Asianet Suvarna News Asianet Suvarna News

Obesity in India: ಪಾಶ್ಚಾತ್ಯ ದೇಶಗಳನ್ನು ಕಾಡೋ ಸಮಸ್ಯೆ ನಮ್ಮಲ್ಲೂ ಕಾಮನ್‍!

ಮಕ್ಕಳು, ಐದು ವರ್ಷದೊಳಗಿನ ಮಕ್ಕಳು, ಮಹಿಳೆಯರು-ಪುರುಷರು ಎಲ್ಲರಲ್ಲೂ ಸ್ಥೂಲಕಾಯ ಹೆಚ್ಚಾಗುತ್ತಿದೆ ಎಂದು ಇತ್ತೀಚೆಗೆ ಪ್ರಕಟವಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಹೇಳಿದೆ. ಹೆಚ್ಚಾದ ಆದಾಯ, ಬದಲಾದ ಜೀವನಶೈಲಿ ಹಾಗೂ ಆಹಾರ ಪದ್ಧತಿಯೇ ಇದಕ್ಕೆ ಪ್ರಮುಖ ಕಾರಣವನ್ನಾಗಿ ಗುರುತಿಸಲಾಗಿದೆ. 
 

Increasing Obesity in India solution to be fit and healthy
Author
Bangalore, First Published Dec 9, 2021, 4:42 PM IST

ಇಂದು ಹಳ್ಳಿಗಳ (rural) ಮಕ್ಕಳೂ ನಡೆದುಕೊಂಡು ಶಾಲೆಗೆ ಹೋಗಿ ಬಂದು ಮಾಡುವುದಿಲ್ಲ. ಯಾರಾದರೂ ಶಾಲೆ (school)ಯ ಬಾಗಿಲಿಗೆ ಬಿಡಬೇಕು ಇಲ್ಲವೇ ಮುಖ್ಯರಸ್ತೆಯವರೆಗೆ ಶಾಲಾ ವ್ಯಾನ್ (van) ಬರುತ್ತದೆ. ಎಲ್ಲ ತಾಲೂಕಾ ಕೇಂದ್ರಗಳಲ್ಲೂ ನಾಲ್ಕಾರು ಖಾಸಗಿ (private) ಶಾಲೆಗಳಿವೆ, ಅವುಗಳ ವ್ಯಾನ್ ಗಳು ಮಕ್ಕಳನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಬಿಡುತ್ತವೆ, ಕರೆದುಕೊಂಡು ಬರುತ್ತವೆ. ಇನ್ನು, ನಗರ ಪ್ರದೇಶದಲ್ಲಂತೂ ಕೇಳುವುದೇ ಬೇಡ. ಮೊದಲೇ ಸುರಕ್ಷತೆಯ ಭಯ. ವಾಹನದಟ್ಟಣೆಯಿಂದಾಗಿ ನಡೆದುಕೊಂಡು ಹೋಗುವ ಪರಿಸ್ಥಿತಿಯೇ ಇಲ್ಲ. ಇದ್ದರೂ ಅತಿ ಕಡಿಮೆ. ಶಾಲೆ ಮುಗಿಸಿ ಸಂಜೆ ಮನೆಗೆ ಬಂದ ನಂತರ ಹೋಂ ವರ್ಕ್. ಬಳಿಕ ಮೊಬೈಲ್ ಅಥವಾ ಟಿವಿ. ಆಟವಾಡಿದರೆ ಉಂಟು, ಇಲ್ಲವಾದರೆ ಇಲ್ಲ. ಪರಿಣಾಮವಾಗಿ, ಮಕ್ಕಳಲ್ಲಿ ಬೊಜ್ಜು (obesity) ವಿಪರೀತವಾಗಿ ಏರಿಕೆಯಾಗುತ್ತಿದೆ. ಐದು ವರ್ಷದೊಳಗಿನ ಮಕ್ಕಳಲ್ಲೂ ಬೊಜ್ಜು ಹೆಚ್ಚಾಗುತ್ತಿದೆ.
 
ಮಕ್ಕಳಲ್ಲಿ ಮಾತ್ರವಲ್ಲ, ಬದಲಾದ ಜೀವನಶೈಲಿಯಿಂದಾಗಿ ವಯಸ್ಕ ಮಹಿಳೆ ಮತ್ತು ಪುರುಷರಲ್ಲೂ ಬೊಜ್ಜು ಹೆಚ್ಚುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಇಂಥದ್ದೊಂದು ಎಚ್ಚರಿಕೆಯ ಅಂಶ ದಾಖಲಾಗಿದೆ. ಗುಜರಾತ್ (Gujarat) ಹಾಗೂ ಮಹಾರಾಷ್ಟ್ರ (Maharashtra) ರಾಜ್ಯಗಳನ್ನು ಹೊರತುಪಡಿಸಿ ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಜನರಲ್ಲಿ ಬೊಜ್ಜು ಏರಿಕೆಯಾಗಿದೆ. ಗೋವಾ, ತಮಿಳುನಾಡು, ದಾದ್ರ-ನಗರ ಹವೇಲಿ, ದಿಯು-ದಾಮನ್ ಗಳಲ್ಲಿ ಮಾತ್ರವೇ ಐದು ವರ್ಷದೊಳಗಿನ ಬೊಜ್ಜು ದೇಹಿ ಮಕ್ಕಳ ಸಂಖ್ಯೆ ಇಳಿಮುಖವಾಗಿದೆ. ಉಳಿದಂತೆ ಎಲ್ಲ ರಾಜ್ಯಗಳಲ್ಲೂ ಐದು ವರ್ಷದೊಳಗಿನ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗಿರುವುದನ್ನು ಗುರುತಿಸಲಾಗಿದೆ. ನಮ್ಮ ರಾಜ್ಯದಲ್ಲಂತೂ 15-49ರ ವಯೋಮಾನದ ಮೂರರ ಒಂದು ಭಾಗದಷ್ಟು ಪುರುಷರು ಹಾಗೂ ಮಹಿಳೆಯರಲ್ಲಿ ಬೊಜ್ಜು ಕಂಡುಬಂದಿದೆ. ದೈಹಿಕ ಚಟುವಟಿಕೆ ಕುಂಠಿತವಾಗಿರುವುದು ಹಾಗೂ ಆಹಾರಶೈಲಿ ಬದಲಾಗಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ತಜ್ಞರು ಹೇಳಿದ್ದಾರೆ. 

ಆದಾಯ ಹೆಚ್ಚಳ (rise in income) ದಿಂದ ಬದಲಾದ ಜೀವನ 
ಇತ್ತೀಚೆಗೆ ಹೆಚ್ಚುತ್ತಿರುವ ಸ್ಥೂಲಕಾಯದ ಕುರಿತು ಮಾತನಾಡಿರುವ ಪಾಪ್ಯುಲೇಷನ್ ಫೌಂಡೇಷನ್ ಆಫ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕಿ ಪೂನಮ್ ಮುತ್ರೇಜಾ, ಬೊಜ್ಜು ದೇಹ ಹೆಚ್ಚುವುದಕ್ಕೆ ಆದಾಯದಲ್ಲಿ ಹೆಚ್ಚಳವಾಗಿರುವೂ ಕಾರಣ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಇದರಿಂದಾಗಿ ಆಹಾರ ಶೈಲಿ (food habit) ಬದಲಾಗಿದ್ದು, ಅನಾರೋಗ್ಯಕರ ಜೀವನಶೈಲಿ (lifestyle) ಅಭ್ಯಾಸವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
ಕಳೆದ 15 ವರ್ಷಗಳಿಂದಲೂ ಭಾರತದಲ್ಲಿ ಸುಸ್ಥಿರವಾದ ಅಭಿವೃದ್ಧಿಯಿದೆ. ಜನರ ಆದಾಯ ನಿರಂತರವಾಗಿ ಹೆಚ್ಚುತ್ತಿದೆ. ಆದಾಯ ಹೆಚ್ಚಾಗಿರುವ ಸಿರಿವಂತರಲ್ಲಿಯೇ ಸ್ಥೂಲಕಾಯದ ಸಮಸ್ಯೆ ಹೆಚ್ಚು ಎನ್ನುವುದನ್ನು ಗುರುತಿಸಲಾಗಿದೆ. 2015-16ನೇ ಸಾಲಿನಲ್ಲಿ ನಡೆದ ಆರೋಗ್ಯ ಸಮೀಕ್ಷೆ-4ರ ಪ್ರಕಾರ, ಆದಾಯ ಕಡಿಮೆ ಇರುವ ಕುಟುಂಬಗಳಲ್ಲಿ ಸ್ಥೂಲಕಾಯದ ಸಮಸ್ಯೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿತ್ತು. ಆದರೆ, ಆದಾಯ ಹೆಚ್ಚಿರುವ ಕುಟುಂಬಗಳಲ್ಲಿ ಈ ಪ್ರಮಾಣ ಶೇ.33ರಷ್ಟಿತ್ತು. 

ರೊಟ್ಟಿ-ಅನ್ನು ಒಟ್ಟಿಗೆ ತಿಂದರೇನಾಗುತ್ತೆ?

ಆದರೆ, ಈ ಬಾರಿ, ಬಡ ಕುಟುಂಬಗಳ ಮಹಿಳೆಯರಲ್ಲೂ ಸ್ಥೂಲಕಾಯದ ಸಮಸ್ಯೆ ಶೇ.6ರಷ್ಟು ಕಂಡುಬಂದಿದೆ. ಹಾಗೂ ಉತ್ತಮ ಆದಾಯವಿರುವ ಕುಟುಂಬಗಳಲ್ಲಿ ಈ ಪ್ರಮಾಣ ಶೇ.36ಕ್ಕೇರಿದೆ. ಅಧಿಕ ಸಕ್ಕರೆ, ಉಪ್ಪು, ಕೊಬ್ಬಿನಂಶವಿರುವ ಜಂಕ್ ಫುಡ್ ಗಳ ಸೇವನೆಯೇ ಇದಕ್ಕೆ ಬಹುತೇಕ ಕಾರಣ ಎಂದು ಮುತ್ರೇಜಾ ಹೇಳಿದ್ದಾರೆ. 

ಜೀವನಶೈಲಿಯ (Lifestyle) ಮಹತ್ವದ ಬಗ್ಗೆ ಅರಿವಿಲ್ಲ
ಇದರ ಜತೆಗೆ, ಭಾರತೀಯರ ಮಾನಸಿಕ ಸ್ಥಿತಿಯೂ ಇದಕ್ಕೆ ಬಹುದೊಡ್ಡ ಕೊಡುಗೆ ನೀಡುತ್ತಿದೆ. ಬಹಳಷ್ಟು ಭಾರತೀಯರಿಗೆ ಆರೋಗ್ಯಕರ (healthy) ಹಾಗೂ ಚಟುವಟಿಕೆ (creative) ಯುಳ್ಳ ಜೀವನಪದ್ಧತಿಯ ಮಹತ್ವದ ಬಗ್ಗೆ ಅರಿವಿಲ್ಲ ಎನ್ನುತ್ತಾರೆ ಪೂನಮ್. ಉತ್ತಮ ಜೀವನಪದ್ಧತಿಯ ಕುರಿತು ಬಹಳ ಜನರಲ್ಲಿ ಅಜ್ಞಾನವಿದೆ. ಸೋಮಾರಿತನದ (laziness) ಬದುಕನ್ನು ಅಳವಡಿಸಿಕೊಂಡಿರುವ ಜತೆಗೆ, ಎಲ್ಲಿಂದಾದರೂ ಪ್ರೇರಣೆ ಪಡೆಯುವ, ವ್ಯಾಯಾಮ (exercise) ಹಾಗೂ ವಾಕಿಂಗ್ ನಂತಹ ಚಟುವಟಿಕೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕುರಿತು ಅವರಿಗೆ ಯಾವುದೇ ಒಲವಿಲ್ಲ. ನೋವಿನ ಸಂಗತಿಯೆಂದರೆ, ಪಾಲಕರು ತಮ್ಮ ಬೀಡುಬೀಸಾದ ಬದುಕಿನ ಶೈಲಿಯಿಂದಾಗಿ ಮಕ್ಕಳಿಗೆ ಪೌಷ್ಟಿಕ ಆಹಾರ, ಆರೋಗ್ಯಪೂರ್ಣ ಜೀವನಶೈಲಿ ರೂಢಿಸಲು ಸಾಧ್ಯವಾಗುತ್ತಿಲ್ಲ. 

ದಪ್ಪಗಿದ್ದ ಬಾಲಿವುಡ್ ನಟಿಯರು ತೆಳ್ಳಗಾಗಿದ್ದು ಹೇಗೆ?

ಒಂದೆಡೆ ಅಪೌಷ್ಟಿಕತೆ, ಇನ್ನೊಂದೆಡೆ ಅಧಿಕ ಪೋಷಣೆ
ಸೇವ್ ದ ಚಿಲ್ಡ್ರನ್ ಸಂಸ್ಥೆಯ ಮುಖ್ಯಸ್ಥ ಡಾ. ಅಂತರ್ಯಾಮಿ ದಾಸ್ ಅವರ ಪ್ರಕಾರ, ಇದು ಜಾಗತಿಕ ಸಮಸ್ಯೆ. ಪ್ರತಿಯೊಂದೂ ದೇಶವೂ ಎರಡು ಬಗೆಯ ವೈಪರೀತ್ಯದಿಂದ ಬಳಲುತ್ತಿವೆ. ಒಂದೆಡೆ ಅಪೌಷ್ಟಿಕತೆ, ಇನ್ನೊಂದೆಡೆ ಅತಿಯಾದ ಪೋಷಣೆಯೂ ಸಮಸ್ಯೆಯಾಗುತ್ತಿದೆ. ಇವೆಡರೂ ಸಮಸ್ಯೆ ನಿವಾರಣೆಗೆ ಪರಿಣಾಮಕಾರಿಯಾದ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಹಾಗೂ ನೀತಿ-ನಿಯಮಗಳನ್ನು ರೂಪಿಸುವ ಅಗತ್ಯವಿದೆ ಎಂದವರು ಅಭಿಪ್ರಾಯಪಡುತ್ತಾರೆ. 

ಪರಿಹಾರವೇನು?
ಸ್ಥೂಲಕಾಯದ ಸಮಸ್ಯೆ ನಿವಾರಣೆಗೆ ದೈಹಿಕ ಚಟುವಟಿಕೆಯನ್ನು (Physical Activities) ಉತ್ತೇಜಿಸುವುದು, ಆನಾರೋಗ್ಯಕರ ಆಹಾರ ಪದ್ಧತಿ (Food Habit) ಕೈಬಿಡುವುದು ಎರಡೇ ಮಾರ್ಗಗಳು. ಪಾಲಕರಲ್ಲಿ ಅರಿವು ಮೂಡದೆ ಮಕ್ಕಳನ್ನು ತಿದ್ದುವುದು ಸಾಧ್ಯವಿಲ್ಲ. ಆದರೆ, ಸೋಮಾರಿತನ ಹಾಗೂ ಅನಾರೋಗ್ಯಕರ ಆಹಾರಶೈಲಿಯನ್ನು ರೂಢಿಸಿಕೊಂರುವ ಜನರಿಗೆ ಇದನ್ನು ಮನದಟ್ಟು ಮಾಡಿಸುವುದು ಹೇಗೆ ಎನ್ನುವುದೇ ಸಮಸ್ಯೆ. 

Follow Us:
Download App:
  • android
  • ios