Asianet Suvarna News Asianet Suvarna News

ನವಜಾತ ಮಗುವಿಗೆ ಮುತ್ತು ತರುವುದು ಆಪತ್ತು

ಚುಂಬನವನ್ನು ಪ್ರೀತಿಯ ಸೂಚಕವೆಂದು ಪರಿಗಣಿಸಲಾಗಿದ್ದರೂ, ಶಿಶುಗಳಿಗೆ ಅದು ಗಂಭೀರವಾದ ಆರೋಗ್ಯ ಅಪಾಯಗಳನ್ನು ಉಂಟು ಮಾಡಬಹುದು. ಹುಟ್ಟಿದ ಮಕ್ಕಳಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಅಷ್ಟಾಗಿ ಬಲ ಹೊಂದಿರುವುದಿಲ್ಲ.

Is it okay to kiss newborn skr
Author
First Published Feb 14, 2024, 2:37 PM IST

9  ತಿಂಗಳಿಂದ ಕಾದ ಕಂದನ ಮುಖ ನೋಡುತ್ತಿದ್ದಂತೆ ಅದಕ್ಕೆ ಮುತ್ತು ಕೊಡದಿರುವುದು ಬಹಳ ಕಷ್ಟ ಎನಿಸಬಹುದು. ಸ್ವಾಭಾವಿಕವಾಗಿ ಮಗುವಿನ ಮುದ್ದು ಮುಖ ನೋಡುತ್ತಿದ್ದಂತೆ ಮುತ್ತು ಕೊಡುವ ಆಸೆ ಒಳಗಿನಿಂದ ಒತ್ತರಿಸಿ ಬರುತ್ತದೆ. ಆದರೆ ನವಜಾತ ಶಿಶುವಿಗೆ ಇದು ಉತ್ತಮವಲ್ಲ ಎಂದು ನೀವು ತಿಳಿದಿರಬೇಕು.

ಮಗುವಿನ ಮೃದುವಾದ ಮತ್ತು ತುಂಬಾ ನಯವಾದ ಕೆನ್ನೆಗಳನ್ನು ಚುಂಬಿಸದಿರುವುದು ಕಷ್ಟ ಎನಿಸಿದರೂ, ನಿಮ್ಮ ಪ್ರೀತಿಯ ಚುಂಬನ ಅವುಗಳ ಆರೋಗ್ಯಕ್ಕೆ ಹಾನಿಕಾರಕವಾಗಬಹುದು. 

ಶಿಶುಗಳು ಈ ಜಗತ್ತಿಗೆ ಬಂದಾಗ, ಅವರಿಗೆ ಕಡಿಮೆ ರೋಗನಿರೋಧಕ ಶಕ್ತಿ ಇರುತ್ತದೆ. ಆದ್ದರಿಂದ, ಅವರು ಈ ಜಗತ್ತಿನಲ್ಲಿ ಪ್ರವೇಶಿಸಿದ ತಕ್ಷಣ ಅವರನ್ನು ಚುಂಬಿಸುವುದು ಸರಿಯಾದ ಕೆಲಸವಲ್ಲ. ಮಕ್ಕಳನ್ನು ಚುಂಬಿಸುವುದರಿಂದ ಶಿಶುಗಳಿಗೆ ಹೇಗೆ ಹಾನಿಯಾಗುತ್ತದೆ ಎಂದು ತಿಳಿಯೋಣ.

ನವಜಾತ ಶಿಶುವನ್ನು ಚುಂಬಿಸುವುದು
ಆರೋಗ್ಯದ ಗಂಭೀರ ಪರಿಣಾಮಗಳನ್ನು ತಡೆಗಟ್ಟಲು, ತಾಯಂದಿರು ಸೇರಿದಂತೆ ಪ್ರತಿಯೊಬ್ಬರೂ ಆರಂಭಿಕ ಹಂತದಲ್ಲಿ ಶಿಶುಗಳನ್ನು ಚುಂಬಿಸುವುದನ್ನು ತಪ್ಪಿಸಬೇಕು. ಆರ್‌ಎಸ್‌ವಿ (ರೆಸ್ಪಿರೇಟರಿ ಸಿನ್ಸಿಟಿಯಲ್ ವೈರಸ್) ಮತ್ತು ಇತರ ಕಾಯಿಲೆಗಳ ಹೆಚ್ಚಳವನ್ನು ಗಮನಿಸಿದರೆ, ನವಜಾತ ಶಿಶುಗಳನ್ನು ಚುಂಬಿಸುವ ಅಪಾಯಗಳ ಬಗ್ಗೆ ಪ್ರತಿಯೊಬ್ಬರೂ ತಿಳಿದಿರಬೇಕು. ಮಗುವನ್ನು ಚುಂಬಿಸುವುದರಿಂದ ಯಾವಾಗಲೂ ಆರ್‌ಎಸ್‌ವಿ ಅಥವಾ ಇತರ ಸೋಂಕುಗಳಿಗೆ ಕಾರಣವಾಗುತ್ತದೆ ಎಂದಲ್ಲ. ಆದರೆ, ಇದು ರೋಗಗಳನ್ನು ಉಂಟುಮಾಡುವ ವೈರಸ್ ಅನ್ನು ಮಗುವಿಗೆ ಪರಿಚಯಿಸಬಹುದು. ಇದರ ವಿರುದ್ಧ ಚಿಕ್ಕ ಮಕ್ಕಳ ಅಭಿವೃದ್ಧಿಶೀಲ ಪ್ರತಿರಕ್ಷಣಾ ವ್ಯವಸ್ಥೆಯು ಹೋರಾಡಲು ಹೆಣಗಾಡುತ್ತದೆ.

ಪತ್ನಿಗೆ ಶುಭಾಶಯ ಹೇಳುತ್ತಲೇ 2ನೇ ಮಗು ಫೋಟೋ ರಿವೀಲ್ ಮಾಡಿದ ವಿಜಯ್ ಸೂರ ...

ಸೂಕ್ಷ್ಮಾಣುಗಳು ಸುಲಭವಾಗಿ ಹರಡುತ್ತವೆ
ಸೂಕ್ಷ್ಮಾಣುಗಳು ಹರಡಲು ದೈಹಿಕ ಸಂಪರ್ಕವು ಅತ್ಯಂತ ಸಾಮಾನ್ಯವಾದ ಮಾರ್ಗವಾಗಿದೆ ಮತ್ತು ನವಜಾತ ಶಿಶುಗಳು ಇದಕ್ಕೆ ವಿಶೇಷವಾಗಿ ದುರ್ಬಲವಾಗಿರುತ್ತವೆ. ಅನಗತ್ಯವಾಗಿ ಶಿಶುಗಳನ್ನು ಮುಟ್ಟುವುದನ್ನು ತಪ್ಪಿಸುವುದು ಉತ್ತಮ.

ಉಸಿರಾಟದ ಅಪಾಯಗಳು
ನವಜಾತ ಶಿಶುವಿನ ಉಸಿರಾಟದ ವ್ಯವಸ್ಥೆಯು ಅಭಿವೃದ್ಧಿ ಹೊಂದಿರುವುದಿಲ್ಲ. ಏಕೆಂದರೆ ಶ್ವಾಸಕೋಶವು ಸಂಪೂರ್ಣವಾಗಿ ಪ್ರಬುದ್ಧವಾಗಲು ಸುಮಾರು 8 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮಗುವಿಗೆ ಉಸಿರಾಟದ ಕಾಯಿಲೆಯನ್ನು ಹರಡುವ ಯಾವುದೇ ವೈರಸ್ ಅಪಾಯಕಾರಿ. ಮುತ್ತು ಕೊಡುವುದರಿಂದ ವೈರಸ್ ಪಾಸ್ ಆಗಬಹುದು ಎಂಬ ಎಚ್ಚರವಿರಬೇಕು.

ಚರ್ಮದ ಸಮಸ್ಯೆಗಳು
ವಯಸ್ಕರು ಸಾಮಾನ್ಯವಾಗಿ ತಮ್ಮ ಮುಖದ ಮೇಲೆ ಮೇಕಪ್ ಅನ್ನು ಬಳಸುತ್ತಾರೆ. ಈ ಉತ್ಪನ್ನಗಳು ಒಡ್ಡುವ ತಕ್ಷಣದ ಅಪಾಯಗಳಿಂದ ವಯಸ್ಕರು ರಕ್ಷಿಸಲ್ಪಟ್ಟಿದ್ದರೂ, ಶಿಶುಗಳು ಅಲ್ಲ. ಮುತ್ತು ಕೊಡುವಾಗ ಈ ಉತ್ಪನ್ನಗಳು ಒಳಗೊಂಡ ಅಪಾಯಕಾರಿ ಪದಾರ್ಥಗಳು ಶಿಶುಗಳಿಗೆ ಕೆಲವು ಗಂಭೀರ ಚರ್ಮದ ಸಮಸ್ಯೆಗಳನ್ನು ನೀಡುತ್ತದೆ.

6 ಸೆಕೆಂಡ್ ಕಿಸ್ ಥಿಯರಿ ಬಗ್ಗೆ ನಿಮಗೇನಾದ್ರೂ ಗೊತ್ತಾ?

ಅಲರ್ಜಿಯ ಪ್ರತಿಕ್ರಿಯೆಗಳು
ವಯಸ್ಕರು ಮಗುವಿಗೆ ಅಲರ್ಜಿಯನ್ನು ಉಂಟು ಮಾಡುವ ಆಹಾರವನ್ನು ಸೇವಿಸಿದ್ದು, ಮುತ್ತು ಕೊಟ್ಟರೆ ಅದು ಮಗುವಿಗೆ ಅಲರ್ಜಿಯ ಪ್ರತಿಕ್ರಿಯೆಯನ್ನು ಉಂಟುಮಾಡುವ ಅಪಾಯವಿದೆ.

ಜ್ವರ
ಜ್ವರವು ವಯಸ್ಕರಿಗೆ ಒಂದು ಸಣ್ಣ ಕಾಯಿಲೆಯಾಗಿದೆ, ಆದರೆ ಶಿಶುಗಳಿಗೆ ಅಲ್ಲ ಎಂದು ತಜ್ಞರು ಹೇಳುತ್ತಾರೆ. ಮಗುವಿಗೆ ಒಂದು ಕಿಸ್ ಸಾಮಾನ್ಯ ಶೀತವನ್ನು ಅಥವಾ ಜ್ವರವನ್ನು ಸ್ಪರ್ಶದ ಮೂಲಕ ವರ್ಗಾಯಿಸಬಹುದು.

ಮಗುವನ್ನು ಚುಂಬಿಸುವುದು ಯಾವಾಗ ಸುರಕ್ಷಿತ?
ನವಜಾತ ಶಿಶುವನ್ನು ಚುಂಬಿಸುವುದು ಬೇಡ. ನವಜಾತ ಶಿಶುವಿನ ಸುತ್ತಮುತ್ತಲಿನ ಎಲ್ಲಾ ಜನರು ಉತ್ತಮ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ಮಗುವಿನ ಪ್ರತಿರಕ್ಷಣಾ ವ್ಯವಸ್ಥೆಯು ಮೊದಲ ಎರಡರಿಂದ ಮೂರು ತಿಂಗಳವರೆಗೆ ಪಕ್ವವಾಗುವುದಿಲ್ಲ. ಆದ್ದರಿಂದ ಈ ಅವಧಿಯನ್ನು ಹೆಚ್ಚಿನ ಕಾಳಜಿಯಿಂದ ನಿರ್ವಹಿಸಬೇಕು. ಮೂರು ತಿಂಗಳ ಬಳಿಕ ಮಗುವನ್ನು ಚುಂಬಿಸಲು ಆರಂಭಿಸಬಹುದು. ಆದರೆ, ಎಂದಿಗೂ ತುಟಿಗಳ ಮೇಲೆ ಚುಂಬನ ಬೇಡ. 
 

Follow Us:
Download App:
  • android
  • ios