ಹೈಟ್ ಹುಡುಗಿಯರ ವೀಕ್‌ನೆಸ್‌. ಬಹುತೇಕ ಹುಡುಗಿಯರು ಹೆಚ್ಚು ಹೈಟ್ ಇರೋ ಹುಡುಗರನ್ನೇ ಇಷ್ಟಪಡುತ್ತಾರೆ. ಹೀಗಾಗಿ ಹೈಟ್ ಕಡಿಮೆ ಇರೋ ಹುಡುಗರಿಗೆ ನಿರಾಶೆ ಗ್ಯಾರಂಟಿ. ಹೀಗೆ ಹೈಟ್ ಕಡಿಮೆಯಿದೆ ಅಂತ ಹಲವು ಹುಡುಗಿಯರಿದ್ದ ರಿಜೆಕ್ಟ್ ಆದ ಯುವಕನೊಬ್ಬ ಲೆಗ್‌ ಸರ್ಜರಿ ಮಾಡಿ ಹೈಟ್ ಹೆಚ್ಚಿಸಿಕೊಂಡಿದ್ದಾನೆ

ಸುಂದರವಾಗಿ ಕಾಣ್ಬೇಕು ಅಂತ ಎಲ್ರೂ ಅಂದ್ಕೊಳ್ತಾರೆ. ಕೆಲವೊಬ್ರು ಇದಕ್ಕಾಗಿ ಮೇಕಪ್ ಮಾಡ್ಕೊಂಡ್ರೆ, ಇನ್ನು ಕೆಲವರು ಲಕ್ಷ ಲಕ್ಷ ವ್ಯಯಿಸಿ ಸರ್ಜರಿಯನ್ನೂ ಮಾಡಿಕೊಳ್ತಾರೆ. ವಿಶೇಷವಾಗಿ ಮಹಿಳೆಯರು ಕಾಸ್ಮೆಟಿಕ್‌ ಶಸ್ತ್ರಚಿಕಿತ್ಸೆಗೆ ಒಳಗಾಗುವುದನ್ನು ನೋಡುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಹೈಟ್ ಹೆಚ್ಚಿಸಿಕೊಳ್ಳೋಕೆ ಬರೋಬ್ಬರಿ 66 ಲಕ್ಷ ರೂ. ಖರ್ಚು ಮಾಡಿದ್ದಾನೆ. ಜಾರ್ಜಿಯಾದ 27 ವರ್ಷದ ನೌಕಾಪಡೆಯ ಅನುಭವಿ ಡೈನ್‌ಜೆಲ್ ಸೈಗರ್ಸ್ ಅವರು 81,000 ಡಾಲರ್ (ರೂ. 66,44,106)ನ್ನು ಕೈಕಾಲು ಉದ್ದದ ಶಸ್ತ್ರಚಿಕಿತ್ಸೆಗೆ ಖರ್ಚು ಮಾಡಿದರು, ಇದು ಅವರ ಎತ್ತರವನ್ನು 5'5 ರಿಂದ 6ಕ್ಕೆ ಹೆಚ್ಚಿಸಿತು ಎಂದು ತಿಳಿದುಬಂದಿದೆ.

Add Asianetnews Kannada as a Preferred SourcegooglePreferred

5 ಅಡಿ 5 ಇಂಚು ಎತ್ತರವಿದ್ದ ವ್ಯಕ್ತಿ ಶಸ್ತ್ರಚಿಕಿತ್ಸೆಯ ನಂತರ 6 ಅಡಿ ಎತ್ತರ
27ರ ಹರೆಯದ ಡಿನ್ಜೆಲ್ ಸಿಗರ್ಸ್ ಈ ಹಿಂದೆ 5 ಅಡಿ 5 ಇಂಚು ಎತ್ತರವಿದ್ದರು. ಹೀಗಾಗಿ ಯಾವೊಬ್ಬ ಹುಡುಗಿಯೂ (Girl) ಅವರನ್ನು ಇಷ್ಟಪಡುತ್ತಿರಲ್ಲಿಲ್ಲ. ಡಿನ್ಜೆಲ್ ಅಪ್ರೋಚ್ ಮಾಡಿದ್ದ ಹಲವು ಹುಡುಗಿಯರು ಅವರನ್ನು ತಿರಸ್ಕರಿಸಿದ್ದರು. ಹಲವು ಪ್ರಪೋಸಲ್ ರಿಜೆಕ್ಟ್ ಆದ ನಂತರ ಡಿನ್ಜೆಲ್ ತುಂಬಾ ದುಃಖವನ್ನು (Sad) ಅನುಭವಿಸಿದ್ದರು. ಹೀಗಾಗಿ ಹೇಗಾದರೂ ಸರಿ ಹೈಟ್ ಹೆಚ್ಚಿಸಿಕೊಳ್ಳಬೇಕು ಎಂದು ನಿರ್ಧರಿಸಿದರು. ಆ ನಂತರ ಲೆಗ್‌ ಸರ್ಜರಿ ಮಾಡಿ ಹೈಟ್ ಹೆಚ್ಚಿಸಿಕೊಂಡಿದ್ದಾರೆ. ಈ ಹಿಂದೆ 5 ಅಡಿ 5 ಇಂಚು ಎತ್ತರವಿದ್ದ ಡಿನ್ಜೆಲ್ ಸಿಗರ್ಸ್ ಈಗ ಶಸ್ತ್ರಚಿಕಿತ್ಸೆಯ ನಂತರ 6 ಅಡಿ ಎತ್ತರ (Height)ವಿದ್ದಾರೆ.

3 ಈಡಿಯಟ್ಸ್ ಸಿನಿಮಾ ಥರ ವಿಡಿಯೋ ನೋಡಿ ಹೆರಿಗೆ ಮಾಡಿಸಲು ಮುಂದಾದರು, ಮುಂದೆ ಆಗಿದ್ದೇನು?

'ನನ್ನ ಜೀವನದುದ್ದಕ್ಕೂ, ನಾನು ಜನರು ನನ್ನನ್ನು ಚಿಕ್ಕ ವ್ಯಕ್ತಿಯಂತೆ ನೋಡುವುದರಲ್ಲಿ ಹೆಣಗಾಡಿದ್ದೇನೆ ಮತ್ತು ಅದನ್ನು ಬದಲಾಯಿಸಲು ನಾನು ನಿರ್ಧರಿಸಿದೆ. ಅದು ಸರಿಯಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು 27 ವರ್ಷದ ಸೈಗರ್ಸ್ ನ್ಯೂಯಾರ್ಕ್ ಪೋಸ್ಟ್‌ಗೆ ಇಮೇಲ್‌ನಲ್ಲಿ ತಿಳಿಸಿದ್ದಾರೆ. 'ಅಂಗಗಳ ಉದ್ದವು ನನ್ನ ಜೀವನ (Life)ವನ್ನು ಬದಲಾಯಿಸಲು ನನಗೆ ಅವಕಾಶವನ್ನು ನೀಡಿತು ಮತ್ತು ನಾನು ಜೀವನವನ್ನು ಖುಷಿಯಿಂದ ಕಳೆಯುತ್ತಿದ್ದೇನೆ' ಎಂದಿದ್ದಾರೆ.

ಹಲವಾರು ವರ್ಷಗಳಿಂದ ಸೈಗರ್ಸ್ ಹೈಟ್ ಹೆಚ್ಚಿಸಿಕೊಳ್ಳುವ ದಾರಿಯನ್ನು ಹುಡುಕುತ್ತಿದ್ದರು. ಕೆಲವೊಂದು ಪ್ರಯೋಗಗಳು ಪ್ರಯೋಜನವಾಗಲಿಲ್ಲ. ಹೀಗಾಗಿ ಅವರು ಸರ್ಜರಿ ಮಾಡಿಸಿಕೊಳ್ಳಲು ನಿರ್ಧರಿಸಿದರು. ಅಂಗವನ್ನು ಉದ್ದಗೊಳಿಸುವ ಶಸ್ತ್ರಚಿಕಿತ್ಸೆಯು (Operation) ಸುಲಭವಾದ ಆಯ್ಕೆಯಂತೆ ತೋರುತ್ತದೆ ಎಂದು ಸಿಗರ್ಸ್ ಅಂದುಕೊಂಡರು. ತಕ್ಷಣವೇ ವೈದ್ಯರ ಅಪಾಯಿಂಟ್‌ಮೆಂಟ್ ಪಡೆದರು. 'ನನಗೆ ಯಾವುದೇ ನಿರ್ದಿಷ್ಟ ಸ್ಫೂರ್ತಿ ಇರಲಿಲ್ಲ, ಆದರೆ ನನ್ನ ದೇಹ ಮತ್ತು ಮನಸ್ಸನ್ನು ಮರುಸೃಷ್ಟಿಸಲು ನಾನು ಬಯಸುತ್ತೇನೆ ಎಂದು ನನಗೆ ತಿಳಿದಿತ್ತು' ಎಂದು ಮಾಜಿ ನೌಕಾಪಡೆಯ ಡಿನ್ಜೆಲ್ ಹೇಳಿದ್ದಾರೆ.

40 ಚೂಯಿಂಗ್ ಗಮ್ ನುಂಗಿದ ಐದು ವರ್ಷದ ಬಾಲಕ, ಸರ್ಜರಿ ಮಾಡಿದ ವೈದ್ಯರೇ ಬೆಚ್ಚಿಬಿದ್ರು!

ಏಳು ಇಂಚು ಹೆಚ್ಚಿಸಿಕೊಳ್ಳಲು 88 ಲಕ್ಷ ರೂಪಾಯಿ ಖರ್ಚು ಮಾಡಿದ ಭೂಪ!
ಈ ಹಿಂದೆ ಅಮೆರಿಕದ ವ್ಯಕ್ತಿಯೊಬ್ಬ ತನ್ನ ಎತ್ತರವನ್ನು ಏಳು ಇಂಚು ಹೆಚ್ಚಿಸಿಕೊಳ್ಳಲು 88 ಲಕ್ಷ ರೂ. ಖರ್ಚು ಮಾಡಿದ್ದ. ವರದಿಯ ಪ್ರಕಾರ, 33 ವರ್ಷದ ಬ್ರಿಯಾನ್ ಸ್ಯಾಂಚೆಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿ, ಈಗಾಗಲೇ ಆರು ಅಡಿ ಎತ್ತರವನ್ನು ಹೊಂದಿದ್ದರೂ, ತನ್ನ ದೇಹದ ಮೇಲಿನ ಭಾಗದ ನಡುವೆ ಅಸಮತೋಲನವಿದೆ ಎಂದು ಭಾವಿಸಿದ ಕಾರಣ ತನ್ನ ಎತ್ತರವನ್ನು ಹೆಚ್ಚಿಸಲು ನಿರ್ಧರಿಸಿದನು. ನನ್ನ ಕಾಲುಗಳು ಯಾವಾಗಲೂ ವಿಲಕ್ಷಣವಾಗಿ ಕಾಣುತ್ತಿತ್ತು. ಅದು ಯಾಕೆಂದು ನನಗೆ ತಿಳಿದಿರಲಿಲ್ಲ. ಸೋದರ ಮಾವನನ್ನು ನೋಡಿ, ಅವನೊಂದಿಗೆ ಹೋಲಿಕೆ ಮಾಡಿಕೊಂಡಾಗ ವ್ಯತ್ಯಾಸವಿರುವುದು ಅರಿವಿಗೆ ಬಂತು.. ಅದಾದಮೇಲೆ ನಾನು ಸಮತೋಲವನ್ನು ಸರಿ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್‌ನ ಜಾರ್ಜಿಯಾದ ಬಾಡಿ ಬಿಲ್ಡರ್ ಸ್ಯಾಂಚೆಜ್ ಹೇಳಿದರು.