ಗುದನಾಳದಲ್ಲಿ ಸಿಲುಕಿತ್ತು ಸೌತೆಕಾಯಿ, ಬೀಜ ತಿಂದಿದ್ದೆ ಎಂದ ವ್ಯಕ್ತಿ, ದಂಗಾದ ವೈದ್ಯರು!
ತಿಂದ ಆಹಾರ ಗಂಟಲಿನಲ್ಲಿ ಸಿಲುಕಿಕೊಳ್ಳುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬನ ಗುದನಾಳದಲ್ಲಿ ಸೌತೆಕಾಯಿ ಸಿಲುಕಿಕೊಂಡಿತ್ತು. ವೈದ್ಯರು ಈ ಬಗ್ಗೆ ಕೇಳಿದ್ದಕ್ಕೆ ಸೌತೆಕಾಯಿ ಬೀಜ ತಿಂದಿದ್ದೆ ಎಂದಿದ್ದಾನೆ. ವೈದ್ಯರು ದಂಗಾಗಿದ್ದಾರೆ.
ಆಹಾರ ತಿನ್ನುವಾಗ ಸಾಮಾನ್ಯವಾಗಿ ಗಂಟಲಿನಲ್ಲಿ ಸಿಲುಕಿಕೊಳ್ಳುವುದು ಎಲ್ಲರನ್ನೂ ಕಾಡುವ ಸಮಸ್ಯೆ. ಆದರೆ ಈ ವ್ಯಕ್ತಿಯ ಗುದನಾಳದಲ್ಲಿಯೇ ತಿನ್ನೋ ಆಹಾರ ಸಿಲುಕಿಕೊಂಡಿತ್ತು. ಕೊಲಂಬಿಯಾದ ಬಾರಾನೋವಾದಿಂದ ಬಂದ 40 ವರ್ಷದ ವ್ಯಕ್ತಿಯೊಬ್ಬ ತಾನು ವಿಪರೀತ ಹಿಂಬದಿ ನೋವು ಅನುಭವಿಸುತ್ತಿದ್ದು, ನಡೆದಾಡಲು ಕಷ್ಟಪಡುತ್ತಿರುವುದಾಗಿ ಹೇಳಿದ್ದಾನೆ. ವೈದ್ಯರು ಈ ಬಗ್ಗೆ ಪರಿಶೀಲಿಸಿದಾಗ ಗುದನಾಳದಲ್ಲಿ ಸೌತೆಕಾಯಿ ಇರುವುದು ತಿಳಿದುಬಂದಿದೆ. ಈ ಬಗ್ಗೆ ಕೇಳಿದಾಗ ವ್ಯಕ್ತಿ ತಾನು ಹೆಚ್ಚಿನ ಪ್ರಮಾಣದಲ್ಲಿ ಸೌತೆಕಾಯಿ ಸೇವಿಸುತ್ತೇನೆ. ಹೀಗಾಗಿ ಹೊಟ್ಟೆಯಲ್ಲಿ ಸೌತೆಕಾಯಿ ಬೆಳೆದು ಹೀಗಾಗಿರಬಹುದು ಎಂದಿದ್ದಾನೆ. ಆತನ ಮಾತಿಗೆ ವೈದ್ಯರು ದಂಗಾಗಿದ್ದಾರೆ.
ಘಟನೆಯ ವಿವರ ಹೀಗಿದೆ?
ಕೊಲಂಬಿಯಾದ ವ್ಯಕ್ತಿ ಹಲವು ವಾರಗಳಿಂದ ಕಾಲುಗಳಲ್ಲಿ ನೋವನ್ನು (Leg pain) ಅನುಭವಿಸುತ್ತಿದ್ದ. ಕೂರಲು, ಏಳಲು, ನಡೆಯಲು ಹೀಗೆ ಯಾವುದೇ ರೀತಿಯ ಚಟುವಟಿಕೆ ನಡೆಸಲು ಕಷ್ಟವಾಗುತ್ತಿತ್ತು. ಹೀಗಾಗಿ ಆತ ತಕ್ಷಣ ಚಿಕಿತ್ಸೆ (Treatment) ಪಡೆಯಲು ವೈದ್ಯರ ಬಳಿ ಹೋಗಿದ್ದಾನೆ. ವೈದ್ಯರು (Doctor) ಎಕ್ಸ್-ರೇ ಮೂಲಕ ಗುದನಾಳದಲ್ಲಿ ಏನಿದೆ ಎಂಬುದನ್ನು ಪರಿಶೀಲಿಸಿದ್ದಾರೆ.
ಗ್ಯಾಸ್ಟ್ರಿಕ್ ಪ್ರಾಬ್ಲೆಂ: ವ್ಯಕ್ತಿಯ ಗುದನಾಳದಲ್ಲಿತ್ತು 18 ಮೀಟರ್ ಉದ್ದದ ಲಾಡಿಹುಳ
ಈ ಸಂದರ್ಭದಲ್ಲಿ ಸೌತೆಕಾಯಿ ಸಿಲುಕಿ ಹಾಕಿಕೊಂಡಿರುವುದು ಗೋಚರಿಸಿದೆ. ಶಸ್ತ್ರಚಿಕಿತ್ಸೆಯ (Operation) ನಂತರ, ಸೌತೆಕಾಯಿ ತನ್ನ ದೇಹದೊಳಗೆ ಹೇಗೆ ಸಿಲುಕಿಕೊಂಡಿದೆ ಎಂದು ತನಗೆ ತಿಳಿದಿಲ್ಲ ಎಂದು ವ್ಯಕ್ತಿ ಹೇಳಿದನು. ಮಾತ್ರವಲ್ಲ, ಬಹಳಷ್ಟು ಸೌತೆಕಾಯಿಗಳನ್ನು ತಿನ್ನುವ ಕಾರಣ ಸೌತೆಕಾಯಿ (Cucumber) ಬೀಜದಿಂದಾಗಿ ಜೀರ್ಣಾಂಗ ವ್ಯವಸ್ಥೆಯೊಳಗೆ ಸೌತೆಕಾಯಿ ಬೆಳೆದಿರಬಹುದು ಎಂದು ತಿಳಿಸಿದನು. ವೈದ್ಯರು ವ್ಯಕ್ತಿಯ ಬಾಲಿಶ ಹೇಳಿಕೆಗೆ ಪ್ರತಿಕ್ರಿಯಿಸದೆ ಆತನನ್ನು ಮನೆಗೆ ಕಳುಹಿಸಿದರು.
ಗುದನಾಳಕ್ಕೆ ಏರ್ ಕಂಪ್ರೆಸರ್ ಪೈಪ್ ತುರುಕಿದ ಸ್ನೇಹಿತ: ಯುವಕ ಸಾವು
ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ 16 ವರ್ಷದ ಯುವಕನ (Youth) ಗುದನಾಳಕ್ಕೆ ಆತನ ಸ್ನೇಹಿತ ಏರ್ ಕಂಪ್ರೆಸರ್ ಪೈಪ್ ತುರುಕಿದ್ದು ಯುವಕ ಸಾವನ್ನಪ್ಪಿರುವ ಘಟನೆ ನಡೆದಿತ್ತು. ತಾಲೂಕಿನ ಕಡಿಯಲ್ಲಿರುವ ಅಲೋಕ್ ಇಂಡಸ್ಟ್ರೀಸ್ ಆವರಣದಲ್ಲಿ ಘಟನೆ ನಡೆದಿರುವುದಾಗಿ ವರದಿಯಾಗಿತ್ತು. ಮೋಜಿಗಾಗಿ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿದ್ದು, ಯುವಕನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು. ಏರ್ ಕಂಪ್ರೆಸರನ್ನು ಬಲವಂತವಾಗಿ ಗುದನಾಳಕ್ಕೆ ಹಾಕಿದ್ದರಿಂದ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಬಳಿಕ ಯುವಕನನ್ನು ಆಸ್ಪತ್ರೆ ಸಾಗಿಸಲಾಯಿತಾದರೂ ಕೊನೆಯುಸಿರೆಳೆದಿದ್ದಾನೆ.
ಮಹಿಳೆಯ ಗುಪ್ತಾಂಗದಲ್ಲಿ ಸಿಕ್ತು 88 ಪ್ಯಾಕೇಟ್ ಡ್ರಗ್ಸ್, ಹೊರತೆಗೆಯಲು 11 ದಿನ ಬೇಕಾಯ್ತು!
ಗುದನಾಳದಲ್ಲಿ ಹಠಾತ್ ಗಾಳಿಯ ಸ್ಫೋಟದಿಂದಾಗಿ ಆಂತರಿಕ ಗಾಯಗಳಿಂದ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಯುವಕ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯವನಾಗಿದ್ದು, ಅಲೋಕ್ ಇಂಡಸ್ಟ್ರೀಸ್‌ನಲ್ಲಿ ಮರಗೆಲಸ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿತ್ತು. ಗುತ್ತಿಗೆದಾರ ತ್ರಿಲೋಚನ್ ಗೌತಮ್ ಮಾತನಾಡಿದ್ದು ಕಾರ್ಮಿಕರು ಊಟಕ್ಕೆ ಹೋಗುವ ಮೊದಲು ತಮ್ಮ ಬಟ್ಟೆಯಿಂದ ಮರಗೆಲಸದ ಧೂಳನ್ನು ತೆಗೆದುಹಾಕಲು ಏರ್ ಸಕ್ಷನ್ ಪಂಪ್ ಬಳಸುತ್ತಾರೆ" ಎಂದು ತಿಳಿಸಿದ್ದರು. "ಮೃತ ಯುವಕ ಮತ್ತು ಆರೋಪಿ ಕುಲದೀಪ್ ಒಬ್ಬರನ್ನೊಬ್ಬರು ಚುಡಾಯಿಸುವುದನ್ನು ನೋಡಿದ್ದೆ ಮತ್ತು ಅದನ್ನು ನಿಲ್ಲಿಸಿ ಊಟಕ್ಕೆ ಹೋಗುವಂತೆ ಕೇಳಿಕೊಂಡಿದ್ದೆ" ಎಂದುಹೇಳಿದ್ದರು.
ಕೆಲ ಸಮಯದ ಬಳಿಕ ಕುಲದೀಪ್ ಗೌತಮ್ ಬಳಿ ಓಡಿ ಬಂದು ಹುಡುಗನಿಗೆ ಪ್ರಜ್ಞೆ ತಪ್ಪಿದೆ ಎಂದು ಹೇಳಿದ್ದಾನೆ. "ತಮ್ಮ ಗುದನಾಳಕ್ಕೆ ಕಂಪ್ರೆಸರ್ ಪೈಪನ್ನು ಸೇರಿಸುವ ಮೂಲಕ ಒಬ್ಬರನ್ನೊಬ್ಬರು ಚುಡಾಯಿಸುತ್ತಿದ್ದರು ಎಂದು ಕುಲದೀಪ್ ನನಗೆ ಹೇಳಿದರು, ಮೊದಲು ಯವಕ ಕುಲದೀಪ್‌ನ ಗುದನಾಳಕ್ಕೆ ಪೈಪ್ ಸೇರಿಸಲು ಪ್ರಯತ್ನಿಸಿದ್ದ, ನಂತರ ಕುಲದೀಪ್ ಯುವಕನ ಗುದನಾಳಕ್ಕೆ ಪೈಪ್ ಸೇರಿಸಿದ, ಬಳಿಕ ಯುವಕ ಪ್ರಜ್ಞೆ ತಪ್ಪಿದ್ದಾನೆ" ಎಂದು ಗುತ್ತಿಗೆದಾರ ತ್ರಿಲೋಚನ್ ಗೌತಮ್ ತಿಳಿಸಿದ್ದರು