ಸೋಡಿಯಂ ಅಂಶ ಕಡಿಮೆ ಇರೋ ಈ ಆಹಾರದಿಂದ ಆರೋಗ್ಯ

ಅಧಿಕ ಪ್ರಮಾಣದ ಸೋಡಿಯಂ ಸೇವನೆಯಿಂದ ದೇಹಕ್ಕೆ ಹಲವು ರೀತಿಯ ನಷ್ಟವಾಗುತ್ತದೆ. ಸೋಡಿಯಂ ಅಂಶ ಹೆಚ್ಚಾಗಿರುವ ಆಹಾರವನ್ನು ದೂರವಿಡುವ ಜತೆಗೆ, ಇದರ ಅಂಶ ಕಡಿಮೆ ಇರುವ ಆಹಾರವನ್ನು ಸೇವನೆ ಮಾಡುವ ಮೂಲಕ ಹೃದ್ರೋಗ, ಆಸಟಿಯೋಪೊರೊಸಿಸ್‌ ಸೇರಿದಂತೆ ಹಲವು ಸಮಸ್ಯೆಗಳಿಂದ ಬಚಾವಾಗಬಹುದು.
 

Know about some of these low sodium foods

ಅಧಿಕ ಉಪ್ಪಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಎಲ್ಲರೂ ತಿಳಿದಿರುವ ಸಂಗತಿ. ಉಪ್ಪಿನಲ್ಲಿರುವುದು ಸೋಡಿಯಂ ಅಂಶ. ರಕ್ತದೊತ್ತಡ ಹಾಗೂ ಹೃದಯದ ಆರೋಗ್ಯದ ಮೇಲೆ ಸೋಡಿಯಂ ಮಹತ್ವದ ಪರಿಣಾಮ ಬೀರುತ್ತದೆ. ದೇಹಕ್ಕೆ ಸೋಡಿಯಂ ಅಂಶ ಕಡಿಮೆಯಾದರೆ ಅನಾಹುತ ತಪ್ಪಿದ್ದಲ್ಲ. ಹಾಗೆಯೇ, ಹೆಚ್ಚಾದರೂ ಸಮಸ್ಯೆ ಉಂಟಾಗುತ್ತದೆ. ಅಧಿಕ ಸೋಡಿಯಂ ಸೇವಿಸುವುದರಿಂದ ಆಸ್ಟಿಯೋಪೊರೊಸಿಸ್‌ ಸೇರಿದಂತೆ ಹಲವು ರೀತಿಯ ಪರಿಣಾಮಗಳು ಉಂಟಾಗುತ್ತವೆ. ಆಸ್ಟಿಯೋಪೊರೊಸಿಸ್‌ ನಿಂದಾಗಿ ಮೂಳೆಗಳ ಮುರಿತದ ಸಮಸ್ಯೆ ಹೆಚ್ಚುತ್ತದೆ. ಆಧುನಿಕ ಆಹಾರಗಳಾದ ಸಂಸ್ಕರಿತ, ಪ್ಯಾಕೇಟ್‌ ಫುಡ್‌, ಹಪ್ಪಳ, ಚೀಸ್‌, ಬಿಸ್ಕತ್‌, ಚಿಪ್ಸ್‌, ಪಿಜ್ಜಾ, ಬರ್ಗರ್ ಸೇರಿದಂತೆ ಹಲವು ತಿನಿಸುಗಳಲ್ಲಿ ಸೋಡಿಯಂ ಅತ್ಯಧಿಕ ಪ್ರಮಾಣದಲ್ಲಿ ಇರುತ್ತದೆ. ಹೀಗಾಗಿ, ಇವುಗಳನ್ನು ತಿನ್ನುವುದು ಅಧಿಕ ರಕ್ತದೊತ್ತಡಕ್ಕೂ ಕಾರಣವಾಗುತ್ತದೆ. ಒಂದೊಮ್ಮೆ ನೀವು ಈಗಾಗಲೇ ರಕ್ತದೊತ್ತಡದ ಸಮಸ್ಯೆ ಎದುರಿಸುತ್ತಿದ್ದರೆ, ಕಡಿಮೆ ಸೋಡಿಯಂ ಇರುವ ಆಹಾರ ಸೇವನೆ ಮಾಡುವುದು ಒಳಿತು. ಸೋಡಿಯಂ ಅನ್ನು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಹೊಂದಿರುವ ಕೆಲವು ಆಹಾರ ಪದಾರ್ಥಗಳು ದೇಹಕ್ಕೆ ಬೇಕಾದ ವಿವಿಧ ಪೌಷ್ಟಿಕಾಂಶವನ್ನೂ ಹೊಂದಿರುತ್ತವೆ ಎನ್ನುವುದು ವಿಶೇಷ. ದೇಹದಲ್ಲಿ ಸೋಡಿಯಂ ಅಂಶ ಕಡಿಮೆ ಇದ್ದರೆ ಹೃದಯ ಸಂಬಂಧಿತ ರೋಗಗಳ ಅಪಾಯವೂ ಕಡಿಮೆಯಾಗುತ್ತದೆ. ಹೀಗಾಗಿ, ಸೋಡಿಯಂ ಅಂಶವನ್ನು ಹೆಚ್ಚಾಗಿ ಹೊಂದಿದ ಆಹಾರದ ಬದಲಿಗೆ ಕಡಿಮೆ ಅಂಶವಿರುವ ಆಹಾರವನ್ನೇ ಆಯ್ಕೆ ಮಾಡಿಕೊಳ್ಳಬೇಕು.

•    ಸೇಬು (Apple)
ಹಣ್ಣುಗಳಲ್ಲಿ ಸ್ವಭಾವಿಕವಾಗಿ (Natural) ಸೋಡಿಯಂ (Sodium) ಅಂಶ ಕಡಿಮೆ ಇದ್ದು,  ಪೊಟ್ಯಾಸಿಯಂ (Potassium) ಅಂಶ ಅಧಿಕವಾಗಿರುತ್ತದೆ. ಉಳಿದ ಹಲವಾರು ಹಣ್ಣಿಗಿಂತ (Fruit) ಸೇಬು ಹಣ್ಣಿನಲ್ಲಿ ಸೋಡಿಯಂ ಅಂಶ ಭಾರೀ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಹಾಗೂ ಕೊಬ್ಬಿನ (Fat) ಪ್ರಮಾಣ ಕಡಿಮೆಯಿರುತ್ತದೆ. ವಿಟಮಿನ್‌ ಸಿ, ನಾರಿನಂಶ (Fiber) ಉತ್ತಮ ಪ್ರಮಾಣದಲ್ಲಿರುತ್ತವೆ. ಸೇಬು ಹಾಗೂ ಇತರ ಕೆಲವು ಹಣ್ಣುಗಳಲ್ಲಿ ಕಂಡುಬರುವ ಪಾಲಿಫೆನಾಲ್‌ ಅಂಶ ಹೃದಯದ (Heart) ಆರೋಗ್ಯಕ್ಕೆ ಸಹಕಾರಿ.

ದಾಳಿಂಬೆ ಸಿಪ್ಪೆ ಬಿಸಾಕ್ಬೇಡಿ! ಚಹಾ ಮಾಡಿ ಆರೋಗ್ಯದ ಮೇಲೆ ಜಾದೂ ನೋಡಿ

•    ಸೌತೆಕಾಯಿ (Cucumber)
ಸೌತೆಕಾಯಿ ಸಹ ಆರೋಗ್ಯಕ್ಕೆ ಭಾರೀ ಒಳ್ಳೆಯದು. ಇದರಲ್ಲಿ ಕ್ಯಾಲರಿ (Calorie), ಸೋಡಿಯಂ ಹಾಗೂ ಕೊಬ್ಬಿನ ಅಂಶ ಕಡಿಮೆ ಇರುತ್ತದೆ. ಒಂದು ಕಪ್‌ ಸೌತೆಕಾಯಿಯಲ್ಲಿ 3 ಗ್ರಾಮ್‌ ಸೋಡಿಯಂ ಇರುತ್ತದೆ. ಹೀಗಾಗಿ, ಇದನ್ನು ಯಾವುದೇ ಸಮಯದಲ್ಲಿ, ಎಷ್ಟು ಬೇಕಿದ್ದರೂ ಸೇವನೆ ಮಾಡಬಹುದು. ಸೌತೆಕಾಯಿಯಲ್ಲಿ ನೀರಿನಂಶ (Water) ಹೆಚ್ಚಿರುವುದರಿಂದ ದೇಹವನ್ನು ಡಿಹೈಡ್ರೇಟ್‌ (Dehydrate) ಆಗಲು ಬಿಡುವುದಿಲ್ಲ.

•    ಬಾದಾಮಿ (Almond)
ಬಾದಾಮಿ ಆರೋಗ್ಯಕರ ಸ್ನ್ಯಾಕ್ಸ್‌ (Snacks) ಆಗಿದ್ದು, ಎಲ್ಲ ವಯೋಮಾನದವರ ಆರೋಗ್ಯಕ್ಕೂ ಉತ್ತಮವಾಗಿದೆ. 100 ಗ್ರಾಮ್‌ ಬಾದಾಮಿಯಲ್ಲಿ 1 ಮಿಲಿಗ್ರಾಮ್‌ ಸೋಡಿಯಂ ದೊರೆಯುತ್ತದೆ. ಅಂದರೆ, ಇದರಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸೋಡಿಯಂ ಇರುತ್ತದೆ. ಬಾದಾಮಿಯಲ್ಲಿ ಸಾಕಷ್ಟು ಪೌಷ್ಟಿಕ (Nutrition) ಅಂಶಗಳಿದ್ದು, ಆಂಟಿಆಕ್ಸಿಡೆಂಟ್ಸ್‌, ವಿಟಮಿನ್‌ ಇ (Vitamin E), ಮ್ಯಾಗ್ನೆಷಿಯಮ್‌, ಪ್ರೊಟೀನ್‌, ಜಿಂಕ್‌ (Zink) ಮುಂತಾದ ಅಂಶಗಳು ದೊಡ್ಡ ಪ್ರಮಾಣದಲ್ಲಿರುತ್ತವೆ. ಬಾದಾಮಿಯಿಂದ ರಕ್ತದ ಸಕ್ಕರೆ ಮಟ್ಟ (Blood Sugar Level), ರಕ್ತದೊತ್ತಡ (Blood Pressure) ಮತ್ತು ಕೊಬ್ಬಿನ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ಬಾದಾಮಿ ತಿನ್ನುವುದರಿಂದ ತೀವ್ರವಾದ ಹಸಿವು ಉಂಟಾಗುವುದಿಲ್ಲ. ಹೀಗಾಗಿ, ತೂಕ ಇಳಿಕೆ (Weight Loss) ಮಾಡಿಕೊಳ್ಳಲು ಇದು ಭಾರೀ ಸಹಕಾರಿ.

 

ಸಕ್ಕರೆ ಪಕ್ಕಕ್ಕಿಟ್ಟು Artificial Sweetener ಬಳಸ್ತೀರಾ ? ಹೃದಯದ ಆರೋಗ್ಯ ಕೆಡುತ್ತೆ ಹುಷಾರ್‌

•    ನಿಂಬೆರಸ (Lemon Juice) ಅಥವಾ ಔಷಧೀಯ ಸಸ್ಯಗಳ ಜ್ಯೂಸ್‌
ಆಹಾರದಲ್ಲಿ ಉಪ್ಪಿನ ಬದಲು ಲಿಂಬೆಯ ಜ್ಯೂಸ್‌ ಅಥವಾ ಔಷಧೀಯ ಸಸ್ಯಗಳನ್ನು (Medicinal Plant) ಹೆಚ್ಚು ಬಳಕೆ ಮಾಡುವುದು ಉತ್ತಮ. ಇದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು. ಸೋಡಿಯಂ ಅಂಶ ಅಧಿಕವಾಗಿದ್ದರೆ ಆಹಾರದಲ್ಲಿ ಬದಲಾವಣೆ (Change in Food) ಹಾಗೂ ಅಗತ್ಯ ಆಹಾರ ಸೇವನೆ ಮಾಡುವ ಮೂಲಕ ನಿಯಂತ್ರಣಕ್ಕೆ ತಂದುಕೊಳ್ಳಲು ಸಾಧ್ಯ. 

Latest Videos
Follow Us:
Download App:
  • android
  • ios