ನಾಲಿಗೆ ಬಣ್ಣ ನೋಡಿ ನಿಮ್ಗೇನು ಆರೋಗ್ಯ ಸಮಸ್ಯೆಯಿದೆ ತಿಳ್ಕೊಳ್ಳಿ

ನಿಮ್ಮ ನಾಲಿಗೆಯ ಬಣ್ಣವನ್ನು ಪರೀಕ್ಷಿಸುವ ಅಭ್ಯಾಸವನ್ನು ನೀವು ಹೊಂದಿದ್ದೀರಾ ? ಇಲ್ಲದಿದ್ದರೆ, ನೀವು ಹಾಗೆ ಮಾಡಲು ಪ್ರಾರಂಭಿಸಬೇಕಾದ ಸಮಯವಿದು. ಏಕೆಂದರೆ ಇದು ನಿಮ್ಮ ನಾಲಿಗೆ ಆರೋಗ್ಯದ ಬಗ್ಗೆ ಬಹಳಷ್ಟು ವಿಚಾರಗಳನ್ನು ಹೇಳುತ್ತದೆ. ನಾಲಗೆಯ ಬಣ್ಣ ನೋಡಿ ಯಾವ ಆರೋಗ್ಯ ಸಮಸ್ಯೆಯಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅದ್ಹೇಗೆ ?

Know What Your Tongue Colour Say About Your Health Vin

ಸಾಂಕ್ರಾಮಿಕ ರೋಗಗಳು ವ್ಯಾಪಕವಾಗಿ ಹರಡುತ್ತಿರುವ ಈ ದಿನಗಳಲ್ಲಿ ಆರೋಗ್ಯದ ಬಗ್ಗೆ ಯಾರಿಗೆ ತಾನೇ ಕಾಳಜಿಯಿಲ್ಲ ಹೇಳಿ. ಯಾವಾಗಲೂ ಆರೋಗ್ಯವಾಗಿರಬೇಕೆಂದು ಎಲ್ಲರೂ ಬಯಸುತ್ತಾರ. ಆದರೆ ಕಾಯಿಲೆಗಳು ಮಾತ್ರ ಬೆಂಬಿಡದೆ ಕಾಡ್ತಾನೆ ಇರುತ್ತೆ. ಆರೋಗ್ಯವಾಗಿರಲು ದೇಹದ ಎಲ್ಲಾ ಭಾಗವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ತುಂಬಾ ಮುಖ್ಯ. ಅಂಗಾಂಗಗಳಲ್ಲಿ ಉಂಟಾಗುವ ಬದಲಾವಣೆ ನಿಮ್ಮಲ್ಲಿರೋ ಆರೋಗ್ಯ ಸಮಸ್ಯೆಯನ್ನು ಸೂಚಿಸುತ್ತದೆ. ಅದರಲ್ಲೂ ನಾಲಗೆಯ ಬಣ್ಣದಿಂದ ನಿಮ್ಮ ಆರೋಗ್ಯ ಸಮಸ್ಯೆಯನ್ನು ಪತ್ತೆಹಚ್ಚಬಹುದು. ನೀವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವಾಗ ನಿಮ್ಮ ನಾಲಿಗೆಯ ಬಣ್ಣದಲ್ಲಿ ಸ್ವಲ್ಪ ಬದಲಾವಣೆಗಳನ್ನು ನೀವು ಗಮನಿಸಬಹುದು.

ನಿಮಗೆ ಜ್ವರ (Fever) ಬಂದಿದ್ದರೆ ಅಥವಾ ನೀವು ಹೊಟ್ಟೆಯ ಸಮಸ್ಯೆಗಳಿಂದ ಬಳಲುತ್ತಿದ್ದರೆ ನಿಮ್ಮ ನಾಲಿಗೆಯ (Tongue) ಬಣ್ಣವನ್ನು ಪರೀಕ್ಷಿಸಿ. ನಿಯಮಿತ ಆರೋಗ್ಯ (Health) ತಪಾಸಣೆಗಾಗಿ ನೀವು ವೈದ್ಯರ ಬಳಿಗೆ ಹೋಗಿದ್ದರೆ, ಅವರು ನಿಮ್ಮ ನಾಲಿಗೆಯನ್ನು ಫ್ಲ್ಯಾಷ್‌ಲೈಟ್‌ನೊಂದಿಗೆ ಪರೀಕ್ಷಿಸುವಾಗ ಅವರು ನಿಮ್ಮ ನಾಲಿಗೆಯನ್ನು ಹೊರಹಾಕಲು ಹೇಳಿದ ಕ್ಷಣವನ್ನು ನೀವು ನೆನಪಿಸಿಕೊಳ್ಳುತ್ತೀರಿ. ವೈದ್ಯರು ನಾಲಿಗೆಯನ್ನು ಪರೀಕ್ಷಿಸುವ ಮೂಲಕ ರೋಗಿಗಳ ಸಾಮಾನ್ಯ ಆರೋಗ್ಯವನ್ನು ನಿರ್ಧರಿಸುತ್ತಾರೆ. ಹಾಗಿದ್ರೆ ನಾಲಿಗೆಯ ಯಾವ ಬಣ್ಣ ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ.

Mind Your Tongue: ಬೇಕಾಬಿಟ್ಟಿ ಮಾತನಾಡೋ ಮುನ್ನ ಹೋಲ್ಡ್‌ ಆನ್‌

ನಿಮ್ಮ ನಾಲಿಗೆಯ ಬಣ್ಣ ಆರೋಗ್ಯದ ಬಗ್ಗೆ ಏನು ಹೇಳುತ್ತದೆ ?

1. ಗುಲಾಬಿ: ಸ್ವಲ್ಪ ಬಿಳಿ ಲೇಪನದೊಂದಿಗೆ, ನಿಮ್ಮ ನಾಲಿಗೆಯ ನೈಸರ್ಗಿಕ ಬಣ್ಣವಾದ ಬಿಳಿಯನ್ನು ಹೊಂದಿದ್ದರೆ, ಇದರರ್ಥ ನೀವು ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದೀರಿ ಎಂಬುದಾಗಿದೆ. ನಾಲಿಗೆ ಈ ರೀತಿಯಿದ್ದಾಗ ನಿಮ್ಮ ದೇಹವು (Body) ಸಾಮಾನ್ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆರೋಗ್ಯಕರ ನಾಲಿಗೆಯು ಅಲ್ಲಿ ಇಲ್ಲಿ ಸಣ್ಣ ತಿರುಳಿರುವ ಉಬ್ಬುಗಳನ್ನು ಹೊಂದಿರುತ್ತದೆ ಅದು ನಿಮ್ಮ ನಾಲಿಗೆಗೆ ಒರಟಾದ ವಿನ್ಯಾಸವನ್ನು ನೀಡುತ್ತದೆ.

2. ಹಳದಿ: ಹಳದಿ ನಾಲಿಗೆ ಹೆಚ್ಚಾಗಿ ಹೊಟ್ಟೆಯ (Stomach) ಸಮಸ್ಯೆಗಳಿಗೆ ಸಂಬಂಧಿಸಿದೆ. ನೀವು ಜೀರ್ಣಕಾರಿ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೊಂದಿದ್ದರೆ ನಿಮ್ಮ ನಾಲಿಗೆ ಹಳದಿ ಬಣ್ಣದಲ್ಲಿ ಇರುತ್ತದೆ. US ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನವು ಹಳದಿ ನಾಲಿಗೆಯು ಟೈಪ್ 2 ಮಧುಮೇಹದ ಸಂಕೇತವಾಗಿದೆ ಎಂದು ಹೇಳುತ್ತದೆ. ಹಳದಿ ನಾಲಿಗೆಯು ಕಾಮಲೆಯ ಅಡ್ಡ ಪರಿಣಾಮವೂ ಆಗಿರಬಹುದು ಅಥವಾ ನಿಮ್ಮ ನಾಲಿಗೆಯಲ್ಲಿ ಬ್ಯಾಕ್ಟೀರಿಯಾದ ಶೇಖರಣೆಗೆ ಕಾರಣವಾದ ಕಳಪೆ ಮೌಖಿಕ ನೈರ್ಮಲ್ಯದ ಕಾರಣದಿಂದಾಗಿರಬಹುದು.

3. ಬಿಳಿ ಅಥವಾ ಬೂದು: ನಾಲಿಗೆಯು ಸಾಮಾನ್ಯವಾಗಿ ಬಿಳಿ ಲೇಪನವನ್ನು ಹೊಂದಿರುತ್ತದೆ .ಆದರೆ ಕೆಲವು ಬೂದು ಪ್ರದೇಶಗಳೊಂದಿಗೆ ಸಾಮಾನ್ಯಕ್ಕಿಂತ ಬಿಳಿಯಾಗಿದ್ದರೆ, ಅದು ನಿಮ್ಮ ದೇಹದಲ್ಲಿ ಯೀಸ್ಟ್ ಸೋಂಕಿನ ಸಂಕೇತವಾಗಿರಬಹುದು. ನೀವು ಲ್ಯುಕೋಪ್ಲಾಕಿಯಾದಿಂದ ಬಳಲುತ್ತಿದ್ದರೆ ನಾಲಿಗೆಯ ಮೇಲೆ ಬಿಳಿ ತೇಪೆಗಳನ್ನು ಸಹ ಗಮನಿಸಬಹುದು, ಇದು ಸಾಮಾನ್ಯವಾಗಿ ಧೂಮಪಾನ (Smoking)ದಿಂದ ಅಥವಾ ಇತರ ತಂಬಾಕು ಉತ್ಪನ್ನಗಳ ಸೇವನೆಯಿಂದ ಉಂಟಾಗುತ್ತದೆ.

Home Remedy : ಬಿಸಿ ಬಿಸಿ ಟೀ ಕುಡಿದು ನಾಲಿಗೆ ಸುಡ್ತಾ? ಹೀಗ್ಮಾಡಿ..

4. ನೇರಳೆ: ನಿಮ್ಮ ದೇಹದಲ್ಲಿ ರಕ್ತ ಪರಿಚಲನೆ ಕಡಿಮೆಯಾದಾಗ ನಿಮ್ಮ ನಾಲಿಗೆ ನೇರಳೆ ಬಣ್ಣಕ್ಕೆ ತಿರುಗುತ್ತದೆ. ವಿವಿಧ ಶ್ವಾಸಕೋಶ ಅಥವಾ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಅಸಮರ್ಪಕ ರಕ್ತ ಪರಿಚಲನೆ ಉಂಟಾಗಬಹುದು. ನೀವು ಹೃದಯದ ಕಾಯಿಲೆ (Heart disease)ಯಿಂದ ಬಳಲುತ್ತಿದ್ದರೆ, ನೀವು ದೀರ್ಘಕಾಲದವರೆಗೆ ನೇರಳೆ ಬಣ್ಣದ ನಾಲಿಗೆಯನ್ನು ಗಮನಿಸುತ್ತೀರಿ.

5. ಕೆಂಪು: ಪ್ರಕಾಶಮಾನವಾದ ಕೆಂಪು ನಾಲಿಗೆಯು ಸಾಮಾನ್ಯವಾಗಿ ಊದಿಕೊಂಡಿರುತ್ತದೆ. ಇದನ್ನು ವೈದ್ಯರು "ಸ್ಟ್ರಾಬೆರಿ ನಾಲಿಗೆ" ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ರಕ್ತ ಅಸ್ವಸ್ಥತೆಗಳು ಅಥವಾ ಹೃದಯ ಸಮಸ್ಯೆಗಳನ್ನು ಸೂಚಿಸುತ್ತದೆ. ಇದು ವಿಟಮಿನ್ ಬಿ ಕೊರತೆ ಅಥವಾ ಸ್ಕಾರ್ಲೆಟ್ ಜ್ವರದ ಸೂಚನೆಯಾಗಿರಬಹುದು.

Latest Videos
Follow Us:
Download App:
  • android
  • ios