Asianet Suvarna News Asianet Suvarna News

ಸಂತಾನ ಭಾಗ್ಯವಿಲ್ಲದ್ದಕ್ಕೆ ಐವಿಫ್‌ ಮತ್ತು ಸರೋಗಸಿ ಮೂಲಕ ಮಕ್ಕಳನ್ನು ಪಡೆದ ತಾರೆಯರು

ಹೆಣ್ಣಿಗೆ ಮಾತ್ರವಲ್ಲ ಗಂಡು ಮಕ್ಕಳಲ್ಲೂ ಸಂತಾನ ಹೀನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್‌ ನ ಅನೇಕ ಸೆಲೆಬ್ರಿಟಿಗಳು ಐವಿಎಫ್ ಮತ್ತು ಸರೋಗಸಿ ಮೂಲಕ ಮಕ್ಕಳನ್ನು ಪಡೆದು ಸಂತೋಷ ಜೀವನ ನಡೆಸುತ್ತಿದ್ದಾರೆ. ಯಾರ್ಯಾರು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

Indian celebrities who had children with IVF and surrogacy gow
Author
First Published Jun 30, 2024, 5:30 PM IST

ಪೋಷಕರಾಗುವುದು ಪ್ರತಿಯೊಬ್ಬರಿಗೂ ಒಂದು ಆಶೀರ್ವಾದವಾಗಿದೆ, ಆದರೆ ಕೆಲ ಸಂದರ್ಭದಲ್ಲಿ ಮಕ್ಕಳನ್ನು ಹಡೆಯಲು ಕಷ್ಟವಾಗುತ್ತದೆ. ಅದಕ್ಕೆ ಈಗಿನ ಆಹಾರ ಪದ್ದತಿಗಳು, ಆರೋಗ್ಯ ಸಮಸ್ಯೆಗಳು ಮುಖ್ಯವಾಗಿದೆ. ಹೆಣ್ಣಿಗೆ ಮಾತ್ರವಲ್ಲ ಗಂಡು ಮಕ್ಕಳಲ್ಲೂ ಸಂತಾನ ಹೀನತೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್‌ ನ ಅನೇಕ ಸೆಲೆಬ್ರಿಟಿಗಳು ಐವಿಎಫ್ ಮತ್ತು ಸರೋಗಸಿ ಮೂಲಕ ಮಕ್ಕಳನ್ನು ಪಡೆದು ಸಂತೋಷ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಇಲ್ಲಿ ನೀಡಲಾಗಿದೆ.

ಪ್ರೀತಿ ಝಿಂಟಾ: ಬಾಲಿವುಡ್ ನಟಿ ಪ್ರೀತಿ ಜಿಂಟಾ ಮತ್ತು ಅವರ ಪತಿ, ಹಣಕಾಸು ವಿಶ್ಲೇಷಕ ಜೀನ್ ಗುಡ್‌ನಫ್ ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಒಂದು ಹೆಣ್ಣು ಮತ್ತು ಒಂದು ಗಂಡು ಮಗುವಾಗಿದ್ದು ಜೈ ಮತ್ತು ಜಿಯಾ ಎಂದು ಹೆಸರಿಟ್ಟಿದ್ದಾರೆ.

ಶಿಲ್ಪಾ ಶೆಟ್ಟಿ: ನಟಿ ಶಿಲ್ಪಾ ಶೆಟ್ಟಿ ಅವರಿಗೆ ವಿಹಾನ್ ಎಂಬ ಮಗನಿದ್ದಾನೆ. ಆದರೆ  2020 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಜನಿಸಿದ ತಮ್ಮ ಎರಡನೇ  ಮಗುವನ್ನು ಮನೆಗೆ ಸ್ವಾಗತಿಸಿದರು. ಆ ಹೆಣ್ಣು ಮಗುವಿಗೆ ಸಮೀಶಾ ಎಂದು ಹೆಸರಿಟ್ಟರು.

2024ರಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿ, ಸಿಹಿ ಸುದ್ದಿ ಹಂಚಿಕೊಂಡ 9 ಕನ್ನಡ ಸೆಲೆಬ್ರಿಟಿಗಳು

ಅಮೀರ್ ಖಾನ್ : ಬಾಲಿವುಡ್ ನಟ ಅಮೀರ್ ಖಾನ್ ಮತ್ತು ಎರಡನೇ ಪತ್ನಿ ನಿರ್ದೇಶಕಿ ಕಿರಣ್ ರಾವ್ ತಮ್ಮ ಮಗ ಆಜಾದ್ ಅವರನ್ನು 2011 ರಲ್ಲಿ ಸರೋಗಸಿ ಮೂಲಕ ಸ್ವಾಗತಿಸಿದರು. ಅಮೀರ್ ದಂಪತಿಗಳಿಗೆ ನೈಸರ್ಗಿಕ ನ್ಯೂನ್ಯತೆಳು ಇದ್ದ ಕಾರಣ ಈ ಬಗ್ಗೆ  ಯೋಚಿಸದೆ IVF ಮತ್ತು ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಇತರರಿಗೂ ಈ ಬಗ್ಗೆ ಪ್ರೋತ್ಸಾಹಿಸಿದರು.

ಶಾರುಖ್ ಖಾನ್: 2013ರಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ತಮ್ಮ ಮೂರನೇ ಪುತ್ರ ಅಬ್ರಾಮ್ ಅನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು. ಶಾರುಖ್ ದಂಪತಿಗೆ ಸೀಮಾ ಮತ್ತು ಸೊಹೈಲ್ ಖಾನ್ ಗೂ  ಸಲಹೆ ಕೊಟ್ಟರು ಎನ್ನಲಾಗಿದೆ. ಸೀಮಾ ಮತ್ತು ಸೊಹೈಲ್ ಖಾನ್ ಮೊದಲ ಮಗು  ನಿರ್ವಾನ್ ನನ್ನು ಸ್ವಾಭಾವಿಕವಾಗಿ ಪಡೆದರು. ಆದರೆ 10 ವರ್ಷಗಳ ಬಳಿಕ ಸ್ವಾಭಾವಿಕವಾಗಿ ಮಗು ಜನಿಸದ ಕಾರಣ ಬಾಡಿಗೆ ತಾಯ್ತನದ ಮೂಲಕ ಮದುವೆಯಾದ 13 ವರ್ಷದ ಬಳಿಕ ಎರಡನೇ ಮಗು ಯೋಹಾನ್ ಅನ್ನು 2011 ರಲ್ಲಿ ಸ್ವಾಗತಿಸಿದರು. 

ಫೇವರಿಟ್ ಅಂತ ತಿಂದ್ರೆ ರೋಗ ಕಟ್ಟಿಟ್ಟ ಬುತ್ತಿ, ರಾಜ್ಯಾದ್ಯಂತ ಶವರ್ಮಾದಲ್ಲಿ ಬ್ಯಾಕ್ಟೀರಿಯಾ, ಈಸ್ಟ್‌ ಪತ್ತೆ!

ಫರಾ ಖಾನ್ : ಮಕ್ಕಳನ್ನು ಹೊಂದಲು ಪ್ರಯತ್ನಿಸುತ್ತಿರುವ ದಂಪತಿಗಳಿಗೆ ಬಾಡಿಗೆ ತಾಯ್ತನವು ಹೇಗೆ ಅದ್ಭುತವಾಗಿದೆ ಎಂಬುದನ್ನು ಬಾಲಿವುಡ್‌ ನೃತ್ಯ ನಿರ್ದೇಶಕ ಫರಾ ಖಾನ್ ವಿವರಿಸಿದ್ದಾರೆ.  2008ರಲ್ಲಿ ಫೆಬ್ರವರಿಯಲ್ಲಿ ತ್ರಿವಳಿ ಮಕ್ಕಳನ್ನು ಪಡೆದಾಗ ಫರಾ ಅವರಿಗೆ 43 ವರ್ಷ ವಯಸ್ಸಾಗಿತ್ತು.  ಬಾಡಿಗೆ ತಾಯಿಯಿಂದ ಇವರು ಮೂವರು ಮಕ್ಕಳನ್ನು ಹಡೆದರು. ಇದು ಒಂದು ಆಶೀರ್ವಾದವಾಗಿದೆ. ಇದು ನನ್ನ ಜೀವನವನ್ನು ಬದಲಿಸಿದ ಕಾರಣ ನಾನು ಕೃತಜ್ಞನಾಗಿದ್ದೇನೆ.  ಗರ್ಭ ಧರಿಸಲು ಕಷ್ಟವಾಗುವ ದಂಪತಿಗಳು ಭಯಪಡುವ ಅಗತ್ಯವಿಲ್ಲ. ನಮ್ಮಲ್ಲಿ ಚಿಕಿತ್ಸೆಗಳ ರೂಪದಲ್ಲಿ ಪರಿಹಾರವಿದೆ ಎಂದು ಫರಾ ಹೇಳಿದ್ದರು.

ಕರಣ್ ಜೋಹರ್: ನಿರ್ದೇಶಕ-ನಿರ್ಮಾಪಕ ಕರಣ್ ಜೋಹರ್, ಇನ್ನೂ ಕೂಡ ಮದುವೆಯಾಗಿಲ್ಲ ಆದರೆ ಅವರು  ಬಾಡಿಗೆ ತಾಯ್ತನದ ಮೂಲಕ  ಅವಳಿ ಮಕ್ಕಳಿಗೆ ಹೆಮ್ಮೆಯ ತಂದೆಯಾದರು. ಯಶ್ ಮತ್ತು ರೂಹಿ ಎಂಬ ಗಂಡು -ಹೆಣ್ಣು ಅವಳಿ ಮಕ್ಕಳು ಫೆಬ್ರವರಿ 2017 ರಲ್ಲಿ ಜನಿಸಿದವು.

ತುಷಾರ್ ಕಪೂರ್: ಬಾಡಿಗೆ ತಾಯ್ತನದ ಮೂಲಕ ತುಷಾರ್ ಕಪೂರ್ ತನ್ನ ಗಂಡು ಮಗುವಿಗೆ ಸಿಂಗಲ್ ಪೇರೆಂಟ್‌ ಆದರು.  ಲಕ್ಷ್ಯ ಎಂಬ ಮಗು ಜೂನ್ 2016 ರಲ್ಲಿ ಜನಿಸಿತು.  ಈ ಮೂಲಕ ಜೀತೇಂದ್ರ ಮತ್ತು ಶೋಭಾ ಕಪೂರ್ ಅವರಿಗೆ ಮೊದಲ ಮೊಮ್ಮಗ ಆಯ್ತು. ತುಷಾರ್ ಇನ್ನೂ ಅವಿವಾಹಿತನಾಗಿದ್ದು, ಮಗನಿಗೆ ಸಿಂಗಲ್ ಪೇರೆಂಟ್ ಆಗಿದ್ದಾರೆ.

ಏಕ್ತಾ ಕಪೂರ್: ನಿರ್ಮಾಪಕಿ ಏಕ್ತಾ ಕಪೂರ್ ತನ್ನ ಮಗ ರವಿಗೆ 2019 ರ ಜನವರಿಯಲ್ಲಿ ಬಾಡಿಗೆ ತಾಯ್ತನದ ಮೂಲಕ ಸಿಂಗಲ್ ಪೇರೆಂಟ್ ಆದರು. ಸಹೋದರ ತುಷಾರ್‌ನ ಮಗ ಲಕ್ಷ್ಯಗೆ ಈಕೆ ಅತ್ತೆ. ಏಕ್ತಾ ಕಪೂರ್ ಕೂಡ ಈವರೆಗೆ ಮದುವೆಯಾಗಿಲ್ಲ.

ಸನ್ನಿ ಲಿಯೋನ್: ನಟಿ ಸನ್ನಿ ಲಿಯೋನ್ ಮತ್ತು ಅವರ ಪತಿ ಡೇನಿಯಲ್ ವೆಬರ್ ಭಾರತದಿಂದ ಒಂದು ಅನಾಥ ಮಗುವನ್ನು ದತ್ತು ಪಡೆದುಕೊಂಡರು. ಅದಾದ ಬಳಿಕ ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಂಡ ದಂಪತಿ ಸರೋಗಸಿ ಮೂಲಕ  ಅವಳಿ ಮಕ್ಕಳನ್ನು ಹೊಂದಿದ್ದರು. ಅವಳಿ ಗಂಡು ಮಕ್ಕಳು 2018 ರಲ್ಲಿ ಜನಿಸಿವೆ.

ಶ್ರೇಯಸ್ ತಲ್ಪಾಡೆ: ನಟ ಶ್ರೇಯಸ್ ತಲ್ಪಾಡೆ ಮತ್ತು ಅವರ ಪತ್ನಿ ದೀಪ್ತಿ ಅವರು ಮೇ 2018 ರಲ್ಲಿ ಬಾಡಿಗೆ ತಾಯ್ತನದ ಮೂಲಕ ಪಿತೃತ್ವವನ್ನು ಸ್ವೀಕರಿಸಿದರು. ದಂಪತಿಗಳು ತಮ್ಮ ಮಗಳಿಗೆ ಆದ್ಯ ಎಂದು ಹೆಸರಿಸಿದ್ದಾರೆ. ದಂಪತಿಗಳು 14 ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿ ಅಂತಿಮವಾಗಿ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದರು.

ನಟಿ ಲೀಸಾ ರೇ: ನಟಿ ಲೀಸಾ ರೇ ಮತ್ತು ಅವರ ಪತಿ ಜೇಸನ್ ಡೆಹ್ನಿ ಜೂನ್ 2018 ರಲ್ಲಿ ತಮ್ಮ ಅವಳಿ ಹೆಣ್ಣುಮಕ್ಕಳಾದ ಸೂಫಿ ಮತ್ತು ಸೊಲೈಲ್ ಅವರನ್ನು  ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು.

ಪ್ರಿಯಾಂಕಾ ಚೋಪ್ರಾ: ಬಾಲಿವುಡ್‌ ಬಳಿಕ ಹಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಸಿಂಗರ್ ನಿಕ್ ಜೋನಸ್ ಕೂಡ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದರು. 2023ರಲ್ಲಿ ಹುಟ್ಟಿದ ಮಗಳಿಗೆ ಮಾಲ್ತಿ ಮೇರಿ ಎಂದು ಹೆಸರಿಟ್ಟಿದ್ದಾರೆ.

Latest Videos
Follow Us:
Download App:
  • android
  • ios