ಜನರಿಗೆ ಕೊರೋನಾ ಲಸಿಕೆ ಒದಗಿಸಲು 51 ಸಾವಿರ ಕೋಟಿ ಮೀಸಲಿಟ್ಟ ಸರ್ಕಾರ
ಕೊರೋನಾ ಔಷಧ | 51000 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟ ಕೇಂದ್ರ ಸರ್ಕಾರ | ಒಂದು ಇಂಜೆಕ್ಷನ್ ಬೆಲೆ 150
ದೆಹಲಿ(ಅ.23): ಕೊರೋನಾ ವೈರಸ್ ಎದುರಾಗಿ ಭಾರತೀಯರಿಗೆ ಕೊರೋನಾ ಔಷಧ ಒದಗಿಸಲು 7 ಬಿಲಿಯನ್ ಡಾಲರ್ ಅಂದರೆ ಸುಮಾರು 51000 ಕೋಟಿ ರೂಪಾಯಿಯನ್ನು ಕೇಂದ್ರ ಮೀಸಲಿಟ್ಟಿದೆ. ಪ್ರತಿ ವ್ಯಕ್ತಿಗೆ 450ರಿಂದ 550 ರೂಪಾಯಿ ವೆಚ್ಚ ತಗುಲುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೊರೋನಾ ಔಷಧ ಒದಗಿಸುವ ನಿಟ್ಟಿನಲ್ಲಿ ಈ ಆರ್ಥಿಕ ವರ್ಷದ ಫಂಡ್‌ನಲ್ಲಿ ಕೊರತೆಯಾಗುವುದಿಲ್ಲ ಎನ್ನಲಾಗಿದೆ. ಪ್ರತಿ ವ್ಯಕ್ತಿಗೆ ಒಂದು ಶಾಟ್‌ನಲ್ಲಿ 2 ಇಂಜೆಕ್ಷನ್‌ಗಳನ್ನು ನೀಡುವ ಅಗತ್ಯವಿದ್ದು, ಒಂದರ ಬೆಲೆ 150 ಇರಲಿದೆ.
ಕೊರೋನಾ ಲಸಿಕೆ: ಗುಡ್ ನ್ಯೂಸ್ ಕೊಟ್ಟ ಸೆರಂ ಸಂಸ್ಥೆ!
ಕೆಲವೊಮ್ಮೆ ಮೂಲಸೌಕರ್ಯ, ಸಾಗಾಟ ಸೇರಿ ಒಂದು ಎಂಜೆಕ್ಷನ್ ಬೆಲೆ 225 ಇರಲಿದೆ. ಇತ್ತೀಚಿನ ಭಾಷಣದಲ್ಲಿ ಮೋದಿ ಕೊರೋನಾ ವ್ಯಾಕ್ಸೀನ್ ಪ್ರತಿ ಭಾರತೀಯನಿಗೆ ತಲುಪಿಸುವ ಭರವಸೆ ನೀಡಿದ್ದರು.
ಈಗಾಗಲೇ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದ್ದು, ಕೊರೋನಾ ಪ್ರಕರಣಗಳ ಸಂಖ್ಯೆಯೂ ಹೆಚ್ಚಿದೆ. ಈ ನಡುವೆ ಮಾಸ್ಕ್ ಧರಿಸುವುದನ್ನು ಮಾತ್ರ ತಪ್ಪಿಸಲೇಬಾರದು ಎಂದು ಪ್ರಧಾನಿ ತಿಳಿಸಿದ್ದಾರೆ.