ಪ್ರಶ್ನೆ : ನಾನು ಇಪ್ಪತ್ತಾರು ವರ್ಷದ ಉದ್ಯೋಗಿ. ಮದುವೆ ಆಗಿಲ್ಲ. ನನ್ನ ರೂಮ್‌ನಲ್ಲಿ ನಾನೊಬ್ಳೇ. ಒಂದಿಷ್ಟು ದಿನದಿಂದ ವರ್ಕ್ ಫ್ರಂ ಹೋಂ ಅಂತ ಮನೆಯಲ್ಲೇ ಬಂಧಿಯಾಗಿದ್ದೇನೆ. ಲಾಕ್ಡೌನ್ನಿಂದಾಗಿ ಮನೆಯಿಂದ ಆಚೆ ಬರೋದಕ್ಕೇ ಕಷ್ಟ ಆಗ್ತಿದೆ. ತುಂಬ ಜನ ಈ ಕಾರಣಕ್ಕೇ ಡಿಪ್ರೆಷನ್‌ಗೆ ತುತ್ತಾಗಿದ್ದಾರಂತೆ. ನನಗೆ ಡಿಪ್ರೆಶನ್ ಅನ್ನೋದಕ್ಕಿಂತ ಒಂದು ಬಗೆಯ ಮಂಕುತನ ಇರೋದಂತೂ ನಿಜ. ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ. ನನ್ನ ಈ ಸಮಸ್ಯೆಯನ್ನು ನನ್ನ ಬಾಯ್ ಫ್ರೆಂಡ್ ಹತ್ರ ಹೇಳಿದ್ರೆ, ಸೆಕ್ಸ್ ಮಾಡಿದ್ರೆ ಇಂಥಾ ಸಮಸ್ಯೆ ಎಲ್ಲ ಕಡಿಮೆಯಾಗುತ್ತೆ ಅಂತಿದ್ದಾನೆ. ನನಗೆ ಏನು ಹೇಳೋಕೂ ತೋಚ್ತಾ ಇಲ್ಲ. ಹಾಗಂತ ನಾನೇನು ಸನ್ಯಾಸಿ ಅಲ್ಲ. ನನಗೂ ಆಸೆ ಕನಸುಗಳಿವೆ. ಆದರೆ ಅದಕ್ಕಿಂತ ಹೆಚ್ಚು ಸೆಕ್ಸ್ ಬಗ್ಗೆ ಭಯವೂ ಇದೆ. ಏನು ಮಾಡೋದು ಅಂತ ಗೊತ್ತಾಗ್ತಿಲ್ಲ. ಅವನು ಹೇಳಿದ್ದು ನಿಜವಾ? ನಾವಿಬ್ಬರೂ ಸೆಕ್ಸ್ ಮಾಡಿದ್ರೆ ಏನಾದ್ರೂ ಸಮಸ್ಯೆ ಆಗಬಹುದಾ? ಅವನ ಮಾತಿಗೆ ಓಕೆ ಅಂತ ಹೇಳಲಾ, ಬೇಡ್ವಾ?

 

ಕಾಂಡೋಮ್‌ಗೆ ಹೆಚ್ಚಾದ ಬೇಡಿಕೆ

 

ಉತ್ತರ : ನೀವಿಲ್ಲಿ ಅನೇಕ ಸಂದೇಹಗಳನ್ನು ಮುಂದಿಟ್ಟಿದ್ದೀರಿ. ಮೊದಲನೆಯದಾಗಿ ಸೆಕ್ಸ್‌ನಿಂದ ಮಂಕುತನ ಕಡಿಮೆ ಆಗುತ್ತಾ ಅಂತ ಕೇಳಿದ್ದೀರಿ. ಸೆಕ್ಸ್ ಟೈಮ್‌ನಲ್ಲಿ ಬಿಡುಗಡೆಯಾಗುವ ಹಾರ್ಮೋನ್ ಗಳು ನಿಮ್ಮ ಡಿಪ್ರೆಶನ್ ಅನ್ನು ಕಡಿಮೆ ಮಾಡೋದು ನಿಜ. ಜೊತೆಗೆ ಉದ್ವೇಗವನ್ನೂ ನಿವಾರಿಸುತ್ತದೆ. ಲೈಂಗಿಕತೆ ವೇಳೆಗೆ ಬಿಡುಗಡೆಯಾಗುವ ಡೊಪಮೈನ್, ಎಂಡಾರ್ಫಿನ್ ಮೊದಲಾದ ಹಾರ್ಮೋನ್‌ಗಳು ಮೂಡ್ ಬೂಸ್ಟರ್‌ಗಳಂತೆ ಕೆಲಸ ಮಾಡುತ್ತವೆ. ಈ ಎಲ್ಲ ಮಾನಸಿಕ ಸಮಸ್ಯೆ ಕಡಿಮೆ ಮಾಡಿ ಮನಸ್ಸು ಕೂಲ್ ಆಗೋ ಥರ ಮಾಡುತ್ತವೆ. ಸ್ಟ್ರೆಸ್‌ನಂಥಾ ಸಮಸ್ಯೆಗೂ ಸೆಕ್ಸ್ ಉತ್ತಮ ಪರಿಹಾರ. ಆದರೆ ಇಲ್ಲೊಂದು ವಿಷಯ ಇದೆ. ಈ ಪರಿಹಾರ ತಾತ್ಕಾಲಿಕ. ಸೆಕ್ಸ್ ಮಾಡಿದ ಇಪ್ಪತ್ತನಾಲ್ಕು ಗಂಟೆಯವರೆಗೆ ಈ ಫ್ರೆಶ್‌ನೆಸ್ ಇರಬಹುದು. ಆಮೇಲೆ ನೀವು ನಿಮ್ಮ ಹಿಂದಿನ ಮನಸ್ಥಿತಿಗೆ ಮರಳುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ.

 

ಈಗ ನೀವು ಬಾಯ್ ಫ್ರೆಂಡ್ ಜೊತೆಗೆ ಸೆಕ್ಸ್ ಮಾಡಬಹುದಾ ಅಂತ ಕೇಳಿದ್ದೀರಿ. ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿ ಮದುವೆಗೂ ಮುನ್ನ ಸೆಕ್ಸ್ ಮಾಡಿದರೆ ಒಂದಿಷ್ಟು ಸವಾಲುಗಳು ಇದ್ದೇ ಇರುತ್ತವೆ. ಆ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಇಷ್ಟಾಗಿಯೂ ನೀವು ಮುಂದುವರಿಯುತ್ತೀರಿ ಅಂತಾದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲೇ ಬೇಕು. ಕಾಂಡೋಮ್ ಬಳಸದೇ ಸೆಕ್ಸ್ ಮಾಡಿದರೆ ಗರ್ಭ ಧರಿಸುವ ಸಾಧ್ಯತೆ ಇದೆ. ಗರ್ಭ ನಿರೋಧಕ ಬಳಸಿ ಸೆಕ್ಸ್ ಮಾಡೋದು ಸೇಫ್.

ಕೊರೋನಾ ನಿರ್ಬಂಧದ ನಡುವೆ ಕಾರಿನಲ್ಲಿ ಸೆಕ್ಸ್: ಜೋಡಿ ಅಂದರ್

 

ಎಲ್ಲಕ್ಕಿಂತ ಹೆಚ್ಚಾಗಿ ಇದು ಕೊರೋನಾ ಟೈಮ್. ನಿಮ್ಮ ಫ್ರೆಂಡ್ ಜನ ಸಂಪರ್ಕದಿಂದ ಕಳೆದ ಹದಿನಾಲ್ಕು ದಿನಗಳಿಂದ ದೂರವಿದ್ದರೆ ಸೇಫ್. ಇಲ್ಲ ಅಂತಾದರೆ ಅವರಿಗೇನಾದರೂ ಸೋಂಕು ತಗುಲಿದ್ದರೆ ನಿಮಗೂ ಹರಡುವ ಸಾಧ್ಯತೆ ಇದೆ.
 

ಸೆಕ್ಸ್ ಮಾಡಲ್ಲ ಅಂದರೂ ನಿಮ್ಮ ಮಾನಸಿಕ ಸಮಸ್ಯೆಗೆ ಪರಿಹಾರ ಇದೆ. ಧ್ಯಾನ, ಪ್ರಾಣಾಯಾಮ, ಯೋಗ ನಿಮ್ಮ ಮಾನಸಿಕ ವಿಷಣ್ಣತೆಯನ್ನು ತಹಬಂದಿಗೆ ತರುತ್ತದೆ. ಮನೆಯೊಳಗೇ ಒಂದಿಲ್ಲೊಂದು ಕೆಲಸದಲ್ಲಿ ಮಗ್ನರಾಗೋದು ಒಳ್ಳೆಯದು. ಎಲ್ಲೂ ಯೋಚನೆಗೆ ಟೈಮ್ ಇರದ ಹಾಗೆ ನೋಡಿಕೊಳ್ಳಿ. ಮನೆಯಲ್ಲಿ ಪುಸ್ತಕ ಇಲ್ಲ ಅಂದರೆ ಇ ಬುಕ್ ಓದಿ. ಸಿನಿಮಾ ನೋಡಿ. ಇಡೀ ದಿನ ಬ್ಯುಸಿಯಾಗಿರಿ. ಮನೆಯೊಳಗೇ ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡಬಹುದು. ವೀಡಿಯೋ ಕಾಲ್ ಮಾಡಿ ಹಳೇ ಫ್ರೆಂಡ್ಸ್ ಜೊತೆಗೆ ಮಾತನಾಡಬಹುದು. ವಾಲೆಂಟೀರ್ ಆಗಿ ಹಸಿದವರಿಗೆ ಅನ್ನ ನೀಡುವ ಕೆಲಸಕ್ಕೆ ಮುಂದಾಗಬಹುದು. ಬೀದಿನಾಯಿಗಳಿಗೆ ಆಹಾರ ನೀಡಬಹುದು. ಆಗ ನಿಮ್ಮ ಮನಸ್ಸಿಗೆ ಸಮಾಧಾನವೂ ಇರುತ್ತದೆ. ಯಾವುದಕ್ಕೂ ಚೆನ್ನಾಗಿ ಯೋಚಿಸಿ ಮುಂದುವರಿಯಿರಿ.

"