Asianet Suvarna News Asianet Suvarna News

ಸದಾ ಕುಳಿತಿರ್ತೀರಾ, ಜಂಕ್ ತಿಂತೀರಾ? ಹ್ಯಾಬಿಟ್ಸ್ ಇದೆಯಾ? ಎಚ್ಚರ! ಭಾರತ ಈಗ ಕ್ಯಾನ್ಸರ್ ಕ್ಯಾಪಿಟಲ್

ಪ್ರಪಂಚದಾದ್ಯಂತ ಕ್ಯಾನ್ಸರ್ ಪ್ರಕರಣಗಳಂತಹ ಮಾರಣಾಂತಿಕ ರೋಗಗಳು ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಗಳಲ್ಲಿ ಭಾರತವು ವೇಗವಾಗಿ ಏರಿಕೆ ಕಂಡಿದೆ ಎಂದು ಇತ್ತೀಚಿನ ಆರೋಗ್ಯ ವರದಿ ಬಹಿರಂಗಪಡಿಸಿದೆ.

India is the cancer capital of the world skr
Author
First Published Apr 6, 2024, 11:00 AM IST

ಆಯುರ್ವೇದದ ತವರು ಭಾರತ. ಇಲ್ಲಿನ ಜೀವನಶೈಲಿಗೆ ದೊಡ್ಡ ದೊಡ್ಡ ಕಾಯಿಲೆಗಳು ತೀರಾ ಅಪರೂಪವಾಗಿದ್ದರೆ, ಸಣ್ಣಪುಟ್ಟ ಕಾಯಿಲೆಗಳು ಮನೆಮದ್ದಿಗೆ ಹೆದರಿ ಓಡುತ್ತಿದ್ದವು. ಆದರೆ, ಇಂದು ಭಾರತದ ಪರಿಸ್ಥಿತಿ ಬಗದಲಾಗಿದೆ. ಜಗತ್ತಿನಲ್ಲೇ ಅತಿ ಹೆಚ್ಚು ಮಾರಾಣಾಂತಿಕ ರೋಗಗಳು ಭಾರತೀಯರಲ್ಲಿವೆ. ಇದಕ್ಕೆ ಜೀವನಶೈಲಿ ಬದಲಾವಣೆಯೇ ಪ್ರಮುಖ ಕಾರಣ. 

ಹೌದು, ಪ್ರಪಂಚದಾದ್ಯಂತ ಕ್ಯಾನ್ಸರ್ ಪ್ರಕರಣಗಳಂತಹ ಮಾರಣಾಂತಿಕ ರೋಗಗಳು ಸೇರಿದಂತೆ ಸಾಂಕ್ರಾಮಿಕವಲ್ಲದ ರೋಗಗಳಲ್ಲಿ ಭಾರತವು ವೇಗವಾಗಿ ಏರಿಕೆ ಕಂಡಿದೆ ಎಂದು ಇತ್ತೀಚಿನ ಆರೋಗ್ಯ ವರದಿ ಬಹಿರಂಗಪಡಿಸಿದೆ.

ಒಂದೊಮ್ಮೆ ಮಧುಮೇಹ ಎಂದರೆ ಅದು ಕೇವಲ ಶ್ರೀಮಂತರ ಕಾಯಿಲೆ ಎನಿಸಿಕೊಳ್ಳುತ್ತಿತ್ತು. ಆದರೆ ಇಂದು ಮೂವರಲ್ಲಿ ಒಬ್ಬರು ಮಧುಮೇಹಕ್ಕೆ ತುತ್ತಾಗುತ್ತಿದ್ದಾರೆ. ಮೂವರಲ್ಲಿ ಇಬ್ಬರಿಗೆ ಪ್ರಿ-ಹೈಪರ್ಟೆನ್ಸಿವ್ ಮತ್ತು 10 ರಲ್ಲಿ ಒಬ್ಬರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಅದರಲ್ಲೂ 18- 25 ವರ್ಷದವರಲ್ಲಿ ಐವರಲ್ಲಿ ಒಬ್ಬರು ಖಿನ್ನತೆ ಅನುಭವಿಸುತ್ತಿದ್ದಾರೆ. ಇನ್ನು ಆರೋಗ್ಯ ತಪಾಸಣೆಗೆ ಆಸ್ಪತ್ರೆಗೆ ಹೋಗುವವರಲ್ಲಿ ನಾಲ್ವರಲ್ಲಿ ಮೂವರು ಹೆಚ್ಚು ತೂಕ ಹೊಂದಿರುತ್ತಾರೆ.

ಅಷ್ಟು ದೊಡ್ಡ ಭೂಕಂಪವಾಗ್ತಿದ್ರೂ ಬೆದರದೆ ಶಿಶುಗಳ ರಕ್ಷಣೆಗೆ ನಿಂತ ನರ್ಸ್‌ಗಳು; ವಿಡಿಯೋ ವೈರಲ್
 

ಅಪೊಲೊ ಆಸ್ಪತ್ರೆಗಳ 2024ರ ವಿಶ್ವ ಆರೋಗ್ಯ ದಿನದ ಪ್ರಮುಖ ಆರೋಗ್ಯ ವರದಿಯ 4ನೇ ಆವೃತ್ತಿ ಇಂಥ ಬೆಚ್ಚಿ ಬೀಳಿಸುವ ಸಂಗತಿಯನ್ನು ಹೊರ ಹಾಕಿದೆ. 

ಭಾರತವು 'ವಿಶ್ವದ ಕ್ಯಾನ್ಸರ್ ರಾಜಧಾನಿ'
ವರದಿಯು ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳನ್ನು ಎತ್ತಿ ತೋರಿಸಿದೆ. ಭಾರತವನ್ನು 'ವಿಶ್ವದ ಕ್ಯಾನ್ಸರ್ ರಾಜಧಾನಿ' ಎಂದು ಹೇಳಲಾಗಿದೆ. ಭಾರತದಲ್ಲಿ ಸುಮಾರು 63 ಪ್ರತಿಶತ ಸಾವುಗಳು ಎನ್‌ಸಿಡಿ(ಸಾಂಕ್ರಾಮಿಕವಲ್ಲದ ರೋಗಗಳು)ಗಳಿಂದ ಸಂಭವಿಸುತ್ತವೆ ಎಂದು ಅಧ್ಯಯನವು ಸೂಚಿಸುತ್ತದೆ.

ಕಿರಿವಯಸ್ಸಿನವರಲ್ಲೇ ಹೆಚ್ಚು
ವಾರ್ಷಿಕ ವರದಿಯು ಹೆಚ್ಚುತ್ತಿರುವ ಆರೋಗ್ಯದ ಹೊರೆಯನ್ನು ಒತ್ತಿ ಹೇಳಿದೆ. ಅದರಲ್ಲೂ ವಿಶೇಷವಾಗಿ ಹೆಚ್ಚಿನ ಮಾರಣಾಂತಿಕ ಕಾಯಿಲೆಗಳು ಈಗ ಹೆಚ್ಚು ಕಿರಿಯ ವಯಸ್ಸಿನಲ್ಲೇ ಕಂಡುಬರುತ್ತಿವೆ.
ವೈದ್ಯರ ಪ್ರಕಾರ, ಕಿರಿಯ ವಯಸ್ಕರು ಹೆಚ್ಚು ಆಕ್ರಮಣಕಾರಿ-ಕಾಣುವ ಕ್ಯಾನ್ಸರ್ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ಅವುಗಳು ಹೆಚ್ಚು ಮುಂದುವರಿದ ಹಂತದಲ್ಲಿ ಇರುತ್ತವೆ ಮತ್ತು ರೋಗನಿರ್ಣಯದ ವಿಳಂಬ ಸಮಸ್ಯೆಯಾಗುತ್ತದೆ.

ಹಲವು ರಾಜ್ಯಗಳಲ್ಲಿ ಭಾರಿ ಸೆಖೆ ಬಿಸಿಗಾಳಿ: ಮಳೆಯಾಗುವ ಸಾಧ್ಯತೆ: ಹವಾಮಾನ ಇಲಾಖೆ ಮಾಹಿತಿ
 

ಆಂಕೊಲಾಜಿಸ್ಟ್‌ಗಳು ಹೇಳುವ ಪ್ರಕಾರ ಜೀವನಶೈಲಿಯ ಸಮಸ್ಯೆಗಳಾದ ವ್ಯಾಯಾಮ ಮಾಡದಿರುವುದು, ಇಡೀ ದಿನ ಕುಳಿತು ಕೆಲಸ ಮಾಡುವುದು ಮತ್ತು ಆಹಾರಕ್ರಮವು ಇದರ ಹಿಂದಿನ ಪ್ರಮುಖ ಕಾರಣವಾಗಿರಬಹುದು. ಇದಲ್ಲದೆ, ಜೆನೆಟಿಕ್ಸ್ ಮತ್ತು ಪರಿಸರ ಕೂಡಾ ಹೆಚ್ಚಿನ ಯುವಕರಲ್ಲಿ ಕ್ಯಾನ್ಸರ್‌ಗೆ ಕಾರಣವಾಗುತ್ತಿವೆ.

ಕ್ಯಾನ್ಸರ್‌ಗೆ ಅಪಾಯಕಾರಿ ಅಂಶಗಳು ಯಾವುವು?
ವಯಸ್ಸು
ದೀರ್ಘಕಾಲದ ಉರಿಯೂತ
ಆಹಾರ ಪದ್ಧತಿ
ಹಾರ್ಮೋನುಗಳು
ಇಮ್ಯುನೊಸಪ್ರೆಶನ್
ಮದ್ಯಪಾನ ಮತ್ತು ಧೂಮಪಾನ
ಸಾಂಕ್ರಾಮಿಕ ಏಜೆಂಟ್
ಬೊಜ್ಜು
ವಿಕಿರಣ
ಸೂರ್ಯನ ಬೆಳಕು

Follow Us:
Download App:
  • android
  • ios