Good Sleeping Position: ಕತ್ತು, ಭುಜದ ನೋವಾ? ಯಾವ ಭಂಗಿಯಲ್ಲಿ ಮಲಗ್ತೀರಿ?

ರಾತ್ರಿ ಮಲಗುವ ಸಮಯದಲ್ಲಿ ಭಂಗಿಯ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ. ಯಾವ್ಯಾವುದೋ ಭಂಗಿಯಲ್ಲಿ ಮಲಗಿದರೆ ಬೆನ್ನು, ಕತ್ತು, ಭುಜಗಳ ನೋವು ಕಾಡುವುದು ನಿಶ್ಚಿತ. ಹಾಗಾದರೆ ನಮ್ಮ ದೇಹಕ್ಕೆ ಉತ್ತಮ ಭಂಗಿ ಯಾವುದು ನೋಡಿಕೊಳ್ಳಿ. 
 

Know good position for sleep otherwise you might feel shoulder and neck pain

ಎಷ್ಟೋ ಬಾರಿ ರಾತ್ರಿ ಮಲಗಿ ಬೆಳಗ್ಗೆ ಏಳುವ ಹೊತ್ತಿಗೆ ಕತ್ತು ನೋವು ಉಂಟಾಗಿರುತ್ತದೆ. ಕತ್ತು ಉಳುಕಿದಂತಾಗಿ ನಾಲ್ಕಾರು ದಿನಗಳ ಕಾಲ ಹಿಂಸೆಯಾಗುತ್ತದೆ. ಅಷ್ಟೇ ಅಲ್ಲ, ಬೆಳಗ್ಗೆ ಏಳುವ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಭುಜ, ಬೆನ್ನು, ಸೊಂಟ ನೋವು ಸಹ ಕಂಡುಬರಬಹುದು. ಇದಕ್ಕೆ ಮುಖ್ಯ ಕಾರಣವೆಂದರೆ, ನಮ್ಮ ಮಲಗುವ ಶೈಲಿ. ಅಸಹಜ ಭಂಗಿಯಲ್ಲಿ ಮಲಗುವುದು, ಮಲಗಿದಾಗ ತಿಳಿಯದೆ ಕತ್ತನ್ನು ಹೇಗೋ ಇರಿಸಿಕೊಂಡಿರುವುದು ಇಂತಹ ನೋವುಗಳಿಗೆ ಮುಖ್ಯ ಕಾರಣ. ಉತ್ತಮ ಆರೋಗ್ಯಕ್ಕಾಗಿ ದಿನಕ್ಕೆ 7-8 ಗಂಟೆಗಳ ನಿದ್ರೆ ಅವಶ್ಯಕ. ಚೆನ್ನಾಗಿ ನಿದ್ರೆ ಮಾಡಿದರೆ ಮಾತ್ರ ಹಲವು ಸಮಸ್ಯೆಗಳನ್ನು ದೂರವಿಡಬಹುದು. ಆದರೆ, ಮಲಗುವ ಶೈಲಿ ಸರಿಯಾಗಿರದಿದ್ದರೂ ದೇಹಕ್ಕೆ ನೋವು ತಪ್ಪಿದ್ದಲ್ಲ. ಕೆಲವರು ನೇರವಾಗಿ ಮಲಗುತ್ತಾರೆ, ಕೆಲವರು ಬೋರಲಾಗಿ ಮಲಗುತ್ತಾರೆ. ಇನ್ನು ಕೆಲವರು ಮಲಗುವ ಭಂಗಿ ಹೀಗೆ ಎಂದು ಹೇಳಲು ಬರುವುದಿಲ್ಲ. ಹೇಗೆ ಬೇಕಿದ್ದರೂ ಪಲ್ಟಿಯಾಗುತ್ತ ಮಲಗುತ್ತಾರೆ. ಆದರೆ, ಹೇಗೆ ಬೇಕೋ ಹಾಗೆ ಮಲಗುವುದು ಬೆನ್ನುಹುರಿ ಮತ್ತು ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದಲ್ಲ. ಗೊರಕೆ, ಬೆನ್ನು-ಸೊಂಟಗಳ ನೋವಿಗೆ ಮಲಗುವ ಭಂಗಿಯೇ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು. ಅಷ್ಟೇ ಅಲ್ಲ, ಮಲಗುವ ಶೈಲಿಯಿಂದಲೇ ನಿದ್ರಾಹೀನತೆಯೂ ಉಂಟಾಗಬಹುದು. ಹೀಗಾಗಿ, ಮಲಗುವ ಭಂಗಿ ಹೇಗಿರಬೇಕು ಎಂದು ತಿಳಿದುಕೊಂಡು ಅದನ್ನು ಅನುಸರಿಸುವುದು ಉತ್ತಮ.

•    ಒಂದು ಪಕ್ಕದಲ್ಲಿ ಮಲಗುವುದು (Sleep one Side)
ಹಲವಾರು ಅಧ್ಯಯನಗಳ (Studies) ಪ್ರಕಾರ, ಬಹುತೇಕ ಜನ ತಮ್ಮ ದೇಹದ (Body) ಒಂದು ಪಕ್ಕಕ್ಕೆ ವಾಲಿಕೊಂಡು ಮಲಗುತ್ತಾರೆ. ಇದು ಎಲ್ಲಕ್ಕಿಂತ ಹೆಚ್ಚು ಆರಾಮದಾಯಕ (Relaxed) ಭಂಗಿ (Position) ಎನಿಸಿದೆ. ಈ ಭಂಗಿಯಲ್ಲಿ ಬೆನ್ನುಹುರಿ (Spine) ನೇರವಾಗಿರುತ್ತದೆ. ಹೀಗಾಗಿ, ಒಂದು ಪಕ್ಕದಲ್ಲಿ ಮಲಗುವುದರಿಂದ ಕುತ್ತಿಗೆ (Neck), ಬೆನ್ನು (Back), ಭುಜ (Shoulder)ಗಳ ನೋವಿನಿಂದ ತಪ್ಪಿಸಿಕೊಳ್ಳಬಹುದು. ಅದರಲ್ಲೂ ಎಡ (Left) ಪಕ್ಕಕ್ಕೆ ಮಲಗುವುದು ಅತ್ಯುತ್ತಮ. ಇದರಿಂದ ಜೀರ್ಣಾಂಗವ್ಯೂಹಕ್ಕೆ ಅನುಕೂಲವಾಗುತ್ತದೆ. ಮುಖ್ಯವಾಗಿ, ಗರ್ಭಿಣಿಯರು ಎಡ ಪಕ್ಕದಲ್ಲಿ ಮಲಗಬೇಕು. ಇದರಿಂದ ಪ್ಲೆಸೆಂಟಾ ಮತ್ತು ಶಿಶುವಿನವರೆಗೆ ಬೆಸೆಯಲ್ಪಡುವ ರಕ್ತನಾಳಗಳು ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಪೋಷಕಾಂಶ ಮಗುವಿಗೆ ಚೆನ್ನಾಗಿ ದೊರೆಯುತ್ತದೆ. ಬೆನ್ನು ನೋವು ಉಂಟಾಗುವುದಿಲ್ಲ ಹಾಗೂ ದೇಹದ ವಿವಿಧ ಭಾಗಗಳಿಗೆ ಹೆಚ್ಚು ಒತ್ತಡ (Stress) ಬೀಳುವುದಿಲ್ಲ. 

ಕುತ್ತಿಗೆ ಬಲಭಾಗದಲ್ಲಿ ತುಂಬಾ ನೋವಿದ್ಯಾ? ಇಗ್ನೋರ್ ಮಾಡ್ಬೇಡಿ

•    ಹಿಂಭಾಗದ (Back) ಮೇಲೆ ನಿದ್ರಿಸುವುದು
ಕೆಲವರನ್ನು ನೋಡಿರಬಹುದು, ಇಡೀ ರಾತ್ರಿ ಒಂದೇ ಭಂಗಿಯಲ್ಲಿ ನೇರವಾಗಿ ಮಲಗುತ್ತಾರೆ. ಇದು ಎರಡನೇ ಅತಿ ಸಾಮಾನ್ಯ ಅಭ್ಯಾಸ ಎಂಬುದಾಗಿ ಗುರುತಿಸಲ್ಪಟ್ಟಿದೆ. ಈ ಭಂಗಿಯಲ್ಲಿ ಮಲಗಿದಾಗ ಬೆನ್ನುಹರಿ ಸಹಜ (Natural) ಸ್ಥಿತಿಯಲ್ಲಿರುತ್ತದೆ. ಹೀಗಾಗಿ, ಈ ಸ್ಥಿತಿಯಲ್ಲಿ ಮಲಗುವುದರಿಂದ ಕುತ್ತಿಗೆ, ಭುಜದ ನೋವು ಕಾಡುವುದು ಕಡಿಮೆ. ಅಲ್ಲದೆ, ನಿಮಗೆ ಆಸಿಡಿಟಿ (Acidity) ಸಮಸ್ಯೆ ಇದ್ದರೆ ಈ ಭಂಗಿ ಉತ್ತಮವೆಂದು ಹೇಳಲಾಗುತ್ತದೆ. ಆಸಿಡ್ ರಿಫ್ಲಕ್ಸ್ ಸಮಸ್ಯೆ ಇರುವಾಗ ಹೀಗೆ ಮಲಗಿದರೆ ಹೆಚ್ಚು ಎದೆಯುರಿ ಉಂಟಾಗುವುದಿಲ್ಲ. 

•    ಬೋರಲಾಗಿ ಮಲಗುವುದು (Grovel)
ಬೋರಲಾಗಿ ಮಲಗುವ ಭಂಗಿ ಅತ್ಯಂತ ಕೆಟ್ಟದ್ದು. ಈ ಭಂಗಿಯಲ್ಲಿ ಮಲಗಿದಾಗ ಎದೆ (Chest) ಹಾಗೂ ಶ್ವಾಸಕೋಶಗಳ ಮೇಲೆ ಒತ್ತಡ ಉಂಟಾಗುತ್ತದೆ. ಈ ಭಂಗಿಯಲ್ಲಿ ಮಲಗುವಾಗ ತಲೆದಿಂಬನ್ನೂ ಉಪಯೋಗಿಸಿದರೆ, ಬೆನ್ನುಹುರಿಗೆ ರೆಸ್ಟ್ (Rest) ದೊರೆಯುವುದಿಲ್ಲ. ಹೆಚ್ಚು ಸಮಯ ಮಲಗಿದರೆ ಬೆನ್ನು, ಕತ್ತು, ನೋವು ಉಂಟಾಗಬಹುದು. ಇದರಿಂದ ರಕ್ತಸಂಚಾರಕ್ಕೆ (Blood Flow) ಧಕ್ಕೆಯಾಗುತ್ತದೆ. 

ಮಲಗಿ ಎದ್ದಾಗ ಕುತ್ತಿಗೆ ನೋವಾ ? ತಕ್ಷಣ ಕಡಿಮೆಯಾಗಲು ಹೀಗೆ ಮಾಡಿ

•    ಗರ್ಭದ ಭ್ರೂಣದಂತೆ ಮಲಗುವುದು
ಕಾಲುಗಳನ್ನು ಮಡಚಿ, ದೇಹವನ್ನು ಬಾಗಿಸಿಕೊಂಡು ಮಲಗುವ ಭಂಗಿ ಸಹ ಒಳ್ಳೆಯದಲ್ಲ. ಇದನ್ನು ಫೀಟಲ್ ಪೊಸಿಷನ್ ಎಂದು ಹೇಳಲಾಗುತ್ತದೆ. ಇದು ಬೆನ್ನುಹುರಿಗೆ ಅತ್ಯಂತ ಹಾನಿ (Danger) ನೀಡುವಂಥದ್ದು. ಇದರಿಂದ ಹಿಂಭಾಗದ ಅನೇಕ ಸಮಸ್ಯೆಗಳು ಉಂಟಾಗಬಹುದು.  

 

Know good position for sleep otherwise you might feel shoulder and neck pain

 

Latest Videos
Follow Us:
Download App:
  • android
  • ios