ಗಣನೀಯವಾಗಿ ಏರಿಕೆ ಕಾಣುತ್ತಿರುವ influenza ಪ್ರಕರಣ, ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ!
ದೇಶದಲ್ಲಿ ಇತ್ತೀಚೆಗೆ ಪತ್ತೆಯಾದ ಮಾರಕ ಎಚ್3ಎನ್2 ಇನ್‌ಫ್ಲೂಯೆಂಜಾ ವೈರಸ್ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈ ವೈರಸ್ ತಡೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಬೆಂಗಳೂರು (ಮಾ.18): ದೇಶದಲ್ಲಿ ಇತ್ತೀಚೆಗೆ ಪತ್ತೆಯಾದ ಮಾರಕ ಎಚ್3ಎನ್2 ಇನ್‌ಫ್ಲೂಯೆಂಜಾ ವೈರಸ್ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುತ್ತಿದೆ. ಈ ವೈರಸ್ ತಡೆಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಜನರಿಗೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾರ್ಗಸೂಚಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.
ಏನು ಮಾಡಬೇಕು?
ಕೆಮ್ಮುವಾಗ ಅಥವಾ ಸೀನುವಾಗ ಬಾಯಿಯನ್ನು ಕರವಸ್ತ್ರದಿಂದ ಮುಚ್ಚಿ ಕೊಳ್ಳಬೇಕು
ಕೈಗಳನ್ನು ಸಾಬೂನಿನಿಂದ ಆಗಾಗ ತೊಳೆದು ಕೊಳ್ಳಬೇಕು, ಶುಚಿತ್ವ ಕಾಪಾಡಿ ಕೊಳ್ಳಬೇಕು
ಅಗತ್ಯವಿಲ್ಲದೇ ಕಣ್ಣು ಕಿವಿ ಮೂಗು ಆಗಾಗ ಮುಟ್ಟಿ ಕೊಳ್ಳಬಾರದು
ಫ್ಲ್ಯೂ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯಿಂದ ಅಂತರ ಕಾಯ್ದು ಕೊಳ್ಳುವಿಕೆ
ಸಾಕಷ್ಟು ನೀರು ಕುಡಿಯುವುದು, ಪೌಷ್ಠಿಕ ಆಹಾರ ಸೇವನೆ ಮಾಡಬೇಕು
ಏನು ಮಾಡಬಾರದು?
ಶೇಕ್ ಹ್ಯಾಂಡ್ ಕೊಡುವುದು, ಹಗ್ ಮಾಡೋದು ಮಾಡಬಾರದು
ರಸ್ತೆಯಲ್ಲಿ/ ಸಾರ್ವಜನಿಕ ಪ್ರದೇಶದಲ್ಲಿ ಉಗುಳಬಾರದು
ವೈದ್ಯರ ಸಲಹೆ ಇಲ್ಲದೆ ಔಷಧಿ / ಆಂಟಿಬಯೋಟಿಕ್ ಪಡೆದು ಕೊಳ್ಳಬಾರದು
ಅನಾವಶ್ಯಕವಾಗಿ ಜನ ಸಂದಣಿ ಇರುವ ಪ್ರದೇಶದಲ್ಲಿ ಸೇರಬಾರದು
ಕರ್ನಾಟಕದಲ್ಲಿ ಅತಿಹೆಚ್ಚು ಕೋವಿಡ್ ಎಕ್ಸ್‌ಬಿಬಿ.1.16 ಕೇಸ್ ಪತ್ತೆ
ಇತ್ತೀಚೆಗೆ ದೇಶದಲ್ಲಿ ಕೋವಿಡ್ ಕೇಸುಗಳ ಏರಿಕೆಗೆ ಕಾರಣ ಎನ್ನಲಾದ ಎಕ್ಸ್‌ಬಿಬಿ.1.16 ರೂಪಾಂತರಿ ವೈರಸ್‌ನ 30 ಪ್ರಕರಣಗಳು ಈ ವರ್ಷ ಕರ್ನಾಟಕದಲ್ಲಿ ಪತ್ತೆಯಾಗಿವೆ. ದೇಶಾದ್ಯಂತ ಈ ತಳಿಯ ಒಟ್ಟು 76 ಸೋಂಕು ದೃಢಪಟ್ಟಿದ್ದು, ಅದರಲ್ಲಿ ಕರ್ನಾಟಕದಲ್ಲೇ ಅತಿಹೆಚ್ಚು ಮಂದಿ ಇದರಿಂದ ಸೋಂಕಿತರಾಗಿದ್ದಾರೆ. ಮಹಾರಾಷ್ಟ್ರದಲ್ಲಿ 29, ಪುದುಚೇರಿಯಲ್ಲಿ 7, ದೆಹಲಿಯಲ್ಲಿ 5, ತೆಲಂಗಾಣದಲ್ಲಿ ಎರಡು, ಗುಜರಾತ್, ಹಿಮಾಚಲ ಪ್ರದೇಶ ಹಾಗೂ ಒಡಿಶಾದಲ್ಲಿ ತಲಾ 1 ಈ ತಳಿಯ ಪ್ರಕರಣಗಳು ದೃಢಪಟ್ಟಿವೆ.
ದೇಶಕ್ಕೆ ವೈರಸ್‌ಗಳ ಆಘಾತ: H3N2 ವೈರಸ್ ಜೊತೆಗೆ ಕೋವಿಡ್-19, ಹಂದಿಜ್ವರವೂ ಹೆಚ್ಚಳ
ದೇಶದಲ್ಲಿ ಕೋವಿಡ್ ಹರಡುವಿಕೆಯ ಅಂಕಿಅಂಶಗಳನ್ನು ಕಲೆಹಾಕುವ ಇನ್ಸಾಕಾಗ್ ಈ ಮಾಹಿತಿ ನೀಡಿದೆ. ಜನವರಿಯಲ್ಲಿ ಎಕ್ಸ್‌ಬಿಬಿ.1.16ನ ಎರಡು ಪ್ರಕರಣ, ಫೆಬ್ರವರಿಯಲ್ಲಿ 59 ಪ್ರಕರಣ ಹಾಗೂ ಮಾಚ್‌ರ್‍ನಲ್ಲಿ ಈವರೆಗೆ 15 ಪ್ರಕರಣಗಳು ಪತ್ತೆಯಾಗಿವೆ. ದೇಶದಲ್ಲಿ ಈಗ ಕೋವಿಡ್ ಏರುತ್ತಿರುವುದಕ್ಕೆ ಇದೇ ರೂಪಾಂತರಿ ತಳಿ ಕಾರಣ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನಾಯಿ ಮಾಂಸದಿಂದ ಹರಡಿತಾ ಕೊರೋನಾ? ರಕೂನ್ ಡಾಗ್ ಸೋಂಕಿಗೆ ಕಾರಣ ಎಂದ ತಜ್ಞರ ತಂಡ
ಎಕ್ಸ್‌ಬಿಬಿ.1.16 ತಳಿಯ ಕೋವಿಡ್ ರೂಪಾಂತರಿ ವೈರಸ್ ಈಗಾಗಲೇ 12 ದೇಶಗಳಲ್ಲಿ ಪತ್ತೆಯಾಗಿದೆ. ಅತಿಹೆಚ್ಚು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿದ್ದು, ನಂತರದ ಸ್ಥಾನದಲ್ಲಿ ಅಮೆರಿಕ, ಬ್ರೂನೈ, ಸಿಂಗಾಪುರ ಮತ್ತು ಬ್ರಿಟನ್ ಇವೆ. ಕಳೆದ 14 ದಿನಗಳಲ್ಲಿ ಭಾರತದಲ್ಲಿ ಕೋವಿಡ್ ಸೋಂಕು ಶೇ.281ರಷ್ಟುಹಾಗೂ ಸಾವು ಶೇ.17ರಷ್ಟುಏರಿಕೆಯಾಗಿದೆ.