Oral hygiene: ಬಾಯಿಯ ಆರೋಗ್ಯ ಹೆಚ್ಚಿಸುವ ಆಯಿಲ್ ಪುಲ್ಲಿಂಗ್..
ಆಯಿಲ್ ಪುಲ್ಲಿಂಗ್‌ನಿಂದ ಬಾಯಿ ಸ್ವಚ್ಛಗೊಳಿಸಿದರೆ ಎಷ್ಟೆಲ್ಲ ಲಾಭಗಳಿವೆ ಗೊತ್ತಾ..
ಮುಂಚೆ ಭಾರತೀಯರು ಬೇವಿನ ಕಡ್ಡಿ, ಉಪ್ಪು, ನಿಂಬೆಯಿಂದ ಹಲ್ಲನ್ನು ಸ್ವಚ್ಛಗೊಳಿಸುತ್ತಿದ್ದ ರೀತಿಯನ್ನು ಆಡಿಕೊಂಡು ಬಂದ ಅಂತಾರಾಷ್ಟ್ರೀಯ ಪೇಸ್ಟ್ ಕಂಪನಿಗಳೆಲ್ಲ ಇಂದು ತಮ್ಮ ಉತ್ಪನ್ನದಲ್ಲಿ ಉಪ್ಪು ಇದೆ, ನಿಂಬೆ ಇದೆ, ಬೇವಿದೆ ಎಂದುಕೊಂಡು ಮಾರ್ಕೆಟಿಂಗ್ ಮಾಡುತ್ತಿರುವುದು ಗೊತ್ತೇ ಇದೆ. ಅಂದರೆ ನಮ್ಮ ಸಾಂಪ್ರದಾಯಿಕ ಆರೋಗ್ಯಕರ ಪದ್ಧತಿಗಳನ್ನು ಅವು ತಡವಾಗಿಯಾದರೂ ಒಪ್ಪಿಕೊಂಡಿವೆ ಎಂದರ್ಥ. ಬಾಯಿಯ ಆರೋಗ್ಯ ಕಾಪಾಡಲು ಭಾರತೀಯರು ಬಳಸುತ್ತಿದ್ದ ಮತ್ತೊಂದು ಅಂಥ ಸಾಂಪ್ರದಾಯಿಕ ಪದ್ಧತಿಯೇ ಆಯಿಲ್ ಪುಲ್ಲಿಂಗ್( Oil pulling).
ಹಳೆಯದೆಂದು ಮೂದಲಿಕೆಗೊಳಗಾಗಿ ಮತ್ತೆ ಈಗ ಹೊಸತೇನೋ ಆವಿಷ್ಕಾರವೆಂಬಂತೆ ಜನಪ್ರಿಯವಾಗುತ್ತಿದೆ ಈ ಆಯಿಲ್ ಪುಲ್ಲಿಂಗ್. ಪಾಶ್ಚಾತ್ಯರು ಕೂಡಾ ಆಯಿಲ್ ಪುಲ್ಲಿಂಗ್ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಏಕೆಂದರೆ, ವೈಜ್ಞಾನಿಕ ಪುರಾವೆಗಳು ಕೂಡಾ ಆಯಿಲ್ ಪುಲ್ಲಿಂಗ್ ಬಾಯಿಯ ಆರೋಗ್ಯ ಕಾಪಾಡುವಲ್ಲಿ ಸಹಕಾರಿ ಎಂಬುದನ್ನು ಸಾಬೀತುಪಡಿಸಿವೆ.
ಏನಿದು ಆಯಿಲ್ ಪುಲ್ಲಿಂಗ್?
ಬಾಯಿಯಲ್ಲಿ ಎಣ್ಣೆ ಹಾಕಿಕೊಂಡು ಮುಕ್ಕಳಿಸುವ ನಾಟಿ ಪದ್ಧತಿಯೇ ಆಯಿಲ್ ಪುಲ್ಲಿಂಗ್. ನಾವು ದಿನಕ್ಕೆರಡು ಸಲ ಹೇಗೆ ಹಲ್ಲುಜ್ಜುತ್ತೇವೆಯೋ ಹಾಗೆಯೇ ದಿನಕ್ಕೆರಡು ಬಾರಿ ಆಯಿಲ್ ಪುಲ್ಲಿಂಗ್ ಮಾಡಿಕೊಂಡರೆ ಅದರಿಂದ ಇರುವ ಆರೋಗ್ಯ ಪ್ರಯೋಜನಗಳು ಅಧಿಕ.
Protein Rich Food: ಆಹಾರದಲ್ಲಿ ಧಾನ್ಯಗಳ ಬಳಕೆ ಹೇಗಿರಬೇಕು..? ಯಾವ ಬೇಳೆ ಆರೋಗ್ಯಕ್ಕೆ ಉತ್ತಮ
ಹೇಗೆ ಮಾಡುವುದು?
ಒಂದು ಚಮಚ ಕೊಬ್ಬರಿ ಎಣ್ಣೆ ಇಲ್ಲವೇ ಎಳ್ಳೆಣ್ಣೆ ತೆಗೆದುಕೊಳ್ಳಿ. ಇವಲ್ಲದೆ ಸಂಸ್ಕರಿಸದ(non-refined) ಯಾವುದೇ ಅಡುಗೆ ಎಣ್ಣೆಯನ್ನೂ ಬಳಸಬಹುದು. ಎಳ್ಳೆಣ್ಣೆ ಅತ್ಯುತ್ತಮ ಎನ್ನುತ್ತದೆ ಆಯುರ್ವೇದ. ಇದನ್ನು ಬಾಯಿಗೆ ಹಾಕಿಕೊಂಡು ಸುಮಾರು 10-15 ನಿಮಿಷ ಬಾಯಿಯಲ್ಲಿ ಮುಕ್ಕಳಿಸುತ್ತಾ ಆಡಿಸಿ. ಎಣ್ಣೆಯು ಹಲ್ಲುಗಳ ಸಂಧಿ, ವಸಡುಗಳು ಎಲ್ಲೆಡೆ ಓಡಾಡಲಿ. ಎಂಜಲ ಜೊತೆ ಸೇರಿದಂತೆ ಆ ಎಣ್ಣೆ ತೆಳುವಾಗುತ್ತದೆ. ಆಗ ಇದು ದೇಹದ ವಿಷಕಾರಕಗಳನ್ನು ಹೀರಿಕೊಂಡಿರುತ್ತದೆ. ಹೀಗಾಗಿ ಈ ಎಣ್ಣೆಯನ್ನು ಕುಡಿಯಬಾರದು. ಸಾಧ್ಯವಾದಷ್ಟು ಹೊತ್ತು ಮುಕ್ಕಳಿಸಿದ ಬಳಿಕ ಉಗಿಯಬೇಕು. ಬಳಿಕ ಶುದ್ಧ ನೀರಿನಿಂದ ಬಾಯಿ ಮುಕ್ಕಳಿಸಬೇಕು. ನಂತರ ಹಲ್ಲು ಹಾಗೂ ನಾಲಿಗೆಯನ್ನು ಬ್ರಶ್ ಮಾಡಬೇಕು. ಇದನ್ನು ಯಾವುದೇ ಹೊತ್ತಿನಲ್ಲಿ ಮಾಡಬಹುದಾದರೂ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡುವುದು ಉತ್ತಮ. ಆಯಿಲ್ ಪುಲ್ಲಿಂಗ್ ಬಳಿಕ ಅರ್ಧ ಗಂಟೆ ಸಮಯ ನೀಡಿ ಆಹಾರ ಸೇವಿಸಬೇಕು. ಈ ರೀತಿ ಪ್ರತಿದಿನ ಮಾಡುತ್ತಾ ಬಂದರೆ ಹಲವು ಆರೋಗ್ಯ ಲಾಭಗಳಿವೆ.
HotDog History: ಆಹಾರಕ್ಕೆ ಯಾಕೆ ಈ ವಿಚಿತ್ರ ಹೆಸರು..? ಇದಕ್ಕೂ ನಾಯಿಗೂ ಏನು ಸಂಬಂಧ..?
ಪ್ರಯೋಜನಗಳು
- ಬಾಯಿಯಲ್ಲಿ ಕನಿಷ್ಠ 700 ರೀತಿಯ ಬ್ಯಾಕ್ಟೀರಿಯಾಗಳಿರುತ್ತವೆ. ಅವುಗಳಲ್ಲಿ ಕೆಲ ಬ್ಯಾಕ್ಟೀರಿಯಾ(bacteria)ಗಳು ಆರೋಗ್ಯಕ್ಕೆ ಹಾನಿಕಾರಕ. ಅವು ಹಲ್ಲು ಹುಳುಕು(Cavities), ಬಾಯಿ ವಾಸನೆ(Halitosis), ವಸಡಿನ ಸಮಸ್ಯೆಗೆ ಕಾರಣವಾಗುತ್ತವೆ. ಬಾಯಿಯ ವಾಸನೆ ಸಮಸ್ಯೆ ಇರುವವರು ಪ್ರತಿದಿನ ಆಯಿಲ್ ಪುಲ್ಲಿಂಗ್ ಮಾಡುವುದರಿಂದ ಬ್ಯಾಕ್ಟೀರಿಯಾಗಳು ಹೊರ ಹೋಗಿ ತಾಜಾ ಉಸಿರನ್ನು ಪಡೆಯಬಹುದು.
- ಯಾವುದೇ ರಾಸಾಯನಿಕಗಳ ಬಳಕೆ ಇಲ್ಲದೆಯೇ ಹಲ್ಲು ಬಿಳಿಯ ಬಣ್ಣಗಳಲ್ಲಿ ಹೊಳೆಯುತ್ತದೆ.
- ಬಹಳಷ್ಟು ಜನರ ಹಲ್ಲುಗಳ ಮೇಲೆ ಕಲೆಗಳಿರುತ್ತವೆ. ಅದರಲ್ಲೂ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಪ್ರತಿ ದಿನ ಆಯಿಲ್ ಪುಲ್ಲಿಂಗ್ ಮಾಡಿದರೆ ಕಲೆಗಳೆಲ್ಲವೂ ನಿವಾರಣೆಯಾಗುತ್ತವೆ.
- ಅತಿಯಾಗಿ ಸಿಹಿ ತಿನ್ನುತ್ತಿದ್ದರೆ, ಬಾಯಿಯ ಸ್ವಚ್ಛತೆ ಸರಿಯಾಗಿ ನಿಭಾಯಿಸದಿದ್ದರೆ ಹುಳುಕು, ವಸಡಿನ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆಯಿಲ್ ಪುಲ್ಲಿಂಗ್‌ನಿಂದ ವಸಡಿನಿಂದ ರಕ್ತಸ್ರಾವವಾಗುತ್ತಿದ್ದರೆ ನಿಲ್ಲುತ್ತದೆ. ಹಲ್ಲುಗಳ ಹುಳುಕು ತಡೆಯುತ್ತದೆ.
- ಪ್ರತಿದಿನ ಎರಡು ಬಾರಿ 10 ನಿಮಿಷಗಳ ಕಾಲ ಆಯಿಲ್ ಪುಲ್ಲಿಂಗ್ ಮಾಡುವುದರಿಂದ ಮುಖದ ಸ್ನಾಯುಗಳಿಗೆ ವ್ಯಾಯಾಮವಾಗಿ ಮುಖದ ತೇಜಸ್ಸು ಹೆಚ್ಚುತ್ತದೆ. ನೆರಿಗೆಗಳು ತಗ್ಗಿ ತ್ವಚೆ ಹೊಳೆಯುತ್ತದೆ.
- ಸೈನಸ್ ಸಮಸ್ಯೆ ಕಡಿಮೆಯಾಗುತ್ತದೆ. ಜೊತೆಗೆ, ಗೊರಕೆ ಸಮಸ್ಯೆಯೂ ಕಡಿಮೆಯಾಗುತ್ತದೆ.
- ಚಳಿಗಾಲದಲ್ಲಿ ತುಟಿ ಒಡೆಯುವ ಸಮಸ್ಯೆ ನಿಂತು ಹೋಗುತ್ತದೆ.