ಅಳು ಮನಸ್ಸಿಗೆ ಮುದ ನೀಡ್ಬಹುದು, ಕಣ್ಣೀರು ಬ್ಯೂಟಿಗೆ ತರಬಹುದು ಕುತ್ತು!

ದಿನದಲ್ಲಿ ಒಮ್ಮೆ ಅತ್ತಿಲ್ಲ ಅಂದ್ರೆ ಕೆಲವರಿಗೆ ಸಮಾಧಾನ ಇಲ್ಲ. ಕೋಪ ವಿಕೋಪಕ್ಕೆ ಹೋದಾಗ ಗೋಳೋ ಅಂತ ಅಳುವ ಜನರಿದ್ದಾರೆ. ದಿನಕ್ಕೊಮ್ಮೆ, ಎರಡು ದಿನಕ್ಕೊಮ್ಮೆ ಅಳೋರು ನೀವಾಗಿದ್ರೆ ನಿಮ್ಮ ಸೌಂದರ್ಯ ಹಾಳಾಗುತ್ತೆ ಎಚ್ಚರ.
 

Know Why Crying Is Really Bad For Your Skin beauty tips roo

ಅಳೋದು ಒಂದು ಜೈವಿಕ ಪ್ರಕ್ರಿಯೆ. ಪ್ರತಿಯೊಬ್ಬ ಮನುಷ್ಯ ಒಂದಲ್ಲೊಂದು ಸಂದರ್ಭದಲ್ಲಿ ಕಣ್ಣೀರು ಹಾಕ್ತಾನೆ. ಮಕ್ಕಳ ಅಳೋದು ಸಾಮಾನ್ಯವಾಗಿದ್ರೂ, ಒತ್ತಡದ ಜೀವನ, ಗಲಾಟೆ, ಮುಸಿನಿನ ನಂತ್ರ ದೊಡ್ಡವರೂ ಅಳ್ತಿರುತ್ತಾರೆ. ಅಪರೂಪಕ್ಕೊಮ್ಮೆ ನೀವು ಅತ್ತರೆ ಒಳ್ಳೆಯದು ಎಂದೇ ತಜ್ಞರು ಹೇಳ್ತಾರೆ. ಅಳು ನೀವು ಹಿಡಿದಿಟ್ಟ ಒತ್ತಡವನ್ನು ಹೊರಹಾಕಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆದ್ರೆ ದಿನಕ್ಕೆರಡು ಬಾರಿ, ವಾರಕ್ಕೆ ನಾಲ್ಕೈದು ಬಾರಿ ಅಳುವ ಅಭ್ಯಾಸ ನಿಮಗಿದ್ದರೆ, ಮಾತು ಮಾತಿಗೂ ನೀವು ಅಳ್ತಿದ್ದರೆ ಅದು ಒಳ್ಳೆಯದಲ್ಲ. ಈ ಅಳು ನಿಮ್ಮ ಚರ್ಮದ ಮೇಲೆ ಅಡ್ಡಪರಿಣಾಮ ಬೀರುತ್ತದೆ. 

ಪದೇ ಪದೇ ಅಳುವುದರಿಂದ ಮಾನಸಿಕ ಆರೋಗ್ಯ (Mental Health) ಕ್ಕೆ ಹಾನಿಯಾಗುವುದಲ್ಲದೆ ತ್ವಚೆ (Skin) ಯ ಮೇಲೂ ಪರಿಣಾಮ ಬೀರುತ್ತದೆ. ಕಣ್ಣುಗಳಿಂದ ಹೊರಬರುವ ಕಣ್ಣೀರು (tears) ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ನೀವು ಆಗಾಗ ಅಳ್ತಿದ್ದರೆ ಮೂಗು, ಮುಖ ಮತ್ತು ಕಣ್ಣುಗಳ ಬಳಿ ಇರುವ ರಕ್ತನಾಳಗಳು ಹಿಗ್ಗುತ್ತವೆ. ಮುಖದ ಮೇಲೆ ಊತ, ಕೆಂಪು ಬಣ್ಣ ಕಾಣಿಸಿಕೊಳ್ಳುತ್ತದೆ. ಚರ್ಮದ ಪಿಎಚ್ ಮಟ್ಟ ಕೂಡ ಬದಲಾಗುತ್ತದೆ. 

ಕೋವಿಶೀಲ್ಡ್‌ ಅಡ್ಡಪರಿಣಾಮ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ

ಕಣ್ಣೀರು ಎಲೆಕ್ಟ್ರೋಲೈಟ್ ಗಳಿಂದ ಸಮೃದ್ಧವಾಗಿದೆ. ಇದು ನಮ್ಮ ದೇಹಕ್ಕೆ ಅಗತ್ಯ. ನೀವು ಹೆಚ್ಚಿನ ಪ್ರಮಾಣದಲ್ಲಿ ಅತ್ತಾಗ ನಿಮ್ಮ ದೇಹದಿಂದ ಎಲೆಕ್ಟ್ರೋಲೈಟ್ ಹೊರ ಹೋಗುತ್ತದೆ. ಹಾಗಾಗಿ ಈ ಸಮಯದಲ್ಲಿ ನೀವು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡುವ ಅಗತ್ಯವಿರುತ್ತದೆ. ಅತ್ತ ನಂತ್ರ ನಿಮ್ಮ ಮುಖವನ್ನು ನೀರಿನಿಂದ ಸ್ವಚ್ಛಗೊಳಿಸುವುದು ಕೂಡ ಮುಖ್ಯ.

ಅತಿಯಾಗಿ ಅಳೋದ್ರಿಂದ ನಿಮ್ಮ ಚರ್ಮಕ್ಕಾಗುವ ಹಾನಿ : 
ಚರ್ಮದ ಸೋಂಕು (Skin Infection) :
ನೀವು ಪದೇ ಪದೇ ಅಳ್ತಿದ್ದರೆ ಅತ್ತ ನಂತ್ರ ಕಣ್ಣೀರು ಒರೆಸಲು ಕರವಸ್ತ್ರ ಬಳಸುತ್ತೀರಿ. ಇದು ಚರ್ಮವನ್ನು ಹಾನಿಗೊಳಿಸುತ್ತದೆ. ಮೊಡವೆ ಇರುವವರಿಗೆ ಇದ್ರಿಂದ ನಷ್ಟ ಹೆಚ್ಚು. ಸೋಂಕಿನ ಅಪಾಯವಿರುತ್ತದೆ. ನೀವು ಕಣ್ಣೀರನ್ನು ಮುಖಕ್ಕೆ ಹಾನಿಯಾಗದಂತೆ ಒರೆಸಬೇಕು. 

ಕಾರ್ಟಿಸೋಲ್ ಮಟ್ಟ ಹೆಚ್ಚಳ (Increase in Cartisol Level) : ಹೆಚ್ಚು ಅಳೋದ್ರಿಂದ ದೇಹದಲ್ಲಿ ಕಾರ್ಟಿಸೋಲ್ ಮಟ್ಟ ಹೆಚ್ಚಾಗುತ್ತದೆ. ಇದರಿಂದ ಚರ್ಮದ ಮೇದೋಗ್ರಂಥಿಗಳ ಸ್ರಾವ ಗ್ರಂಥಿಗಳು ವೇಗವಾಗಿ ಕಾರ್ಯನಿರ್ವಹಿಸುತ್ತವೆ. ಇದ್ರಿಂದ ತೈಲ ಉತ್ಪಾದನೆ ವೇಗಗೊಳ್ಳುತ್ತದೆ. ಇದರಿಂದ ಮೊಡವೆ ಕೂಡ ಹೆಚ್ಚಾಗುತ್ತದೆ. 

ಚರ್ಮದ ನಿರ್ಜಲೀಕರಣ (Dehydration of Skin) : ನೀವು ನಿರಂತರವಾಗಿ ಅಳ್ತಿದ್ದರೆ ನಿಮ್ಮ ದೇಹ ನಿರ್ಜಲೀಕರಣಗೊಳ್ಳುತದೆ. ಚರ್ಮದಲ್ಲಿರುವ ನೀರಿನ ಅಂಶ ಕಡಿಮೆ ಆಗುತ್ತದೆ. ಇದ್ರಿಂದ ಎಲೆಕ್ಟ್ರೋಲೈಟ್‌ಗಳ ಕೊರತೆಯುಂಟಾಗುತ್ತದೆ. 

ಮುಖದ ಮೇಲೆ ಊತ (Swelling Face) : ಮೊದಲೇ ಹೇಳಿದಂತೆ ನೀವು ಪದೇ ಪದೇ ಅಳುವುದರಿಂದ ನಿಮ್ಮ ಮುಖದ ಚರ್ಮದ ಮೇಲೆ ಊತ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಕಾರಣ ಕಣ್ಣು, ಮೂಗಿನ ಭಾಗ ಹಿಗ್ಗುವುದು. ಈ ಭಾಗ ಹಿಗ್ಗಿದಾಗ ಕಣ್ಣು, ಮೂಗು, ತುಟಿಯ ಭಾಗದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಇದು ಚರ್ಮಕ್ಕೆ ಹಾನಿಯುಂಟು ಮಾಡುತ್ತದೆ. 

ಕ್ಯಾನ್ಸರ್‌ಗೆ ಬರೋಕೆ ಐದು ಮುಖ್ಯ ಕಾರಣಗಳಿವು

ಅತ್ತ ನಂತ್ರ ಚರ್ಮದ ಆರೈಕೆ ಹೀಗಿರಲಿ (Skin Care tips) : ನೀವು ಅತ್ತ ನಂತ್ರ ಮುಖ ಶುಷ್ಕವಾಗುತ್ತದೆ. ಚರ್ಮದಲ್ಲಿರುವ ನೀರಿನ ಅಂಶ ಕಡಿಮೆ ಆಗುತ್ತದೆ. ನೀವು ಅತ್ತ ನಂತ್ರ  ಮಾಯಿಶ್ಚರೈಸರ್ ಕ್ರೀಮ್ ಹಚ್ಚೋದನ್ನು ಮರೆಯಬೇಡಿ. ಇದು ಚರ್ಮ ತೇವಾಂಶದಿಂದ ಕೂಡಿರಲು ಸಹಾಯ ಮಾಡುತ್ತದೆ. ಇದ್ರ ಜೊತೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಸೇವನೆ ಮಾಡೋದನ್ನು ನೀವು ಮರೆಯಬಾರದು. ಅತ್ತ ನಂತ್ರ ಕೈನಿಂದ ಅಥವಾ ಒರಟಾದ ಬಟ್ಟೆಯಿಂದ ಕಣ್ಣನ್ನು ಒರೆಸಿಕೊಳ್ಳಬೇಡಿ. ಮೃದುವಾದ ಬಟ್ಟೆ ಹಾಗೂ ಸ್ವಚ್ಛವಾದ ಬಟ್ಟೆಯಿಂದ ನೀವು ಕಣ್ಣೀರನ್ನು ಒರೆಸಬೇಕು. ಚರ್ಮಕ್ಕೆ ಹಾನಿಯಾಗದಂತೆ ಮುಖದ ಆರೈಕೆ ಮಾಡಬೇಕು. 

Latest Videos
Follow Us:
Download App:
  • android
  • ios