64 ವರ್ಷದಿಂದ ಬಳಸ್ತಿದ್ದ ಸ್ಲೋಗನ್ ಕೈ ಬಿಟ್ಟ KFC: ಕಾರಣ ಕೊರೋನಾ
ಇಟ್ಸ್ ಫಿಂಗರ್ ಲಿಕ್ಕಿಂಗ್ ಗುಡ್ ಅನ್ನುವ 64 ವರ್ಷ ಹಳೆಯ ಸ್ಲೋಗನನ್ನು ಕೆಎಫ್‌ಸಿ ಕೈ ಬಿಡುತ್ತಿದೆ. ಕಾರಣ ಕೊರೋನಾ ವೈರಸ್..!
ಇಟ್ಸ್ ಫಿಂಗರ್ ಲಿಕ್ಕಿಂಗ್ ಗುಡ್ ಅನ್ನುವ 64 ವರ್ಷ ಹಳೆಯ ಸ್ಲೋಗನನ್ನು ಕೆಎಫ್‌ಸಿ ಕೈ ಬಿಡುತ್ತಿದೆ. ಕಾರಣ ಕೊರೋನಾ ವೈರಸ್..! ಇಟ್ಸ್ ಫಿಂಗರ್ ಲಿಕ್ಕಿಂಗ್ ಗುಡ್ ಅನ್ನುವ 64 ವರ್ಷ ಹಳೆಯ ಸ್ಲೋಗನನ್ನು ಕೆಎಫ್‌ಸಿ ಕೈ ಬಿಡುತ್ತಿದೆ. ಕೊರೋನಾ ಜಗತ್ತನ್ನೇ ಬಾಧಿಸಿರುವಾಗ ಕೆಂಟುಕಿ ಫ್ರೈಡ್ ಚಿಕನ್ ಕಂಪನಿ ತನ್ನ ಸ್ಲೋಗನ್ ತಾತ್ಕಾಲಿಕವಾಗಿ ಕೈ ಬಿಡಲು ನಿರ್ಧರಿಸಿದೆ.
ಕಳೆದ 64 ವರ್ಷಗಳಿಂದ ಕೆಎಫ್‌ಸಿ ಜಾಹೀರಾತಿನಲ್ಲಿ ಈ ಪ್ರಸಿದ್ಧ ಸ್ಲೋಗನ್ ಬಳಸಲಾಗುತ್ತಿತ್ತು. ಆಗಸ್ಟ್ 24ರಂದು ಲಾಂಚ್ ಮಾಡಿದ ಅಭಿಯಾನದಲ್ಲಿ ಕೆಎಫ್‌ಸಿ ಬಕೆಟ್ ತುಂಬಾ ಚಿಕ ವಿಂಗ್ಸ್ ಚಿಕನ್ ಚಿತ್ರದ ಜೊತೆ ಇದ್ದ ಫಿಂಗರ್ ಲಿಕ್ಕಿಂಗ್ ಭಾಗವನ್ನು ಅಳಿಸಲಾಗಿದೆ. ಇದು ನಾವು ಯಾವಾಗಲೂ ಹೆಳುವ ವಿಷಯ. ಆದರೆ ಸದ್ಯಕ್ಕೆ ಇದನ್ನು ಕಡೆಗಣಿಸಿ ಎಂದು ಹೇಳಲಾಗಿದೆ.
ಜಾಹೀರಾತು ಟಿವಿ, ಮಾಧ್ಯಮ, ಸೋಷಿಯಲ್ ಮೀಡಿಯಾ ಹಾಗೂ ಡಿಜಿಟಲ್ ಫ್ಲಾಟ್ ಫಾರ್ಮ್‌ಗಳಲ್ಲಿ ಓಡಾಡುತ್ತಿದ್ದು, ಔಟ್ ಡೋರ್ ಆಡ್‌ಗಳಲ್ಲಿ ಲಿಕ್ ಫಿಂಗರ್ಸ್ ಎಟ್ ವೋನ್ ರಿಸ್ಕ್ ಎಂದು ಬರೆಯಲಾಗಿದೆ.
ಕೆಎಫ್‌ಸಿ ರೀಟೇಲ್ ಹಾಗೂ ಜಾಹೀರಾತು ಮುಖ್ಯಸ್ಥ ಕೇಟ್ ವಾಲ್ ಈ ಬಗ್ಗೆ ಪ್ರತಿಕ್ರಿಯಿಸಿ, ನಾವು ಕಳೆದ 64 ವರ್ಷದಿಂದ ಈ ಸ್ಲೋಗನ್ ಬಳಸುತ್ತಿದ್ದೆವು. ಇದು ಜಗತ್ತಿನಲ್ಲಿಯೇ ಹೆಚ್ಚ ಫೇಮಸ್ ಕೂಡಾ. ನಮ್ಮ ಗ್ರಾಹಕರು ರುಚಿಯಾದ ಚಿಕನ್ ತಿಂದು ಬೆರಳು ಲಿಕ್ ಮಾಡುತ್ತಾರೆಂದು ಗೊತ್ತು. ಆದರೆ ಈ ವರ್ಷ ಎಲ್ಲರಿಗೂ ನೋವು ತಂದಿದೆ. ನಮ್ಮ ಸ್ಲೋಗನ್ ಈಗಿನ ಸಂದರ್ಭಕ್ಕೆ ಹೊಂದುವುದಿಲ್ಲ. ಹಾಗಾಗಿ ನಾವಿದನ್ನು ಹೇಳುವುದು ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದೇವೆ ಎಂದಿದ್ದಾರೆ.
ಮಳೆಗಾಲದಲ್ಲಿ ಬೆಚ್ಚನೆ ಹಿತದ ಜೊತೆ ಇಮ್ಯುನಿಟಿ ಹೆಚ್ಚಿಸಲು ನಿಮ್ಮ ಟೀ ಹೀಗಿರಲಿ
ಕೊರೋನಾ ಸಂದರ್ಭ ಜನರಲ್ಲಿ ಫಿಂಗರ್ ಲಿಕ್ ಮಾಡಿ ಎನ್ನುವುದು ತಪ್ಪು ಎಂಬ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಕೊರೋನಾ ಬಂದಿದ್ದರೂ ನಮ್ಮ ಸ್ಲೋಗನ್‌ನಿಂದ ತೊಂದರೆಯಾಗಿಲ್ಲ. ಆದರೆ ಈ ಸಂದರ್ಭದಲ್ಲಿ ಇದು ಸೂಕ್ತವಲ್ಲದ ಕಾರಣ ನಾವು ಸ್ಲೋಗನ್ ತೆಗೆದುಕೊಳ್ಳಲು ನಿರ್ಧರಿಸಿದ್ದೇವೆ ಎಂದಿದ್ದಾರೆ.