Asianet Suvarna News Asianet Suvarna News

ರಾಜ್ಯದಲ್ಲಿ ಕಾಲರಾ ಹೆಚ್ಚಳದ ಆತಂಕ, ಬೆಂಗಳೂರಿನಲ್ಲಿ ಪತ್ತೆಯಾದ ಬೆನ್ನಲ್ಲೇ ಪಿಜಿಗಳಲ್ಲಿ ಹೆಚ್ಚಾಯ್ತು ಆತಂಕ

ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿರುವ ಬೆನ್ನಲ್ಲೇ ಕಲುಷಿತ ನೀರು ಮತ್ತು ಸೋಂಕಿತ ಆಹಾರದಿಂದ ಹರಡುವ ಸಾಂಕ್ರಾಮಿಕ ಮಾರಕ ಕಾಲರಾ ರೋಗ ಪತ್ತೆ ಆಗಿರುವುದು ತೀವ್ರ ಆತಂಕ ಸೃಷ್ಟಿಸಿದೆ.

Karnataka Cholera outbreak Bengaluru PG owners and hostels association alert gow
Author
First Published Apr 9, 2024, 11:49 AM IST

ಬೆಂಗಳೂರು (ಏ.9): ನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿರುವ ಬೆನ್ನಲ್ಲೇ ಕಲುಷಿತ ನೀರು ಮತ್ತು ಸೋಂಕಿತ ಆಹಾರದಿಂದ ಹರಡುವ ಸಾಂಕ್ರಾಮಿಕ ಮಾರಕ ಕಾಲರಾ ರೋಗ ಪತ್ತೆ ಆಗಿರುವುದು ತೀವ್ರ ಆತಂಕ ಸೃಷ್ಟಿಸಿದೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯರ ಹಾಸ್ಟೆಲ್ ನಲ್ಲಿ ಕಾಲರಾ  ಸೋಂಕು ಪತ್ತೆ ಬೆನ್ನಲ್ಲೆ ಬೆಂಗಳೂರಿನ ಪಿಜಿಗಳಲ್ಲಿ ಮಾಲೀಕರು ಮತ್ತು ಅಲ್ಲಿನ ವಾಸಿಗಳಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಪಿಜಿ ಮಾಲೀಕರ ಸಂಘ ಪಿಜಿ ಗಳಲ್ಲಿ ಸೋಂಕು ತಡೆಗಟ್ಟುಲು ಅಲರ್ಟ್ ಆಗಿದೆ.

ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಕಾಲರಾ ಪ್ರಕರಣ ಹೆಚ್ಚಳ, ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 49ಕ್ಕೆ ಏರಿಕೆ!

ಬೆಂಗಳೂರಿನಲ್ಲಿ ಕಳೆದ ಎರಡು ತಿಂಗಳಲ್ಲಿ ಒಂಬತ್ತು ಮಂದಿಗೆ ಕಾಲರಾ ದೃಢ ಪಟ್ಟಿದ್ದು, ನಗರದ ಎಲ್ಲಾ ಪಿಜಿಗಳಿಗೂ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮದ ಜೊತೆಗೆ ಗೈಡ್ ಲೈನ್ಸ್ ಹಾಕಿಕೊಳ್ಳಲಾಗಿದೆ. ಈಗಾಗಲೇ ಎಲ್ಲಾ ಮಾಲೀಕರಿಗೆ ಅಸೋಸಿಯೇಷನ್ ಈ ಬಗ್ಗೆ ಮಾಹಿತಿ ನೀಡಿದೆ. ಮುಂದಿನ  ಒಂದು ವಾರದಲ್ಲಿ ತುರ್ತು ಸಭೆ ಮಾಡಿ ಗೈಡ್ ಲೈನ್ಸ್ ಹೊರಡಿಸುವ ಸಾಧ್ಯತೆ ಇದೆ.

ಪಿಜಿಗಳಲ್ಲಿ ಗೈಡ್ ಲೈನ್ಸ್
- ಪಿಜಿಗಳಲ್ಲಿ ಔಟ್ ಸೈಡ್ ಫುಡ್ ನಾಟ್ ಅಲೌಡ್.
- ಪಿಜಿಗಳ ಅಡುಗೆ ಕೋಣೆಗಳ ನಿತ್ಯ ಸ್ಬಚ್ಚತೆ. 
- ಕಡ್ಡಾಯ ಆರ್ ಓ. ವಾಟರ್ ಗಳ ಬಳಕೆಗೆ ಸೂಚನೆ.
- ಪ್ರತಿ ಹೊತ್ತಿಗೂ ಬಿಸಿ ಆಹಾರ ಸಿದ್ದ ಮಾಡಿಯೇ ವಾಸಿಗಳಿಗೆ ‌ನೀಡುವುದು.
- ಪಿಜಿ ವಾಸಿಗಳ ಆರೋಗ್ಯದ ಮೇಲೆ ಮಾಲೀಕರೇ ನಿಗಾ ವಹಿಸಬೇಕು.
- ಯಾವುದೇ ರೀತಿಯ ಆರೋಗ್ಯ ಏರುಪೇರಾದರೇ ಕೂಡಲೇ ವಾಸಿಗಳು ಕೂಡ ಮಾಲೀಕರ ಗಮನಕ್ಕೆ ತರಬೇಕು.
- ಗಮನಕ್ಕೆ ಬಂದ ಕೂಡಲೇ ಮಾಲೀರು ಕುಟುಂಬಸ್ಥರ ಮೂಲಕ ಅಥವಾ ಮಾಲೀಕರೇ ಆಸ್ಪತ್ರೆಗೆ ಕಳುಹಿಸುವ ಕೆಲಸ ಮಾಡಬೇಕು.
- ಪಿಜಿಯನ್ನ ನಿತ್ಯ ಸ್ವಚ್ಚವಾಗಿಡುವುದು.
- ವಾಸಿಗಳು ಕೂಡ ಕಡ್ಡಾಯ ನಿಯಮ ಪಾಲನೆ ಮಾಡಲೇಬೇಕು.

Follow Us:
Download App:
  • android
  • ios