ಸಸ್ಯಾಹಾರಿ ಪ್ರೈಡ್ ಚಿಕನ್

KFC Will Test Vegetarian Fried Chicken Original Herbs and Spices Included
Highlights

  • ಬ್ರಿಟನ್'ನಲ್ಲಿ ಮಾರಾಟ ಶುರು
  • ಶ್ರೀಘ್ರದಲ್ಲಿಯೇ ಇನ್ನಿತರ ದೇಶಗಳಿಗೆ ವಿಸ್ತರಣೆ

ಕೆಎಫ್‌ಸಿಯಲ್ಲಿ ಕ್ರಿಸ್ಪಿಯಾದ ಚಿಕನ್ ಸವಿಯಬೇಕು ಎಂಬ ಆಸೆ. ಆದ್ರೆ, ಶುದ್ಧ ಸಸ್ಯಾಹಾರಿಗಳಾದ ನಿಮಗೆ ಚಿಕನ್ ಮತ್ತು ಮಟನ್ ಸೇರಿದಂತೆ ಇನ್ನಿತರ ಯಾವುದೇ ಮಾಂಸಹಾರ ಪದಾರ್ಥಗಳನ್ನು ಸೇವಿಸಬಾರದು ಎಂಬ ಚಿಂತೆಯೇ.
ಇದಕ್ಕೆಲ್ಲ ಇನ್ನು ಕೊರಗಬೇಕಿಲ್ಲ.

ಯಾಕೆಂದ್ರೆ, ಮುಂದಿನ ದಿನಗಳಲ್ಲಿ ನೀವು ಚಿಕನ್ ರೀತಿಯೇ ಮಜಾ ಕೊಡುವ ವೆಜಿಟೇರಿಯನ್ ಫ್ರೈಡ್  ಚಿಕನ್ ಅನ್ನು ಸವಿಯಬಹುದು. ಮೊದಲಿಗೆ ಬ್ರಿಟನ್‌ನಲ್ಲಿ ವೆಜಿಟೇರಿಯನ್ ಫ್ರೈಡ್ ಚಿಕನ್ ಅನ್ನು ಮಾರಾಟ ಮಾಡಲಾಗುತ್ತದೆ. ನಂತರದ ದಿನಗಳಲ್ಲಿ ಇತರ ದೇಶಗಳಿಗೆ ವಿಸ್ತರಿಸಲಾಗುತ್ತದೆ ಎಂದು ಕೆಎಫ್‌ಸಿ ಹೇಳಿದೆ ಎಂಬುದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

loader