ವಯಸ್ಸಾದವರ ನಿದ್ದೆ ಸಮಸ್ಯೆ ನಿವಾರಣೆಗೆ ಇಲ್ಲಿವೆ ಪರಿಹಾರ

First Published Mar 25, 2021, 10:18 AM IST

ವಯಸ್ಸಾದಂತೆ ಆರೋಗ್ಯ ಮತ್ತು ನಿದ್ದೆಯ ಸ್ವರೂಪಗಳು ಹಲವು ರೀತಿಯಲ್ಲಿ ಬದಲಾಗುತ್ತವೆ. ನಿದ್ರಿಸುತ್ತಿರುವಾಗ, ದೇಹವು ದುರಸ್ತಿಯ ಮೋಡ್ನಲ್ಲಿರುತ್ತದೆ ಮತ್ತು ಆದ್ದರಿಂದ ರೋಗ ನಿರೋಧಕ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆ. ದೇಹದ ಜೀವಕೋಶಗಳು ಹಾನಿಗೊಳ್ಳುವುದಿಲ್ಲ. ಪ್ರತಿ ರಾತ್ರಿಯೂ ಉತ್ತಮ ನಿದ್ರೆ ಮಾಡುವುದು ತುಂಬಾ ಮುಖ್ಯ. ಆದರೆ 60 ವರ್ಷ ಮೇಲ್ಪಟ್ಟ ವಯೋವೃದ್ಧರಿಗೆ ಆಗಾಗ ನಿದ್ರೆಯ ಸಮಸ್ಯೆ ಕಾಡುವುದು ಸಹಜ. ಅದೇ ಸಮಯದಲ್ಲಿ ರಾತ್ರಿ ತಡವಾಗಿ ನಿದ್ರೆ, ಕೆಲವು ಗಂಟೆಗಳ ಕಾಲ ನಿದ್ದೆ,  ಗಾಢ ವಾದ ನಿದ್ರೆ, ರಾತ್ರಿ ವೇಳೆ ಪದೆ ಪದೇ ಎಚ್ಚರವಾಗುವುದು ಹೀಗೆ ಹಲವು ಸಮಸ್ಯೆಗಳು ಕಾಡುತ್ತವೆ.