Asianet Suvarna News Asianet Suvarna News

ಗ್ಯಾಸ್ಟ್ರಿಕ್ ಪ್ರಾಬ್ಲೆಂ: ವ್ಯಕ್ತಿಯ ಗುದನಾಳದಲ್ಲಿತ್ತು 18 ಮೀಟರ್ ಉದ್ದದ ಲಾಡಿಹುಳ

ಗ್ಯಾಸ್ಟ್ರಿಕ್ ಪ್ರಾಬ್ಲೆಂ ಅಂತಿದ್ದೋನು ವೈದ್ಯರ ಬಳಿ ಹೋದಾಗ ಶಾಕ್ | ಗುದನಾಳದಲ್ಲಿತ್ತು 18 ಮೀಟರ್ ಉದ್ದದ ಲಾಡಿಹುಳ

Man complaining of extreme flatulence excretes 18 metre long tapeworm after visiting doctor dpl
Author
Bangalore, First Published Mar 25, 2021, 1:30 PM IST

ಬ್ಯಾಂಕಾಕ್(ಮಾ.25): ಬಹಳಷ್ಟು ವೈದ್ಯಕೀಯ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ವಿಚಿತ್ರ ಅನಿಸಿದರೂ ಎಲ್ಲರೂ ಅಚ್ಚರಿಗೊಳಿಸುವಂತ ಬೆಳವಣಿಗೆಗಳಾಗುತ್ತಿರುತ್ತವೆ.

ಇತ್ತೀಚೆಗೆ ಗ್ಯಾಸ್ಟ್ರಿಕ್ ಎಂದು ಬಂದ ವ್ಯಕ್ತಿಯನ್ನು ಪರೀಕ್ಷಿಸಿದ ವೈದ್ಯರು ಶಾಕ್ ಆಗಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಚೀನಾ ಮತ್ತು ಏಷ್ಯಾದ ಇತರ ದೇಶಗಳಿಂದ ಹುಳುಗಳು ಮತ್ತು ಘನ ವಸ್ತುಗಳನ್ನು ರೋಗಿಗಳ ಹೊಟ್ಟೆಯಿಂದ ಹೊರತೆಗೆಯುವ ಅನೇಕ ಪ್ರಕರಣಗಳು ನಡೆದಿವೆ.

ಮುಟ್ಟಿನ ಸಮಯದಲ್ಲಿ ಯುವತಿಯ ಕಣ್ಣಿನಿಂದ ಹರಿದ ರಕ್ತ..!

ಥೈಲ್ಯಾಂಡ್‌ನ ಹೊಸ ಪ್ರಕರಣವೊಂದರಲ್ಲಿ ಮನುಷ್ಯನ ಗುದನಾಳದಿಂದ 18 ಮೀಟರ್ ಉದ್ದದ ಲಾಡಿಹುಳ ತೆಗೆದ ವೈದ್ಯರು ಆಘಾತಕ್ಕೊಳಗಾಗಿದ್ದಾರೆ.

ವರದಿಗಳ ಪ್ರಕಾರ, 67 ವರ್ಷದ ವ್ಯಕ್ತಿ ತೀವ್ರ ಹೊಟ್ಟೆ ನೋವು ಮತ್ತು ಗ್ಯಾಸ್ಟ್ರಿಕ್‌ನಿಂದ ಬಳಲುತ್ತಿದ್ದ ನಂತರ ಥೈಲ್ಯಾಂಡ್‌ನ ನಾಂಗ್ ಖೈ ಆಸ್ಪತ್ರೆಗೆ ಭೇಟಿ ನೀಡಿದ್ದರು.

ಅಮೆರಿಕದ ಸರ್ಜನ್‌ ಜನರಲ್‌ ಆಗಿ ವಿವೇಕ್‌ ಮೂರ್ತಿ ನೇಮಕ!

ತನ್ನ ಸಮಸ್ಯೆಗಳನ್ನು ವೈದ್ಯರಿಗೆ ವಿವರಿಸಿದ ನಂತರ ವ್ಯಕ್ತಿಯ ಮಲದ ಮಾದರಿ ನೀಡುವಂತೆ ಕೇಳಲಾಯಿತು, ಅದನ್ನು ಮತ್ತೊಂದು ರೋಗ ಜಂತುಹುಳ ಸಂಶೋಧನಾ ಕೇಂದ್ರದ ತಂಡಕ್ಕೆ ಕಳುಹಿಸಲಾಗಿತ್ತು.

ಅದು ತುಂಡುಗಳಾಗಿ ಹೊರಬರುವಾಗ, ಅದರ ಪೂರ್ಣ ಗಾತ್ರದಿಂದ ವೈದ್ಯರು ಆಘಾತಕ್ಕೊಳಗಾದರು. ತೆಗೆದ ನಂತರ, ವೈದ್ಯರು ಜಂತುಹುಳದ ಗಾತ್ರವನ್ನು ಅಳೆದಿದ್ದಾರೆ.

ವಯಸ್ಸಾದವರ ನಿದ್ದೆ ಸಮಸ್ಯೆ ನಿವಾರಣೆಗೆ ಇಲ್ಲಿವೆ ಪರಿಹಾರ

"18 ಮೀಟರ್‌ಗಿಂತಲೂ ಹೆಚ್ಚು ಉದ್ದದ ತೈನಿಯಾ ಸಾಗಿನಾಟಾ ಬೋವಿನ್ ಟೇಪ್‌ವರ್ಮ್ ಇದ್ದ ರೋಗಿಯೊಬ್ಬರನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ. ಮಲಗುವ ಮುನ್ನ ಅವನಿಗೆ ಡೈವರ್ಮಿಂಗ್ ಔಷಧಿ ನೀಡಲಾಯಿತು. ಬೆಳಗ್ಗೆ ಈ ಉದ್ದನೆಯ ಹುಳು ಗುದನಾಳದಿಂದ ಹೊರಬಂದಿತು" ಎಂದು ಹೇಳಲಾಗಿದೆ.

ಮನುಷ್ಯನಿಗೆ ಚಿಕಿತ್ಸೆ ನೀಡಿದ ತಂಡದ ನೇತೃತ್ವ ವಹಿಸಿದ್ದ ಡಾ.ಶವಾನ್ಯಾ ರಟ್ಟನಪಿತೂನ್, ಹಸಿ ಗೋಮಾಂಸ ತಿನ್ನುವುದರಿಂದ ಇದು ಹರಡುತ್ತದೆ ಎಂದು ಹೇಳಿದ್ದಾರೆ. ಟೇಪ್‌ವರ್ಮ್‌ಗಳಂತಹ ಜಂತುಹುಳ ಮಾನವರಲ್ಲಿ 30 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಲ್ಲವು ಎಂದು ಅವರು ಹೇಳಿದ್ದಾರೆ.

ಬಾಯಿ ಹುಣ್ಣಿಗೆ ಬೈ ಬೈ ಹೇಳೋ ಮದ್ದುಗಳು ಇಲ್ಲಿವೆ ನೋಡಿ

ರೋಗಿಯ ಕುಟುಂಬವು ಅವರಿಗೆ ಜಂತುಹುಳ ಇದೆಯೇ ಎಂದು ಕಂಡುಹಿಡಿಯಲು ವೈದ್ಯಕೀಯ ಪರೀಕ್ಷೆಗಳನ್ನು ಸಹ ಮಾಡಬೇಕೆಂದು ನಾವು ಸೂಚಿಸಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

Follow Us:
Download App:
  • android
  • ios