Asianet Suvarna News Asianet Suvarna News

Know your Health: ನಿಮ್ಮಲ್ಲಿ ಈ ಲಕ್ಷಣಗಳಿವೆಯೇ? ಎಚ್ಚರಿಕೆ ವಹಿಸಿ

Home Remedy: ಅನಾರೋಗ್ಯದ ಲಕ್ಷಣಗಳು ದೇಹದ ಒಂದಲ್ಲ ಒಂದು ಭಾಗದಲ್ಲಿ ಗೋಚರಿಸುತ್ತಲೇ ಇರುತ್ತವೆ. ದೇಹದಲ್ಲಿ ಅನಾರೋಗ್ಯವಿದೆ ಎನ್ನುವುದು ಕೆಲವು ಲಕ್ಷಣಗಳ ಮೂಲಕ ಬಹಿರಂಗವಾಗುತ್ತದೆ. ಅಂತಹ ಕೆಲವು ಲಕ್ಷಣಗಳ ಬಗ್ಗೆ  ತಿಳಿದುಕೊಳ್ಳಿ.
 

Know some symptoms of disease and here are tips to cure the disease
Author
Bangalore, First Published Apr 9, 2022, 6:34 PM IST

ನಾವೆಲ್ಲ ನಮ್ಮ ಆರೋಗ್ಯಕ್ಕೆ (Health) ಭಾರೀ ಆದ್ಯತೆ ನೀಡುತ್ತೇವೆ. ಉತ್ತಮ ಆರೋಗ್ಯ ಮನುಷ್ಯನಿಗೆ ಅಗತ್ಯವೂ ಹೌದು. ಜೀವನಪೂರ್ತಿ ಆರೋಗ್ಯವಾಗಿರುವ ಮನುಷ್ಯ ಹೆಚ್ಚು ಉತ್ಪಾದಕತೆ (Productivity) ಹೊಂದಿರುತ್ತಾನೆ. ಈ ಮೂಲಕ ಸಮಾಜ ಹಾಗೂ ತನ್ನ ಸ್ವಂತ ಬದುಕಿಗೆ ಅಮೂಲ್ಯವಾದ ಕೊಡುಗೆ ನೀಡುತ್ತಾನೆ. 
ಕೆಟ್ಟ ಜೀವನಶೈಲಿ (Lifestyle), ಆನುವಂಶಿಕತೆ ಹಾಗೂ ಪರಿಸರದ ಕಾರಣಗಳಿಂದ ಮನುಷ್ಯನಿಗೆ ರೋಗ (Disease) ಬರುತ್ತದೆ. ಯಾವುದೇ ರೋಗ ಕಾಣಿಸಿಕೊಳ್ಳುವ ಮುನ್ನ ಸಾಮಾನ್ಯವಾಗಿ ಕೆಲವು ಲಕ್ಷಣಗಳು ಕಂಡುಬರುತ್ತವೆ. ಅವು ಕಂಡಾಕ್ಷಣ ಎಚ್ಚರಿಕೆ ತೆಗೆದುಕೊಂಡರೆ ಸಮಸ್ಯೆ ಹೆಚ್ಚಾಗದಂತೆ ನೋಡಿಕೊಳ್ಳಬಹುದು.

•    ಕಾರಣವಿಲ್ಲದೆ ತೂಕ (Weight) ಕಡಿಮೆ ಆಗುವುದು
ಅಮೆರಿಕದ ಕ್ಯಾನ್ಸರ್ (Cancer) ಸೊಸೈಟಿಯ ಮುಖ್ಯ ನಿಯಂತ್ರಣಾಧಿಕಾರಿ ಹಾಗೂ ಎಂಡಿ ರಿಚರ್ಡ್ ವೆಂಡರ್ ಅವರ ಪ್ರಕಾರ, ನೀವು ತೂಕ ಇಳಿಸಲು ಪ್ರಯತ್ನ ಪಡದೆ ಇದ್ದಾಗಲೂ ತೂಕ ತನ್ನಿಂತಾನೇ ಇಳಿಕೆಯಾಗುತ್ತಿದ್ದರೆ ಎಚ್ಚರಿಕೆ ವಹಿಸಬೇಕು. ಕೆಲವೇ ತಿಂಗಳುಗಳಲ್ಲಿ 8-10 ಕೆಜಿ ತೂಕ ಕಡಿಮೆಯಾದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಚಾನಕ್ಕಾಗಿ ತೂಕ ಇಳಿಕೆ ಆಗುವುದರ ಹಿಂದೆ ಜಠರ, ಹೊಟ್ಟೆ, ಅನ್ನನಾಳ ಹಾಗೂ ಶ್ವಾಸಕೋಶದ (Lungs) ಕ್ಯಾನ್ಸರ್ ಕಾರಣವಾಗಿರಬಹುದು. 

•    ಹಲ್ಲುಗಳಿಗೆ ಹಾನಿ (Damage for Teeth)
ಯೂನಿವರ್ಸಿಟಿ ಆಫ್ ನಾರ್ತ್ ಕೆರೋಲಿನಾ ಸ್ಕೂಲ್ ಆಫ್ ಗ್ಯಾಸ್ಟ್ರೊಇಂಟಸ್ಟೈನಲ್ ತಜ್ಞ ಎವಾನ್ ಡೆಲ್ಲಾನ್ (Evan Dellon) ಅವರು ಹೇಳುವ ಪ್ರಕಾರ, ಯಾರಲ್ಲಿ ಪದೇ ಪದೆ ಹಲ್ಲುಗಳು ಹಾನಿಗೆ ಒಳಗಾಗುತ್ತವೋ ಅವರಲ್ಲಿ ಆಸಿಡ್ ರಿಫ್ಲಕ್ಸ್ (Acid Reflux) ಸಮಸ್ಯೆ ಇರಬಹುದು. ಹೊಟ್ಟೆಯ ಆಸಿಡ್ ಅಂಶ ಮೇಲ್ಮುಖವಾಗಿ ಹರಿಯುವುದರಿಂದ ಹಲ್ಲುಗಳು ಹಾನಿಗೆ ಒಳಗಾಗುತ್ತವೆ.

•    ಅತಿಯಾದ ಗೊರಕೆ (Snoring)
ಗೊರಕೆ ತೆಗೆದು ನಿದ್ದೆ ಮಾಡುವುದು ಸಾಮಾನ್ಯ. ಆದರೆ, ಅತಿಯಾದ ಗೊರಕೆ ಉತ್ತಮ ಲಕ್ಷಣವಲ್ಲ. ಇದು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು, ಹೆಚ್ಚುತ್ತಿರುವ ಬೊಜ್ಜು, ಹೃದಯ ರೋಗಗಳು, ಜಿಐಆರ್ ಡಿ (ಗ್ಯಾಸ್ಟ್ರೊಎಸೊಫೆಗಲ್ ರಿಫ್ಲಕ್ಸ್ ರೋಗ) ಹಾಗೂ ಪಾರ್ಶ್ವವಾಯುವಿನ ಲಕ್ಷಣವೂ ಇರಬಹುದು. ಹೀಗಾಗಿ, ಅತಿಯಾದ ಗೊರಕೆ ಸಮಸ್ಯೆಯಿದ್ದರೆ ವೈದ್ಯರಲ್ಲಿ ಚರ್ಚೆ ಮಾಡಿ.

    ಚರ್ಮದಲ್ಲಿ ಅಸ್ಪಷ್ಟತೆ (Skin is not Clear)
ಚರ್ಮದ ಮೇಲೆ ಇರುವ ಕಲೆಗಳು, ಮಚ್ಚೆ, ಹೊಸದಾಗಿ ಹುಟ್ಟುವ ಮಚ್ಚೆಗಳು ಗಂಭೀರ ಅನಾರೋಗ್ಯವನ್ನು ಸೂಚಿಸಬಲ್ಲವು. ಉದಾಹರಣೆಗೆ, ಹಣೆಯ ಮೇಲಿನ ಮೊಡವೆಗಳು ಕೆಟ್ಟ ಜೀವನಶೈಲಿಯನ್ನು ತೋರುತ್ತವೆ. ಕಡಿಮೆ ನಿದ್ರೆ, ಕೆಟ್ಟ ಆಹಾರಶೈಲಿಯೂ ಇದಕ್ಕೆ ಕಾರಣವಾಗಬಲ್ಲದು. ಹಾಗೆಯೇ ಗಲ್ಲದ ಕೆಳಗಿನ ಮೊಡವೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ತೋರಬಹುದು. ಇನ್ನು ಕೆಲವು ಮಚ್ಚೆಗಳು ಚರ್ಮದ ಕ್ಯಾನ್ಸರ್ ಲಕ್ಷಣವಾಗಿರಬಹುದು.

•    ಕಣ್ಣುಗಳು ಬಿಳಿಯಾಗಿಲ್ಲದಿರುವುದು 
ತಜ್ಞರ ಪ್ರಕಾರ, ಕಣ್ಣಿನಲ್ಲಿನ ಬಿಳಿಯ ಭಾಗ ಸ್ವಚ್ಛ ಬಿಳಿ ಬಣ್ಣದಲ್ಲಿರಬೇಕು. ಒಂದೊಮ್ಮೆ ಬಣ್ಣದಲ್ಲಿ ಬದಲಾವಣೆಯಾದರೆ ಅದು ಕೆಲವು ರೋಗಗಳ ಲಕ್ಷಣಗಳಾಗಿರಬಹುದು. ಪಿತ್ತಕೋಶ, ಯಕೃತ್ತು, ಮೇದೋಜೀರಕ ಗ್ರಂಥಿ ಅಥವಾ ಪಿತ್ತನಾಳಗಳ ಸಮಸ್ಯೆ ಇದ್ದಾಗ ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕೆಂಪಾಗುವುದು ಸಹ ಅನಾರೋಗ್ಯವನ್ನು ಸೂಚಿಸುತ್ತದೆ. 

ಇದನ್ನೂ ಓದಿ: Home Remedy: ಕಿವಿಯ ಸೋಂಕು ನಿವಾರಣೆಗೆ ಈ ಮನೆ ಮದ್ದುಗಳನ್ನು ಬಳಸಿ

•    ಉಗುರುಗಳ ಬಣ್ಣ (Nail Color) ಬದಲಾಗುವುದು
ವೈದ್ಯರ ಬಳಿ ಹೋದಾಗ ಉಗುರುಗಳನ್ನು ಪರೀಕ್ಷಿಸುವುದು ಕಂಡುಬರುತ್ತದೆ. ಅನಾರೋಗ್ಯವಿದ್ದಾಗ ಉಗುರುಗಳ ಬಣ್ಣ ಬದಲಾಗುತ್ತದೆ ಧೂಮಪಾನ ಹಾಗೂ ನೇಲ್ ಪಾಲಿಶ್ ಬಳಕೆಯಿಂದಲೂ ಉಗುರುಗಳ ಬಣ್ಣ ಹಳದಿಯಾಗುತ್ತದೆ. ಆದರೆ, ಉಗುರು ಹಳದಿಯಾಗಿದ್ದರೆ ರಕ್ತಸಂಚಾರ ಹಾಗೂ ದೇಹದಲ್ಲಿ ದ್ರವಾಂಶದ ಕೊರತೆಯಾಗಿರುತ್ತದೆ. 

•    ಅತಿಯಾದ ಗ್ಯಾಸ್ಟ್ರಿಕ್ (Gastric)
ಹೊಟ್ಟೆಯಲ್ಲಿ ಪದೇ ಪದೆ ಗ್ಯಾಸ್ ಆಗುತ್ತಿದ್ದರೆ ಜೀರ್ಣ ವ್ಯವಸ್ಥೆ ಸರಿಯಾಗಿಲ್ಲ ಎಂದರ್ಥ. 

ಇದನ್ನೂ ಓದಿ: Health Tips: ಈ ಮನೆಮದ್ದುಗಳನ್ನು ಟ್ರೈ ಮಾಡಿದ್ರೆ ಬೆವರಿನ ವಾಸನೆ ಬರೋದೇ ಇಲ್ಲ

•    ಸದಾಕಾಲ ಸುಸ್ತು (Fatigue)
ಸದಾಕಾಲ ಸುಸ್ತಾದಂತೆ ಭಾಸವಾಗುವುದು ದೇಹದಲ್ಲಿನ ಹಲವು ಕೊರತೆ ಅಥವಾ ಸಮಸ್ಯೆಗಳ ಲಕ್ಷಣವಾಗಿರಬಹುದು. ಅಧಿಕ ಕೆಫೀನ್ ಸೇವನೆಯಿಂದಲೂ ಸುಸ್ತಾಗುತ್ತದೆ. ಆದರೆ, ದಿನವಿಡೀ ಸುಸ್ತಾಗುತ್ತಿದ್ದರೆ ವೈದ್ಯರನ್ನು ಕಾಣಬೇಕು. 
 

Follow Us:
Download App:
  • android
  • ios