ದಟ್ಟ, ನೀಳ ಕೂದಲು ನಿಮ್ಮದಾಗಲು ಖರ್ಜೂರದ ಜೊತೆ ತುಪ್ಪ ಬೆರೆಸಿ….. ನೋಡಿ
Best food combination: ಉದ್ದವಾದ, ದಟ್ಟವಾದ , ಯಾವುದೇ ಸಮಸ್ಯೆಗಳಿಲ್ಲದ ಕೂದಲು ನಿಮ್ಮದಾಗಬೇಕು ಅಂದ್ರೆ ನೀವು ಕೆಲವು ಆಹಾರಗಳನ್ನು ಜೊತೆಯಾಗಿ ಸೇವಿಸಬೇಕು. ಈ ಆಹಾರಗಳ ಕಾಂಬಿನೇಶನ್ ನಿಮ್ಮ ಆರೋಗ್ಯದ ಜೊತೆಗೆ ಸುಂದರ ಕೇಶವನ್ನು ಸಹ ನಿಮಗೆ ನೀಡುತ್ತೆ. ಟ್ರೈ ಮಾಡಿ ನೋಡಿ.
19

Image Credit : Getty
ಕೂದಲಿನ ಆರೋಗ್ಯ
ಸರಿಯಾದ ಆಹಾರಗಳನ್ನು ಒಟ್ಟಿಗೆ ಸೇವಿಸಿದಾಗ, ರಕ್ತ ಪರಿಚಲನೆ, ಹಾರ್ಮೋನ್ ಸಮತೋಲನ ಮತ್ತು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಇವೆಲ್ಲವೂ ಕೂದಲು ಉದುರುವುದು, ಕೂದಲು ಬಿಳಿಯಾಗುವುದು, ತಲೆಹೊಟ್ಟು ಮತ್ತು ಕೂದಲು ತೆಳುವಾಗುವುದರ ಮೇಲೆ ನೇರವಾಗಿ ಪರಿಣಾಮ ಬೀರುತ್ತವೆ.
29
Image Credit : Pixabay
ಕರಿಬೇವು + ಮಜ್ಜಿಗೆ
- ಕಬ್ಬಿಣ + ಪ್ರೋಬಯಾಟಿಕ್‌ಗಳಿಂದ ಆಹಾರ ಇದಾಗಿದ್ದು. ಇದನ್ನು ಜೊತೆಯಾಗಿ ಕುಡಿದರೆ, ದೇಹವು ಉತ್ತಮ ರೀತಿಯಲ್ಲಿ ಪೋಷಕಾಂಶವನ್ನು ಹೀರಿಕೊಳ್ಳುತ್ತದೆ.
- ಇದು ಮೆಲನಿನ್ ಉತ್ಪಾದನೆಯನ್ನು ಬೆಂಬಲಿಸುತ್ತದೆ, ಅಲ್ಲದೇ ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯನ್ನೂ ವಿಳಂಬಗೊಳಿಸಲು ಸಹಾಯ ಮಾಡುತ್ತದೆ.
39
Image Credit : Getty
ಪಾಲಕ್ + ನಿಂಬೆ
- ವಿಟಮಿನ್ ಸಿ ನಿಮ್ಮ ದೇಹವು ತರಕಾರಿಗಳಿಂದ ಕಬ್ಬಿಣ ಅಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
- ಇದರಲ್ಲಿರುವ ಕಬ್ಬಿಣಾಂಶ, ಆಕ್ಸಿಜನ್ ಮತ್ತು ಫಾಲಿಸೆಲ್ಸ್ ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
49
Image Credit : Getty
ಬೀಟ್ರೂಟ್ + ಚಿಯಾ ಸೀಡ್ಸ್
- ಬೀಟ್ರೂಟ್ ರಕ್ತದ ಹರಿವನ್ನು ಸುಧಾರಿಸುತ್ತದೆ, ಚಿಯಾ ಒಮೆಗಾ-3 ಗಳನ್ನು ದೇಹಕ್ಕೆ ನೀಡುತ್ತದೆ.
- ಅವು ಒಟ್ಟಾಗಿ ತಲೆಯಲ್ಲಿ ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಹಾಗೂ ಕೂದಲನ್ನು ದಟ್ಟವಾಗಿಸುತ್ತದೆ.
59
Image Credit : Getty
ಬಾಳೆಹಣ್ಣು + ಅಗಸೆ ಬೀಜಗಳು
- ಪೊಟ್ಯಾಸಿಯಮ್ ಮತ್ತು ಆರೋಗ್ಯಕರ ಕೊಬ್ಬುಗಳು ನೆತ್ತಿಯ ಎಣ್ಣೆಯ ಸಮತೋಲನ ಮತ್ತು ಉರಿಯೂತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
- ಅತಿಯಾದ ಕೂದಲು ಉದುರುವಿಕೆಯನ್ನು ನಿವಾರಿಸಲು ಇದು ಬೆಸ್ಟ್.
69
Image Credit : Getty
ಕ್ಯಾರೆಟ್ ಜ್ಯೂಸ್ + ವಾಲ್ನಟ್ಸ್
- ವಿಟಮಿನ್ ಎ, ಬಯೋಟಿನ್, ಒಮೆಗಾ-3 ಗಳು ಕೂದಲಿನ ಕಿರುಚೀಲಗಳನ್ನು ಒಳಗಿನಿಂದ ಪೋಷಿಸುತ್ತವೆ.
- ಕೂದಲು ಆರೋಗ್ಯಯುತವಾಗಿ ಬೆಳೆಯಲು ಇದು ಬೆಂಬಲ ನೀಡುತ್ತದೆ
79
Image Credit : our own
ಎಳನೀರು + ಕುಂಬಳಕಾಯಿ ಬೀಜಗಳು
- ಎಲೆಕ್ಟ್ರೋಲೈಟ್‌ಗಳು ಮತ್ತು ಸತು ಎರಡು ಜೊತೆಗೆ ಸೇರಿ ನೆತ್ತಿಯನ್ನು ಹೈಡ್ರೇಟ್ ಮಾಡುತ್ತೆ ಹಾಗೂ ಕೂದಲು ಬಲಗೊಳ್ಳಲು ಸಹಾಯ ಮಾಡುತ್ತದೆ.
- ಇವುಗಳನ್ನು ಜೊತೆಗೆಯಾಗಿ ಸೇವಿಸಿದ್ರೆ ಕೂದಲು ತೆಳುವಾಗುವುದನ್ನು ಕಡಿಮೆ ಮಾಡಬಹುದು.
89
Image Credit : Getty
ಮೆಂತ್ಯ ಬೀಜಗಳು + ಮೊಸರು
- ಕರುಳಿನ ಆರೋಗ್ಯವು ನೀವು ಯೋಚಿಸುವುದಕ್ಕಿಂತ ಹೆಚ್ಚು ಮುಖ್ಯವಾಗಿದೆ.
- ಉತ್ತಮ ಜೀರ್ಣಕ್ರಿಯೆ, ಉತ್ತಮ ಪೋಷಕಾಂಶಗಳ ವಿತರಣೆ , ಕಡಿಮೆ ತಲೆಹೊಟ್ಟು ಮತ್ತು ಕಡಿಮೆ ತುರಿಕೆಗೆ ಇದು ಸಹಾಯ ಮಾಡುತ್ತದೆ.
99
Image Credit : Getty
ಖರ್ಜೂರ + ತುಪ್ಪ
- ನೈಸರ್ಗಿಕ ಕೊಬ್ಬುಗಳು ಕೂದಲಿನ ತೇವಾಂಶವನ್ನು ಉಳಿಸಿಕೊಳ್ಳುತ್ತವೆ ಮತ್ತು ಒಣ ನೆತ್ತಿಯನ್ನು ಸಮಸ್ಯೆಯನ್ನು ನಿವಾರಿಸುತ್ತೆ.
- ಇವೆರಡರ ಕಾಂಬಿನೇಶನ್ ಕೂದಲು ಉದುರುವಿಕೆ, ಶುಷ್ಕತೆ ಮತ್ತು ದುರ್ಬಲ ಕೂದಲಿನ ಸಮಸ್ಯೆಯನ್ನು ನಿವಾರಣೆ, ದಟ್ಟ ಸುಂದರ ಕೂದಲಿನ ಬೆಳವಣಿಗೆಗೆ ಸಹಕಾರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
Latest Videos

