Asianet Suvarna News Asianet Suvarna News

Body Weight: ನಿಮ್ಮ ಎತ್ತರ, ತೂಕ ಸರಿಯಾಗಿದ್ಯಾ? ಚೆಕ್ ಮಾಡ್ಕೊಳಿ

ಎತ್ತರಕ್ಕೆ ಸಮನಾದ ತೂಕ ಹೊಂದಿದ್ದಾಗ ದೇಹದ ಸೌಂದರ್ಯ ಇಮ್ಮಡಿಸುತ್ತದೆ. ಅದಕ್ಕಿಂತ ಹೆಚ್ಚಾಗಿ ಆರೋಗ್ಯ ಚೆನ್ನಾಗಿರುತ್ತದೆ. ಹಾಗಿದ್ದರೆ ನಿಮ್ಮ ಎತ್ತರಕ್ಕೆ ಸರಿಯಾಗಿ ನೀವು ಎಷ್ಟು ತೂಕ ಹೊಂದಿರುವುದು ಉತ್ತಮ ಎಂದು ಅರಿತುಕೊಳ್ಳಿ.
 

Know your ideal weight according to height
Author
First Published Jan 17, 2023, 5:59 PM IST

ಎತ್ತರಕ್ಕೆ ಸಮನಾದ ತೂಕ ಹೊಂದಿರುವುದಕ್ಕೆ ಐಡಿಯಲ್ ತೂಕ ಎನ್ನಲಾಗುತ್ತದೆ. ಅಂದರೆ, ಎತ್ತರ ಹಾಗೂ ತೂಕ ಆದರ್ಶ ಪ್ರಮಾಣದಲ್ಲಿ ಇರುವುದು. ಆದರೆ, ಇಂದಿನ ದಿನಗಳಲ್ಲಿ ಇದು ಅತ್ಯಂತ ಕಷ್ಟಕರವಾಗಿ ಪರಿಣಮಿಸಿದೆ. ಒಂದೂ ಅತಿಯಾದ ತೂಕ ಅಥವಾ ಕಡಿಮೆ ತೂಕದ ಸಮಸ್ಯೆ ಇಂದು ಹೆಚ್ಚು. ತೂಕವು ಬರೀ ಎತ್ತರಕ್ಕೆ ಸಮನಾಗಿದ್ದರಷ್ಟೇ ಸಾಲದು, ವಯಸ್ಸಿಗೆ ತಕ್ಕಂತೆಯೂ ಇರಬೇಕು. ಅಂದರೆ, ವಯಸ್ಸಿನ ಮೇಲೂ ತೂಕವನ್ನು ನಿರ್ಧರಿಸಬೇಕಾಗುತ್ತದೆ. ಸಾಕಷ್ಟು ಜನ ತೂಕ ಇಳಿಸಬೇಕೆಂದು ಏನೇನೋ ಕಸರತ್ತು ಮಾಡುತ್ತಾರೆ. ವ್ಯಾಯಾಮದ ಜತೆಗೆ, ಆಹಾರದಲ್ಲೂ ಕಟ್ಟುನಿಟ್ಟಾಗಿರುತ್ತಾರೆ. ಆಹಾರದಲ್ಲಿ ಸಕ್ಕರೆ, ಕೆಟ್ಟ ಕೊಬ್ಬು, ಅಧಿಕ ಕಾರ್ಬೋಹೈಡ್ರೇಟ್ ದೇಹ ಸೇರುವುದನ್ನು ನಿಯಂತ್ರಿಸಿದರೆ ತೂಕ ಇಳಿಸಿಕೊಳ್ಳುವುದು ತೀರ ಕಷ್ಟವೇನಲ್ಲ. ಆಹಾರವನ್ನು ನಿಯಂತ್ರಿಸುವುದಷ್ಟೇ ಕಷ್ಟ. ಐಡಿಯಲ್ ತೂಕ ಮೆಂಟೇನ್ ಮಾಡುವವರಿಗೆ ಮಧುಮೇಹ ಹಾಗೂ ಬೊಜ್ಜಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುವ ಸಂಭವ ಅತಿ ಕಡಿಮೆ. ಹೀಗಾಗಿ, ಎತ್ತರ ಹಾಗೂ ವಯಸ್ಸಿಗೆ ಅನುಗುಣವಾಗಿ ತೂಕ ಹೊಂದಿರುವುದು ಅತ್ಯುತ್ತಮ ಜೀವನ ವಿಧಾನ. ಈ ಲೆಕ್ಕಾಚಾರ ದೇಹದ ಬಿಎಂಐ ಅಂದರೆ ದೇಹದ ದ್ರವ್ಯರಾಶಿ  ಸೂಚ್ಯಂಕ -ಬಾಡಿ ಮಾಸ್ ಇಂಡೆಕ್ಸ್ ಮೇಲೆ ಆಧರಿತವಾಗಿರುತ್ತದೆ. 

ಬಾಡಿ ಮಾಸ್ ಇಂಡೆಕ್ಸ್ (Body Mass Index) ಹೆಚ್ಚಿದ್ದರೂ ಕಷ್ಟ, ಕಡಿಮೆಯಿದ್ದರೂ ಕಷ್ಟ. ಇದು ಸರಿಸಮನಾಗಿದ್ದಾಗಲೇ ವ್ಯಕ್ತಿಯ ಎತ್ತರ-ತೂಕ ಸಮನಾಗಿ ಇರಲು ಸಾಧ್ಯ. ಯಾವುದೇ ವ್ಯಕ್ತಿಯ ದೇಹದ ಬಿಎಂಐ 18.5ರಷ್ಟಿದೆ ಎಂದಾದರೆ ಆತನನ್ನು ಕಡಿಮೆ ತೂಕದ (Low Weight) ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಅಗತ್ಯಕ್ಕಿಂತ ಕಡಿಮೆ ತೂಕ ಹೊಂದಿರುವ ಸಮಸ್ಯೆ ಎದುರಿಸಬೇಕಾಗುತ್ತದೆ. ಬಿಎಂಐ 18.5ರಿಂದ 24.9ರವರೆಗೆ ಇದ್ದಾಗ ಅದನ್ನು “ಐಡಿಯಲ್’ (Ideal) ಎಂದು ಪರಿಗಣಿಸಲಾಗುತ್ತದೆ. ಇದು ಪ್ರತಿಯೊಬ್ಬ ಇರಬೇಕಾದ ತೂಕ. ಇಲ್ಲಿ ಎತ್ತರ (Height) ಮತ್ತು ತೂಕದ ಲೆಕ್ಕಾಚಾರ ಸರಿಯಾಗಿರುತ್ತದೆ. ಆದರೆ, ಯಾವಾಗ ಬಿಎಂಐ 25ರಿಂದ 29.9ರಷ್ಟಿರುತ್ತದೆಯೋ ಆಗ ತೂಕ ಹೆಚ್ಚಿರುತ್ತದೆ. ಒಂದೊಮ್ಮೆ ಬಿಎಂಐ 30ರಷ್ಟಿದ್ದರೆ ಅದನ್ನು ಬೊಜ್ಜು (Obecity) ಎಂದು ಪರಿಗಣಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರ ಬಿಎಂಐ ಕೊನೆಯ ಎರಡು ಪ್ರಮಾಣದಲ್ಲೇ ಇರುವುದು ಹೆಚ್ಚು. ಆದರೆ, ದೇಹದ ಬಿಎಂಐ ಅರಿಯುವುದು ನಮ್ಮನಿಮ್ಮಂಥ ಸಾಮಾನ್ಯರಿಗೆ ಕಷ್ಟಸಾಧ್ಯ. ಅದಕ್ಕಾಗಿಯೇ ಪ್ರತ್ಯೇಕ ಪರೀಕ್ಷೆಗಳನ್ನು ಮಾಡಿಸುವುದು ದೂರದ ಮಾತು. ಹೀಗಾಗಿ, ಎತ್ತರಕ್ಕೆ ಅನುಗುಣವಾಗಿ ಎಷ್ಟು ತೂಕ ಇದ್ದರೆ ಉತ್ತಮ ಎನ್ನುವುದನ್ನು ಅರಿತುಕೊಳ್ಳುವುದು ಬೆಸ್ಟ್. ಅಷ್ಟಕ್ಕೂ ಬಿಎಂಐ ಲೆಕ್ಕಾಚಾರದ ಬಗೆಗೂ ಕೆಲವು ಆರೋಪಗಳಿವೆ. 

10 ದಿನದಲ್ಲಿ ತೂಕ ಇಳಿಸ್ಕೊಳ್ಬೋದು, ಮಲಗೋ ಮುನ್ನ ಇಷ್ಟ್ ಮಾಡಿ ಸಾಕು

ತೂಕ ಮೆಂಟೇನ್ ಮಾಡಲು ಸಾಧ್ಯವೇ?
ದೇಹದ (Body) ತೂಕ ಹೆಚ್ಚಾಗುವುದು ನಮ್ಮ ಅರಿವಿಗೆ ಬರುತ್ತಲೇ ಇರುತ್ತದೆ. ಆದರೂ ಅದರ ಬಗೆಗೆ ಗಮನ ನೀಡದೆ ಅಧಿಕ ತೂಕ ಹೊಂದಲು ನಾವೇ ಕಾರಣರಾಗುತ್ತೇವೆ. ಕಷ್ಟವಿಲ್ಲದೆ ದೈನಂದಿನ ಕೆಲಸಕಾರ್ಯಗಳನ್ನು (Works) ಸುಲಭವಾಗಿ, ದೈಹಿಕ ಶ್ರಮದ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿದ್ದರೆ ಪರವಾಗಿಲ್ಲ. ಇಲ್ಲವೆಂದಾದರೆ, ಎಲ್ಲರೂ ತಮ್ಮ ನಿದ್ರಾ ಶೈಲಿ (Sleep Pattern), ಆಹಾರಶೈಲಿ (Food Style) ಹಾಗೂ ಕೆಲಸಕಾರ್ಯಗಳ ಕುರಿತು ಪುನರವಲೋಕನ (Review) ಮಾಡಿಕೊಳ್ಳುವುದು ಒಳಿತು ಎನ್ನುತ್ತಾರೆ ತಜ್ಞರು. 

10 ದಿನದಲ್ಲಿ ತೂಕ ಇಳಿಸ್ಕೊಳ್ಬೋದು, ಮಲಗೋ ಮುನ್ನ ಇಷ್ಟ್ ಮಾಡಿ ಸಾಕು

ತೂಕ-ಎತ್ತರದ ಅನುಪಾತ (Ratio) ಹೇಗಿರಬೇಕು?
•    ಎತ್ತರ 4 ಅಡಿ (Feet) 10 ಇಂಚು (Inch) ಇದ್ದಾಗ ಐಡಿಯಲ್ ತೂಕ 41-52 ಕೆಜಿ. ಈ ಪ್ರಮಾಣ ಮೀರಿದರೆ ಬೊಜ್ಜಿನ ಸಮಸ್ಯೆ ಗ್ಯಾರೆಂಟಿ.
•    5 ಅಡಿ -ತೂಕ 44-55.7 
•    5 ಅಡಿ, 2 ಇಂಚು - 49-63 ಕೆಜಿ ತೂಕ 
•    5 ಅಡಿ, 4 ಇಂಚು- ತೂಕ 49-63 ಕೆಜಿ 
•    5 ಅಡಿ 6 ಇಂಚು-53-67 ಕೆಜಿ
•    5 ಅಡಿ 8 ಇಂಚು-56-71 ಕೆಜಿ
•    5 ಅಡಿ, 10 ಇಂಚು-59-75 ಕೆಜಿ
•    6 ಅಡಿ-63-80 ಕೆಜಿ


 

Follow Us:
Download App:
  • android
  • ios