸನ್‌ಸ್ಕ್ರೀನ್ ಅನ್ನು ಬಳಸಬೇಕು. ಪ್ರತಿ ಬಾರಿ ಹೊರಗೆ ಹೋಗುವಾಗ್ಲೂ ಸನ್ ಸ್ಕ್ರೀನ್ ಬಳಸಲು ಮರೆಯಬಾರದು.
ಕೆಮಿಕಲ್ ಬದಲು ಈ ನ್ಯಾಚುರಲ್ ಹೇರ್ ಕಲರ್ ಟ್ರೈ ಮಾಡಿ ನೋಡಿ
ಒತ್ತಡಕ್ಕೆ ಹಾಕಿ ಬ್ರೇಕ್ : ಬರೀ ಸೂರ್ಯನ ಕಿರಣ ಮಾತ್ರವಲ್ಲ ಮಾನಸಿಕ ಸಮಸ್ಯೆ ಕೂಡ ಇದಕ್ಕೆ ಕಾರಣವಾಗುತ್ತದೆ. ಮನಸ್ಸಿನಲ್ಲಿರುವ ಕೆಲಸದ ಒತ್ತಡ ಹಣೆ ಮೇಲೆ ನೆರಿಗೆ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಪ್ರತಿಯೊಬ್ಬ ವ್ಯಕ್ತಿಯೂ ಒತ್ತಡದಿಂದ ಹೊರಗೆ ಬರಲು ಪ್ರಯತ್ನಿಸಬೇಕು. ಒತ್ತಡವನ್ನು ಕಡಿಮೆ ಮಾಡಲು ನೀವು ನಿಯಮಿತವಾಗಿ ಧ್ಯಾನ ಮಾಡಬೇಕು. ಯೋಗಾಸನಗಳನ್ನು ಮಾಡುವುದ್ರಿಂದಲೂ ಒತ್ತಡವನ್ನು ಕಡಿಮೆ ಮಾಡಬಹುದು. ಹಾಗೆಯೇ ಇದಕ್ಕೆ ಓರ್ಮಾ ಚಿಕಿತ್ಸೆ ಕೂಡ ಪಡೆಯಬಹುದು. ಸಾಕಷ್ಟು ನಿದ್ರೆಯ ಅವಶ್ಯಕತೆಯಿರುತ್ತದೆ. ಅನೇಕ ಬಾರಿ ನಿದ್ರೆ ಕಡಿಮೆಯಾದ್ರೆ ಒತ್ತಡ ಕಾಡಲು ಶುರುವಾಗುತ್ತದೆ. ಹಾಗಾಗಿ ದಿನಕ್ಕೆ 6 -7 ಗಂಟೆ ನಿದ್ರೆ ಮಾಡಬೇಕು.
ದೇಹದಲ್ಲಿ ನೀರಿನ ಅಂಶ : ಶುಷ್ಕ ಹಾಗೂ ಸುಕ್ಕುಗಟ್ಟಿದ ಚರ್ಮ ಹೋಗ್ಬೇಕೆಂದ್ರೆ ಚರ್ಮ ತೇವಾಂಶದಿಂದ ಕೂಡಿರಬೇಕು. ನಿಮ್ಮ ತ್ವಚೆಯು ಚೆನ್ನಾಗಿ ಹೈಡ್ರೀಕರಿಸಲ್ಪಟ್ಟಿದ್ದರೆ ಹಣೆಯ ಮೇಲೆ ಸುಕ್ಕುಗಳು ಕಾಣಿಸಿಕೊಳ್ಳುವುದಿಲ್ಲ. ಬೇಸಿಗೆಯಲ್ಲೂ ಚರ್ಮವು ಹೊಳೆಯುತ್ತದ. ಹಾಗಾಗಿ ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು. ಬರೀ ನೀರು ಮಾತ್ರವಲ್ಲ ನೀವು ದ್ರವ ಪದಾರ್ಥವನ್ನೂ ಸೇವನೆ ಮಾಡ್ಬೇಕಾಗುತ್ತದೆ. ನೀರಿನಂಶವಿರುವ ಆಹಾರವನ್ನು ಕೂಡ ನೀವು ಸೇವನೆ ಮಾಡ್ಬಹುದು. ದೇಹಕ್ಕೆ ಸಾಕಷ್ಟು ನೀರು ಸೇರ್ತಿದ್ದಂತೆ ಚರ್ಮ ತೇವಾಂಶ ಪಡೆಯುತ್ತದೆ. ಇದ್ರಿಂದ ಚರ್ಮ ಹೊಳೆಯುವ ಜೊತೆಗೆ ಸುಕ್ಕು ಕಡಿಮೆಯಾಗುತ್ತದೆ.
Fashion Tips : ಸಂದರ್ಶನಕ್ಕೆ ಹೊರಟ್ರಾ? ತೊಡುವ ಬಟ್ಟೆ ಕಡೆ ಇರಲಿ ಗಮನ
ಧೂಮಪಾನದಿಂದ ದೂರವಿರಿ : ತ್ವಚೆ ಮೇಲೆ ತಂಬಾಕು ಅಡ್ಡ ಪರಿಣಾಮ ಬೀರುತ್ತದೆ. ನಿಮ್ಮ ಚರ್ಮದ ಬಗ್ಗೆ ನೀವು ಕಾಳಜಿ ವಹಿಸ್ತೀರಿ ಎಂದಾದ್ರೆ ಧೂಮಪಾನದಿಂದ ದೂರವಿರಬೇಕು. ಧೂಮಪಾನದಿಂದ ತ್ವಚೆಯ ಮೇಲೆ ಸುಕ್ಕುಗಳನ್ನು ಕಾಣಿಸಿಕೊಳ್ಳುವುದಲ್ಲದೆ ಹೃದಯದ ಸಮಸ್ಯೆಗಳು ಮತ್ತು ಇತರ ಕಾಯಿಲೆಗಳ ಅಪಾಯ ನಿಮ್ಮನ್ನು ಕಾಡುತ್ತದೆ.
ಸಮತೋಲಿತ ಆಹಾರವನ್ನು ಸೇವಿಸಿ : ಸುಕ್ಕುಗಳನ್ನು ಹೋಗಲಾಡಿಸಲು ನೀವು ಸಮತೋಲಿತ ಆಹಾರವನ್ನು ಸಹ ಸೇವಿಸಬಹುದು. ಇದಕ್ಕಾಗಿ ನಿಮ್ಮ ಆಹಾರದಲ್ಲಿ ಹೆಚ್ಚು ವಿಟಮಿನ್ ಸಿ ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸೇವಿಸಬೇಕು. ಇದರಿಂದ ನೀವು ಸಾಕಷ್ಟು ಪ್ರಯೋಜನ ಪಡೆಯಬಹುದು. ಹಣೆಯ ಸುಕ್ಕುಗಳನ್ನು ಹೋಗಲಾಡಿಸಲು ಪುರುಷರು ತಮ್ಮ ಆಹಾರದಲ್ಲಿ ಕೊಬ್ಬನ್ನು ಸೇರಿಸಬೇಕು. ವಿಟಮಿನ್ ಸಿ ನಿಮ್ಮ ಚರ್ಮದ ಕಲೆಗಳು ಮತ್ತು ಶುಷ್ಕತೆಯನ್ನು ನಿವಾರಿಸುತ್ತದೆ.
