Health Tips: ಸಣ್ಣ ಶಬ್ಧಕ್ಕೂ ಎಚ್ಚರವಾಗ್ತಿದ್ಯಾ? ಈ ಖಾಯಿಲೆ ಕಾಡ್ಬಹುದು ಎಚ್ಚರ!
ಕೆಲವರು ಕುಂಭ ಕರ್ಣನ ನಿದ್ರೆ ಮಾಡಿದ್ರೆ ಮತ್ತೆ ಕೆಲವರು ಚುಟುಕು ನಿದ್ರೆ ಮಾಡಿ ಎದ್ದೇಳ್ತಾರೆ. ಯಾವುದೇ ನಿದ್ರೆಯಾದ್ರೂ ಡೀಪಾಗಿದ್ರೆ ಒಳ್ಳೆಯದು. ಆದ್ರೆ ಕೆಲವರಿಗೆ ಎಷ್ಟೇ ಪ್ರಯತ್ನಿಸಿದ್ರೂ ಗಾಢ ನಿದ್ರೆ ಬರೋದಿಲ್ಲ. ಇದು ಅವರ ಆರೋಗ್ಯಕ್ಕೆ ಅಪಾಯಕಾರಿ.
ಕೆಲಸದ ಗುಂಗಿನಲ್ಲಿ ಅನೇಕರು ನಿದ್ರೆ ಮಾಡುವುದಿಲ್ಲ. ನಿಮಗೆ ನಿದ್ರೆ ಅವಶ್ಯಕತೆ ಇಲ್ಲದೆ ಇರಬಹುದು. ಆದ್ರೆ ನಿಮ್ಮ ದೇಹಕ್ಕೆ ನಿದ್ರೆ ಅಗತ್ಯವಾಗಿ ಬೇಕು. ಪ್ರತಿ ದಿನ ಒಬ್ಬ ವ್ಯಕ್ತಿ 7 -8 ಗಂಟೆ ನಿದ್ರೆ ಮಾಡಿದ್ರೆ ಮಾತ್ರ ಅವನು ಆರೋಗ್ಯವಾಗಿರಲು ಸಾಧ್ಯ. ಪ್ರತಿಯೊಬ್ಬರ ನಿದ್ರೆ ವಿಧಾನ ಭಿನ್ನವಾಗಿರುತ್ತದೆ. ಕೆಲವರು ಕೆಲವೇ ಗಂಟೆ ನಿದ್ರೆ ಮಾಡಿದ್ರೂ ಗಾಢ ನಿದ್ರೆ ಮಾಡಿ ಎದ್ದಿರುತ್ತಾರೆ. ಅಂದ್ರೆ ನಿದ್ರೆ ಸಂದರ್ಭದಲ್ಲಿ ಅವರನ್ನು ಎತ್ತಿಕೊಂಡು ಹೋದ್ರೂ ಅವರಿಗೆ ಎಚ್ಚರವಾಗೋದಿಲ್ಲ. ಮತ್ತೆ ಕೆಲವರು ಗಂಟೆಗಟ್ಟಲೆ ನಿದ್ರೆ ಮಾಡಿದ್ರೂ ಸರಿಯಾಗಿ ನಿದ್ರೆ ಮಾಡಿರೋದಿಲ್ಲ. ನಿದ್ರಾಹೀನತೆ, ನಿದ್ರೆಯಲ್ಲಿ ಉಸಿರುಕಟ್ಟುವಿಕೆ, ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ, ಗೊರಕೆ, ನಿದ್ರೆಯಲ್ಲಿ ನಡೆಯುವುದು ಇತ್ಯಾದಿ ಸರಿಯಾಗಿ ನಿದ್ರೆ ಬರದಂತೆ ತಡೆಯುತ್ತದೆ. ಸಣ್ಣ ಶಬ್ಧವಾದ್ರೂ ಎಚ್ಚರಗೊಳ್ಳುವವರು ಕೆಲವರಿದ್ದಾರೆ. ಅದನ್ನು ನಾವು ಲೈಟ್ ಸ್ಲೀಪ್ ಎಂದು ಕರೆಯಬಹುದು.
ಈ ಲೈಟ್ ಸ್ಲೀಪ್ (Light Sleep) ನಲ್ಲಿ ನಿದ್ರೆ ಎಷ್ಟೇ ಆಳವಾಗಿದ್ದರೂ ಸಣ್ಣದೊಂದು ಶಬ್ಧ (Noise) ಕ್ಕೆ ಎಚ್ಚರವಾಗಿರುತ್ತದೆ. ಇದ್ರಿಂದ ವ್ಯಕ್ತಿ ವಿಪರೀತ ಕಿರಿಕಿರಿ ಅನುಭವಿಸುತ್ತಾನೆ. ಅವನಲ್ಲಿ ಸಿಡುಕುತನ ಹೆಚ್ಚು. ಇದು ಆರೋಗ್ಯ (Health) ದ ಮೇಲೆ ಪರಿಣಾಮ ಬೀರುತ್ತದೆ. ಅನೇಕ ಖಾಯಿಲೆಗಳು ಇದ್ರಿಂದ ಅಂಟಿಕೊಳ್ಳುತ್ತವೆ. ನಾವಿಂದು ಈ ಲೈಟ್ ಸ್ಲೀಪ್ ನಿಂದ ಆಗುವ ಸಮಸ್ಯೆ (Problem) ಏನು ಎಂಬುದನ್ನು ನಿಮಗೆ ಹೇಳ್ತೆವೆ.
ಮಧುಮೇಹ ನಿಮ್ಮನ್ನು ಕಾಡಬಹುದು : ಲೈಟ್ ಸ್ಲೀಪಿಂಗ್ ಸಮಸ್ಯೆ ಇರುವವರಲ್ಲಿ ಮಧುಮೇಹದ ಅಪಾಯ ಹೆಚ್ಚು ಎನ್ನುತ್ತಾರೆ ತಜ್ಞರು. ಸಣ್ಣ ಶಬ್ಧಕ್ಕೆ ಎಚ್ಚರವಾಗುವ ಕಾರಣ ರಾತ್ರಿ ಪದೇ ಪದೇ ನಿದ್ರೆಗೆ ಭಂಗವಾಗುತ್ತದೆ. ಇದ್ರಿಂದ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಿಲ್ಲ. ನಿಯಮಿತವಾಗಿ 7 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡಿದರೆ ನಿಮ್ಮ ಇನ್ಸುಲಿನ್ ಪ್ರತಿರೋಧವು ಹೆಚ್ಚಾಗಬಹುದು. ಇದರಿಂದಾಗಿ ಹಸಿವು ಹೆಚ್ಚಾಗುತ್ತದೆ. ಸಕ್ಕರೆ ಪದಾರ್ಥ ಸೇವನೆ ಮಾಡುವ ಬಯಕೆ ಕಾಡುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣದ ನಿಯಂತ್ರಣ ಕಷ್ಟವಾಗುತ್ತದೆ. ಈಗಾಗಲೇ ಮಧುಮೇಹ ಇರುವವರು ಹಾಗೂ ಮಧುಮೇಹ ಬರಬಾರದು ಎನ್ನುವವರು ಸರಿಯಾಗಿ ನಿದ್ರೆ ಮಾಡುವುದು ಅಗತ್ಯ.
ಹಬ್ಬದಡುಗೆ ತಿಂದು ಅಜೀರ್ಣವಾಗಿದ್ದರೆ, ಇಲ್ಲಿದೆ ಮನೆ ಮದ್ದು!
ಅಧಿಕ ರಕ್ತದೊತ್ತಡದ ಅಪಾಯ : ಅಧಿಕ ರಕ್ತದೊತ್ತಡವನ್ನು ಸೈಲೆಂಟ್ ಕಿಲ್ಲರ್ ಎಂದೂ ಕರೆಯಲಾಗುತ್ತದೆ. ಇದ್ರ ರೋಗ ಲಕ್ಷಣ ಬೇಗ ಗೊತ್ತಾಗೋದಿಲ್ಲ. ಇದ್ರಿಂದಾಗಿ ಹೃದಯಾಘಾತದ ಅಪಾಯ ಹೆಚ್ಚಿರುತ್ತದೆ. ಸರಿಯಾಗಿ ನಿದ್ರೆ ಮಾಡದೆ ಹೋದಾಗ ಒತ್ತಡ ಹೆಚ್ಚಾಗುತ್ತದೆ. ಈ ಒತ್ತಡ ಬಿಪಿಯನ್ನು ಹೆಚ್ಚು ಮಾಡುತ್ತದೆ.
ಲೈಟ್ ಸ್ಲೀಪ್ ನಿಂದ ಕಾಡುತ್ತೆ ಹೃದಯರೋಗ : ನಿಮ್ಮ ದೇಹಕ್ಕೆ ಅಗತ್ಯವಿರುಷ್ಟು ನಿದ್ರೆ ಆಗಿಲ್ಲ ಎಂದಾದ್ರೆ ಕೊಲೆಸ್ಟ್ರಾಲ್, ರಕ್ತದೊತ್ತಡ, ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಸೂಕ್ತ ಪ್ರಮಾಣದಲ್ಲಿ ನಿದ್ರೆ ಮಾಡದೆ ಹೋದ್ರೆ ಹೃದಯಾಘಾತದ ಅಪಾಯವಿರುತ್ತದೆ.
ಹೆಚ್ಚಾಗುತ್ತೆ ಬೊಜ್ಜು : ನಿದ್ರೆಯ ಕೊರತೆಯು ದೇಹದಲ್ಲಿ ಹಾರ್ಮೋನ್ ಅಸಮತೋಲನವನ್ನು ಉಂಟುಮಾಡುತ್ತದೆ. ದೇಹದಲ್ಲಿ ಹಾರ್ಮೋನ್ ಉತ್ಪಾದನೆ ಹೆಚ್ಚಾಗುತ್ತದೆ. ಇದ್ರಿಂದ ಹಸಿವು ಹೆಚ್ಚಾಗುತ್ತದೆ. ಹಸಿವು ಹೆಚ್ಚಾದಂತೆ ನೀವು ಹೆಚ್ಚು ಸೇವನೆ ಮಾಡ್ತಿರಿ. ಈ ಹೆಚ್ಚು ಸೇವನೆ ಬೊಜ್ಜನ್ನು ಜಾಸ್ತಿ ಮಾಡುತ್ತದೆ. ಬೊಜ್ಜಿನಿಂದ ಅನೇಕಾನೇಕ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ಚೀಸ್ ಫುಡ್ ಬಾಯಿ ಚಪ್ಪರಿಸಿಕೊಂಡು ತಿನ್ತೀರಾ? ಟೈಪ್ 2 ಮಧುಮೇಹ ಕಾಡ್ಬೋದು ಎಚ್ಚರ
ಸರಿಯಾಗಿ ನಿದ್ರೆ ಬರಬೇಕೆಂದ್ರೆ ಹೀಗೆ ಮಾಡಿ : ನಿಮಗೆ ಸಣ್ಣ ಶಬ್ಧಕ್ಕೂ ಎಚ್ಚರವಾಗುತ್ತದೆ ಎಂದಾದ್ರೆ ನೀವು ಆದಷ್ಟು ಶಬ್ಧವಿರದ ರೂಮಿನಲ್ಲಿ ಮಲಗಿ. ನಿದ್ರೆ ಮಾಡುವ ಮೊದಲು ಪುಸ್ತಕ ಓದಿ ಮಲಗಿ. ಯಾವುದೇ ಕಾರಣಕ್ಕೂ ಟಿವಿ, ಮೊಬೈಲ್ ಬಳಸಬೇಡಿ. ಹಾಗೆಯೇ ಗೊರಕೆ ಹೊಡೆಯುವ, ನಿದ್ರೆಗೆ ಭಂಗ ಮಾಡುವ ವ್ಯಕ್ತಿಯಿಂದ ದೂರ ಮಲಗಿ. ಹಗಲಿನಲ್ಲಿ ನಿದ್ರೆ ಮಾಡಬೇಡಿ. ಪ್ರತಿ ದಿನ ಕೆಲಸದ ಒತ್ತಡ ಎಷ್ಟಿದ್ರೂ 7 ಗಂಟೆ ನಿದ್ರೆ ಮಾಡಿ. ಒಂದೇ ಸಮಯದಲ್ಲಿ ಮಲಗಿದ್ರೆ ನೀವು ನಿದ್ರಾಹೀನತೆಯನ್ನು ಕಡಿಮೆ ಮಾಡಬಹುದು.