ಬೆನ್ನು ನೋವು, ಸುಸ್ತು, ಮೂಳೆ ಸವೆತ... ಅಬ್ಬಾ... ವಿಟಮಿನ್ 'ಡಿ' ಕೊರತೆಯಾದ್ರೆ ಏನೇನಾಗತ್ತೆ? ಪರಿಹಾರವೇನು?
ದೇಹಕ್ಕೆ ವಿಟಮಿನ್ 'ಡಿ' ಅತಿ ಅವಶ್ಯಕತೆ. ಇದರ ಕೊರತೆಯಿಂದ ಇನ್ನಿಲ್ಲದ ಸಮಸ್ಯೆಗಳು ಕಾಡಬಹುದು. ಹಾಗಿದ್ದರೆ ಇದರ ಕೊರತೆ ಯಾಕೆ ಆಗುತ್ತದೆ? ಕಾರಣವೇನು, ಪರಿಹಾರವೇನು? ಇಲ್ಲಿದೆ ಫುಲ್ ಡಿಟೇಲ್ಸ್.
ಬೆನ್ನು ನೋವು, ಖಿನ್ನತೆ, ಮೂಳೆ ಸವೆತ, ಸುಸ್ತು, ತಲೆನೋವು... ಇನ್ನೂ ಏನೇನೋ ಸಮಸ್ಯೆಗಳು ನಿಮ್ಮನ್ನು ಬಾಧಿಸುತ್ತಿವೆ ಎಂದರೆ ಅದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ಮುಖ್ಯ ಕಾರಣ ಏನೆಂದ್ರೆ ಅದು ವಿಟಮಿನ್ ಡಿ ಕೊರತೆ! ಹೌದು. ದೇಹದಲ್ಲಿನ ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಫಾಸ್ಫರಸ್ ಎಲ್ಲವನ್ನೂ ನಿಭಾಯಿಸಬಲ್ಲ ಶಕ್ತಿ ಇರೋದು ಈ ವಿಟಮಿನ್ ಡಿಗೆ. ಇದಕ್ಕೆ ಇನ್ನೊಂದು ಹೆಸರು ಏನು ಗೊತ್ತಾ? ಸೂರ್ಯನ ವಿಟಮಿನ್ ಎನ್ನುವುದು. ಹೌದು. ಮನುಷ್ಯನಿಗೆ ಬರುವ ನೂರಾರು ಸಮಸ್ಯೆಗಳಿಗೆ ಪರಿಹಾರವೇ ಈ ಸೂರ್ಯ. ನಸುಕಿನ ಮತ್ತು ಮುಸ್ಸಂಜೆಯ ಸೂರ್ಯರಶ್ಮಿ ಮೈಮೇಲೆ ಬಿದ್ದರೆ ಹಲವಾರು ಸಮಸ್ಯೆಗಳು ದೂರ ದೂರ. ಅವುಗಳಲ್ಲಿ ಒಂದು ವಿಟಮಿನ್ ಡಿ ಸಮಸ್ಯೆ. ನಿಮಗೆ ಗೊತ್ತಾ? ಸೂರ್ಯ ರಶ್ಮಿಯು ಚರ್ಮ, ಹೃದಯ, ಬ್ಯಾಕ್ಟೀರಿಯಾ, ಕೊಲೆಸ್ಟ್ರಾಲ್ ರಕ್ತದೊತ್ತಡ ಮುಂತಾದವುಗಳನ್ನು ನಿಯಂತ್ರಿಸುತ್ತದೆ.
ಆ್ಯಂಕರ್ ಅಪರ್ಣಾ ಸಾವು, ಶ್ವಾಸಕೋಶದ ಕ್ಯಾನ್ಸರ್ ಭೀತಿ, ಏನು ಹೇಳುತ್ತೆ ಸ್ಟಡೀಸ್?
ಹಾಗಿದ್ದರೆ ವಿಟಮಿನ್ ಡಿ ಯಾಕೆ ಬೇಕು? ಇದರ ಕೊರತೆಯಾದರೆ ಏನಾಗತ್ತೆ ಎಂಬಿತ್ಯಾದಿ ವಿಷಯಗಳನ್ನು ಇಲ್ಲಿ ನೋಡೋಣ. ಮೊದಲೇ ಹೇಳಿದ ಹಾಗೆ ವಿಟಮಿನ್ ಡಿ ಸಮಸ್ಯೆಯಾದರೆ ಹಲವಾರು ತೊಂದರೆಗಳು ಬರುತ್ತವೆ. ರಕ್ತದಲ್ಲಿ 20ng/mlಕ್ಕಿಂತ ಕಡಿಮೆ ವಿಟಮಿನ್ ಡಿ ಕಂಡು ಬಂದರೆ ಡಿ ವಿಟಮಿನ್‌ನ ಕೊರತೆ ಇದೆ ಎಂದರ್ಥ. ದೇಹದಲ್ಲಿ ಡಿ ವಿಟಮಿನ್ ಕೊರತೆಯಾದ್ರೆ ಏನಾಗುತ್ತೆ ಎನ್ನೋದನ್ನು ನೋಡೋಣ:
ಮೊದಲಿಗೆ ಎದುರಾಗುವ ಸಮಸ್ಯೆ ಎಂದರೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ನಮ್ಮ ದೇಹಕ್ಕೆ ರೋಗಾಣುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕಡಿಮೆಯಾಗುವುದು. ಇದರಿಂದಾಗ ಆಗಾಗ ಶೀತ, ಕೆಮ್ಮು ಸಮಸ್ಯೆ ಕಾಡುತ್ತಿದ್ದರೆ ವಿಟಮಿನ್ ಡಿ ಕೂಡ ಒಂದು ಕಾರಣವಿರಬಹುದು.ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುವುದು. ಜೊತೆಗೆ ಆಗಾಗ್ಗೆ ಕಾಯಿಲೆ ಬೀಳಬಹುದು. ಇನ್ನೊಂದು ಮುಖ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆ ಎಂದರೆ, ಉಸಿರಾಟದ ಸಮಸ್ಯೆ, ತಲೆಸುತ್ತು ಹಾಗೂ ಸುಸ್ತು. ಮೇಲಿಂದ ಮೇಲೆ ತಲೆನೋವು ಬರುತ್ತದೆ. ಇವುಗಳಿಗೆ ವಿಭಿನ್ನ ಕಾರಣವಿದ್ದರೂ ವಿಟಮಿನ್ ಡಿ ಸಮಸ್ಯೆಯೂ ಪ್ರಮುಖ ಕಾರಣ ಆಗಿರಬಹುದು. ಇಷ್ಟೇ ಅಲ್ಲದೇ, ಮೂಳೆಯು ಕ್ಯಾಲ್ಸಿಯಂ ಹೀರಿಕೊಳ್ಳಲು ಸಹಾಯ ಮಾಡು ಈ ವಿಟಮಿನ್ ಅಗತ್ಯವಿದೆ. ಆದ್ದರಿಂದ ಇದರ ಕೊರತೆಯಾದರೆ ಮೂಳೆ ಸವೆತವೂ ಕಾಣಿಸಿಕೊಳ್ಳಬಹುದು. ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಎನ್ನುತ್ತಾರೆ ವೈದ್ಯರು. ಕೆಲವು ಸಂದರ್ಭಗಳಲ್ಲಿ ಅದರಲ್ಲಿಯೂ ಹೆಚ್ಚಾಗಿ ಮಧ್ಯವಯಸ್ಸು ದಾಟಿದ ಮೇಲೆ ಖಿನ್ನತೆಗೆ ಕಾರಣವಾಗುವಲ್ಲಿ ಡಿ ವಿಟಮಿನ್ ಕೊರತೆಯೂ ಒಂದು ಪ್ರಮುಖ ಕಾರಣವಾಗಿದೆ.
ಇದರ ಇನ್ನೊಂದು ಪ್ರಮುಖ ಲಕ್ಷಣ ಎಂದರೆ, ದೇಹದ ಮೇಲೆ ಗಾಯವಾಗಿದ್ದರೆ ಬೇಗನೆ ವಾಸಿಯಾಗದೇ ಇರುವುದು. ಮಧುಮೇಹ ರೋಗಿಗಳ ಲಕ್ಷಣಗಳಲ್ಲಿ ಇದು ಒಂದಾದರೂ ವಿಟಮಿನ್ ಡಿ ಕೊರತೆ ಇನ್ನೊಂದು ಕಾರಣ. ಜೊತೆ ಕೂದಲು ಉದರುವುದು, ಸ್ನಾಯುಗಳಲ್ಲಿ ನೋವು ಕಂಡು ಬರುವುದು ಕೂಡ ಎದುರಾಗಬಹುದು. ಬಾಣಂತಿಯರಲ್ಲಿ ಈ ಸಮಸ್ಯೆ ಉಂಟಾದರೆ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಇದಕ್ಕೆ ಸೂರ್ಯನೇ ಮದ್ದು ಎಂದು ಹೇಳಿಯಾಗಿದೆ. ಹಾಗಿದ್ದರೆ ಸೂರ್ಯನ ಬೆಳಕಿನಲ್ಲಿ ಯಾರು, ಹೇಗೆ ನಿಂತುಕೊಳ್ಳಬೇಕು? ಯಾವ ಸಮಯ ಒಳ್ಳೆಯದು ಎಂದು ನೋಡೋಣ.
ಸೂರ್ಯನ ಕಿರಣ ಬೇಕು ಎಂದು ಸುಡು ಬಿಸಿಲಿನಲ್ಲಿ ಹೋದರೆ ಇನ್ನಷ್ಟು ಸಮಸ್ಯೆಗಳು ಬರುವುದು ಖಂಡಿತ. ಹೆಚ್ಚಾಗಿ ಬೆಳಿಗ್ಗೆ 8 ಗಂಟೆಯ ಒಳಗಿನ ಸೂರ್ಯನ ಕಿರಣ ಮತ್ತು ಸಂಜೆ 4 ಗಂಟೆಯ ಬಳಿಕದ ಕಿರಣಗಳು ಮನುಷ್ಯನ ದೇಹಕ್ಕೆ ಒಳ್ಳೆಯದು ಎನ್ನಲಾಗುತ್ತದೆ. ಆದರೆ ಸಂಶೋಧನೆ ಒಂದರ ಪ್ರಕಾರ ಶೇಕಡಾ 50ರಷ್ಟು ಜನರು ಸೂರ್ಯನ ಕಿರಣಗಳಿಗೆ ಮೈಯೊಡ್ಡುವುದೇ ಇಲ್ಲವಂತೆ. ಆದ್ದರಿಂದ ದೇಹಕ್ಕೆ ಇನ್ನಿಲ್ಲದ ಸಮಸ್ಯೆಗಳು ಬಾಧಿಸುತ್ತವೆ.ದಿನದಲ್ಲಿ 8-15 ನಿಮಿಷ ಬಿಸಿಲಿನಲ್ಲಿ ನಿಲ್ಲುವುದು ಒಳ್ಳೆಯದು. ಬಿಳಿ ಬಣ್ಣದವರಿಗಿಂತಲೂ ಕಪ್ಪು ತ್ವಚೆ ಇರುವವರಿಗೆ ಬಿಸಿಲು ಸ್ವಲ್ಪ ಹೆಚ್ಚಿಗೆ ಬೇಕಾಗುತ್ತದೆ. ಅದರಂತೆಯೇ, ವಯಸ್ಸು ಹೆಚ್ಚಾದಂತೆ ಬಿಸಿಲಿನಲ್ಲಿ ಹೆಚ್ಚು ಹೊತ್ತು ನಿಂತರೆ ಒಳ್ಳೆಯದು. ಮಾಂಸಾಹಾರಿಗಳಾಗಿದ್ದರೆ, ಮೀನು ಹಾಗೂ ಸಮುದ್ರ ಆಹಾರಗಳ ಸೇವನೆ, ಅದರಲ್ಲಿಯೂ ಭೂತಾಯಿ, ಮೃದ್ವಂಗಿ, ಸಿಗಡಿ, ಬಂಗುಡೆ ಈ ಮೀನುಗಳಲ್ಲಿ ವಿಟಮಿನ್ ಡಿ ಅಂಶವಿರುತ್ತದೆ ಎನ್ನಲಾಗಿದೆ. ಮೊಟ್ಟೆಯ ಹಳದಿ ಭಾಗದಲ್ಲಿಯೂ ಇದು ಸಿಗಲಿದೆ. ಇವುಗಳನ್ನು ಬಿಟ್ಟರೆ ಕಿತ್ತಳೆ ಹಣ್ಣಿನ ಜ್ಯೂಸ್, ಓಟ್‌ಮೀಲ್, ಧಾನ್ಯಗಳಲ್ಲಿ ವಿಟಮಿನ್ ಡಿ ಸಿಗುತ್ತದೆ. ಅದೇನೆ ಇದ್ದರೂ ಸೂರ್ಯನ ಕಿರಣಕ್ಕಿಂತ ದೊಡ್ಡ ಮದ್ದು ಬೇರೊಂದಿಲ್ಲ.
ಸ್ಟಾರ್ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಹಕ್ಕಿ ತಿನ್ನುವ ಆಹಾರ ಇದಂತೆ...