Health Tips: ಮೂಗಿಗೆ ವಾಸನೆ ಬರ್ತಿಲ್ಲ ಅಂತಾ ಸುಮ್ನಿರಬೇಡಿ.. ಅಪಾಯವಾಗ್ಬಹುದು!
ನಮ್ಮ ದೇಹದ ಪ್ರತಿಯೊಂದು ಅಂಗವೂ ತನ್ನ ಕೆಲಸವನ್ನು ಸರಿಯಾಗಿ ಮಾಡ್ತಿರುತ್ತದೆ. ಅದು ಕೆಲಸದಲ್ಲಿ ಕಳ್ಳ ಬಿದ್ದಿದೆ ಅಂದ್ರೆ ಅದಕ್ಕೆ ಏನೋ ಸಮಸ್ಯೆಯಾಗಿದೆ ಎಂದೇ ಅರ್ಥ. ಸರಿ ಹೋಗ್ಬಹುದು ಬಿಡು ಅಂತಾ ನಿರ್ಲಕ್ಷ್ಯ ಮಾಡೋ ಬದಲು ಮೊದಲೇ ಎಚ್ಚೆತ್ತುಕೊಳ್ಳಿ.
ಒಳ್ಳೆಯ ಪರಿಮಳವೇ ಇರಲಿ ಅಥವಾ ಕೆಟ್ಟ ವಾಸನೆಯಿರಲಿ ಅದು ನಮಗೆ ತಿಳಿಯೋದು ನಮ್ಮ ಮೂಗು ಆ ವಾಸನೆಯನ್ನು ಗ್ರಹಿಸುವುದರಿಂದ. ಮೂಗಿನ ಗ್ರಹಿಕೆಯ ಸಾಮರ್ಥ್ಯದಿಂದಲೇ ಎಷ್ಟೋ ಮಂದಿ ಇದು ಇಂತಹುದೇ ವಸ್ತು ಎಂದು ಕಂಡುಹಿಡಿಯುತ್ತಾರೆ. ಮನುಷ್ಯರ ಹೊರತಾಗಿ ಪ್ರಾಣಿ, ಪಕ್ಷಿ, ಸಣ್ಣ ಕೀಟಗಳಿಗೂ ಕೂಡ ವಾಸನೆಯನ್ನು ಗ್ರಹಿಸುವ ಶಕ್ತಿ ಚೆನ್ನಾಗಿರುತ್ತದೆ. ಚಿಕ್ಕ ಇರುವೆಗಳು ಸಿಹಿಯ ವಾಸನೆಯನ್ನು ಹಾಗೂ ಬೇಟೆಯಾಡುವ ಪ್ರಾಣಿಗಳು ತನ್ನ ಬೇಟೆಯನ್ನು ವಾಸನೆಯ ಮೂಲಕವೇ ಕಂಡುಹಿಡಿಯುತ್ತವೆ. ನಾಯಿಗಳಿಗಂತೂ ವಾಸನೆಯನ್ನು ಗ್ರಹಿಸುವ ಶಕ್ತಿ ಹೇರಳವಾಗಿರುವುದು ನಮಗೆ ತಿಳಿದೇ ಇದೆ.
ನಮಗೆ ಶೀತವಾದಾಗ ಅಥವಾ ಜ್ವರ (Fever) ಬಂದಾಗ ಕೆಲಮೊಮ್ಮೆ ಮೂಗು ತನ್ನ ಗ್ರಹಿಕೆಯ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಅಂತಹ ಸಮಯದಲ್ಲಿ ಯಾವುದೇ ರೀತಿಯ ವಾಸನೆ ಬರೋದಿಲ್ಲ. ಕೊರೋನಾ (Corona) ಮಹಾಮಾರಿ ಬಾಧಿಸಿದಾಗಲೂ ಅನೇಕ ಮಂದಿ ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಕಳೆದುಕೊಂಡಿದ್ದರು. ಇದರ ಹೊರತಾಗಿ ಬೇರೆ ಸಂದರ್ಭದಲ್ಲಿ ನಿಮ್ಮ ಮೂಗು ವಾಸನೆಯನ್ನು ಗ್ರಹಿಸುವ ಶಕ್ತಿ ಕಳೆದುಕೊಂಡಿದೆ ಎಂದಾದರೆ ನಿಮ್ಮ ಆರೋಗ್ಯ (Health) ದಲ್ಲಿ ಏನೋ ಏರುಪೇರಾಗಿದೆ ಎಂದರ್ಥ.
ನನ್ಗೆ ಮಾತ್ರ ಸೊಳ್ಳೆ ಯಾಕೆ ಜಾಸ್ತಿ ಕಚ್ಚುತ್ತೆ ಅನ್ನೋ ಡೌಟಾ, ಬ್ಲಡ್ ಗ್ರೂಪ್ ಯಾವ್ದು ಚೆಕ್ ಮಾಡ್ಕೊಳ್ಳಿ
ನಮ್ಮ ಮೂಗಿಗೆ ಯಾವುದೇ ರೀತಿಯ ವಾಸನೆ ಬರುತ್ತಿಲ್ಲ, ಯಾವುದರ ಪರಿಮಳವೂ ತಿಳಿಯುತ್ತಿಲ್ಲ ಎಂದಾದರೆ ಅದನ್ನು ನಿರ್ಲಕ್ಷಿಸಬೇಡಿ. ಏಕೆಂದರೆ ಒಬ್ಬ ವ್ಯಕ್ತಿ ವಾಸನಾ ಗ್ರಹಿಕೆಯ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾನೆ ಎಂದಾದರೆ ಅದು ಅಲ್ಜೈಮರ್ ಮತ್ತು ಡಿಮೆನ್ಶಿಯಾದ ಸಂಕೇತವಾಗಿರಬಹುದು ಎಂದು ಹೊಸ ಸಂಶೋಧನೆಯೊಂದು ಹೇಳಿದೆ.
ಮೂಗು ವಾಸನೆ ಗ್ರಹಿಸುತ್ತಿಲ್ಲ ಎಂದಾದರೆ ಅದನ್ನು ನಿರ್ಲಕ್ಷಿಸಬೇಡಿ : ಮೂಗು ವಾಸನೆಯನ್ನು ಗ್ರಹಿಸುವ ಶಕ್ತಿಯನ್ನು ಯಾವಾಗ ಕಳೆದುಕೊಳ್ಳುತ್ತದೆ ಎನ್ನುವುದರ ಬಗ್ಗೆ ಸಂಶೋಧನೆ ನಡೆಸಲಾಯ್ತು. ಇದನ್ನು ಅಮೆರಿಕದ ಜಾನ್ ಹಾಪ್ ಕಿಂಮ್ಸ್ ಮೆಡಿಸಿನ್ ನ ವಿಜ್ಞಾನಿಗಳು ನಡೆಸಿದ್ದರು. ಈ ಸಂಶೋಧನೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
Health Tips: ರಾತ್ರಿ ಊಟ ಆದ್ಮೇಲೆ ಇದನ್ನ ಮಾಡಿದ್ರೆ ಆರೋಗ್ಯ ಹಾಳಾಗೋದು ಗ್ಯಾರಂಟಿ!
ಈ ಅಧ್ಯಯನದ ಪ್ರಕಾರ, ವ್ಯಕ್ತಿಯ ವಾಸನೆ ಗ್ರಹಿಸುವ ಶಕ್ತಿ ಕೆಡುವುದು ಆತನ ಆರೋಗ್ಯ ಹದಗೆಟ್ಟಿರುವುದರ ಮುನ್ಸೂಚನೆಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ನಿಮಗೆ ವಾಸನೆ ಬರುತ್ತಿಲ್ಲ ಎಂದಾದರೆ ನಿಮ್ಮ ಮೆಂಟಲ್ ಹೆಲ್ತ್ ಹಾಳಾಗುತ್ತಿದೆ ಅಥವಾ ನೀವು ಡಿಪ್ರೆಶನ್ ಗೆ ಹೋಗಲಿದ್ದೀರಿ ಎನ್ನುವುದರ ಸಂಕೇತ ಇದಾಗಿದೆ. ಇದರ ಹೊರತಾಗಿ ಸ್ಪರ್ಶ ಜ್ಞಾನದ ತೊಂದರೆ ಅಥವಾ ಉರಿಯೂತದ ಪ್ರಾರಂಭದ ಹಂತದಲ್ಲೂ ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಳ್ಳಬಹುದು.
ಈ ಅಧ್ಯಯನದಲ್ಲಿ ಪಾಲ್ಗೊಂಡ ಫ್ರೊಫೆಸರ್ ವಿದ್ಯಾ ಕಾಮಥ್ ಅವರು, ವಾಸನೆಯನ್ನು ಗ್ರಹಿಸುವ ಸಾಮರ್ಥ್ಯ ಕಳೆದುಕೊಳ್ಳುವುದು ನಮ್ಮ ಆರೋಗ್ಯದ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಇಂತಹ ಅನುಭವ ನಿಮಗಾದರೆ ಅಥವಾ ನಿಮ್ಮ ದೇಹದಲ್ಲಿ ಈ ರೋಗಲಕ್ಷಣಗಳು ಕಂಡುಬಂದರೆ ಅದನ್ನು ನಿರ್ಲಕ್ಷಿಸದೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ವಿದ್ಯಾ ಕಾಮಥ್ ಹೇಳಿದ್ದಾರೆ.
ವೈದ್ಯರ ಸಹಾಯ ಪಡೆದುಕೊಳ್ಳಿ : ವ್ಯಕ್ತಿ ತನ್ನ ವಾಸನೆಯ ಸಾಮರ್ಥ್ಯದ ನಷ್ಟವು ಅಲ್ಜೈಮರ್ ಮತ್ತು ಪಾರ್ಕಿನ್ಸನ್ ನಂತಹ ನ್ಯೂರೋ ಡಿಜನರೇಟಿವ್ ಖಾಯಿಲೆಗಳು ಬಾಧಿಸುವುದರ ಸಂಕೇತವಾಗಿದೆ. ಇವು ಮೆದುಳಿನ ನರಮಂಡಲಕ್ಕೆ ಸಂಬಂಧಿಸಿದ ಖಾಯಿಲೆಯಾಗಿದ್ದು ಮೆದುಳಿನ ನರಮಂಡಲವನ್ನು ದುರ್ಬಲಗೊಳಿಸುತ್ತದೆ. ಇತ್ತೀಚೆಗೆ ಈ ಖಾಯಿಲೆ ಚಿಕ್ಕವರು ದೊಡ್ಡವರೆನ್ನದೇ ಎಲ್ಲರನ್ನೂ ಬಾಧಿಸುತ್ತಿದೆ.
ವಾಸನೆ ಗ್ರಹಿಕೆಗೆ ಸಂಬಂಧಿಸಿದಂತೆ ಯಾವ ತೊಂದರೆಯಿದ್ದರೂ ಮೊದಲು ವೈದ್ಯರನ್ನು ಪರೀಕ್ಷಿಸಬೇಕು. ನೀವು ಎಷ್ಟು ಮುಂಚಿತವಾಗಿ ವೈದ್ಯರನ್ನು ಕಾಣುತ್ತೀರೋ ಅಷ್ಟು ಬೇಗ ಗುಣಮುಖರಾಗಬಹುದು. ಅನೇಕ ಮಂದಿ ಡಿಪ್ರೆಶನ್ ನಿಂದ ಬಳಲುತ್ತಿದ್ದರೂ ವೈದ್ಯರ ಸಹಾಯ ಪಡೆಯುವುದಿಲ್ಲ. ನಿಮ್ಮ ಶರೀರದಲ್ಲಿ ಯಾವುದೇ ಅಸಾಮಾನ್ಯ ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿಗೆ ಹೋಗಲು ವಿಳಂಬ ಮಾಡಬೇಡಿ. ಏಕೆಂದರೆ ನಿಮ್ಮ ನಿರ್ಲಕ್ಷವೇ ನಿಮ್ಮ ಜೀವಕ್ಕೆ ಅಪಾಯ ಉಂಟುಮಾಡಬಹುದು.