ದೇಶದಲ್ಲಿಂದು ಅತೀ ಹೆಚ್ಚು ಕೊರೋನಾ ಸೋಂಕಿತರು ಗುಣಮುಖ..! ಒಟ್ಟು ಸಂಖ್ಯೆ 17 ಲಕ್ಷ
ಭಾರತದಲ್ಲಿಂದು ಅತ್ಯಂತ ಹೆಚ್ಚು ಕೊರೋನಾ ಸೊಂಕಿತರು ಗುಣಮುಖರಾಗಿದ್ದಾರೆ. ಇದೇ ಮೊದಲ ಬಾರಿ 56,383 ಸೋಂಕಿತರು ಕೊರೋನಾ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ನವದೆಹಲಿ(ಆ.13): ಭಾರತದಲ್ಲಿಂದು ಅತ್ಯಂತ ಹೆಚ್ಚು ಕೊರೋನಾ ಸೊಂಕಿತರು ಗುಣಮುಖರಾಗಿದ್ದಾರೆ. ಇದೇ ಮೊದಲ ಬಾರಿ 56,383 ಸೋಂಕಿತರು ಕೊರೋನಾ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ.
ಇದೀಗ ಭಾರತದಲ್ಲಿ ಒಟ್ಟು ಕೊರೋನಾ ಗೆದ್ದವರ ಸಂಖ್ಯೆ 17 ಲಕ್ಷ(16,95,982) ತಲುಪಿದೆ. ಇದರ ಜೊತೆಗೇ ದೇಶದಲ್ಲಿ ಕೊರೋನಾದಿಂದ ಗುಣಮುಖವಾಗುವ ರೇಟ್ ಶೇಕಡಾ 1.96 ಹೆಚ್ಚಾಗಿದೆ.
ರಾಮ ಮಂದಿರ ಟ್ರಸ್ಟ್ ಅಧ್ಯಕ್ಷ ನೃತ್ಯಗೋಪಾಲ ದಾಸ್‌ಗೆ ಕೊರೋನಾ!
ದೇಶದಲ್ಲಿ ಇಂದಿನ ತನಕ ಒಟ್ಟು 6,53,622 ಕೊರೋನಾ ಪ್ರಕರಣಗಳು ದಾಖಲಾಗಿದೆ. ಇದುವರೆಗೂ ದೇಶದಲ್ಲಿ 47,033 ಜನ ಸಾವನ್ನಪ್ಪಿದ್ದಾರೆ. ಆಗಸ್ಟ್ 12ರಂದು ಒಂದೇ ದಿನ 942 ಸಾವು ಸಂಭವಿಸಿದೆ. ಕೊರೋನಾ ಸಾವಿನ ಸಂಖ್ಯೆಯಲ್ಲಿ ಭಾರತ ಜಗತ್ತಿನಲ್ಲಿಯೇ ನಾಲ್ಕನೇ ಸ್ಥಾನಕ್ಕೆ ತಲುಪಿದೆ.
ವರ್ಷಾಂತ್ಯಕ್ಕೆ ಕೊರೋನಾಗೆ ಲಸಿಕೆ, ಶೀಘ್ರ ದರ ನಿಗದಿ!
ಮಹಾರಾಷ್ಟ್ರದಲ್ಲಿ ಈಗಲೂ ಕೊರೋನಾ ಕಾಟ ಹೆಚ್ಚಾಗಿದೆ. ಈಗಾಗಲೇ ಮಹಾರಾಷ್ಟ್ರದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಒಂದೂವರೆ ಲಕ್ಷ ದಾಟಿದೆ. ಮಹಾರಾಷ್ಟ್ರ ಭಾರತದಲ್ಲಿಯೇ ಒಂದು ಲಕ್ಷಕ್ಕಿಂತ ಹೆಚ್ಚು ಕೊರೋನಾ ಸೋಂಕಿತರಿರು ರಾಜ್ಯವಾಗಿದೆ. ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶ 90,425 ಕೇಸು ಹೊಂದಿದೆ. ಏಮ್ಸ್ ನಿರ್ದೇಶಕ ರಣದೀಪ್ ಮಾತನಾಡಿ, ಕೊರೋನಾ ದೇಶದಲ್ಲಿ ಅದರ ಪೀಕ್ ತಲುಪಿದೆ ಎನ್ನಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.