ನಮ್ಮ ಕೆಲ ಅಭ್ಯಾಸಗಳನ್ನು ಎಷ್ಟು ಮಾಡಿದ್ರೂ ತಿದ್ದೋದು ಕಷ್ಟ. ಪುರುಷರು ಇದ್ರಲ್ಲಿ ಎತ್ತಿದ ಕೈ. ಅವರ ಕೆಲ ಅಭ್ಯಾಸ ಕಿರಕಿರಿಯುಂಟು ಮಾಡೋದಲ್ಲದೆ ಖಾಯಿಲೆಯನ್ನು ಮನೆಯೊಳಗೆ ತರಲು ನೆರವಾಗುತ್ತದೆ.
ಕೊಳಕು (Dirty) ಎಂಬ ವಿಷ್ಯ ಬಂದಾಗ ಮಹಿಳೆ (Woman) ಯರಿಗಿಂತ ಪುರುಷ (Male) ರನ್ನು ಬೊಟ್ಟು ಮಾಡಿ ತೋರಿಸೋದೇ ಹೆಚ್ಚು. ಅನೇಕ ಪುರುಷರು ಸ್ವಚ್ಛತೆ (Clean) ವಿಚಾರದಲ್ಲಿ ಸೋಮಾರಿಗಳಾಗಿರ್ತಾರೆ. ಬ್ಯಾಚ್ಯುಲರ್ (Bachelor) ರೂಮ್ ವಿಷ್ಯ ಬಿಟ್ಬಿಡಿ. ವಿವಾಹಿತ ಪುರುಷರು ಕೂಡ ತಮ್ಮ ಕೆಲಸದಲ್ಲಿ ಸುಧಾರಣೆ ತಂದಿರೋದಿಲ್ಲ. ಪುರುಷರ ಈ ಕೆಟ್ಟ ಅಭ್ಯಾಸಗಳೇ ಅನೇಕ ಬಾರಿ ದಂಪತಿ (Couple) ಮಧ್ಯೆ ಗಲಾಟೆಯಾಗಲು ಕಾರಣವಾಗುತ್ತದೆ. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರೋದು ಒಂದು ವಿಷ್ಯವಾದ್ರೆ ಇನ್ನೊಂದು ಗಂಭೀರ ಸಂಗತಿಯಿದೆ. ಅನೇಕ ಬಾರಿ ಪುರುಷರನ್ನು ಸುಧಾರಿಸಲಾಗದೆ ಮಹಿಳೆಯರು ಸೋತಿರುತ್ತಾರೆ. ಗೆದ್ದೆ ಎಂಬ ಭ್ರಮೆಯಲ್ಲಿ ಪುರುಷರು ತಮ್ಮ ಕೆಲಸ ಮುಂದುವರೆಸಿರುತ್ತಾರೆ. ಆದ್ರೆ ಪುರುಷರ ಈ ಅಭ್ಯಾಸಗಳು ಅವರನ್ನು ಮಾತ್ರವಲ್ಲ ಇಡೀ ಮನೆಯವರು ಹಾಸಿಗೆ ಹಿಡಿಯುವಂತೆ ಮಾಡುತ್ತದೆ. ಅನೇಕ ಅನಾರೋಗ್ಯ (Illness) ಇದ್ರಿಂದ ಶುರುವಾಗುತ್ತದೆ. ಇಂದು ನಾವು ಪುರುಷರು ಯಾವ ತಪ್ಪು ಮಾಡ್ತಾರೆ ಹಾಗೆ ಯಾಕೆ ಅದನ್ನು ಮಾಡ್ಬಾದರು ಎಂಬುದನ್ನು ಹೇಳ್ತೇವೆ.
ಪುರುಷರು ಅಪ್ಪಿತಪ್ಪಿಯೂ ಮಾಡ್ಬಾರದು ಈ ತಪ್ಪು :
ಹೊರಗಿನಿಂದ ನೇರವಾಗಿ ಬೆಡ್ ರೂಮಿ (Bed Room) ಗೆ ಪ್ರವೇಶ : ಕಚೇರಿಯಿಂದ ಇರಬಹುದು ಇಲ್ಲ ಮಾರುಕಟ್ಟೆಗೆ ಹೋಗಿ ಬಂದಿರಬಹುದು, ಮನೆಗೆ ಬರ್ತಿದ್ದಂತೆ ಅನೇಕ ಪುರುಷರು ಬೆಡ್ ರೂಮಿಗೆ ಹೋಗ್ತಾರೆ. ಮಹಿಳೆಯರಲ್ಲಿ ಈ ಅಭ್ಯಾಸ ತುಂಬಾ ಕಡಿಮೆ. ಪುರುಷರು ಮಾತ್ರ ಮಲಗುವ ಕೋಣೆಗೆ ಹೋಗ್ತಾರೆ. ಈ ಕಾರಣದಿಂದಾಗಿ ಅವರು ತಮ್ಮ ಮಲಗುವ ಕೋಣೆಯನ್ನು ಕೊಳಕು ಮಾಡ್ತಾರೆ. ಹೊರಗಿನಿಂದ ನೇರವಾಗಿ ಕೋಣೆಗೆ ಬರುವುದರಿಂದ ಅನೇಕ ಸಾಂಕ್ರಾಮಿಕ ಬ್ಯಾಕ್ಟೀರಿಯಾ (Bacteria) ಕೋಣೆಯನ್ನು ಸೇರುತ್ತದೆ. ಹೊರಗಿನಿಂದ ಬಂದ ನಂತರ ಪ್ರತಿಯೊಬ್ಬರೂ ತಮ್ಮ ಬಟ್ಟೆ ಮತ್ತು ಬೂಟುಗಳನ್ನು ಮಲಗುವ ಕೋಣೆಗೆ ತರಬಾರದು. ಏಕೆಂದರೆ ಅದರಲ್ಲಿ ಹೊರಗಿನ ಅನೇಕ ಸೋಂಕು ಇರಬಹುದು. ಅದು ನಮ್ಮ ಆರೋಗ್ಯವನ್ನು ಹಾಳು ಮಾಡ್ಬಹುದು. ನೀವೂ ಬಟ್ಟೆ, ಸಾಕ್ಸ್, ಶೂ ಬಿಚ್ಚದೆ ನೇರವಾಗಿ ಬೆಡ್ ರೂಮಿಗೆ ಬರ್ತಿದ್ದರೆ ಇಂದಿನಿಂದಲೇ ಈ ಅಭ್ಯಾಸವನ್ನು ಬಿಟ್ಬಡಿ.
Udupi ತಂಬಾಕು ಸೇವನೆ ಅಪಾಯದ ಕುರಿತು ಕಲಾವಿದನಿಂದ ವಿಶಿಷ್ಟ ಜಾಗೃತಿ
ಅದೇ ಬಟ್ಟೆ (Clothes) ಯಲ್ಲಿ ನಿದ್ರೆ : ಬರೀ ಬೆಡ್ ರೂಮಿಗೆ ಹೋಗುವುದಲ್ಲ, ಬಹುತೇಕ ಪುರುಷರು ಹೊರಗಿನಿಂದ ಬಂದ ನಂತ್ರ ಬಟ್ಟೆ ಬದಲಿಸುವುದಿಲ್ಲ. ಅದೇ ಬಟ್ಟೆಯಲ್ಲಿ ದಿನ ಕಳೆಯುತ್ತಾರೆ. ಎಲ್ಲೆಂದರಲ್ಲಿ ಕುಳಿತುಕೊಳ್ತಾರೆ. ಎಲ್ಲೆಂದರಲ್ಲಿ ನಿದ್ರೆ ಮಾಡ್ತಾರೆ. ಇದೇ ಬಟ್ಟೆಯಲ್ಲಿ ರಾತ್ರಿ ಕಳೆಯುವವರಿದ್ದಾರೆ. ಈ ಅಭ್ಯಾಸ ಕೆಟ್ಟದು. ಮೊದಲೇ ಹೇಳಿದಂತೆ ಹೊರಗಿನಿಂದ ಬಂದಾಗ ನಿಮ್ಮ ಬಟ್ಟೆಗಳಲ್ಲಿ ಬ್ಯಾಕ್ಟೀರಿಯಾಗಳು ಸಂಗ್ರಹವಾಗುತ್ತವೆ. ಇದು ಚರ್ಮದ ಸೋಂಕಿ (Infection ) ಗೆ ಕಾರಣವಾಗಬಹುದು. ಹಾಗಾಗಿ ಹೊರಗಿನಿಂದ ಬಂದ ನಂತರ ಅವಶ್ಯಕವಾಗಿ ಬಟ್ಟೆಯನ್ನು ಬದಲಿಸಬೇಕು. ಧರಿಸಿದ್ದ ಬಟ್ಟೆಯನ್ನು ಸ್ವಚ್ಛಗೊಳಿಸಿಯೇ ಇನ್ನೊಮ್ಮೆ ಧರಿಸಬೇಕು.
ಮಕ್ಕಳಿಗೆ ಆರು ತಿಂಗಳ ವರೆಗೆ ಹಾಲುಣಿಸಲೇಬೇಕು ಅನ್ನೋದು ಯಾಕೆ ?
ಹಾಸಿಗೆ ಮೇಲೆಯೇ ನಡೆಯುತ್ತೆ ಎಲ್ಲ ಕೆಲಸ : ಭಾನುವಾರ ಬಂದ್ರೆ ಮನೆ ಪುರುಷರು ಇರೋದು ಬೆಡ್ ಮೇಲೆ. ರಜೆ ದಿನಗಳಲ್ಲಿ ಬಹುತೇಕ ಸಮಯವನ್ನು ಅವರು ಬೆಡ್ ಮೇಲೆಯೇ ಕಳೆಯುತ್ತಾರೆ. ಹಾಸಿಗೆ ಮೇಲೆಯೇ ಊಟ, ತಿಂಡಿಯಾಗಿರುತ್ತದೆ. ಇದು ಕೂಡ ಅತಿ ಕೆಟ್ಟ ಅಭ್ಯಾಸವಾಗಿದೆ. ಶಾಸ್ತ್ರದ ಪ್ರಕಾರ ನೋಡಿದ್ರೂ ಇದು ತಪ್ಪು. ಹಾಸಿಗೆ ಮೇಲೆ ಆಹಾರ ಸೇವನೆ ಮಾಡಿದ್ರೆ ವಾಸ್ತು ದೋಷವುಂಟಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇನ್ನು ಹಾಸಿಗೆ ಮೇಲೆ ಆಹಾರ ಸೇವನೆ ಮಾಡಿದ್ರೆ ಅದು ನಮ್ಮ ಮನಸ್ಸನ್ನು ಗೊಂದಲಗೊಳಿಸುತ್ತದೆ. ಇದಲ್ಲದೆ ಪುರುಷರ ಆರೋಗ್ಯದ ಮೇಲೂ ಇದು ಪರಿಣಾಮ ಬೀರುತ್ತದೆ. ಹಾಗಾಗಿ ಹಾಸಿಗೆ ಮೇಲೆ ಎಂದೂ ಆಹಾರ ಸೇವನೆ ಮಾಡಬೇಡಿ.
