ಕೋವಿಶೀಲ್ಡ್‌ ಅಡ್ಡಪರಿಣಾಮ ಬಗ್ಗೆ ಪ್ಯಾಕ್‌ ಮೇಲೇ ಸ್ಪಷ್ಟನೆ ನೀಡಿದ್ದೇವು: ಸೀರಂ

ಆಸ್ಟ್ರಾಜೆನೆಕಾ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಸಾಧ್ಯತೆ ಕುರಿತು ಅದರ ಉತ್ಪಾದಕ ಕಂಪನಿಯಾದ ಆಸ್ಟ್ರಾಜೆನೆಕಾ ಹೇಳಿಕೆ ನೀಡಿ ಉತ್ಪಾದನೆ ಹಾಗೂ ಮಾರಾಟ ಸ್ಥಗಿತ ಮಾಡಿದ ಬೆನ್ನಲ್ಲೇ, ಅದರ ಭಾರತದ ಪಾಲುದಾರ ಕಂಪನಿಯಾದ ‘ಕೋವಿಶೀಲ್ಡ್’ ಲಸಿಕೆ ಉತ್ಪಾದಕ ಸೀರಂ ಕಂಪನಿ ಸ್ಪಷ್ಟನೆ ನೀಡಿದೆ. 

Covishield side effect is explained on the pack Says Serum gvd

ನವದೆಹಲಿ (ಮೇ.09): ಆಸ್ಟ್ರಾಜೆನೆಕಾ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮದ ಸಾಧ್ಯತೆ ಕುರಿತು ಅದರ ಉತ್ಪಾದಕ ಕಂಪನಿಯಾದ ಆಸ್ಟ್ರಾಜೆನೆಕಾ ಹೇಳಿಕೆ ನೀಡಿ ಉತ್ಪಾದನೆ ಹಾಗೂ ಮಾರಾಟ ಸ್ಥಗಿತ ಮಾಡಿದ ಬೆನ್ನಲ್ಲೇ, ಅದರ ಭಾರತದ ಪಾಲುದಾರ ಕಂಪನಿಯಾದ ‘ಕೋವಿಶೀಲ್ಡ್’ ಲಸಿಕೆ ಉತ್ಪಾದಕ ಸೀರಂ ಕಂಪನಿ ಸ್ಪಷ್ಟನೆ ನೀಡಿದೆ. ‘ಲಸಿಕೆ ಅಡ್ಡಪರಿಣಾಮಗಳ ಕುರಿತು ಲಸಿಕೆಯ ಪ್ಯಾಕ್‌ ಮೇಲೆ ನಾವು ಕೂಡಾ ಸ್ಪಷ್ಟವಾಗಿ ನಮೂದಿಸಿದ್ದೆವು. ಅಲ್ಲದೆ ಅತ್ಯಂತ ಬೃಹತ್ ಪ್ರಮಾಣದ ಲಸಿಕಾಕರಣ ಮತ್ತು ಹೊಸ ಹೊಸ ತಳಿಗಳ ಉಗಮದ ಹಿನ್ನೆಲೆಯಲ್ಲಿ 2021ರ ಡಿಸೆಂಬರ್‌ನಲ್ಲೇ ನಾವು ಕೋವಿಶೀಲ್ಡ್ ಲಸಿಕೆ ಉತ್ಪಾದನೆ ಮತ್ತು ಪೂರೈಕೆ ಸ್ಥಗಿತಗೊಳಿಸಿದ್ದೇವೆ’ ಎಂದು ಸೀರಂ ಹೇಳಿದೆ.

ಆಸ್ಟ್ರಾಜೆನೆಕಾ ಲಸಿಕೆಯನ್ನು ಅದರಲ್ಲಿದ್ದ ಅಂಶವನ್ನೇ ಬಳಸಿಕೊಂಡು ಭಾರತದಲ್ಲಿ ಕೋವಿಶೀಲ್ಡ್‌ ಹೆಸರಲ್ಲಿ ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಬಿಡುಗಡೆ ಮಾಡಿತ್ತು. ಬುಧವಾರ ಕುರಿತು ಹೇಳಿಕೆ ನೀಡಿರುವ ಕಂಪನಿ, ‘ಹಾಲಿ ಲಸಿಕೆ ಕುರಿತು ಕೇಳಿಬಂದಿರುವ ಕಳವಳ ಬಗ್ಗೆ ನಾವು ಸಂಪೂರ್ಣ ಅರಿವು ಹೊಂದಿದ್ದೇವೆ. ಹೀಗಾಗಿ ಲಸಿಕೆ ವಿಷಯದಲ್ಲಿ ಪಾರದರ್ಶಕತೆ ಮತ್ತು ಭದ್ರತೆ ಕುರಿತ ನಮ್ಮ ಬದ್ಧತೆಯನ್ನು ಜನರ ಮುಂದಿಡುವುದು ಅತ್ಯಂತ ಮಹತ್ವದ್ದು’ ಎಂದು ಹೇಳಿದೆ.

ಕೋವಿಶೀಲ್ಡ್ ಅಡ್ಡ ಪರಿಣಾಮವಿದ್ರೂ ತೀರಾ ವಿರಳ: ಲಸಿಕೆ ಪಡೆದವರಿಗೆ ಆತಂಕ ಬೇಡ

ಜೊತೆಗೆ, ‘ನಮ್ಮ ಲಸಿಕೆ ಉತ್ಪಾದನೆ ವೇಳೆ ಸುರಕ್ಷತೆಗೆ ಅತ್ಯಂತ ಗರಿಷ್ಠ ಆದ್ಯತೆ ನೀಡಲಾಗಿತ್ತು. ಇದರ ಜೊತೆಗೆ ಲಸಿಕೆ ಪಡೆದವರ ಪೈಕಿ ಅತ್ಯಂತ ಅಪರೂಪದ ಪ್ರಕರಣದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೇಟ್‌ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು 2021ರಲ್ಲಿ ಬಿಡುಗಡೆ ಮಾಡಿದ ಲಸಿಕೆ ಪ್ಯಾಕ್ ಮೇಲೆ ನಾವು ಅತ್ಯಂತ ಸ್ಪಷ್ಟವಾಗಿ ನಮೂದಿಸಿದ್ದೆವು. ಕೋವಿಶೀಲ್ಡ್‌ ವಿಶ್ವಾದ್ಯಂತ ಲಕ್ಷಾಂತರ ಜನರ ಜೀವ ಉಳಿಸುವಲ್ಲಿ ನೆರವಾಗಿದೆ’ ಎಂದು ಸ್ಪಷ್ಟನೆ ನೀಡಿದೆ.

Latest Videos
Follow Us:
Download App:
  • android
  • ios